ನಮೋ ನಾರಾಯಣ
ಗರುಡವಾಹನವೇರಿ ಬಂದರುವೆ ನೀನು
ಶೇಷಶಯನಿಯಾಗಿ ಭಕ್ತರ ಹರಸುವೆ ನೀನು
ಗೀತೆಯ ಬೋಧಿಸಿ ಮನಕ್ಲೇಶವ ಕಳೆಯುವೆ ನೀನು
ನಂಬಿ ಬರುವ ಭಕ್ತರ ಪಾಪವ ತೊಳೆಯುವೆ ನೀನು
ಸುದರ್ಶನವ ಧರಿಸಿ ದುಷ್ಟ ಸಂಹಾರ ಮಾಡುವೆ ನೀನು
ಶಂಖನಾದವಗೈದು ಆದಿ ಅಂತ್ಯವ ತಿಳಿಸುವೆ ನೀನು
ಕೊಳಲ ನುಡಿಸಿ ಮನಸೆಳೆಯುವೆ ನೀನು
ಕಮಲದೆ ಪವಡಿಸಿದ ಮೋಹನ ರೂಪಿ ನೀನು
ಪೀತಾಂಬರಧಾರಿ ಸಾಟಿಯಿಲ್ಲ ನಿನಗಾರು
ಭಕ್ತರ ಬಂಧುವೇ ನಿನಗೆದುರು ನಿಲ್ಲುವರಾರು
-- ರಂಗವಲ್ಲಿಸುತೆ --
Paperwiff
by rohiniranganathan