ಚುಕ್ಕಿ ಚುಕ್ಕಿ ಜಿಂಕಿ ಕಾಡ್ನ್ಯಾಗ ಇರೋದು
ಅದು ನಮ್ಮೂರಿಗ ಯಾಕ್ ಬಂತು...?
ಜಿಂಕಿ ನಾಡ್ನ್ಯಾಗ್ ಹೆಂಗ್ ಬಂತು...?
ನಲಿತಾ ನಾಲಿತಾ ಅಲೆದು ಅಲೆದು
ಸಂತ್ಯಾಗ್ ಬಂದ್ ಬಿಡ್ತು
ಮಂದಿ ಪಿಳಿ ಪಿಳಿ ನೋಡ್ತಿದ್ರೂ
ಜಿಂಕಿ ಯಾಕೋ ವೈಯ್ಯಾರ್ ಬಾಳಾ ಮಾಡ್ತಿತ್ತು
ಹೆರಳು ಹಾಂವಿನ್ ಹಂಗ್ ಆಡ್ತಿತ್ತು
ಅಲ್ಲಿ ಹುಡ್ಗೊರ್ ದಿಲ್ ಜಲ್ ಅಂದಿತ್ತು
ಪ್ರೀತಿ ಪ್ರೇಮದ ಘಮ ಘಮ
ಎದ್ದು ಕುಣದೆ ಕುಣದಿತ್ತು
ಜಿಂಕಿ ಮುಸಿ ಮುಸಿ ನಗತಿತ್ತು
ಇಂದ್ರ ಲೋಕದ ರಂಭೆ ಹಂಗೆ
ಮಿರಿ ಮಿರಿ ಮಿಂಚ್ತಿದ್ಲು
ಹುಡ್ಗಿ ಸಿಂಗಾರ ನೋಡಿ ಸಂತಿ ಎಲ್ಲ ಸುಸ್ತೆ ಹೊಡದಿತ್ತು.
ಪ್ರಮೋದ. ಡಿ.ನಾಯ್ಕ
ದಾಂಡೇಲಿ (ಥೊರ್ಲೆಭಾಗ)
Comments
Appreciate the author by telling what you feel about the post 💓
Santili vyapar joragittu
Please Login or Create a free account to comment.