Rohini Ranganathan
Rohini Ranganathan 10 Oct, 2020
ನಮೋ ನಾರಾಯಣ
ಗರುಡವಾಹನವೇರಿ ಬಂದರುವೆ ನೀನು ಶೇಷಶಯನಿಯಾಗಿ ಭಕ್ತರ ಹರಸುವೆ ನೀನು ಗೀತೆಯ ಬೋಧಿಸಿ ಮನಕ್ಲೇಶವ ಕಳೆಯುವೆ ನೀನು ನಂಬಿ ಬರುವ ಭಕ್ತರ ಪಾಪವ ತೊಳೆಯುವೆ ನೀನು ಸುದರ್ಶನವ ಧರಿಸಿ ದುಷ್ಟ ಸಂಹಾರ ಮಾಡುವೆ ನೀನು ಶಂಖನಾದವಗೈದು ಆದಿ ಅಂತ್ಯವ ತಿಳಿಸುವೆ ನೀನು ಕೊಳಲ ನುಡಿಸಿ ಮನಸೆಳೆಯುವೆ ನೀನು ಕಮಲದೆ ಪವಡಿಸಿದ ಮೋಹನ ರೂಪಿ ನೀನು ಪೀತಾಂಬರಧಾರಿ ಸಾಟಿಯಿಲ್ಲ ನಿನಗಾರು ಭಕ್ತರ ಬಂಧುವೇ ನಿನಗೆದುರು ನಿಲ್ಲುವರಾರು -- ರಂಗವಲ್ಲಿಸುತೆ --

Paperwiff

by rohiniranganathan

10 Oct, 2020

ಕವನ

Comments

Appreciate the author by telling what you feel about the post 💓

Please Login or Create a free account to comment.