ವೈಫಲ್ಯಗಳನ್ನು ಅಳಿಸಲಾಗದು ಆದರೆ ಯಶಸ್ವಿಗೆ ಅದನ್ನು ಮೆಟ್ಟಿಲುಗಳನ್ನಾಗಿ ಬಳಸಿಕೊಳ್ಳಬಹುದು!

ವೈಫಲ್ಯಗಳನ್ನು ಅಳಿಸಲಾಗದು ಆದರೆ ಯಶಸ್ವಿಗೆ ಅದನ್ನು ಮೆಟ್ಟಿಲುಗಳನ್ನಾಗಿ ಬಳಸಿಕೊಳ್ಳಬಹುದು!

PAKASH DSOUZA
29 Sep, 2021 • 1 min read min read • kn
❤️ 0 💬 0 👁 1046
ವೈಫಲ್ಯಗಳನ್ನು ಅಳಿಸಲಾಗದು ಆದರೆ ಯಶಸ್ವಿಗೆ ಅದನ್ನು ಮೆಟ್ಟಿಲುಗಳನ್ನಾಗಿ ಬಳಸಿಕೊಳ್ಳಬಹುದು!

ಸೋಇಚಿರೊ ಹೆಸರು ಕೇಳಿದ್ದೀರಾ ! ಇಲ್ವಲ್ಲ ಯಾರಪ್ಪ ಇದು ಅಂತ ಯೋಚನೆ ಮಾಡುತ್ತ ಇದ್ದೀರಾ! ಸರಿ ಹಾಗಾದ್ರೆ ಪೂರ್ಣ ಹೆಸರು ಹೇಳುತ್ತೇನೆ ಕೇಳಿ. ಸೋಇಚಿರೊ ಹೋಂಡಾ! ಹೋಂಡಾ ಹೆಸರು ಕೇಳದವರು ಯಾರು ಇಲ್ಲ ಅಲ್ವ! ಹೌದು ನಿಮ್ಮ ಊಹೆ ನಿಜ .  ಸೋಇಚಿರೊ  ಹೋಂಡಾ, ಹೋಂಡಾ ಮೋಟರ್ಸ್ ಕಂಪೆನಿಯ ಸಂಸ್ಥಾಪಕರು. ಇಂದು, ಹೋಂಡಾ ಕಂಪೆನಿ ಅಮೇರಿಕ ಮತ್ತು  ಜಪಾನ್ ದೇಶಗಳಲ್ಲಿ 100,000 ಕ್ಕೂ ಹೆಚ್ಚು ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿದೆ. ಆದರೆ ನಿಮಗೆ ಗೊತ್ತಿರಲಿ ಹೋಂಡಾದ ಯಶಸ್ವಿನ ಹಿಂದೆ ಇರುವುದು  ಒಬ್ಬ ವ್ಯಕ್ತಿಯು  ಬದ್ಧತೆ ಮತ್ತು ಶ್ರಮ. ಅಷ್ಟಕ್ಕೂ ಸೋಇಚಿರೊ ಹೋಂಡಾ ಚಿನ್ನದ ಚಮಚ ದಲ್ಲಿ ಊಟ ಮಾಡಿಕೊಂಡು ಬೆಳೆದವರಲ್ಲ. ಅವರು ಕಂಡ ಉದ್ಯಮದ ಕನಸು ಕೂಡ ಸುಲಭದಲ್ಲಿ ಅವರಿಗೆ ದಕ್ಕಲಿಲ್ಲ. ಅಲ್ಲಿ ಶ್ರಮ ಇತ್ತು, ಕೆಲಸದ ಬಗ್ಗೆ ಬದ್ಧತೆ ಇತ್ತು ನಿಜ ಆದರೆ ಅದೆಲ್ಲಕ್ಕಿಂತ ಮಿಗಿಲಾಗಿ ಸೋಲಿತ್ತು , ವೈಫಲ್ಯ ಇತ್ತು ! ಅವರು ಒಂದು ಕಡೆ ಹೇಳ್ತಾರೆ "ಅನೇಕ ಜನರು ಯಶಸ್ಸಿನ ಕನಸು ಕಾಣುತ್ತಾರೆ. ಆದರೆ ನಾನು ಹೇಳುತೇನೆ ಪುನರಾವರ್ತಿತ ವೈಫಲ್ಯಗಳು ಮತ್ತು ನಮ್ಮ  ಆತ್ಮಾವಲೋಕನದಿಂದ ಮಾತ್ರ ಯಶಸ್ಸನ್ನು ಸಾಧಿಸಬಹುದು. ವಾಸ್ತವವಾಗಿ, ಯಶಸ್ಸು ನಮ್ಮ ಕೆಲಸದ ಶೇಕಡಾ 1 ಭಾಗವನ್ನು ಮಾತ್ರ  ಪ್ರತಿನಿಧಿಸುತ್ತದೆ ಮತ್ತು ಆ ಯಶಸ್ವಿಗೆ ಕಾರಣಮಿಕ್ಕ ಶೇಕಡಾ 99 ಪ್ರತಿಶತದಷ್ಟು ಇರುವ  ನಮ್ಮ ವೈಫಲ್ಯಗಳು!

ಅವರ ಮಾತನ್ನು ಸರಳವಾಗಿ ಹೇಳಬೇಕಂದ್ರೆ ಯಶಸ್ವಿನ ೯೯% ಕಾರಣ ನಮ್ಮ ವೈಫಲ್ಯಗಳು.ಅವರ ಜೀವನದ ಬಗ್ಗೆನೇ ಹೇಳೋದಾದ್ರೆ, ಬಾಳಿನುದ್ದಕ್ಕೂ ಸತತ ಸೋಲುಗಳು. ಅಪ್ಪನಿಗೆ ಸೈಕಲ್ ರಿಪೇರಿ ಮಾಡುವ ಅಂಗಡಿ ಇತ್ತು. ಬಾಲ್ಯದಿಂದಲೇ ಸೋಇಚಿರೊ  ಹೋಂಡಾ ರವರಿಗೆ ವಾಹನಗಳ ಹುಚ್ಚು. ಶಾಲಾ ದಿನಗಳಲ್ಲಿ  ವಾಹನಗಳ ತಯಾರಿಕೆಯಲ್ಲಿ ಬೇಕಾಗುವ ಪಿಸ್ಟನ್ ರಿಂಗ್ ಅಭಿವೃದಿಪಡಿಸಿ ಆಗ ಹೆಸರುವಾಸಿಯಾಗಿದ್ದ ಟೊಯೋಟಾ ಕಂಪೆನಿಗೆ ಆ ಪರಿಕಲ್ಪನೆಯನ್ನು ಮಾರಾಟ ಮಾಡಬೇಕೆಂಬ ಮಹದಾಸೆಯನ್ನು ಹೊಂದಿದ್ದರು . ಅದನ್ನು ಅಭಿವೃದಿಪಡಿಸಲು ರಾತ್ರಿ ಹಗಲು ಶ್ರಮವಹಿಸಿ ಅನೇಕ ವರ್ಷಗಳ ಕಾಲ ಶ್ರಮಪಟ್ಟರು.ಅದರ ವಿನ್ಯಾಸವನ್ನು ಪೂರ್ಣಗೊಳಿಸಿ ಒಂದು ಉತ್ಕ್ರಷ್ಟವಾದ ವಸ್ತುವನ್ನು ಅಭಿವೃದಿಪಡಿಸುವುದು ಅವರ ಮಹಾದಾಸೆಯಾಗಿತ್ತು. ಹಣದ ಕೊರತೆ ಬಂದಾಗ ಹೆಂಡತಿಯ ಆಭರಣಗಳನ್ನು ಅಡವಿಡಬೇಕಾಗಿ ಬಂದ್ರು ಅವರು ಹಿಂಜರಿಯಲಿಲ್ಲ. ಕಡೆಗೂ ತಮ್ಮ ಉತ್ಪನ್ನವನ್ನು ಅಭಿವೃದಿಪಡಿಸಿ ಟೊಯಾಟಾ ಕಂಪೆನಿಗೆ ಕೊಟ್ಟಾಗ ಅವರು ತಮ್ಮ ಕಂಪೆನಿಯ ಗುಣಮಟ್ಟಕ್ಕೆ ನಿಮ್ಮ ಉತ್ಪನ್ನ ಹೊಂದಿಕೆಯಾಗಲ್ಲ ಅಂತ ತಿರಸ್ಕರಿಸಿ ಬಿಟ್ಟರು. ಪದವಿ ಪಡೆದು ಕೆಲಸದಲ್ಲಿರುವ ದೊಡ್ಡ ದೊಡ್ಡ ಇಂಜಿನೀರ್ ಗಳು  ಇವರನ್ನು ನೋಡಿ ಅಪಹಾಸ್ಯ ಮಾಡಿದರು . ಆದರೆ ಇವರು ಸೋಲೊಪ್ಪಿಕೊಳ್ಳುವ ಅಸಾಮಿಯಲ್ಲ ಕಣ್ರೀ. ದೃತಿಗೆಡಲಿಲ್ಲ.ತನ್ನ ಸೋಲಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಮತ್ತೆ ಎರಡು ವರ್ಷಗಳ ಕಾಲ ಶ್ರಮಪಟ್ಟು ಮರು ವಿನ್ಯಾಸ ತಯಾರು ಮಾಡಿ ಮತ್ತೆ ಟೊಯೋಟಾ ಕಂಪೆನಿಯ ಬಾಗಿಲು ತಟ್ಟಿದರು. ಈ ಬರಿ ಟೊಯಾಟಾ ಕಂಪೆನಿಗೆ ಇವರ ವಿನ್ಯಾಸವನ್ನು ನಿರಾಕರಿಸಲು ಯಾವುದೇ ಕಾರಣ ಇರಲಿಲ್ಲ. ಹಾಗಾಗಿ ಟೊಯಾಟಾ ಕಂಪೆನಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿತು. ಟೊಯಾಟಾ ಕಂಪೆನಿಯೊಂದಿಗೆ ಒಪ್ಪಂದವೇನೋ ಆಯಿತು. ಆದರೆ ಆ ಬಿಡಿಭಾಗವನ್ನು ತಯಾರು ಮಾಡಿಬೇಕಾದ್ರೆ ಕಾರ್ಖಾನೆಯ ಅಗತ್ಯ ಇತ್ತು. ಆದರೆ ಆಗ ಜಪಾನ್ ದೇಶ ಯುದ್ಧಕ್ಕೆತಯಾರಾಗುತ್ತಿತ್ತು. ಕಾರ್ಖಾನೆ ಕಟ್ಟಲು ಬೇಕಾದ ಸಾಮಗ್ರಿಗಳು ದೊರಕುವುದು ದುಸ್ತರವಾಯಿತು. ಆದರೆ ಹೋಂಡಾ ಸೋಲೊಪ್ಪಿಕೊಳ್ಳಲು ತಯಾರಿರಲಿಲ್ಲ.ಕಾಂಕ್ರೀಟ್ ತಯಾರಿಸುವ ಹೊಸ ವಿಧಾನವನ್ನು ಕಂಡು ಹಿಡಿದು ತಮ್ಮ ಕಾರ್ಖಾನೆಯನ್ನು ನಿರ್ಮಿಸಿದರು. ಆದರೆ ಸೋಲು ಹೊಂಡಾರವರ ಜೀವನದಲ್ಲಿ ಸೋಲೊಪ್ಪಿಕೊಳ್ಳಲು ಕೂಡ ತಯಾರಿರಲಿಲ್ಲ. ಯುದ್ಧ ನಡೆಯುತಿತ್ತು. ಇನ್ನೇನು ಬಿಡಿ ಭಾಗಗಳ  ಉತ್ಪಾದನೆ ಸುರು ಮಾಡಬೇಕು ಎರಡು ಬಾಂಬುಗಳು ಬಿದ್ದು ಕಾರ್ಖಾನೆ ಸಂಪೂರ್ಣ ನಾಶವಾಗಿ ಬಿಟ್ಟಿತು. ಉತ್ಪಾದನೆ ಪುನರಾರಂಭಿಸಲು ಸ್ಟೀಲ್ ಕೂಡ ಸಿಗದೇ ಎಲ್ಲ ದಾರಿ ಮುಚ್ಚಿಕೊಳ್ಳಲಾರಂಭಿಸಿತು. ಆದರೆ ಹೋಂಡಾ ಗಟ್ಟಿ ಆಸಾಮಿ ಸ್ವಾಮಿ . ಅಮೆರಿಕದ ಯುದ್ಧ ವಿಮಾನಗಳು, ಬೇಡ ಎಂದು ಬಿಸಾಡಿದ್ದ ಗ್ಯಾಸೋಲಿನ್  ಕ್ಯಾನ್ಸ್ ಗಳನ್ನೂ ತನ್ನ ಕಾರ್ಖಾನೆ ಮರು ನಿರ್ಮಿಸಿ ಉತ್ಪಾದನೆ ಆರಂಭಿಸಲು ಉಪಯೋಗಿಸಿದರು.ಕಡೆಗೂ ಗೆದ್ದೇ ಬಿಟ್ರ ! ಇಲ್ಲ. ಭೂಕಂಪವಾಗಿ ಅವರ ಕಾರ್ಖಾನೆ ನಾಶವಾಗಿ ಬಿಟ್ಟಿತು. ಮನುಷ್ಯನಿಗೆ ಸೋಲು ಬಂದ್ರೆ ನಾಶ ಮಾಡದೇ ಬಿಡಲ್ಲ ಎಂದು ಹಠ ತೊಟ್ಟಿರುವಂತೆ ಬೆಂಬಿಡದೆ ಕಾಡುತ್ತೆ ಅಲ್ವೇ. ಯುದ್ಧ ಮುಗಿದ ನಂತರ ಕಚ್ಚಾ ವಸ್ತುಗಳು ದೊರೆಯದೆ ವಾಹನಗಳ ಉತ್ಪಾದನೆ ಸ್ಥಗಿತಗೊಂಡಿತು. ಜನ ಅನಿವಾರ್ಯವಾಗಿ ನಡೆದು ಇಲ್ಲವೇ ಸೈಕಲಿನ ಮೇಲೆ ತಮ್ಮ ಗಮ್ಯ ಸೇರಬೇಕಾಗಿ ಬಂತು. ನಮ್ಮ ಹೋಂಡಾ ಆ ಸೈಕಲಿಗೆ ಒಂದು ಇಂಜಿನ್ ತಯಾರಿಸಿದರು. ಆದರೆ ಅದನ್ನು ಮಾರುಕಟ್ಟೆಗೆ ತರಲು ಇಲ್ಲವೇ ಉತ್ಪಾದನೆ ಆರಂಭಿಸಲು ಅವರ ಬಳಿ ಹಣವಿರಲಿಲ್ಲ.

ಹಾಗಂತ ಅವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಮ್ಮ ದೇಶದ 18000  ಸೈಕಲ್ ಅಂಗಡಿಯ ಮಾಲೀಕರಿಗೆ ಪತ್ರ ಬರೆದು ತನ್ನ ಯೋಜನೆಯ ಬಗ್ಗೆ ಮನವರಿಕೆ ಮಾಡಿಕೊಟ್ಟು ಸಹಾಯ ಕೇಳಿದರು. ಅದರಲ್ಲಿ 5000 ಜನ ಅವರಿಗೆ ಉತ್ತಮ ಪ್ರತಿಕ್ರಿಯೆ ಕೊಟ್ಟು ತಮ್ಮಿಂದಾದ ಹಣದ ಸಹಾಯ ಮಾಡಿ ಬೆಂಬಲ ಕೊಟ್ಟರು. ಆದರೆ ಅವರು ತಯಾರಿಸಿದ ಆ ಇಂಜಿನ್ ತುಂಬಾ ಭಾರವಿತ್ತು. ಹಾಗಾಗಿ  ಮಾರುಕಟ್ಟೆಯಲ್ಲಿ  ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಹೋಂಡಾ ಹಠ ಬಿಡಲಿಲ್ಲ. ಹಗುರ ಇಂಜಿನ್ ಉಳ್ಳ ಬೈಕ್ ತಯಾರಿಸಿದರು. ಅಲ್ಲಿಂದ ಅಮೇರಿಕ ಮತ್ತು ಯೂರೋಪಿಗೆ ರಫ್ತು ಮಾಡಲು ಆರಂಭಿಸಿದರು. ಆದರೆ ಮತೊಮ್ಮೆ ಮಾರುಕಟ್ಟೆಯಲ್ಲಿ ವಾಹನಗಳ ನಿರ್ಮಾಣಕ್ಕೆ ಕಚ್ಚಾ ವಸ್ತುಗಳ ಕೊರತೆ ಬಂದಾಗ ಚಿಕ್ಕ ಕಾರುಗಳ ಉತ್ಪಾದನೆ ಆರಂಭಿಸಿ ಇಡೀ ಪ್ರಪಂಚದ ಮನ ಗೆದ್ರು ಹೋಂಡಾ. ನೋಡಿ ಎಷ್ಟೊಂದು ಸೋಲುಗಳು. ಆದರೆ ಇವತ್ತು ಅವರ ಕಂಪೆನಿ ಪ್ರಪಂಚದ ಅತಿ ದೊಡ್ಡ ವಾಹನ ಉತ್ಪಾದನಾ ಕಂಪೆನಿಗಳಲ್ಲಿ ಒಂದು. ಒಂದು ಬಾರಿ ಸೋತರೇನೇ ನಮ್ಮ ಕೈನಲ್ಲಿ ತಡೆದುಕೊಳ್ಳಕ್ಕೆ ಆಗಲ್ಲ. ಹೀಗಿರುವಾಗ ಹಲವು ಬಾರಿ ಸೋತು ಪೆಟ್ಟು ತಿಂದ್ರೆ ಎದ್ದು ನಿಲ್ಲಲಿಕ್ಕೆ ಸಾಧ್ಯನಾ. ಖಂಡಿತ ಸದ್ಯ. ಸದ್ಯ ಮಾಡಿ ತೋರಿಸಿದ್ರು ಸೋಇಚಿರೊ ಹೋಂಡಾ.

ನಿಜ ಗೆಳೆಯರೇ ಎಷ್ಟು ಮುನ್ನೆಚ್ಚರಿಕೆ ವಹಿಸಿಕೊಂಡು ಮುನ್ನಡೆದರು ಕೆಲವೊಮ್ಮೆ ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ತಪ್ಪು ತಿಳಿದೋ ತಿಳಿಯದೆಯೋ ನಡೆದೇ ಬಿಡುತ್ತೆ. ನಡೆದ ತಪ್ಪನ್ನು, ಮೈಮೇಲೆ ಎಳೆದುಕೊಂಡ ಸೋಲನ್ನು ನಮ್ಮಿಂದ ಆಳಿಸಲು ಆಗೋದಿಲ್ಲ. ಸೋಲು ಸೋಲೇ. ಆದರೆ ಆ ಸೋಲಿನಿಂದ ಪಾಠ ಕಲಿತು ಮುನ್ನುಗುವುದನ್ನು ಬಿಟ್ಟು ಬಿಡಬಾರದು. ಉದ್ಯಮಿಯಾಗಬೇಕೆಂಬ ಕನಸಿಗೆ ನೀರೆರೆದು ಉದ್ಯಮ ಸುರು ಮಾಡಿ ಆಯಿತು. ಆದರೆ ಅನಿರೀಕ್ಷಿತ ಸೋಲು ಉಂಟಾಯಿತು ಅಂದುಕೊಳ್ಳಿ. ಅಲ್ಲಿಗೆ ಉದ್ಯಮಿಯ ಕನಸನ್ನು ಮರೆತು ಜೀವನಪೂರ್ತಿ ಎಲ್ಲಾದ್ರೂ ಸಂಬಳಕ್ಕೆ ಕೆಲಸ ಮಾಡುತ್ತ ಆಯಸ್ಸನ್ನು ಕಳೆಯುವುದನ್ನು "ಬದುಕು" ಎನ್ನಲಾಗುವುದಿಲ್ಲ. ವಿಫಲರಾಗಿದ್ದೀರಾ ಸರಿ. ತಾತ್ಕಾಲಿಕವಾಗಿ ಆರ್ಥಿಕ ಪರಿಸ್ಥಿತಿ ಸರಿ ಹೋಗಬೇಕಾದ್ರೆ ಎಲ್ಲಾದ್ರೂ ಕೆಲಸ ಮಾಡಲೇ ಬೇಕು. ತಪಿಲ್ಲ. ಆದ್ರೆ ಹಾಗಂತ ನಿಮ್ಮ ಮೂಲ ಕನಸನ್ನು ಮರೆತು ಬಿಡಬಾರದು. ಸರಿಯಾದ ತಯಾರಿ ಮಾಡಿಕೊಂಡು, ತಪ್ಪನ್ನು ತಿದ್ದಿಕೊಂಡು  ಮತೊಮ್ಮೆ ಪ್ರಯತ್ನಿಸಬೇಕು. ಯಶಸ್ವಿಗೆ ಕೂಡ ಜಾಸ್ತಿ ಸಮಯ ನಿಮ್ಮನು ನಿರಾಕರಿಸಲು ಸಾಧ್ಯವಿಲ್ಲ. ನಿಮ್ಮನ್ನು ಹುಡುಕಿಕೊಂಡು ಬಂದೆ ಬರುತ್ತೆ. ಇದು ಎಲ್ಲ ಕನಸುಗಳಿಗೆ ಅನ್ವಯ ವಾಗುತ್ತೆ.  ಬರಹಗಾರನಾಗಬೇಕೆಂಬ ಕನಸಿರುತ್ತೆ. ಆದರೆ ಯಾವುದೇ ಪತ್ರಿಕೆಗೆ ಕಳುಹಿಸಿದರು ಯಾರು ಪ್ರತಿಕ್ರಿಯೆ ಕೊಡುತಿಲ್ವಾ. ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಯಾರು ನಿಮ್ಮ ಬರಹವನ್ನು ಮೆಚ್ಚೋದಿಲ್ವ. ಸ್ನೇಹಿತರು ಕೂಡ ಪ್ರತಿಕ್ರಿಯೆ ಕೊಡಲ್ವಾ. ನೊಂದುಕೊಳ್ಳಬೇಡಿ. ಅದರ ಅರ್ಥ ಇಷ್ಟೇ , ನೀವು ಇನ್ನಷ್ಟು ಸುಧಾರಿಸಿಕೊಳ್ಳಬೇಕು. ನಿಮ್ಮ ಬರಹ ಮತ್ತಷ್ಟು ಉತ್ತಮಗೊಳ್ಳಬೇಕು. ಪ್ರತಿಕ್ರಿಯೆ ಖಂಡಿತ ಬಂದೆ ಬರುತ್ತೆ. ಇಲ್ಲ ಯಾರು  ಓದಲ್ಲ ಅಂತ ಬರೆಯುವುದನ್ನು ನಿಲ್ಲಿಸಿದ್ರೋ ನಿಮ್ಮ ಕನಸಿಗೆ ನೀವೇ ಕೊಳ್ಳಿ ಇಟ್ಟಂತೆ. ನೀವು ಬರೆಯದಿದ್ದರೆ ಯಾರಿಗೂ ನಷ್ಟ ಇಲ್ಲ. ನಷ್ಟ ಅಂತ ಆಗುತ್ತೆ ಆದ್ರೆ ಅದು ನಿಮಗೇನೇ. ನೀವು ಸಂಗೀತಗಾರರಾಗಿರಬಹುದು , ಒಳ್ಳೆ ಆಟಗಾರನಾಗಿರಬಹುದು, ಮಾರಾಟಗಾರನಾಗಿರಬಹುದು, ಇಲ್ಲ ಶಿಕ್ಷಕ ನಾಗಿರಬಹುದು, ಯಾವುದೇ ಹುದ್ದೆಯಲ್ಲಿರಬಹುದು, ಸೋಲಿಗೆ ಕಳವಳಗೊಳ್ಳಬೇಡಿ. ನಿಮ್ಮ ಸೋಲಿಗೆ , ನಿಮ್ಮ ತಪ್ಪಿಗೆ ನೀವೇ ಕಾರಣ ಅನ್ನೋದನ್ನ ಮರೆಯಬೇಡಿ. ಸುಧಾರಣೆಗೆ ಮಾರ್ಗೋಪಾಯವನ್ನು ಹುಡುಕಿ, ನಿಮ್ಮನು ನೀವು ಸುಧಾರಿಸಿಕೊಳ್ಳಿರಿ. ಇನ್ನಷ್ಟು , ಮತ್ತಷ್ಟು ಉತ್ತಮಗೊಳ್ಳಿ.  ಗೆಲವು ನಿಮ್ಮ ಮನೆಯ ಬಾಗಿಲು ಬಂದು ತಟ್ಟೆ ತಟ್ಟುತ್ತೆ. ಸೋಲು ತಾತ್ಕಾಲಿಕ. ಆ ಸೋಲನ್ನು ನಿಮ್ಮ ಗೆಲುವಿಗೆ ಮೆಟ್ಟಿಲುಗಳನ್ನಾಗಿಸಿಕೊಂಡ್ರೆ ಯಶಸ್ವಿನ ಹಾದಿ ಸುಗಮ.

 

ಪ್ರಕಾಶ್ ಮಲೆಬೆಟ್ಟು

0 likes
☕

Support PAKASH DSOUZA

Appreciate this story? Send a small tip to encourage the author to write more great work!

Please login to tip the author.

PAKASH DSOUZA
Published By

PAKASH DSOUZA

@pakashdsouza

Comments

Appreciate the author by telling what you feel about the post 💓

Please Login or Create a free account to comment.

★ Recommended For You

Stories tailored to your recent reading preferences

More stories in Self-help
Xleem • 01 Jul, 2026 • 1 min read min

Life

Life is a long journey, and most of us spend it chasing what we lack, while forgetting to be grateful for what we already hold.

107 0
More stories in Self-help
Xleem • 01 Jul, 2026 • 1 min read min

Li3f

Just read it

98 1
More stories in Self-help
Abdul Aleem nsk • 29 Jun, 2025 • 3 mins read min

"The Boy Who Held Storms in Silence" (Fiction)

A silent boy, crushed by cruelty and unseen by the world, carries his pain alone—until it quietly ends him.

504 0
More stories in Self-help
fazal Esaf • 02 Jun, 2025 • 1 min read min

एक मुस्लिम गरीब लड़के की कहानी जो पढ़ना चाहता है

यह कहानी रहीम नाम के एक गरीब और मेहनती मुस्लिम लड़के की है, जिसके जीवन में कम उम्र में ही मुश्किलों का पहाड़ टूट पड़ता है। जब वह सिर्फ तीन साल का था, तभी उसके अब्बा का इंतकाल हो जाता है, और घर की सारी ज़िम्मेदारी उसकी अम्मी, सकीना, पर आ जाती है। सकीना दूसरों के घरों में मेड का काम करती है, लेकिन उसकी कमाई इतनी कम होती है कि दो वक्त की रोटी भी मुश्किल से मिलती है, और रहीम को स्कूल भेजने का सपना अधूरा रह जाता है। इसके बावजूद, रहीम के अंदर पढ़ने की गहरी लगन है। उसकी आँखें ज्ञान की दुनिया को देखने का सपना देखती हैं और वह अपनी अम्मी को गरीबी और दूसरों के घरों में काम करने की मजबूरी से आज़ाद कराना चाहता है। अपनी इस इच्छा को पूरा करने के लिए, रहीम छोटी उम्र में ही काम करना शुरू कर देता है। वह शहर की एक छोटी सी परचून की दुकान पर दिन भर ईमानदारी और लगन से काम करता है। शाम होते ही, रहीम अपनी थकान को दरकिनार करते हुए पास के 'शाम के मदरसे' में पढ़ने चला जाता है, जहाँ गरीब बच्चों को मुफ्त शिक्षा दी जाती है। मदरसे से लौटने के बाद भी वह अपनी अम्मी की मदद करता है, घर के कामों में हाथ बँटाता है। रविवार का दिन उनके लिए खास होता है, जब रहीम अपनी अम्मी से अपने बड़े-बड़े सपने साझा करता है – खूब पढ़कर बड़ा आदमी बनना और अम्मी को आराम भरी ज़िंदगी देना। कहानी इस बात पर भी जोर देती है कि कैसे रहीम अपनी विपरीत परिस्थितियों के बावजूद अच्छी आदतों को बनाए रखता है। जहाँ उसके आस-पास के कई लड़के गरीबी से हार मानकर गलत रास्तों पर चले जाते हैं, वहीं रहीम न केवल खुद ईमानदार और नेक रहता है, बल्कि अपने दोस्तों और पड़ोस के लड़कों को भी पढ़ाई की अहमियत समझाता है और उन्हें सही रास्ता दिखाता है। वह उन्हें बताता है कि शिक्षा ही गरीबी से निकलने का एकमात्र ज़रिया है, न कि बुरे काम। यह कहानी मेहनत, लगन और नैतिक मूल्यों का एक सशक्त उदाहरण प्रस्तुत करती है, जो दर्शाती है कि दृढ़ इच्छाशक्ति और सही दिशा में प्रयास से कोई भी व्यक्ति अपनी मुश्किलों को पार कर सकता है।

881 0