ತಿಂಡಿಪೋತ ಗುಂಡ.

ಒಳ್ಳೆಯದನ್ನು ಬಯಸುವವರಿಗೆ ಒಳ್ಳೆಯದಾಗುತ್ತದೆ.

Originally published in kn
Reactions 0
551
shivaleelahunasgi@gmail.com
shivaleelahunasgi@gmail.com 01 Oct, 2020 | 0 mins read

ಒಂದೂರಲ್ಲಿ ಒಬ್ಬ ಗುಂಡ ಇದ್ದ.ಅವನಿಗೆ ತಿನ್ನುವುದೆಂದರೆ ತುಂಬಾ ಇಷ್ಟ.ಆದರೆ ಕಡು ಬಡತನವಿದ್ದುದರಿಂದ ಅವನಿಗೆ ಹೊಟ್ಟೆ ತುಂಬಾ ಊಟಮಾಡುವ ಭಾಗ್ಯ ಬರುತ್ತಿರಲಿಲ್ಲ. ಬಒಂದೊತ್ತು ಉಂಡರೆ,ಮತ್ತೊಂದು ಹೊತ್ತು ಉಪವಾಸವಿ ರಬೇಕಿತ್ತು.ಗುಂಡನ ತಾಯಿ ಇದ್ದೊಬ್ಬ ಮಗನಿಗೂ ಊಟ ಹಾಕಲು ಆಗುತ್ತಿಲ್ಲವಲ್ಲ ಎನ್ನುತ್ತ ಮನದಲ್ಲಿ ದುಃಖ ಪಡುತ್ತಿದ್ದಳು.

ಗುಂಡನಿಗೆ ಇದು ಅಭ್ಯಾಸ ಆಗಿತ್ತು.ಮದುವೆ,ಮುಂಜಿಗಳಿಗೆ ಗುಂಡ ಮೊದಲು ಹಾಜರಾಗುತ್ತಿದ್ದ.ಎಲ್ಲರೂ ಇವನ ಬಗ್ಗೆ ಆಡಿಕೊಳ್ಳುವವರೇ ಆದರೂ ಗುಂಡ ಬೇಜಾರಾಗಲಿ, ನಾಚಿಕೆ ಯಾಗಲಿ,ಮುಜುಗರವಾಗಲಿ ಪಟ್ಟುಕೊಳ್ಳುತ್ತಿರಲಿಲ್ಲ.

ಹೀಗೆ ಒಂದು ದಿನ ಊರಿನ ಗೌಡರ ಮಗಳ ಮದುವೆಗೆ ದಿನಾಂಕ ನಿರ್ಧಾರವಾಗಿತ್ತು.ಗೌಡರು ತುಂಬಾ ಒಳ್ಳೆಯವ. ಕೆಟ್ಟದ್ದು ಬಯಸದ ದಯಾಳು. ಸುತ್ತ ಹತ್ತು ಹಳ್ಳಿಗೆ ಗೌಡರು ಬೇಕಾದವರು.ಅಂತವರ ಮಗಳ ಮದುವೆಯೆಂದರೆ ಅದ್ದೂರಿಯಾಗಿ ನಡೆಯಲೆಬೇಕು.ಒಂದು ತಿಂಗಳಿಂದ ಮದುವೆ ತಯಾರಿ ನಡೆಯುತ್ತಿತ್ತು.ಗುಂಡನ‌ ಅಮ್ಮನಿಗೂ ಅಲ್ಲಿ ಕೆಲಸಕ್ಕೆ ನೇಮಿಸಲಾಗಿತ್ತು.ಹೀಗಾಗಿ ಗುಂಡನಿಗೆ ಮೂರು ಹೊತ್ತು ತಿನ್ನಲು ಸಿಗುತ್ತಿತ್ತು.ಗುಂಡನಿಗೆ ಖುಷಿಯೋ ಖುಷಿ.

ಊರಿನ ಗೌಡರಿಗೆ ಆಪ್ತರೊಂದಿಗೆ ಶತ್ರುಗಳ ಸಂಖ್ಯೆಯು ಇತ್ತು.ಹೇಗಾದರೂ ಮಾಡಿ ಮದುವೆ ನಡೆಯಬಾರದು, ಮದುವೆಯ ಗಂಡು ಸಾಯಬೇಕು.ಅದರ ಆಪಾದನೆ ಗೌಡರ ಮೇಲೆ ಬರಬೇಕು.ಅದರಿಂದ ಆತ ಜೀವನ ಪರ್ಯಂತ ನರಳಿ ಸಾಯಬೇಕು ಎಂದು,ಪಕ್ಕದ ಹಳ್ಳಿಯ ಸಾಹುಕಾರ ತನ್ನ ಭಂಟರಿಗೆ ಮದುವೆಗೆ ಅಡಿಗೆ ಮಾಡುವ ಸಹಾಯಕರನ್ನು ಕಳಿಸುವ ನೆವದಲ್ಲಿ ಕೊಲೆಗಡುಕರನ್ನು ಕಳಿಸಿದ್ದ.

ಮದುವೆಯ ತಯಾರಿ ಇಡೀ ಊರಿಗೆ ಊರೇ ಸಂಭ್ರಮ ಪಡುವಂತೆ ಲವಲವಿಕೆಯಿಂದ ಇರುವಾಗ,ಅತ್ತ ಅಡಿಗೆ ಮಾಡುವವರು ಮಾಡುವ ಅಡಿಗೆ ದಿನದಿಂದ ದಿನಕ್ಕೆ ವ್ಯತ್ಯಾಸ ವಾಗುತ್ತಿರುವುದನ್ನು ಗುಂಡ ಗಮನಿಸಿದ್ದ.ಯಾಕೆಂದರೆ ಎಲ್ಲರಿಗಿಂತ ಮೊದಲು ತಿಂದು ರುಚಿ ಹೇಳುವವನಾಗಿದ್ದರಿಂದ ಅವನಿಗೆ ಗೊತ್ತಾಗುತ್ತಿತ್ತು.ಗುಂಡನ ಹೊಟ್ಟೆ ಕೆಲವೊಂದು ಗಳಿಗೆ ತೊಂದರೆ ಕೊಡುತ್ತಿರುವುದಕ್ಕೆ ತಾಯಿ ಮನೆಮದ್ದು ಮಾಡಿ ಸರಿಮಾಡುತ್ತಿದ್ದಳು.

ಮದುವೆ ದಿನ ಹತ್ತಿರ ಬಂದೆ ಬಿಟ್ಟಿತು.ಗಂಡಿನ ಆಗಮನ. ಅವರಿಗೆಲ್ಲ ಆದರದ ಆಥಿತ್ಯ.ಆದರೆ ಮದುವೆ ಅಳಿಯನಿಗೆ ಮಾತ್ರ ಸ್ಪೆಶಲ್ ಊಟ.ವಿಶೇಷ ಆಕರ್ಷಣೆ. ಅವನೊಬ್ಬನೆ ತಿನ್ನಬೇಕು.ಬೇರಾರು ಇರುವಂತಿಲ್ಲ.ಹೀಗಿರುವಾಗ.ಗುಂಡ ಗೌಡರ ಮಗಳ ಮದುವೆಯಾಗುವ ವರನ ನೋಡಲು ಓಡಿದ್ದ. ಚಿಕ್ಕನಾದ್ದರಿಂದ ಹೋಗಲಿ ಬಿಡು ಎಂದು ಸುಮ್ಮನಾಗಿದ್ದರು. ಊಟ ಕೊಡುವವರ ಜೊತೆ ಹೋಗುತ್ತಿದ್ದ. ಊಟವಯ್ಯೋ ವವರು ಉಟದ ಮೇಲೆ ಎನೋ ಸಿಂಪಡಿಸುತ್ತಿದ್ದರು.ಅದು ಎನೆಂದು ಕೇಳಿದಾಗ ವರನು ಗಟ್ಟಿಮುಟ್ಟಾಗಿರಲೆಂದು ಟಾನಿಕ್ ಹಾಕಿದ್ದೆವೆಂದು ಹೇಳಿದ್ದನ್ನು ಕಂಡು ಗುಂಡನಿಗೆ ತನಗೂ ಆ ಊಟ ಬೇಕೆನ್ನಿಸಿತು.

ಹೇಗಾದರೂ ಮಾಡಿ ಅದನ್ನು ತಾನೇ ತಿನ್ನಬೇಕು. ಗಟ್ಟಿಮುಟ್ಟಾ ಗಿ ಬೆಳೆಯಬೇಕು.ಅಮ್ಮನಿಗೆ ಸಹಾಯ ಮಾಡಬೇಕು.ಬೇಗ ದೊಡ್ಡವನಾಗಬೇಕು.ಎಂದೆಲ್ಲಾ ಚಿಂತಿಸುತ್ತ ಅವರು ವರನ ಕೋಣೆಯಲ್ಲಿ ಊಟವಿಟ್ಟು ಹೊರಗೆ ಕಾವಲು ನಿಂತರು. ಗುಂಡನಿಗೆ ಹೇಗಾದರೂ ಮಾಡಿ ಒಳಗೆ ಹೋಗಬೇಕೆಂದು ಉಪಾಯ ಮಾಡಿ ಒಳಸೇರಿದ.ಡೈನಿಂಗ್ ಟೆಬಲ್ ಮೇಲೆ ಊಟದ ಘಮ್ ಎಂಬ ವಾಸನೆ ಗುಂಡನ ಹೊಟ್ಟೆ ಬಿರಿಯು ವಂತೆ ಬರುತ್ತಿತ್ತು.

ವರ ಫ್ರೆಶ್ ಆಗಲು‌ ಬಾತರೂಮ್ ಸೇರಿದ್ದರಿಂದ ಇದೇ ತಕ್ಕ ಸಮಯವೆಂದು ಗುಂಡ ಊಟದ ತಟ್ಟೆಯಲ್ಲಿದ್ದ ತನಗಿಷ್ಟವಾ ದ ಸಿಹಿಪಾಯಸವನ್ನು,ರಸಂನ್ನು ಬಡಬಡ ತಿಂದುಬಿಟ್ಟ. ಮನಸ್ಸಿಗೆ ಸಮಾಧಾನವಾಗಿ ಉಳಿದ ಆಹಾರ ಮುಟ್ಟಲಿಲ್ಲ. ಕ್ಷಣ ಹೊತ್ತು ಗುಂಡ ಸರಿಯಾಗಿಯೇ ಇದ್ದ.ತಲೆ ಸುತ್ತಿದಂತಾಗಿ, ವಾಂತಿ ಬಂದಂತಾಗಿ,ಕುಳಿತಲ್ಲೆ ಒದ್ದಾಡ ತೊಡಗಿದ. ಬಾತರೂಮ್ ನಿಂದ ಹೊರಬಂದ ವರನಿಗೆ ಗುಂಡ ಒದ್ದಾಡುವುದ ಕಂಡು ಕೂಗಿದ.ಅಕ್ಕ ಪಕ್ಕ ಇದ್ದ ಎಲ್ಲರೂ ಓಡಿಬಂದರು.ಬಾಗಿಲು ಕಾವಲಿದ್ದವರು ಓಟಕ್ಕಿತ್ತರು. ಊರಜನ ಅಡ್ಡಹಾಕಿ ಹಿಡಿದರು.ಇತ್ತ ಗುಂಡನ ಆರೋಗ್ಯ ದಲ್ಲಿ ಎರುಪೇರಾದ್ದರಿಂದ ಆಸ್ಪತ್ರೆಗೆ ಸೇರಿಸಲಾಯಿತು.

ಆಹಾತದಲ್ಲಿ ವಿಷ ಬೆರೆಸಿದ ಪರಿಣಾಮ ಇದು ಎಂದು ತಿಳಿಯಿತು.ವಾಂತಿಯಾಗಿದ್ದರಿಂದ ಪ್ರಾಣಕ್ಕೇನು ಅಪಾಯವಿಲ್ಲ ಒಂದು ವೇಳೆ ಪೂರ್ಣ ಆಹಾರ ಸೇವಿಸಿದ್ದರೆ.ಬದುಕುವುದು ಕಷ್ಟವಿತ್ತು ಎಂದು ಚಿಕಿತ್ಸೆ ಕೊಟ್ಟರು.ಊರ ಗೌಡನಿಗೆ ಚಿಂತೆ ಯಾಯಿತು.ಗುಂಡ ಮೊದಲೇ ತಿನ್ನಲು ಆಸೆ ಪಡುವವ, ಅತಿಯಾಗಿ ತಿಂದಿದ್ದಕ್ಜೆ ಹೀಗಾಯಿತೆಂದು ಭಾವಿಸಿದ ಜನಕೆ.ಅದರಲ್ಲಿ ವಿಷವಿತ್ತು ಅಂದಾಗ ಗುಂಡನ ಬಗ್ಗೆ ಕನಿಕರ,ಬಡವನಾದರೂ ಚಿಂತೆಯಿಲ್ಲ ಸಾವು ಬರಬಾರದೆಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದರು.

ಸಿಕ್ಕಿಬಿದ್ದವರಿಂದ ಸತ್ಯ ಗೊತ್ತಾಗಿದ್ದೆ ತಡ ಅವರನ್ನ,ಅವರಿಗೆ ಸಹಕರಿಸಿದವರನ್ನು,ಪಕ್ಕದ ಹಳ್ಳಿಯ ಸಾಹುಕಾರನನ್ನು ಪೋಲೀಸರಿಗೆ ಒಪ್ಪಿಸಲಾಯಿತು.ಗುಂಡ ದೇವರ ಹಾಗೆ ಬಂದು ಆಗುತ್ತಿದ್ದ ಅನಾಹುತವ ತಪ್ಪಿಸಿದ ಎಂದು ಗೌಡರು ಗುಂಡನ ಬಡತನಕ್ಕ ಶಾಶ್ವತ ಪರಿಹಾರ ನೀಡಿದ.ಹಸಿವಿನಿಂದ ಬಳಲದಂತೆ ನೋಡಿಕೊಂಡ.ಎಲ್ಲರೂ ಗುಂಡನನ್ನು ಹೊಗಳುವವರೆ.

ಶಿವಲೀಲಾ ಹುಣಸಗಿ ಯಲ್ಲಾಪುರ ಉತ್ತರ ಕನ್ನಡ ಜಿಲ್ಲೆ ಕರ್ನಾಟಕ.೯೪೪೮೫೮೯೫೬೬

0 likes

Published By

shivaleelahunasgi@gmail.com

shivaleelahunasgigmailcom

Comments

Appreciate the author by telling what you feel about the post 💓

  • Deepak Shenoy · 4 years ago last edited 4 years ago

    ಮೌಲ್ಯಭರಿತ‌ ಕತೆ

Please Login or Create a free account to comment.