Title

ಎರಡು ರೇಖೆಗಳು .ಸಮಾನಾಂತರ ಅದರೂ ನಾವು ಜಯಿಸಬಹುದು

Originally published in kn
Reactions 2
497
Raymond Dcunha
Raymond Dcunha 18 Sep, 2020 | 1 min read

ಎರಡು ಗೆರೆಗಳು

ಸಮಾಂತರದ ಎರಡು ಗೆರೆಗಳು ಸಂಧಿಸುವ ಸ್ಥಳಕ್ಕೆ ಭೇಟಿ ನೀಡುವ ಸಾಹಸ ಮಾಡುವವರು ಯಾರು?

ಅದೊಂದು ನಿರುಪಯುಕ್ತ ಕೆಲಸ ಎನ್ನುವ ಮಾತು ಸತ್ಯ ತಾನೆ.

ನಾವೆಲ್ಲರೂ ಬೆಳೆಯುವ ದಾರಿಯಲ್ಲಿ ಅಡ್ಡಲಾಗಿ ನಿಲ್ಲುವ ಕೆಲವರು ಸಮಾಂತರದ ರೇಖೆಯಾಗಿ ನಾವು ಯಶಸ್ವಿಯಾಗಿ ಮುಂದೆ ಹೋಗದಂತೆ ಅಚಲ ವಾಗಿ ನಿಲ್ಲುತ್ತಾರೆ.

ಇದಕ್ಕೆ ನಾವು '" ಎರಡು ಗೆರೆ " ಸಮಸ್ಯೆ ಎನ್ನಬಹುದು.

ಮನೆಯಲ್ಲಿ, ಕುಟುಂಬದ ಸದಸ್ಯರು, ನೆರೆಹೊರೆಯ ಜನರು,ಶಾಲೆಯಲ್ಲಿ ಸಹಪಾಠಿ, ಸಮಾಜದ ವಿವಿಧ ಸ್ಥಳಗಳ ಹೊಂದಾಣಿಕೆಯನ್ನು ಮಾಡಿ ನಾವು ನಿರ್ದಿಷ್ಟ ರೀತಿಯಲ್ಲಿ ನಮ್ಮ ಸ್ಥಾನಮಾನ ಅಭಿವೃದ್ಧಿ ‌ಮಾಡಿ ಮುಂದೊತ್ತಿ ನಡೆಯುವ ಸಂದರ್ಭ ಇರುತ್ತದೆ.

ನಾವು ನಮ್ಮ ಜಾಗ ಮಾಡಿಕೊಂಡು ನಿರಾಳವಾಗಿ ಹೋಗಲು ಅಡ್ಡಲಾಗಿ ಬದ್ಧ ‌ವೈರಿಯಂತೆ ನಿಲ್ಲುವವರಿರುತ್ತಾರೆ.

ನನಗಿಂತ ಬಲಾಢ್ಯ ಉತ್ತಮ ಮೇಲ್ಮಟ್ಟದ ಸಲಹುವ ಜನರಾದರೆ ನಾವು ನಮ್ಮ ಬೇರೆ ದಾರಿ ಕಂಡುಕೊಳ್ಳಲು ಸಾದ್ಯ.

ಹಲವಾರು ಬಾರಿ ವಿನಾ ಕಾರಣ ನಮ್ಮ ಮುಂದೆ ಅಡ್ಡಗೋಡೆಯಾಗಿ ನಿಂತವರನ್ನು ಸರಿಸಲು ಅಸಾಧ್ಯ ಎಂದು ತಿಳಿಯಲು ಬುದ್ದಿವಂತ ರಿಗೆ ಸಮಯ ತಾಗುವುದಿಲ್ಲ.

ಆಗ ಅಲ್ಲಿ ಯೇ ಗೋಡೆ ನೋಡಿ ‌ಮರುಗುವುದು, ಅಥವಾ ಬಾಳುವ ಎಲ್ಲಾ ದಿನ ಆ ಗೋಡೆಯ ಜೊತೆಯಲ್ಲಿ ಹೆಣಗಾಡುವುದರಲ್ಲಿ ಅರ್ಥ ಇಲ್ಲ.

ಅಮೂಲ್ಯ ನಮ್ಮ ಈ ಜೀವನ ವ್ಯರ್ಥ ಗೊಳಿಸಲಾಗದು.



ಗೆರೆಗಳು ಮೂರು ವಿಧ.

ಮೊದಲ ಗೆರೆ ಎರಡೂ ಬದಿಯಲ್ಲಿ ಬಾಣದ ಗುರುತುಗಳನ್ನು ಹಾಕಿ ನಾವು ನೋಡುತ್ತಿದ್ದಂತೆ ನಮಗಡ್ಡವಾಗಿ ಬೆಳೆಯಬಹುದು.ಈ ತರಹ ಯಾರಾದರೂ ನಮ್ಮ ಬೆಳವಣಿಗೆಗೆ ಅಡ್ಡಿಯಾದರೆ ಅದೊಂದು ವಿಷೇಶ ಪರಿಸ್ಥಿತಿ.

ಎರಡನೇ ಅಡಚಣೆ ನಮ್ಮ ವಿರೋಧಿ ಗೆರೆ ಒಂದು ಮಗ್ಗುಲಲ್ಲಿ ಬಾಣದ ಗುರುತು ಹಾಕಿ ಬೆಳೆಯುವ ಆದರೆ ನಾವು ಆ ದಿಕ್ಕು ತಪ್ಪಿ ಸಿ ಬೇರೆ ಕಡೆಯಲ್ಲಿ ಬೆಳೆಯುವ ಅವಕಾಶವನ್ನು ಉಪಯೋಗಿಸಬಹುದು.

ಮೂರನೇಯ ಗೆರೆ ತುಂಡು ಗೆರೆ. ಸರಳ ರೇಖೆಯ ಒಂದು ಭಾಗ.

ಈ ಗೆರೆಯ ದೊಡ್ಡ ಗೆರೆ ಹಾಕಿ ತೋರಿಸಲು ಅವಕಾಶವಿದೆ.

ಆದುದರಿಂದ ನಿರಾಶೆಯನ್ನು ದೂರ ಸರಿಸಿ ಯಾವುದೇ ಪರಿಸ್ಥಿತಿಯಲ್ಲಿ ನಮ್ಮ ಗುರಿ ಸಾಧಿಸಲು ಅವಕಾಶವಿದೆ. ನಾವು ನಮ್ಮ ತರಬೇತಿ ಸರಿಯಾದ ದಿಕ್ಕಿನಲ್ಲಿ ಸಾಧಿಸಲು ಉಪಯೋಗಿಸ ಬೇಕು. ಅಷ್ಟೇ.

ರೇಮಂಡ್ ಡಿಕುನಾ

2 likes

Published By

Raymond Dcunha

raymonddcunha1

Comments

Appreciate the author by telling what you feel about the post 💓

Please Login or Create a free account to comment.