Those Three Stories!
Who doesn’t know about the Apple iPhone? It’s rare to find someone in the business world who doesn’t know about Steve Jobs, one of the founders of this company. His speech at Stanford University in 2005 is recognized as one of the best speeches in the world. It has been translated into many languages, including Kannada, and is available on YouTube. I’m not here to translate that speech, but in it, he shares three stories from his life. This isn’t just a story of his life; it reflects the essence of human life. I see reflections of my own life in his stories, and I’m sharing a brief summary of them with you.
ಮಗಳಿಗೆ ಅಪ್ಪನ ಎರಡನೆಯ ಪತ್ರ
ಪ್ರೀತಿಯ ಮಗಳೇ ಇದು, ನಾನು ನಿನಗೆ ಬರೆಯುತ್ತಿರುವ ಎರಡನೇ ಪತ್ರ! ನಿನಗೆ ಗೊತ್ತು ನನಗೆ ಸಿನಿಮಾಗಳು ತುಂಬಾನೇ ಇಷ್ಟ ಅಂತ. ನಂಗೂ ಗೊತ್ತು ಮಗಳೇ ನಿನಗೆ ಕೂಡ ಸಿನಿಮಾ ಇಷ್ಟ . ಆದರೆ ಅಪ್ಪನ , ಅಮ್ಮನ ಕಟ್ಟುಪಾಡುಗಳು ! ಓದು ಮುಖ್ಯ ಅನ್ನುವ ಅವರ ಕಿರಿಕಿರಿಯ ನಡುವೆ ಅಪರೂಪಕ್ಕೆ ಒಮ್ಮೆ ಮಾತ್ರ ನಿನಗೆ ಸಿನಿಮಾ ನೋಡುವ ಅವಕಾಶ ದೊರಕುತ್ತೆ ಅಲ್ವ! ಮೊನ್ನೆ ತಮಿಳು ಸಿನಿಮಾ ಡಾನ್ ನೋಡಿದೆ. ಯಾಕೋ ಕಡೆಗೆ ತುಂಬಾ ಅಳು ಬಂದು ಬಿಟ್ಟಿತು. ಅಪ್ಪನ ನೆನಪು ಬಿಡದೆ ಕಾಡತೊಡಗಿತು.
Finding out the cause of failure in raising children
Finding out the cause of failure in raising children
ದೇವರು , ಕಬೀರ್ ದಾಸರು ಮತ್ತು ಮಗಳು!
ಐದನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗಳು, ಅಪ್ಪ ಮುಂದಿನ ತಿಂಗಳು ಪರೀಕ್ಷೆ ಇದೆ. ಸಲ್ಪ ಹಿಂದಿ ಕಲಿಯಲು ಸಹಾಯ ಮಾಡ್ತಿಯಾ ಅಂತ ಕೇಳಿದಾಗ, ಸರಿ ಮಗಳೇ ಪುಸ್ತಕ ತೆಗೆದುಕೊಂಡು ಬಾ ಅಂತ ಹೇಳಿ ಅವಳ ಜೊತೆ ಕುಳಿತಿಕೊಂಡೆ.ಅದರಲ್ಲಿ ಒಂದು ಪದ್ಯ ಭಾರತ ಕಂಡ ಮಹಾನು ಸಂತ ಕಬೀರ್ ದಾಸ್ ರವರು ರಚಿಸಿದ್ದು. ಅವಳಿಗೆ ಮೊದಲಿಗೆ ಕಬೀರ್ ದಾಸ್ ರವರ ಬಗ್ಗೆ ಒಂದು ಕಿರು ಪರಿಚಯ ಮಾಡಿಕೊಟ್ಟೆ. ನೋಡಮ್ಮ ಕಬೀರ್ ದಾಸ್ ರವರು ಜಾತಿ ಮುಖ್ಯವಲ್ಲ , ಗುಣ ಮುಖ್ಯ ಅಂತ ಹೇಳುತಿದ್ದರು. ದೇವರನ್ನು ರಾಮ , ರಹೀಮ್ ಹೇಗೆ ಕರೆದ್ರು ಸರಿಯೇ ಆದರೆ ಭಕ್ತಿ ಭಾವದಿಂದ ಅವರನ್ನು ನೆನೆಯಬೇಕು ಅಂತ ಅವರು ಹೇಳುತಿದ್ದರು ಅಂತ ಹೇಳಿಕೊಟ್ಟೆ. ಅವಳ ಮುಖಭಾವದಿಂದ ಅವಳಿಗೆ ನಾನು ಹೇಳಿದ್ದು ಸರಿಯಾಗಿ ಅರ್ಥವಾಗಲಿಲ್ಲ ಅನ್ನೋದು ನನಗೆ ಗೊತ್ತಾಯಿತು. ಅಲ್ಲ ಅಪ್ಪ ನೀನು ಹೇಳುತಿಯ ಸಂತ ಕಬೀರ್ ರವರು ದೇವರನ್ನು ಹೇಗೆ ಬೇಕಾದ್ರು ಕರೆಯಬಹುದು ಅಂತ ಹೇಳಿದ್ದಾರೆ ಅಂತ, ದೇವರನ್ನು ಯಾವ ಹೆಸರಿನಿಂದ ಯಾರು ಬೇಕಾದ್ರು ಕರೆಯಬಹುದಾದ್ರೆ , ಯಾಕೆ ಅಲ್ಲಿ ಕಿತ್ತಾಡಿಕೊಳ್ಳುತಿದ್ದಾರೆ?
ನನ್ನ ಧ್ವನಿಗೆ ನಿನ್ನ ಧ್ವನಿಯು ,ಸೇರಿದಾಗ ನಮ್ಮ ಧ್ವನಿಯು……….
ನನ್ನ ಧ್ವನಿಗೆ ನಿನ್ನ ಧ್ವನಿಯು ಸೇರಿದಾಗ ನಮ್ಮ ಧ್ವನಿಯ ......ಈ ಗೀತೆಯನ್ನು ಕೇಳಿದ ನೆನಪು ಇದೆಯಾ? , ಇದು 80 ರ ದಶಕದಲ್ಲಿ ಸ್ರಷ್ಟಿಸಿದ ಮಾಂತ್ರಿಕತೆ ಇದೆಯಲ್ವ ಅದೊಂದು ಅದ್ಬುತ ಅನುಭವ. ಮೈ ಮನ ರೋಮಾಂಚನಗೊಳಿಸುತಿದ್ದ ಈ ಗೀತೆ ಇಡೀ ಭಾರತೀಯರನ್ನು ಮಂತ್ರ ಮುಗ್ದ ಗೊಳಿಸಿತ್ತು. ಹೌದು ನಾನು ಹೇಳಲು ಹೊರಟಿರುವುದು 1988 ರಲ್ಲಿ ದೂರದರ್ಶನದಲ್ಲಿ ಮೊದಲ ಬಾರಿ ಪ್ರಸಾರಗೊಂಡ, ಅನಧಿಕೃತ ರಾಷ್ಟ್ರ ಗೀತೆ ಎಂದು ಹೆಸರು ಮಾಡಿದ್ದ " ಮಿಲೇ ಸುರ್ ಮೇರಾ ತುಮ್ಹಾರಾ ತೊ ಸುರ್ ಬನೇ” ಹಮಾರಾ ಹಾಡಿನ ಬಗ್ಗೆ.
ಅತಿಥಿ ದೇವೋಭವ ನಿಜ, ಹಾಗಾದ್ರೆ ಆತಿಥೇಯ?
ನಮ್ಮ ಸಂಸ್ಕ್ರತಿಯು ಸನಾತನ ಹಾಗು ಜಗನ್ಮಂಗಳಕರ. ಈ ಭವ್ಯವಾದ ಸಂಸ್ಕ್ರತಿಯ ಒಂದು ಭಾಗವೇ ಅತಿಥಿ ಸತ್ಕಾರ. ಮನೆಗೆ ಬಂದವರನ್ನು ಊಟೋಪಚಾರಗಳೊಂದಿಗೆ ಆದರಿಸಿ, ಸತ್ಕರಿಸುವ ಪದ್ಧತಿ ನಮ್ಮದು
ಪ್ರತಿ ಬಾಟಲಿ ನೀರು ಬಿಸ್ಲೇರಿ ಅಲ್ಲ!
ಒಂದು ಬಿಸ್ಲೇರಿ ಕೊಡಿ! ಕೆಲವು ದಶಕಗಳ ಹಿಂದೆ ಪ್ರಯಾಣ ಮಾಡುತ್ತಿರುವಾಗ ಬಾಯಾರಿದರೆ ನಾವು ಅಂಗಡಿಯವರ ಬಳಿ ಕೇಳುತಿದ್ದದ್ದು, ಒಂದು ಬಿಸ್ಲೇರಿ ಕೊಡಿ ಅಂತ. ಆಗೆಲ್ಲ ಬಿಸ್ಲೇರಿ ಅನ್ನೋದು ಒಂದು ಬಾಟಲ್ ನೀರಿನ ಕಂಪೆನಿಯ ಹೆಸರು, ನೀರಿನ ಹೆಸರು ಅದಲ್ಲ ಅನ್ನೋದು ನಮಗೆ ಗೊತ್ತೇ ಇರಲಿಲ್ಲ.