ವೀರಯೋಧರಿಗೆ ನುಡಿನಮನ 🙏

ನಮ್ಮ ದೇಶದ ಹೆಮ್ಮೆಯ ಯೋಧರಿಗೆ, ಸ್ವಾತಂತ್ರ್ಯ ಸಂಗ್ರಾಮದ ಸಮರ ಸೇನಾನಿಗಳಿಗೆ ಒಂದು ನುಡಿನಮನ

Originally published in kn
Reactions 0
666
Raksha Ramesh
Raksha Ramesh 15 Aug, 2020 | 1 min read
#IndependenceDay

ಬೆಳ್ಳಂಬೆಳಿಗ್ಗೆ ಎದ್ದು, ಸ್ನಾನ ತಿಂಡಿ ಮಾಡಿ ಸಮವಸ್ತ್ರ ಧರಿಸಿ, ದಢದಢ ನೇ ಶಾಲೆಯತ್ತ ಹೆಜ್ಜಗಳನ್ನಿಟ್ಟ ನೆನೆಪು ಇದೆಯಲ್ಲವೇ? ಪ್ರಾರ್ಥನೆ, ಭಾಷಣ, ಏಕಪಾತ್ರ ಅಭಿನಯ ಇತ್ಯಾದಿಗಳನ್ನು ಮಾಡಿಕೊಂಡು ಸಿಹಿ ತಿಂದು ಬಂದದ್ದೇ ಸ್ವಾತಂತ್ರ್ಯ ದಿವಸವೆಂದು ಹೇಳುತ್ತಿದ್ದೇವಲ್ಲವೇ?

ಕ್ರಮೇಣ ದೊಡ್ಡವರಾದಂತೆ, ಸ್ವಾತಂತ್ರ್ಯ ಹೋರಾಟದ ಬಗ್ಗೆ, ದೇಶದ ಇತಿಹಾಸದ ಬಗ್ಗೆ ಬಹಳಷ್ಟು ಓದಿಕೊಳ್ಳುತ್ತಾ, ಬರಹಗಳನ್ನು ಬರೆಯುತ್ತಾ ಬಂದಿದ್ದೇವೆ. ಹೀಗಿದ್ದರೂ, ಪರಕೀಯರ ವಿರುದ್ಧ ಹೋರಾಡಿದ ನಮ್ಮ ಹಿರಿಯರು ರಾಷ್ಟ್ರದೆಡೆಗೆ ವ್ಯಕ್ತಪಡಿಸಿದ ಭಾವ ವರ್ಣಿಸವುದು ಅದೆಷ್ಟು ಕಷ್ಟ!

ಈಗಿನ ಪೀಳಿಗೆಯ ಬೆರಳೆಣಿಕೆಯಷ್ಟು ಮಂದಿ ಮಾತ್ರ ಇದನ್ನು ಸ್ವಲ್ಪ ಮಟ್ಟಿಗೆ ಅರಿತಿದ್ದಾರೆ ಎನ್ನುವುದು ಅಕ್ಷರಶಃ ಸತ್ಯ..

ಅದರಲ್ಲೂ ಅಂದಿನ ರಾಷ್ಟ್ರೀಯ ನಾಯಕರನ್ನು ಹೊರತುಪಡಿಸಿ ಉಳಿದ ಸ್ವಾತಂತ್ರ್ಯ ವೀರರ ಬಗ್ಗೆ ನಮಗಿರುವ ಮಾಹಿತಿ ಅಲ್ಪ!

ಇಂತಹವರನ್ನು ತಿಳಿದು ಅವರ ಸೇವೆಯನ್ನು ಸ್ಮರಿಸುವ, ತಿಳಿಯುವ, ಗೌರವಿಸುವ ಸಂಕಲ್ಪ ನಮ್ಮದಾಗಬೇಕು. ಗಡಿಯ ಕಾಯುವ ವೀರಯೋಧ, ಹಸಿರ ಬೆಳೆವ ಹಳ್ಳಿ ರೈತ ನಮ್ಮ ಬೆನ್ನೆಲುಬು. ದೇಶದ ಏಳಿಗೆಗೆ ಇವರ ಕೊಡುಗೆಯನ್ನು ನಾವೆಂದೂ ಮರೆಯಬಾರದು. ಎಷ್ಟೋ ವೀರರು ಎಲೆ ಮರೆಯ ಕಾಯಂತಿದ್ದು ತಾಯ್ನೆಲಕ್ಕಾಗಿ ಪ್ರಾಣ ಸಮರ್ಪಣೆ ಮಾಡಿದ್ದಾರೆ. ಅವರೆಲ್ಲರ ಸ್ಮರಣೆ ಮಾಡುತ್ತಾ, ಈ ನುಡಿ ನಮನವನ್ನು ಅರ್ಪಿಸುತ್ತಿದ್ದೇನೆ.

ಓದುಗರೆಲ್ಲರಿಗೂ 74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು!


0 likes

Published By

Raksha Ramesh

raksha

Comments

Appreciate the author by telling what you feel about the post 💓

  • ARAVIND SHANBHAG, Baleri · 3 years ago last edited 3 years ago

    nimagu shubhashaya

  • Pramod D.Naik · 3 years ago last edited 3 years ago

    Soooooooper. Nice one.

  • Deepak Shenoy · 3 years ago last edited 3 years ago

    ಭಾರತ ಮಾತೆಗೆ ಜಯವಾಗಲಿ

Please Login or Create a free account to comment.