ರಾಮಾಯಣ ಧರ್ಮಸಾರ

ರಾಮಾಯಣವು ಭಾರತದ ಇತಿಹಾಸ ಮತ್ತು ಭವ್ಯ ಪರಂಪರೆಯನ್ನ ರಾಮನು ಕ್ರಮಿಸಿದ ಮಾರ್ಗದ ಮೂಲಕ ನಿರೂಪಿಸುತ್ತದೆ. ಹೀಗಾಗಿ ರಾಮಾಯಣವು ಕೆಲವರಿಗೆ ಧರ್ಮವೂ, ಧರ್ಮಸಾರವೂ ಆಗಿದೆ. ಇದಕ್ಕೆ ಕಾರಣ ಮರ್ಯಾದಾ ಪುರುಷೋತ್ತಮನ ಆದರ್ಶಗಳು.

Originally published in kn
Reactions 3
576
ARAVIND SHANBHAG, Baleri
ARAVIND SHANBHAG, Baleri 13 Aug, 2020 | 1 min read

Ram is a religion ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಲೇಖನ.


ಆದೌ ರಾಮ ತಪೋವನಾಭಿಗಮನಂ

ಹತ್ವಾ ಮೃಗಂ ಕಾಂಚನಂ|

ವೈದೇಹೀ ಹರಣಂ ಜಟಾಯು ಮರಣಂ,

ಸುಗ್ರೀವ ಸಂಭಾಷಣಂ||

ವಾಲಿನಿರ್ದಲನಂ ಸಮುದ್ರ ತರಣಂ

ಲಂಕಾಪುರೀ ದಾಹನಂ|

ಪಶ್ಚಾದ್ರಾವಣಕುಂಭಕರ್ಣ ಹನನಂ

ಏತದ್ಧಿ ರಾಮಾಯಣಂ||


ಇದು ಸಂಪೂರ್ಣ ರಾಮಾಯಣದ ಕುರಿತಾಗಿರುವ ಏಕಶ್ಲೋಕೀ ರಾಮಾಯಣ, ಹಿಂದೂಗಳ ಪವಿತ್ರಗ್ರಂಥಗಳಲ್ಲಿ ರಾಮಾಯಣವು ಮುಖ್ಯವಾದುದು. ಈ ಬೃಹತ್ಕಾವ್ಯವು ವಾಲ್ಮೀಕಿಯಿಂದ ರಚಿಸಲ್ಪಟ್ಟಿದೆ. ರಾಮಾಯಣವನ್ನು ತತ್ಪುರುಷ ಸಮಾಸವಾಗಿ ವಿಭಜಿಸಿದರೆ (ರಾಮನ+ಅಯನ =ರಾಮಾಯಣ) "ರಾಮನ ನಡಿಗೆ " ಎಂಬ ಅರ್ಥ ಬರುತ್ತದೆ. ಉತ್ತರಾಯಣ ಮತ್ತು ದಕ್ಷಿಣಾಯನಗಳು ಸೂರ್ಯನ್ ಚಲನೆಯ ಹಾದಿಯನ್ನು ತಿಳಿಸುವಂತೆ, ರಾಮಾಯಣವು ಭಾರತದ ಇತಿಹಾಸ ಮತ್ತು ಭವ್ಯ ಪರಂಪರೆಯನ್ನ ರಾಮನು ಕ್ರಮಿಸಿದ ಮಾರ್ಗದ ಮೂಲಕ ನಿರೂಪಿಸುತ್ತದೆ. ಹೀಗಾಗಿ ರಾಮಾಯಣವು ಕೆಲವರಿಗೆ ಧರ್ಮವೂ, ಧರ್ಮಸಾರವೂ ಆಗಿದೆ. ಇದಕ್ಕೆ ಕಾರಣ ಮರ್ಯಾದಾ ಪುರುಷೋತ್ತಮನ ಆದರ್ಶಗಳು.

ರಾಮಾಯಣವು ೨೪೦೦೦ ಶ್ಲೋಕಗಳಿಂದ ಮತ್ತು ೭ ಕಾಂಡಗಳಿಂದ ಕೂಡಿದೆ. ರಾಮಾಯಣದ ಕಥೆ ಮುಖ್ಯವಾಗಿ ಅಯೋಧ್ಯೆಯ ರಾಜಪುತ್ರ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರದ ಕುರಿತಾಗಿದೆ. ವಾಲ್ಮೀಕಿಯಿಂದ ರಚಿತವಾದ ಈ ಕಾವ್ಯ ರಾಮನ ಮಕ್ಕಳಾದ ಲವ-ಕುಶರಿಂದ ಪ್ರಸಿದ್ದಿ ಪಡೆಯಿತು.

ಹಿಂದೆ ಶ್ರೀ ರಾಮನು ತಂದೆಯ ವಚನವನ್ನು ಉಳಿಸಲು ಸೀತೆಯೊಡನೆ, ಹದಿನಾಲ್ಕು ವರ್ಷಕಾಲ ತಪೋವನಕ್ಕೆ ಹೋದನು. ಅಲ್ಲಿ ಸೀತೆಯ ಕೋರಿಕೆಯನ್ನು ಈಡೇರಿಸಲು ಚಿನ್ನದ ಜಿಂಕೆಯನ್ನು ಹಿಡಿಯಲು ಹೋಗಿ ಸಿಗದೆ ಜಿಂಕೆಯನ್ನು ಕೊಂದನು. ಆ ಸಮಯದಲ್ಲಿ ಪರ್ಣಕುಟೀರದಲ್ಲಿದ್ದ ಸೀತೆಯ ಅಪಹರಣವಾಯಿತು. ಸೀತೆಯ ರಕ್ಷಣೆಗೆ ಹೋದ ಜಟಾಯುವಿನ ಮರಣವಾಯಿತು. ಸೀತೆಯನ್ನು ಹುಡುಕುತ್ತಾ ಹೋದ ರಾಮನಿಗೆ ಸುಗ್ರೀವನೊಡನೆ ಸಂಧಿಯಾಯಿತು.

ನಂತರ ರಾಮನು ವಾಲಿಯನ್ನು ವಧಿಸಿದನು. ಸೀತಾನ್ವೇಷ ಣೆಗೆ ಹೋದ ಹನುಮಂತನು ಸಮುದ್ರವನ್ನು ಲಂಘಿಸಿ ಸೀತೆಯನ್ನು ಕಂಡು ಹಿಂತಿರುಗಿ ಬರುವಾಗ ಲಂಕೆಯನ್ನು ದಹಿಸಿದನು. ರಾಮನು ಸುಗ್ರೀವ ಮತ್ತು ಅವನ ಸೈನ್ಯದೊಡನೆ ಲಂಕೆಗೆ ಹೋಗಿ ರಾವಣ, ಕುಂಭಕರ್ಣರನ್ನು ಕೊಂದನು. ಸೀತೆಯನ್ನು ಮರಳಿ ಪಡೆದು ಅಯೋದ್ಯೆಗೆ ಬಂದು ಪಟ್ಟಾಭಿಷಕ್ತನಾದನು.

ರಾಮಾಯಣದ ನಾಯಕನಾದ ರಾಮ ಹಿಂದೂಗಳಿಂದ ಪೂಜಿಸಲ್ಪಡುವ ಜನಪ್ರಿಯ ದೇವರುಗಳಲ್ಲಿ ಒಬ್ಬ. ರಾಮ ನಡೆದ ದಾರಿಯೆಂದು ಹೇಳಲಾದ ಸ್ಥಳಗಳಿಗೆ ತೀರ್ಥಯಾತ್ರಿಗಳು ಭೇಟಿ ಕೊಡುವುದುಂಟು. ರಾಮಾಯಣ ಕೇವಲ ಸಾಹಿತ್ಯ ಕೃತಿಯಾಗಿರದೆ ಹಿಂದೂ ಧರ್ಮದ ಒಂದು ಭಾಗವೇ ಆಗಿದೆ. ಹಿಂದೂ ಧರ್ಮದಲ್ಲಿ ಅದಕ್ಕೆ ಸಲ್ಲುವ ಗೌರವ ಎಷ್ಟೆಂದರೆ ರಾಮಾಯಣ ಅಥವಾ ಅದರ ಕೆಲವು ಭಾಗಗಳನ್ನು ನಿಷ್ಠೆಯಿಂದ ಓದಿ ಅಥವಾ ಕೇಳಿದಲ್ಲಿ ಪಾಪಗಳಿಂದ ಮುಕ್ತಿ ದೊರಕುತ್ತದೆ ಎಂಬ ನಂಬಿಕೆಯೂ ಇದೆ. ರಾಮನು ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ಅವತಾರ. ರಾಮನ ಅವತಾರದ ಉದ್ದೇಶ ಭೂಮಿಯ ಮೇಲೆ ಧರ್ಮವನ್ನು ಸ್ಥಾಪಿಸುವದಾಗಿತ್ತು. ರಾಮಾಯಣದ ಕುರಿತ ಅದೆಷ್ಟು ಮಹಾಕಾವ್ಯಗಳು ರಚನೆಯಾಗಿದೆಯೆಂದರೆ, ಅದನ್ನೊಡಲುಒಂನ್ದು ಜನ್ಮ ಸಾಕಾಗದು. ಕಾಳಿದಾಸ ಮಹಾಕವಿಯ ರಘುವಂಶ ಮಹಾಕಾವ್ಯವು ರಾಮನ ಆದರ್ಶ ಸೌಮ್ಯ ಸ್ವಭಾವವನ್ನು ಸುಂದರವಾಗಿ ಚಿತ್ರಿಸಿದೆ. ತುಳಸೀದಾಸರ ರಾಮಚರಿತಮಾನಸ, ಕನಕದಾಸರ ರಾಮಧಾನ್ಯ ಚರಿತ್ರೆ, ಕಂಬ ರಾಮಾಯಣ ಇತ್ಯಾದಿ ಗ್ರಂಥಗಲ್ ಅಯೋಧ್ಯೆಯನ್ನು ಸಪ್ತ ಮೋಕ್ಷದಾಯಕ ನಗರಿಗಳಲ್ಲಿ ಒಂದೆಂದು, ರಾಮನನ್ನುಒಬ್ಬ ಚತುರ್ ರಾಜನೀತಿಜ್ಞನೆಂದು ಪರಿಗಣಿಸುವದುಂಟು.

ರಾಮಾಯಣದಲ್ಲಿ ರಾಮನ ಮೂಲಕ ಮಾನವನ ಬಾಳುವೆಯ ರೀತಿಯ ಕುರಿತು ತನ್ನ ನೀತಿಯನ್ನು ವ್ಯಕ್ತಪಡಿಸುತ್ತಾನೆ. ಯಾವುದೇ ವ್ಯಕ್ತಿಯು ಪುರಾತನ ಶಾಸ್ತ್ರಗಳಲ್ಲಿ ಹೇಳಿದ ಹಕ್ಕುಬಾಧ್ಯತೆಗಳಿಗೆ ವಿಮುಖನಾಗಬಾರದು. ವೇದಗಳಲ್ಲಿ ಹೇಳಿರುವ ವಿಚಾರಗಳೇ ಧರ್ಮವಾಗಿದ್ದು ಅವುಗಲ್ ಪಾಲನೆಯಾಗಬೇಕು ಎನ್ನುವದು ರಾಮನ ಸಿದ್ದಂತ ಆಗಿತ್ತು. ಧರ್ಮಪಾಲನೆಯಿಂದ ಇಹಲೋಕದಲ್ಲೂ ಪರಲೋಕದಲ್ಲೂ ವ್ಯಕ್ತಿಯ ಕಲ್ಯಾಣವಾಗುವುದು, ಅಲ್ಲದೇ ಯಾವುದೇ ಮಾತು ಕೊಡುವ ಮೊದಲೇ ಪರಿಣಾಮಗಳನ್ನು ಕುರಿತು ಯೋಚಿಸಬೇಕು ಮತ್ತು ಒಮ್ಮೆ ಮಾತು ಕೊಟ್ಟ ಮೇಲೆ ಎಷ್ಟೇ ಕಷ್ಟವಾಗಲಿ ಅದನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ರಾಮಾಯಣವು ಒತ್ತು ಕೊಡುತ್ತದೆ. 

ವಾಲ್ಮೀಕಿಯು ತನ್ನ ಕಥೆಯಲ್ಲಿ ರಾಮನನ್ನು ಒಬ್ಬ ಅತಿಮಾನವ ಎಂದು ಚಿತ್ರಿಸದೆ, ಎಲ್ಲ ಗುಣ ದೋಷಗಳಿಂದ ಕೂಡಿ, ನೈತಿಕ ಸಂದಿಗ್ಧಗಳನ್ನೆದುರಿಸಿ ಅವುಗಳನ್ನು ಧರ್ಮ (ಸರಿಯಾದ ಮಾರ್ಗ)ವನ್ನು ಅನುಸರಿಸುವುದರಿಂದ ಗೆದ್ದ ಒಬ್ಬ ಸಹಜ ಮಾನವನನ್ನಾಗಿ ಚಿತ್ರಿಸಿದ್ದಾನೆ. ರಾಮಾಯಣದಲ್ಲಿನ ಪ್ರಸಂಗಗಳು ಕಥಾನಾಯಕನಾದ ರಾಮನ ಮನುಷ್ಯ ಸಹಜ ಗುಣವನ್ನೆತ್ತಿ ತೋರಿಸಿ ಕಥೆಯ ಮೂಲ ನೀತಿಯಾಗಿರುವ 'ಮನುಷ್ಯನು ಸತ್ಯಮಾರ್ಗವನ್ನು ಅನುಸರಿಸಲು ಅತಿಮಾನವನಿರುವುದು ಅವಶ್ಯವಿಲ್ಲ' ಎಂಬುದನ್ನು ಸಮರ್ಥಿಸುತ್ತವೆ. ನಾವು ಇದನ್ನು ಚಾಚು ತಪ್ಪದೆ ಆಚರಿಸಿದರೆ ಭಾರತ ಇನ್ನೊಮ್ಮೆ ಜಗತ್ತಿಗೆ ವಿಶ್ವಗುರುವಾಗುವದರ ಜೊತೆಗೆ ರಾಮರಾಜ್ಯವೂ ಆಗಲಿದೆ.

ಜೈ ಶ್ರೀರಾಮ್ 



3 likes

Published By

ARAVIND SHANBHAG, Baleri

aravindshanbhag

Comments

Appreciate the author by telling what you feel about the post 💓

Please Login or Create a free account to comment.