ಮಗಳಿಗೆ ಅಪ್ಪನ ಎರಡನೆಯ ಪತ್ರ

ಪ್ರೀತಿಯ ಮಗಳೇ ಇದು, ನಾನು ನಿನಗೆ ಬರೆಯುತ್ತಿರುವ ಎರಡನೇ ಪತ್ರ! ನಿನಗೆ ಗೊತ್ತು ನನಗೆ ಸಿನಿಮಾಗಳು ತುಂಬಾನೇ ಇಷ್ಟ ಅಂತ. ನಂಗೂ ಗೊತ್ತು ಮಗಳೇ ನಿನಗೆ ಕೂಡ ಸಿನಿಮಾ ಇಷ್ಟ . ಆದರೆ ಅಪ್ಪನ , ಅಮ್ಮನ ಕಟ್ಟುಪಾಡುಗಳು ! ಓದು ಮುಖ್ಯ ಅನ್ನುವ ಅವರ ಕಿರಿಕಿರಿಯ ನಡುವೆ ಅಪರೂಪಕ್ಕೆ ಒಮ್ಮೆ ಮಾತ್ರ ನಿನಗೆ ಸಿನಿಮಾ ನೋಡುವ ಅವಕಾಶ ದೊರಕುತ್ತೆ ಅಲ್ವ! ಮೊನ್ನೆ ತಮಿಳು ಸಿನಿಮಾ ಡಾನ್ ನೋಡಿದೆ. ಯಾಕೋ ಕಡೆಗೆ ತುಂಬಾ ಅಳು ಬಂದು ಬಿಟ್ಟಿತು. ಅಪ್ಪನ ನೆನಪು ಬಿಡದೆ ಕಾಡತೊಡಗಿತು.

Originally published in kn
Reactions 0
360
PAKASH DSOUZA
PAKASH DSOUZA 05 Jul, 2022 | 1 min read

ಪ್ರೀತಿಯ ಮಗಳೇ ಇದು, ನಾನು ನಿನಗೆ ಬರೆಯುತ್ತಿರುವ ಎರಡನೇ ಪತ್ರ! ನಿನಗೆ ಗೊತ್ತು ನನಗೆ ಸಿನಿಮಾಗಳು ತುಂಬಾನೇ ಇಷ್ಟ ಅಂತ. ನಂಗೂ ಗೊತ್ತು ಮಗಳೇ ನಿನಗೆ ಕೂಡ ಸಿನಿಮಾ ಇಷ್ಟ . ಆದರೆ ಅಪ್ಪನ , ಅಮ್ಮನ ಕಟ್ಟುಪಾಡುಗಳು ! ಓದು ಮುಖ್ಯ ಅನ್ನುವ ಅವರ ಕಿರಿಕಿರಿಯ ನಡುವೆ ಅಪರೂಪಕ್ಕೆ ಒಮ್ಮೆ ಮಾತ್ರ ನಿನಗೆ ಸಿನಿಮಾ ನೋಡುವ ಅವಕಾಶ ದೊರಕುತ್ತೆ ಅಲ್ವ! ಮೊನ್ನೆ ತಮಿಳು ಸಿನಿಮಾ ಡಾನ್ ನೋಡಿದೆ. ಯಾಕೋ ಕಡೆಗೆ ತುಂಬಾ ಅಳು ಬಂದು ಬಿಟ್ಟಿತು. ಅಪ್ಪನ ನೆನಪು ಬಿಡದೆ ಕಾಡತೊಡಗಿತು. ನಿಂಗು ಅಜ್ಜನನ್ನು ನೋಡುವ ಭಾಗ್ಯ ದೊರಕಲಿಲ್ಲ. ಆದರೆ ಏನು ಮಾಡೋದು ? ಎಲ್ಲವೂ ದೇವರ ಇಚ್ಛೆ. ನಿನಗೆ ಅನಿಸುತ್ತಿರಬಹುದು, ನನ್ನ ಅಪ್ಪ ಯಾವಾಗಲೂ ಕಿರಿ ಕಿರಿ ಮಾಡುತ್ತ ಇರುತ್ತಾರೆ. ನನ್ನ ಮೇಲೆ ಅವರಿಗೆ ಬಲು ಬೇಗನೆ ಕೋಪ ಬರುತ್ತೆ. ಕೆಲವೊಮ್ಮೆ ನೀನು ರೋಸಿಹೋಗಿ ಬಿಡುತಿಯ ಅಲ್ವ. ಆದ್ರೂ ನನ್ನ ಬಂಗಾರ ಒಂದೇ ಒಂದು ಮಾತು ನೀನು ತಿರುಗಿ ನನಗೆ ಹೇಳಲ್ಲ. ಮೌನಕ್ಕೆ ಶರಣಾಗಿ ಬಿಡುತಿಯ! ಕೆಲವೊಮ್ಮೆ ನನಗೆ ನನ್ನ ಮೇಲೇನೆ ತುಂಬಾ ಕೋಪ ಬಂದು ಬಿಡುತ್ತೆ. ಯಾಕಾಗಿ ನಾನು ನಿನಗೆ ಬೈಯಬೇಕು ಅಂತ ನನ್ನ ಮನಃಸಾಕ್ಷಿ ನನ್ನ ಬಳಿ ಪ್ರಶ್ನೆ ಕೇಳುತ್ತೆ. ನಾನು ನಿರುತ್ತರನಾಗಿ ಬಿಡುತೇನೆ. ಇನ್ನು ಯಾವತ್ತೂ ನಿನ್ನನ್ನು ಗದರಿಸಬಾರದು ಅಂದುಕೊಳ್ಳುತೇನೆ. ಆದರೆ ಮತ್ತೆ ಮರೆತುಬಿಡುತೇನೆ. ನನಗೆ ನನ್ನ ಮೇಲೆ ಹಿಡಿತ ತಪ್ಪಿದಂತಾಗುತ್ತದೆ. ನಾನು ತುಂಬಾ ಕೆಟ್ಟವನು ಅಂತ ಅಂದುಕೊಳ್ಳುತೇನೆ. ಬಹುಶ್ಯ ಬಹುತೇಕ ಅಪ್ಪಂದಿರು ತಮ್ಮ ಮಕ್ಕಳಿಗೆ ,ಸಲ್ಪ ಮಟ್ಟಿಗೆ ಖಳ ನಾಯಕರೇ ಆಗಿರುತ್ತಾರೆ. ಆದರೆ ಮಗಳೇ ಒಂದು ನೆನಪಿಡು!  ಅಪ್ಪ ತುಂಬಾ ಕಠಿಣ ಅಂತ ಅನಿಸಬಹುದು. ಆದರೆ ಅದರ ಹಿಂದೆ ಅಡಗಿರೋದು ಕಾಳಜಿ ಮಾತ್ರ ! ತನ್ನ ಮಕ್ಕಳು ಒಳ್ಳೆ ಸಂಸ್ಕ್ರರವಂತರಾಗಬೇಕು , ಚೆನ್ನಾಗಿ ಓದಿ ಮುಂದೆ ಬದುಕನ್ನು ಸ್ವತಂತ್ರವಾಗಿ ನಡೆಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಅನ್ನುವ ಕಾಳಜಿಯಿಂದ ಅಪ್ಪ  ಗದರುತ್ತಾನೆ. ನನ್ನ ಅಪ್ಪ ಕೂಡ ಹಾಗೇನೇ !

ಆದರೆ ಅವರು ಗದರುತ್ತಿದ್ದರು ಎನ್ನುವುದಕ್ಕಿಂತ ಜಾಸ್ತಿ, ಗದರುತ್ತಾರೆ ಅನ್ನುವ ಭಯ ನನಗೆ ಜಾಸ್ತಿ ಇತ್ತು. ಅವರು ಮನೆಯೊಳಗೇ ಕಾಲಿಟ್ಟೊಡನೆ , ನಾನು ಕೋಣೆಯೊಳಗೆ ಸೇರಿಕೊಳ್ಳುತಿದ್ದೆ. ಅದೇನೋ ಅವರೆಂದರೆ ಅವ್ಯಕ್ತ ಭಯ ಮತ್ತು ಗೌರವ. ತಪ್ಪು ಮಾಡಿದಾಗ  ಬಯ್ಯುತಿದ್ರು ನಿಜ ಆದರೆ ಯಾವತ್ತೂ ಯಾವುದಕ್ಕೂ ಬಲವಂತ ಮಾಡಿದವರಲ್ಲ. ಅಪ್ಪ ಅರ್ಥವಾಗುವುದರೊಳಗೆ ಸಮಯ ಮೀರಿಹೋಗಿತ್ತು. ಎಂದು ನನ್ನನ್ನು ಅಪ್ಪಿಕೊಂಡವರಲ್ಲ. ನಾನು ಕೂಡ ಅವರ ಹತ್ತಿರ ಎಂದೂ ಸಲಗೆಯಿಂದ ವರ್ತಿಸಿದವನಲ್ಲ. ಅವರ ಮಾತಿಗೆ ಎದುರುತ್ತರ ಕೊಟ್ಟವನಲ್ಲ. ಇವತ್ತಿಗೂ ನಾನು ನನ್ನ ಪ್ರಪಂಚದಲ್ಲಿ ಅತಿ ಹೆಚ್ಚು ಗೌರವಿಸುವ ವ್ಯಕ್ತಿ ನನ್ನ ಅಪ್ಪ. ಒಮ್ಮೆ  ನಾನು ತೀವ್ರ ಜ್ವರದಿಂದ ಅರೆ ಪ್ರಜ್ಞಾವಸ್ಥೆಯಲ್ಲಿ  ಬಳಲುತ್ತಿರುವಾಗ  ಅವರು ನನ್ನ  ಹತ್ತಿರ ಕುಳಿತು ತಲೆಯನ್ನು ನೇವರಿಸಿ ಏನು ಆಗುತ್ತಿದೆ ಮಗನೆ ಅಂದಾಗ ನನ್ನ ಕಣ್ಣಚಿನಿಂದ ನೀರು ಜಿನುಗಿತ್ತು. ಅಪ್ಪನಿಗೆ ನಾನು ಅಂದ್ರೆ ಅಷ್ಟಕಷ್ಟೆ , ಸದಾ ಬಯ್ಯುತ್ತಾರೆ ಅಂದುಕೊಂಡಿದ್ದ ನನಗೆ ಅವತ್ತು ಅಪ್ಪನ ಇನ್ನೊಂದು ಮುಖದ ದರ್ಶನವಾಗಿತ್ತು. ಅದೆಷ್ಟು ಕಷ್ಟ ಇತ್ತೋ ಅವರಿಗೆ , ಎಂದು ತೋರ್ಪಡಿಸಿದವರೇ ಅಲ್ಲ. ಯಾವುದು ಕೇಳಿದ್ರು ಇಲ್ಲ ಅಂದವರಲ್ಲ. ಮಗ ಚೆನ್ನಾಗಿ ಓದಿ ಒಳ್ಳೆ ವ್ಯಕ್ತಿಯಾಗಬೇಕು ಅಂತ ಕನಸು ಕಂಡಿದ್ರೋ ಏನೋ. ನಾನು ವಿದ್ಯಾಭ್ಯಾಸ ಮುಗಿಸಿ ಅದ್ಯಾವುದೋ ಕನಸಿನ ಹಿಂದೆ ಬಿದ್ದು ಅದು ನನಸಾಗದೇ ಕ್ಷೋಭೆಗೆ ಒಳಗಾಗಿ ನಿಷ್ಕ್ರಷ್ಟ ಜೀವನ ನಡೆಸುತ್ತಿದ್ದಾಗ ನನ್ನ ಸ್ಥಿತಿ ಕಂಡು ಹೌಹಾರಿ , ಮಗನೆ ನಿನಗೆ ವ್ಯಾಪಾರ ಮಾಡುವ ಅಸೆ ಇದೆ ಅಲ್ವ , ನೀನು ವ್ಯಾಪಾರ ಮಾಡು ಅಂತ ಟೀ ಪುಡಿಯನ್ನು ಖರೀದಿಸಿಕೊಟ್ಟು ಬೆಂಬಲಿಸಿದವರು ನನ್ನ ಅಪ್ಪ. ಅವರಿಗೆ ವಿದೇಶದಲ್ಲಿ ಕೆಲಸ ಮಾಡುವ ಮಹದಾಸೆ ಇತ್ತು. ಕಡೆಗೂ ಅದು ನೆರವೇರಲೇ ಇಲ್ಲ. ಆದರೆ ನನಗೆ ಹಣ ಕೊಟ್ಟು ವಿದೇಶಕ್ಕೆ ಕಳುಹಿಸಿದರು ನನ್ನ ಅಪ್ಪ. ಬದುಕಿರುವ ತನಗೆ ನನಗೆ ಎಲ್ಲವನ್ನು ಕೊಟ್ಟರೆ ವಿನಹ ನನ್ನಿಂದ ಏನನ್ನು ಮರಳಿ ಪಡೆದುಕೊಳ್ಳಲಿಲ್ಲ. ಕಡೆಗೆ ಅವರಿಗೆ ಒಂದು ಜೊತೆ ಬಟ್ಟೆ ಕೂಡ ನಾನು ತೆಗೆದುಕೊಡಲಾಗಲಿಲ್ಲ.! ಎಲ್ಲವನ್ನು ಅವರಿಂದ ಪಡೆದೆ. ಅವರೆಂದು ಬಹಿರಂಗವಾಗಿ ತಮ್ಮ ಪ್ರೀತಿಯನ್ನು ತೋರ್ಪಡಿಸಲಿಲ್ಲ ಆದರೆ ಪ್ರತಿಕ್ಷಣ ನನ್ನ ಬಗ್ಗೆ ಕಾಳಜಿ ವಹಿಸಿದರು.

ಇವತ್ತು ಅಪ್ಪ,ನಾನು ಒಬ್ಬ ಬರಹಗಾರನಾಗಿದ್ದೇನೆ. ನೀವು ವಿದೇಶದಲ್ಲಿ ಕೆಲಸ ಮಾಡುವ ಕನಸು ಕಾಣುತಿದ್ರಿ ! ನಾನು ಅದೇ ವಿದೇಶದಲ್ಲಿ  ಸಣ್ಣ ಸ್ವಂತ ಉದ್ಯಮ ನಡೆಸುತ್ತಿದ್ದೇನೆ ಅಂತ ಹೇಳುವ ಅಂದ್ರೆ ಕೇಳಲು ಅವರಿಲ್ಲ. ಮಗಳೇ ಇಷ್ಟೆಲ್ಲ ನಿನಗೆ ನಾನು ಯಾಕೆ ಹೇಳ್ತಾ ಇದ್ದೇನೆ ಅಂದ್ರೆ ಬಹುತೇಕೆ ಅಪ್ಪಂದಿರು ಹಾಗೇನೇ ಮಗಳೇ. ಅವರಿಗೆ ಅಮ್ಮನ ಹಾಗೆ ಪ್ರೀತಿ ತೋರ್ಪಡಿಸಲು , ಭಾವನೆಗಳನ್ನು ವ್ಯಕ್ತಪಡಿಸಲು ಬರೋದಿಲ್ಲ. ಆದರೆ ತಮ್ಮ ಮಕ್ಕಳಿಗಾಗಿ ಜೀವಮಾನವಿಡೀ ಕಷ್ಟಪಡುತ್ತಾರೆ. ಮಕ್ಕಳೊಂದಿಗೆ ಸಲುಗೆಯಿಂದ ವರ್ತಿಸಲು ಅವರಿಗೆ ಬರೋದಿಲ್ಲ. ಆದರೆ ಮಕ್ಕಳ ಮೇಲೆ ಬೆಟ್ಟದಷ್ಟು ಪ್ರೀತಿಯನ್ನು ಹೃದಯದಲ್ಲಿ ಬಚ್ಚಿಟ್ಟುಕೊಂಡಿರುತ್ತಾರೆ. ಮಗಳೇ ನನಗೆ ಗೊತ್ತು ನಿನಗೆ ಕನ್ನಡ ಓದಲು ಬರೋದಿಲ್ಲ. ನಾನು ಬರೆದದ್ದು ನಿನಗೆ ಅರ್ಥವಾಗೋದು ಇಲ್ಲ. ಆದರೆ ಈ ಪತ್ರ ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುವ ಎಲ್ಲ ಅಪ್ಪಂದಿರಿಗೆ ಅರ್ಪಣೆ.

ಮನದ ಭಾವನೆಗಳನ್ನು ಹೊರ ಹೊಮ್ಮಿಸಲಾಗದೆ, ಒದ್ದಾಡುವ ಪ್ರತಿ ಅಪ್ಪನ ಭಾವನೆಗಳನ್ನು ನಾನು ಇಲ್ಲಿ ತೆರೆದಿಡುತ್ತಿದ್ದೀನಿ. ಅಪ್ಪ ತುಂಬಾ ಜೋರು ಅಂತ ನಂಬಿರುವ ಮಕ್ಕಳೇ , ಅಪ್ಪ ನೀವು ಅಂದುಕೊಂಡ ಹಾಗೆ ಅಲ್ಲ ಅಂತ ಹೇಳುವ ಪ್ರಯತ್ನ ನಾನು ಇಲ್ಲಿ ಮಾಡುತಿದ್ದೀನಿ. ಪ್ರೀತಿ ಇರಲಿ ಮಗಳೇ.

ನಿನ್ನ ಪ್ರೀತಿಯ ಅಪ್ಪ

ಪ್ರಕಾಶ್ ಮಲೆಬೆಟ್ಟುಗಳೇ ಇದು, ನಾನು ನಿನಗೆ ಬರೆಯುತ್ತಿರುವ ಎರಡನೇ ಪತ್ರ! ನಿನಗೆ ಗೊತ್ತು ನನಗೆ ಸಿನಿಮಾಗಳು ತುಂಬಾನೇ ಇಷ್ಟ ಅಂತ. ನಂಗೂ ಗೊತ್ತು ಮಗಳೇ ನಿನಗೆ ಕೂಡ ಸಿನಿಮಾ ಇಷ್ಟ . ಆದರೆ ಅಪ್ಪನ , ಅಮ್ಮನ ಕಟ್ಟುಪಾಡುಗಳು ! ಓದು ಮುಖ್ಯ ಅನ್ನುವ ಅವರ ಕಿರಿಕಿರಿಯ ನಡುವೆ ಅಪರೂಪಕ್ಕೆ ಒಮ್ಮೆ ಮಾತ್ರ ನಿನಗೆ ಸಿನಿಮಾ ನೋಡುವ ಅವಕಾಶ ದೊರಕುತ್ತೆ ಅಲ್ವ! ಮೊನ್ನೆ ತಮಿಳು ಸಿನಿಮಾ ಡಾನ್ ನೋಡಿದೆ. ಯಾಕೋ ಕಡೆಗೆ ತುಂಬಾ ಅಳು ಬಂದು ಬಿಟ್ಟಿತು. ಅಪ್ಪನ ನೆನಪು ಬಿಡದೆ ಕಾಡತೊಡಗಿತು. ನಿಂಗು ಅಜ್ಜನನ್ನು ನೋಡುವ ಭಾಗ್ಯ ದೊರಕಲಿಲ್ಲ. ಆದರೆ ಏನು ಮಾಡೋದು ? ಎಲ್ಲವೂ ದೇವರ ಇಚ್ಛೆ. ನಿನಗೆ ಅನಿಸುತ್ತಿರಬಹುದು, ನನ್ನ ಅಪ್ಪ ಯಾವಾಗಲೂ ಕಿರಿ ಕಿರಿ ಮಾಡುತ್ತ ಇರುತ್ತಾರೆ. ನನ್ನ ಮೇಲೆ ಅವರಿಗೆ ಬಲು ಬೇಗನೆ ಕೋಪ ಬರುತ್ತೆ. ಕೆಲವೊಮ್ಮೆ ನೀನು ರೋಸಿಹೋಗಿ ಬಿಡುತಿಯ ಅಲ್ವ. ಆದ್ರೂ ನನ್ನ ಬಂಗಾರ ಒಂದೇ ಒಂದು ಮಾತು ನೀನು ತಿರುಗಿ ನನಗೆ ಹೇಳಲ್ಲ. ಮೌನಕ್ಕೆ ಶರಣಾಗಿ ಬಿಡುತಿಯ! ಕೆಲವೊಮ್ಮೆ ನನಗೆ ನನ್ನ ಮೇಲೇನೆ ತುಂಬಾ ಕೋಪ ಬಂದು ಬಿಡುತ್ತೆ. ಯಾಕಾಗಿ ನಾನು ನಿನಗೆ ಬೈಯಬೇಕು ಅಂತ ನನ್ನ ಮನಃಸಾಕ್ಷಿ ನನ್ನ ಬಳಿ ಪ್ರಶ್ನೆ ಕೇಳುತ್ತೆ. ನಾನು ನಿರುತ್ತರನಾಗಿ ಬಿಡುತೇನೆ. ಇನ್ನು ಯಾವತ್ತೂ ನಿನ್ನನ್ನು ಗದರಿಸಬಾರದು ಅಂದುಕೊಳ್ಳುತೇನೆ. ಆದರೆ ಮತ್ತೆ ಮರೆತುಬಿಡುತೇನೆ. ನನಗೆ ನನ್ನ ಮೇಲೆ ಹಿಡಿತ ತಪ್ಪಿದಂತಾಗುತ್ತದೆ. ನಾನು ತುಂಬಾ ಕೆಟ್ಟವನು ಅಂತ ಅಂದುಕೊಳ್ಳುತೇನೆ. ಬಹುಶ್ಯ ಬಹುತೇಕ ಅಪ್ಪಂದಿರು ತಮ್ಮ ಮಕ್ಕಳಿಗೆ ,ಸಲ್ಪ ಮಟ್ಟಿಗೆ ಖಳ ನಾಯಕರೇ ಆಗಿರುತ್ತಾರೆ. ಆದರೆ ಮಗಳೇ ಒಂದು ನೆನಪಿಡು!  ಅಪ್ಪ ತುಂಬಾ ಕಠಿಣ ಅಂತ ಅನಿಸಬಹುದು. ಆದರೆ ಅದರ ಹಿಂದೆ ಅಡಗಿರೋದು ಕಾಳಜಿ ಮಾತ್ರ ! ತನ್ನ ಮಕ್ಕಳು ಒಳ್ಳೆ ಸಂಸ್ಕ್ರರವಂತರಾಗಬೇಕು , ಚೆನ್ನಾಗಿ ಓದಿ ಮುಂದೆ ಬದುಕನ್ನು ಸ್ವತಂತ್ರವಾಗಿ ನಡೆಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಅನ್ನುವ ಕಾಳಜಿಯಿಂದ ಅಪ್ಪ  ಗದರುತ್ತಾನೆ. ನನ್ನ ಅಪ್ಪ ಕೂಡ ಹಾಗೇನೇ !

ಆದರೆ ಅವರು ಗದರುತ್ತಿದ್ದರು ಎನ್ನುವುದಕ್ಕಿಂತ ಜಾಸ್ತಿ, ಗದರುತ್ತಾರೆ ಅನ್ನುವ ಭಯ ನನಗೆ ಜಾಸ್ತಿ ಇತ್ತು. ಅವರು ಮನೆಯೊಳಗೇ ಕಾಲಿಟ್ಟೊಡನೆ , ನಾನು ಕೋಣೆಯೊಳಗೆ ಸೇರಿಕೊಳ್ಳುತಿದ್ದೆ. ಅದೇನೋ ಅವರೆಂದರೆ ಅವ್ಯಕ್ತ ಭಯ ಮತ್ತು ಗೌರವ. ತಪ್ಪು ಮಾಡಿದಾಗ  ಬಯ್ಯುತಿದ್ರು ನಿಜ ಆದರೆ ಯಾವತ್ತೂ ಯಾವುದಕ್ಕೂ ಬಲವಂತ ಮಾಡಿದವರಲ್ಲ. ಅಪ್ಪ ಅರ್ಥವಾಗುವುದರೊಳಗೆ ಸಮಯ ಮೀರಿಹೋಗಿತ್ತು. ಎಂದು ನನ್ನನ್ನು ಅಪ್ಪಿಕೊಂಡವರಲ್ಲ. ನಾನು ಕೂಡ ಅವರ ಹತ್ತಿರ ಎಂದೂ ಸಲಗೆಯಿಂದ ವರ್ತಿಸಿದವನಲ್ಲ. ಅವರ ಮಾತಿಗೆ ಎದುರುತ್ತರ ಕೊಟ್ಟವನಲ್ಲ. ಇವತ್ತಿಗೂ ನಾನು ನನ್ನ ಪ್ರಪಂಚದಲ್ಲಿ ಅತಿ ಹೆಚ್ಚು ಗೌರವಿಸುವ ವ್ಯಕ್ತಿ ನನ್ನ ಅಪ್ಪ. ಒಮ್ಮೆ  ನಾನು ತೀವ್ರ ಜ್ವರದಿಂದ ಅರೆ ಪ್ರಜ್ಞಾವಸ್ಥೆಯಲ್ಲಿ  ಬಳಲುತ್ತಿರುವಾಗ  ಅವರು ನನ್ನ  ಹತ್ತಿರ ಕುಳಿತು ತಲೆಯನ್ನು ನೇವರಿಸಿ ಏನು ಆಗುತ್ತಿದೆ ಮಗನೆ ಅಂದಾಗ ನನ್ನ ಕಣ್ಣಚಿನಿಂದ ನೀರು ಜಿನುಗಿತ್ತು. ಅಪ್ಪನಿಗೆ ನಾನು ಅಂದ್ರೆ ಅಷ್ಟಕಷ್ಟೆ , ಸದಾ ಬಯ್ಯುತ್ತಾರೆ ಅಂದುಕೊಂಡಿದ್ದ ನನಗೆ ಅವತ್ತು ಅಪ್ಪನ ಇನ್ನೊಂದು ಮುಖದ ದರ್ಶನವಾಗಿತ್ತು. ಅದೆಷ್ಟು ಕಷ್ಟ ಇತ್ತೋ ಅವರಿಗೆ , ಎಂದು ತೋರ್ಪಡಿಸಿದವರೇ ಅಲ್ಲ. ಯಾವುದು ಕೇಳಿದ್ರು ಇಲ್ಲ ಅಂದವರಲ್ಲ. ಮಗ ಚೆನ್ನಾಗಿ ಓದಿ ಒಳ್ಳೆ ವ್ಯಕ್ತಿಯಾಗಬೇಕು ಅಂತ ಕನಸು ಕಂಡಿದ್ರೋ ಏನೋ. ನಾನು ವಿದ್ಯಾಭ್ಯಾಸ ಮುಗಿಸಿ ಅದ್ಯಾವುದೋ ಕನಸಿನ ಹಿಂದೆ ಬಿದ್ದು ಅದು ನನಸಾಗದೇ ಕ್ಷೋಭೆಗೆ ಒಳಗಾಗಿ ನಿಷ್ಕ್ರಷ್ಟ ಜೀವನ ನಡೆಸುತ್ತಿದ್ದಾಗ ನನ್ನ ಸ್ಥಿತಿ ಕಂಡು ಹೌಹಾರಿ , ಮಗನೆ ನಿನಗೆ ವ್ಯಾಪಾರ ಮಾಡುವ ಅಸೆ ಇದೆ ಅಲ್ವ , ನೀನು ವ್ಯಾಪಾರ ಮಾಡು ಅಂತ ಟೀ ಪುಡಿಯನ್ನು ಖರೀದಿಸಿಕೊಟ್ಟು ಬೆಂಬಲಿಸಿದವರು ನನ್ನ ಅಪ್ಪ. ಅವರಿಗೆ ವಿದೇಶದಲ್ಲಿ ಕೆಲಸ ಮಾಡುವ ಮಹದಾಸೆ ಇತ್ತು. ಕಡೆಗೂ ಅದು ನೆರವೇರಲೇ ಇಲ್ಲ. ಆದರೆ ನನಗೆ ಹಣ ಕೊಟ್ಟು ವಿದೇಶಕ್ಕೆ ಕಳುಹಿಸಿದರು ನನ್ನ ಅಪ್ಪ. ಬದುಕಿರುವ ತನಗೆ ನನಗೆ ಎಲ್ಲವನ್ನು ಕೊಟ್ಟರೆ ವಿನಹ ನನ್ನಿಂದ ಏನನ್ನು ಮರಳಿ ಪಡೆದುಕೊಳ್ಳಲಿಲ್ಲ. ಕಡೆಗೆ ಅವರಿಗೆ ಒಂದು ಜೊತೆ ಬಟ್ಟೆ ಕೂಡ ನಾನು ತೆಗೆದುಕೊಡಲಾಗಲಿಲ್ಲ.! ಎಲ್ಲವನ್ನು ಅವರಿಂದ ಪಡೆದೆ. ಅವರೆಂದು ಬಹಿರಂಗವಾಗಿ ತಮ್ಮ ಪ್ರೀತಿಯನ್ನು ತೋರ್ಪಡಿಸಲಿಲ್ಲ ಆದರೆ ಪ್ರತಿಕ್ಷಣ ನನ್ನ ಬಗ್ಗೆ ಕಾಳಜಿ ವಹಿಸಿದರು.

ಇವತ್ತು ಅಪ್ಪ,ನಾನು ಒಬ್ಬ ಬರಹಗಾರನಾಗಿದ್ದೇನೆ. ನೀವು ವಿದೇಶದಲ್ಲಿ ಕೆಲಸ ಮಾಡುವ ಕನಸು ಕಾಣುತಿದ್ರಿ ! ನಾನು ಅದೇ ವಿದೇಶದಲ್ಲಿ  ಸಣ್ಣ ಸ್ವಂತ ಉದ್ಯಮ ನಡೆಸುತ್ತಿದ್ದೇನೆ ಅಂತ ಹೇಳುವ ಅಂದ್ರೆ ಕೇಳಲು ಅವರಿಲ್ಲ. ಮಗಳೇ ಇಷ್ಟೆಲ್ಲ ನಿನಗೆ ನಾನು ಯಾಕೆ ಹೇಳ್ತಾ ಇದ್ದೇನೆ ಅಂದ್ರೆ ಬಹುತೇಕೆ ಅಪ್ಪಂದಿರು ಹಾಗೇನೇ ಮಗಳೇ. ಅವರಿಗೆ ಅಮ್ಮನ ಹಾಗೆ ಪ್ರೀತಿ ತೋರ್ಪಡಿಸಲು , ಭಾವನೆಗಳನ್ನು ವ್ಯಕ್ತಪಡಿಸಲು ಬರೋದಿಲ್ಲ. ಆದರೆ ತಮ್ಮ ಮಕ್ಕಳಿಗಾಗಿ ಜೀವಮಾನವಿಡೀ ಕಷ್ಟಪಡುತ್ತಾರೆ. ಮಕ್ಕಳೊಂದಿಗೆ ಸಲುಗೆಯಿಂದ ವರ್ತಿಸಲು ಅವರಿಗೆ ಬರೋದಿಲ್ಲ. ಆದರೆ ಮಕ್ಕಳ ಮೇಲೆ ಬೆಟ್ಟದಷ್ಟು ಪ್ರೀತಿಯನ್ನು ಹೃದಯದಲ್ಲಿ ಬಚ್ಚಿಟ್ಟುಕೊಂಡಿರುತ್ತಾರೆ. ಮಗಳೇ ನನಗೆ ಗೊತ್ತು ನಿನಗೆ ಕನ್ನಡ ಓದಲು ಬರೋದಿಲ್ಲ. ನಾನು ಬರೆದದ್ದು ನಿನಗೆ ಅರ್ಥವಾಗೋದು ಇಲ್ಲ. ಆದರೆ ಈ ಪತ್ರ ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುವ ಎಲ್ಲ ಅಪ್ಪಂದಿರಿಗೆ ಅರ್ಪಣೆ.

ಮನದ ಭಾವನೆಗಳನ್ನು ಹೊರ ಹೊಮ್ಮಿಸಲಾಗದೆ, ಒದ್ದಾಡುವ ಪ್ರತಿ ಅಪ್ಪನ ಭಾವನೆಗಳನ್ನು ನಾನು ಇಲ್ಲಿ ತೆರೆದಿಡುತ್ತಿದ್ದೀನಿ. ಅಪ್ಪ ತುಂಬಾ ಜೋರು ಅಂತ ನಂಬಿರುವ ಮಕ್ಕಳೇ , ಅಪ್ಪ ನೀವು ಅಂದುಕೊಂಡ ಹಾಗೆ ಅಲ್ಲ ಅಂತ ಹೇಳುವ ಪ್ರಯತ್ನ ನಾನು ಇಲ್ಲಿ ಮಾಡುತಿದ್ದೀನಿ. ಪ್ರೀತಿ ಇರಲಿ ಮಗಳೇ.

ನಿನ್ನ ಪ್ರೀತಿಯ ಅಪ್ಪ

ಪ್ರಕಾಶ್ ಮಲೆಬೆಟ್ಟು

0 likes

Published By

PAKASH DSOUZA

pakashdsouza

Comments

Appreciate the author by telling what you feel about the post 💓

Please Login or Create a free account to comment.