Microfables

"Quote your quotes"

ನಿಂತೆಯಾ ಒಡೆಯ??!!
ನಿಂತೆಯಾ ಒಡೆಯ!!!? ಸುತ್ತಲೂ ದಟ್ಟ ಅರಣ್ಯ.., ನಿಂತಿತೇಕೆ ನಮ್ಮ ಪಯಣ?? ಯಾವ ಮನೆಗಳು ಕಾಣಿಸುತ್ತಿಲ್ಲ... ಯಾವ ಸುರಕ್ಷಿತ ತಾಣವೂ ಇಲ್ಲಿಲ್ಲ... ಆದರೂ ಒಡೆಯನೇಕೆ ನಿಂತ!!! ಹಗಲಲ್ಲಿ ಈ ಹಾದಿ ರಮ್ಯ ಮನೋಹರ.., ಇರುಳಲ್ಲಿ ಇದು ರುದ್ರ ಭಯಂಕರ... ಸವೆಸುವ ದಾರಿ ಇನ್ನು ಬೇಕಾದಷ್ಟಿದೆ.., ತಲುಪುವ ಗಮ್ಯ ಇನ್ನು ದೂರವಿದೆ... ಮುಸ್ಸಂಜೆಯಲಿ ಸೊಗಸಾಗಿದ್ದ ಈ ಪಯಣ.., ಈ ಸರಿ ರಾತ್ರಿಯಲಿ ಭಯ ಹುಟ್ಟಿಸುತಿದೆ.. ಯಾಕೆ ನನ್ನೊಡೆಯ.., ಹಾದಿ ತಪ್ಪಿತೆ.??? ಹೆದರಬೇಡ ನಾ ಬಲ್ಲೆ ನಿನ್ನ ಹಾದಿಯ.. ನಾನಿರುವೆ ನಿನ್ನೊಟ್ಟಿಗೆ.. ಎಷ್ಟು ದೂರವೋ ನಮ್ಮ ಪಯಣ.., ಇನ್ನೆಷ್ಟು ದೂರವೋ ನಮ್ಮ ಪಯಣ!! ನಾನಿರುವೆ ಈ ಪಯಣದ ಕೊನೆವರೆಗೆ ನಿನ್ನೊಟ್ಟಿಗೆ., ಗಾಢಾಂಧಕಾರದ ಹಾದಿಯೂ., ಹೂವಿನ ಹಾಸಿಗೆ., ನೀನಿದ್ದರೆ ನನ್ನೊಟ್ಟಿಗೆ.., ನೀನಿದ್ದರೆ ನನ್ನೊಟ್ಟಿಗೆ...

Paperwiff

by ramyas

ಕವಿತೆ...

Deepak Shenoy
Deepak Shenoy 26 Aug, 2020
ಅಹಂಕಾರ
ಅಹಂಕಾರವು ಅಭಿವೃದ್ಧಿಯನ್ನು ಕಸಿಯುತ್ತದೆ.

Paperwiff

by deepakshenoy

ಅಭಿವೃದ್ಧಿಯನ್ನು ಬಯಸುವವರು ಅಹಂಕಾರವನ್ನು ಮಾಡಬಾರದು