ಗಮನ

ಯಾರೈಗೆ ಎಲ್ಲಿ ತಿರುವೋ ಎಂಬ ಬಾಳಿನ ಅನಿಶ್ಚತತೆ ಮತ್ತು ಸಂಭವಿಸಬಹುದಾದ ಸಂಗತಿಯ ಕುರಿತು.

Originally published in kn
Reactions 2
513
Ajit Harishi
Ajit Harishi 13 Aug, 2020 | 1 min read

ಗಮನ

~~~~


ಯಾರಿಗೆ ಯಾವ ತಿರುವೋ

ಎಲ್ಲಿ ಏಕೆ ಹೇಗೆ ನಿಲುವೋ

ಹುಡುಕಿಯೂ ಸಿಗದ ತಾವೋ

ಅಲೆವ ಅಂತರಂಗ ವರವೋ?


ತೆರೆದಿಟ್ಟ ಕವಾಟಕೆ ಬಾ ಎನ್ನಲು,

ಬರಲೂ ಅಪ್ಪಣೆ ಕೇಳಲು 

ಮೌನ ತಂದಿಟ್ಟ ಮಾಹೋಲು

ಮಾತು ತಡಕಾಡಿತು ಮುತ್ತಿಗೆ

ಮತ್ತಿನಲಿ ಉದ್ಗಾರವೇ ಮುತ್ತಿದೆ


ತೊರೆಹರಿದು ಕಡಲ ಕೂಡಿತ್ತು

ಹುಣ್ಣಿಮೆಯ ಮೇಲೆ ಭರತವಿತ್ತು

ನೆಲಮುಗಿಲ ಕೂಟದಾರ್ಭಟ

ಕ್ಷಣಕ್ಷಣದ ಮೇರೆಗೆ ಉತ್ಕಟ 


ಹದವಾದ ಗಂಧವತಿಯ 

ಮೈಮೇಲೆ ಹನಿಬಿದ್ದಾಗ 

ಸಿಂಚಿಸಿದೆ ತುಸು ಅಶ್ರು

ಕರಗಿದ್ದು ಆನಂದಬಾಷ್ಪವೋ

ಹೆಪ್ಪಾದ ಒಡಲ ನೋವೋ

ಹೊರಗೆ ಮಳೆ ಒಳಗೆ ಇಳೆ


ನಡೆದೇ ಇರಲಿ ನಿರಂತರ

ಹಸಿ ಚಿಮ್ಮಿಸಿ ಹರಿಸಿ ಮಿಲನ

ಪ್ರತಿಫಲ‌ನ ಹಲವು ಸಲ

ಮಳೆ-ಇಳೆಗೆ ಮರುಹುಟ್ಟು

ಅಳು-ನನ್ನೊಳಗೆ ಸುಳಿಬಿಟ್ಟು. 


**** 

- ಡಾ‌. ಅಜಿತ್ ಹರೀಶಿ

2 likes

Published By

Ajit Harishi

ajitharishi

Comments

Appreciate the author by telling what you feel about the post 💓

  • ARAVIND SHANBHAG, Baleri · 4 years ago last edited 4 years ago

    Male kalpane sundaravagi chitrisiddiri

  • Ajit Harishi · 4 years ago last edited 4 years ago

    ಧನ್ಯವಾದಗಳು ಸರ್.

Please Login or Create a free account to comment.