"ಆಕೆ ದುರಾದೃಷ್ಟವಂತೆ" ಖಂಡಿತಾ ಅಲ್ಲ. ಹೆತ್ತು, ಹೊತ್ತು, ಸಾಕಿ, ಸಲಹುವ ಸಾಮರ್ಥ್ಯವುಳ್ಳವಳು... ತಾಯಿ-ತಂದೆಯರ ಮುದ್ದಿನ ಮಗಳಾಗಿ, ಅಣ್ಣನ ನಲ್ಮೆಯ ತಂಗಿಯಾಗಿ, ಪುಟಾಣಿ ತಮ್ಮ - ತಂಗಿಯರ ಅಕ್ಕರೆಯ ಅಕ್ಕನಾಗಿ, ಗಂಡನಿಗೆ ತಕ್ಕ ಹೆಂಡತಿಯಾಗಿ, ಜಾಣ್ಮೆಯ ಸೊಸೆಯಾಗಿ, ವಾತ್ಸಲ್ಯ ಮೂರ್ತಿ ತಾಯಿಯಾಗಿ, ಗಟ್ಟಿಗಿತ್ತಿ ಅತ್ತೆಯಾಗಿ, ಪ್ರೀತಿಯ ಅಜ್ಜಿಯಾಗಿ ತನ್ನ ಎಲ್ಲ ಕಾರ್ಯಗಳನ್ನು ಸ್ವಸಾಮರ್ಥ್ಯದಿಂದ ಸಮರ್ಪಕವಾಗಿ ನಿಭಾಯಿಸಬಲ್ಲ ವರ ಪಡೆದಕೊಂಡು ಬಂದಿರುವ ಮಹಾ ಅದೃಷ್ಟವಂತೆ.
ಹೆಣ್ಣು ಹುಟ್ಟಿನಿಂದಲೇ ಸಬಲಳು. ಮಾನಸಿಕವಾಗಿ ಎಲ್ಲ ಪರಿಸ್ಥಿತಿಗಳಿಗೆ ಅನುಸಾರವಾಗಿ, ಅನುಗುಣವಾಗಿ ನಡೆದುಕೊಂಡು ಹೋಗುವ ಶಕ್ತಿಯುಳ್ಳವಳು.
ಎಲ್ಲರಿಗೂ ಎಲ್ಲಾ ರೀತಿಯ ಸಹಾಯ ಮಾಡಬಲ್ಲಳು.
ನಾನಾ ವೃತ್ತಿಯಲ್ಲಿ ಯಶಸ್ಸು ಕಂಡಿರುವವಳು. ವೃತ್ತಿ, ಪ್ರವೃತ್ತಿ ಹಾಗೂ ಕೌಟುಂಬಿಕ ಜೀವನವನ್ನು ಸರಿದೂಗಿಸಿಕೊಂಡು ನಡೆಯಬಲ್ಲವಳು.
ಹೆಣ್ಣು ಶಕ್ತಿ ಸ್ವರೂಪಿಣಿ. ಅದಕ್ಕೇ ಅವಳಿಗೆ ಪ್ರಕೃತಿದತ್ತವಾಗಿ ಮಾತೃತ್ವ ದಕ್ಕಿರುವುದು. ಬ್ರಹ್ಮಾಂಡಪುರಾಣದಲ್ಲಿ ಹೇಳುವಂತೆ ಅವಳು "ಆಬ್ರಹ್ಮಕೀಟಜನನೀ". ಅಡುಗೆಮನೆಯಿಂದ ಅಂತರಿಕ್ಷದವರೆಗೆ ಕೈ ಚಾಚಿರುವವಳು. ಆದ್ದರಿಂದಲೇ ಹಿರಿಯರು ಹೇಳಿರುವುದು "ಹೆಣ್ಣು ಸಂಸಾರದ ಕಣ್ಣು" ಎಂದು. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರೇ ಅವಳಿಗೆ ಶರಣೆಂದಿರುವಾಗ "ಆಕೆ ಮಹಾ ಅದೃಷ್ಟವಂತೆ" ಹೇಗಾದಾಳು?
Comments
Appreciate the author by telling what you feel about the post 💓
ಚೆನ್ನಾಗಿದೆ.
Good one
Please Login or Create a free account to comment.