ಸಂಭ್ರಮ

ಜೋಗದ ಸಿರಿಯ ಪ್ರಕೃತಿ ಸೌಂದರ್ಯವನ್ನ ಕವಿತೆಯಾಗಿಸುವ ಪ್ರಯತ್ನ...

Originally published in kn
Reactions 3
717
Raksha Ramesh
Raksha Ramesh 13 Aug, 2020 | 1 min read


ಧುಮ್ಮಿಕ್ಕಿ ಹರಿವ ಜಲಧಾರೆ ಜೋಗ

ಕನ್ನಡ ಜನತೆಗೆ ಇದುವೇ ಯೋಗಾಯೋಗ!


ಮಲೆನಾಡ ಹಚ್ಚ ಹಸುರಿನ ನಡುವೆ ಇದೆ ಸಾಗರ

ಇದೇ ಭೋರ್ಗರೆಯುವ ಶರಾವತಿಯ ಆಗರ

ಮುಂಜಾವಿನ ಮಂಜಿನಲ್ಲಿ ಬೆರೆತ ಹೊಂಬಣ್ಣ

ಇದಕದೇ ಕಾರಣವು ಪ್ರಥಮ ಉಷಾಕಿರಣ!


ಬಾನಂಗಳದಿ ಬರುವುದು ಮಳೆಬಿಲ್ಲ ಚಿತ್ತಾರ,

ಸೌಂದರ್ಯ ಸರಸ್ವತಿಯ ನಿಜದ ಅವತಾರ!

ಇದಕಿರುವ ಇನ್ನೊಂದು ಹೆಸರು ಗೇರುಸೊಪ್ಪ

ಜಲಕಾಂತಿಯಬ್ಬರದಿ ಉರಿವುದು ವಿದ್ಯುದ್ದೀಪ!!


ರಾಜಗಾಂಭೀರ್ಯದಿ ಮೆರೆವ ಅವನೇ ರಾಜ,

ಅಂಕುಡೊಂಕಿನ ಬೆಡಗಿ ಅವಳದೋ ರಾಣಿ

ಬಂಡೆಗಳ ನಡುವೆ ಘರ್ಜಿಸುವ ರೋರರ್!

ಬಿರುಸಿನಾ ಬಾಣದೊಲು ಬರುವವನು ರಾಕೆಟ್.


ದೃಶ್ಯ ವೈಭವದ ಸುಗ್ಗಿ ಜೋಗ ಜಲಪಾತ

ಮೈ ಮರೆತೀರಿ ಜೋಕೆ! ಕೆಳಗಿದೆ ಪ್ರಪಾತ!!

ಇನ್ನೂ ನೋಡಿಲ್ಲವೇ ಬೇಗ ಬನ್ನಿರಣ್ಣ,

ತಣಿಸುವುದು ನಿಮ್ಮ ಮೈ ಮನಸು ಕಣ್ಣ.

                             







3 likes

Published By

Raksha Ramesh

raksha

Comments

Appreciate the author by telling what you feel about the post 💓

Please Login or Create a free account to comment.