ಮುಸುಕು

ಕವಿಯೊಬ್ಬ ಕವಿತೆಯ ಒಳಗೆ...

Originally published in kn
Reactions 0
488
Ajit Harishi
Ajit Harishi 05 Sep, 2020 | 1 min read
Writer, inside, feeling

ಮುಸುಕು


ಮನಸಿನ

ಮೂಲೆ ಮೂಲೆಗಳಲ್ಲಿದ್ದ

ಕಹಿ ನೆನಪುಗಳ

ಹುಡುಕಿ ಹೆಕ್ಕಿ

ಗುಂಡಿ ತೋಡಿ

ಸಮಾಧಿ ಮಾಡುವ

ಅಂದುಕೊಂಡೆ

  *  *  *

ಮನೆಯ ಮಾಡಿಗೆ

ಕಟ್ಟಿದ್ದ ಬಿಂಜಲು

ಕಣ್ಣಿಗೆ ಬಿತ್ತು

ಅದೆಷ್ಟೋ ದಿನಗಳಿಂದ

ಬಾಕಿ ಉಳಿದ 

ಕೆಲಸ ಮೊದಲು

ಮಾಡಿ ಮುಗಿಸಬೇಕು

 *    *    *

ಅಂಚೆಗೆ ಹಾಕಬೇಕಿದ್ದ

ಬರೆದ ಕವಿತೆ

ಅರ್ಧ ಬರೆದು

ದಿಕ್ಕು ತಪ್ಪಿದ ಕಥೆ

ತಲೆಯಲ್ಲಿ ಗುಂಯ್

ಗುಡುತ್ತಾ ಅಕ್ಷರಕ್ಕೆ

ಇಳಿಯದ ಪುಸ್ತಕ

 *   *   *

ಇಷ್ಟೊಂದು ಆಗುವ

ಕೆಲಸಗಳೇ

ಬಗೆಹರಿವ ಬದುಕಲ್ಲ

ಅಸಾಧ್ಯ ಎನಿಸುತಿದೆ

ತಲೆ ಸಿಡಿಯುವ ಮುನ್ನ

ಕಿವಿಯೊಳಗೆ ಹತ್ತಿ ಹಾಕಿ

ಕಣ್ಮುಚ್ಚಿ ಮುಸುಕು ಹೊದ್ದೆ.

--     --   --   --

ಡಾ.ಅಜಿತ್ ಹರೀಶಿ.

0 likes

Published By

Ajit Harishi

ajitharishi

Comments

Appreciate the author by telling what you feel about the post 💓

Please Login or Create a free account to comment.