Ajit Harishi

ajitharishi

https://paperwiff.com/ajitharishi

ಡಾ.ಅಜಿತ್ ಹೆಗಡೆ ಹರೀಶಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹರೀಶಿ ಎಂಬ ಗ್ರಾಮದಲ್ಲಿ 1978 ರಲ್ಲಿ ಜನನ.ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹುಟ್ಟೂರಿನ ಸರ್ಕಾರಿ ಶಾಲೆಯಲ್ಲಿ. ಪದವಿಪೂರ್ವ ಶಿಕ್ಷಣ ಶಿರಸಿಯ ಎಂ.ಇ.ಎಸ್, ಎಂ.ಎಂ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನಲ್ಲಿ. ಆಯುರ್ವೇದ ವೈದ್ಯಕೀಯ ಪದವಿ ಎಚ್.ಎ.ಎಸ್.ಎಸ್ ಆಯುರ್ವೇದ ಮಹಾವಿದ್ಯಾಲಯ, ಹುಬ್ಬಳ್ಳಿಯಲ್ಲಿ. ಅಕ್ಯುಪಂಕ್ಚರ್ ( ಸೂಜಿ)ಚಿಕಿತ್ಸೆ , ಹಿಪ್ನೋಥೆರಪಿಯಲ್ಲಿ ಪರಿಣಿತಿ. ಪ್ರಸ್ತುತ ಹರೀಶಿಯಲ್ಲಿ ಖಾಸಗಿ ವೈದ್ಯ ವೃತ್ತಿ. ಬರವಣಿಗೆ ಇವರ ಪ್ರವೃತ್ತಿ. ಬಿಳಿಮಲ್ಲಿಗೆಯ ಬಾವುಟ ( ಕಾವ್ಯ ಮಾಣಿಕ್ಯ ಪ್ರಶಸ್ತಿ ), ಸೂರು ಸೆರೆಹಿಡಿಯದ ಹನಿಗಳು ಪ್ರಕಟಿತ ಕವನ ಸಂಕಲನಗಳು. ಪರಿಧಾವಿ ಮತ್ತು ಕಾಮೋಲ ಪ್ರಕಟಿತ ಕಥಾಸಂಕಲನಗಳು. ಆರೋಗ್ಯದ ಅರಿವು ಎಂಬ ಅಂಕಣ ಬರಹದ ಗುಚ್ಛ ಪುಸ್ತಕವಾಗಿ ಪ್ರಕಟಗೊಂಡಿದೆ.ಇಲ್ಲಿಯವರೆಗೆ ಪ್ರಕಟಿತ ಕೃತಿಗಳು ಐದು. ಶಿರಸಿ ಸಿರಿ, ಸಂಪದ ಸಾಲು ಮತ್ತು ಶಿವಮೊಗ್ಗ ಟೈಮ್ಸ್ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಪರಿಚಿತರು. ಕನ್ನಡ ಪ್ರತಿಲಿಪಿ ರಾಷ್ಟ್ರೀಯ ಹಾಗೂ ಕಿರುಗಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮತ್ತು ಸಂಪದ ಸಾಲು ಪತ್ರಿಕೆಯ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ವಿಜೇತರು. ಇತ್ತೀಚಿಗೆ ಕಾಮೋಲ ಕಥಾಸಂಕಲನದ 'ಕನ್ನಡಿಗಂಟದ ಬಿಂದಿ'ಕಥೆಗೆ ಮುಂಬೈನ ಕನ್ನಡ ಭವನ ಎಜುಕೇಶನ್ ಸೊಸೈಟಿಯವರ ರಾಷ್ಟ್ರೀಯ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆತಿದೆ. ಇವರ ತಿರುವು ಕಥೆ ಹಿಂದಿ ಭಾಷೆಗೆ 'ಮೋಡ್' ಎಂಬ ಹೆಸರಿನಲ್ಲಿ ಅನುವಾದಗೊಂಡಿದೆ. ಇವರನ್ನು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ೧೪ ನೇ ಸಮ್ಮೇಳನದಲ್ಲಿ ಸನ್ಮಾನಿಸಲಾಗಿದೆ.ಕಥೆ,ಕವನ, ವೈದ್ಯಕೀಯ ಮತ್ತು ಕ್ರೀಡಾ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

Ajit Harishi
Ajit Harishi 05 Sep, 2020 | 1 min read

ಮುಸುಕು

ಕವಿಯೊಬ್ಬ ಕವಿತೆಯ ಒಳಗೆ...

#Writer, inside, feeling

Reactions 0
Comments 0
504
Ajit Harishi
Ajit Harishi 30 Aug, 2020 | 1 min read

ನಂತರ

ಅರಿಷಡ್ವರ್ಗಗಳ ಕುರಿತು

#Desire, angry and fear

Reactions 1
Comments 2
537
Ajit Harishi
Ajit Harishi 28 Aug, 2020 | 1 min read

ಆಟ

ಜೂಜಿನ ಕುರಿತಾದ ಕಥನವಿದು

#Gambling, winnings and war.

Reactions 1
Comments 1
580
Ajit Harishi
Ajit Harishi 13 Aug, 2020 | 1 min read

ಗಮನ

ಯಾರೈಗೆ ಎಲ್ಲಿ ತಿರುವೋ ಎಂಬ ಬಾಳಿನ ಅನಿಶ್ಚತತೆ ಮತ್ತು ಸಂಭವಿಸಬಹುದಾದ ಸಂಗತಿಯ ಕುರಿತು.

Reactions 2
Comments 2
530
Ajit Harishi
Ajit Harishi 13 Aug, 2020 | 1 min read

ಕೊನೆಗೆ...

ಅವಳು ಮೊದಲು ಹೋಗಿದ್ದು ಎಲ್ಲಿಗೆ? ಆಮೇಲೆ ಭೇಟಿ ಮಾಡಿದ್ದು ಯಾರನ್ನು?

Reactions 2
Comments 0
557