ನಾವು ಪ್ರತಿಯೊಂದಕ್ಕೂ ಗೊಂದಲ ಮಾಡಿಕೊಳ್ಳುತ್ತೇವೆ. ಪ್ರತಿಯೊಂದು ಶಬ್ಧಕ್ಕೂ ವಿಶೇಷಾರ್ಥ ಕಲ್ಪಿಸಿಕೊಂಡು ಮುದುಡುತ್ತೇವೆ. ಇದಕ್ಕೆ ತಾಜಾ ಉದಾಹರಣೆ ಅಂದರೆ ನಮ್ಮ ಪ್ರಧಾನ ಮಂತ್ರಿಯವರು ಕರೆ ಕೊಟ್ಟ ಮೇಕ್ ಇನ್ ಇಂಡಿಯಾ ಹಾಗೂ ದೇಶ ಭಕ್ತಿಯ ಪ್ರತೀಕವಾದ ಮೇಡ್ ಇನ್ ಇಂಡಿಯಾ ಇವೆರಡು ಪರಸ್ಪರ ವಿರುದ್ಧ ವಾಕ್ಯಗಳೆಂದು ವಾದಿಸುತ್ತಾ ಗೊಂದಲ ಮೂಡಿಸುವವರು ಇದ್ದಾರೆ. ಈ ಬಗ್ಗೆ ವಿರೋಧ, ಗೊಂದಲ ಮಾಡಿ ಕೊಳ್ಳುವ ಅಗತ್ಯ ಇದೆಯೇ?
ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ದಿ. ೨೫-೦೯-೨೦೧೪ರಂದು ನವದೆಹಲಿಯ ವಿಜ್ಞಾನ ಪ್ರಸಾರದಲ್ಲಿ ಪ್ರಪ್ರಥಮವಾಗಿ ‘ಮೇಕ್ ಇನ್ ಇಂಡಿಯಾದ ಕರೆಕೊಟ್ಟರು. ದೇಶ ಸ್ವಾತಂತ್ರ್ಯ ಹೊಂದಿ ೬೭ ವರ್ಷಗಳಾದರೂ ನಾವು ಇನ್ನೂ ಬಹಳಷ್ಟು ವಸ್ತುಗಳನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಈ ವಸ್ತುಗಳು ಭಾರತದಲ್ಲಿಯೇ ತಯಾರಾದರೆ ಇಲ್ಲಿರುವ ಕೋಟ್ಯಾನುಗಟ್ಟಲೆ ನಿರುದ್ಯೋಗಿ ಯುವಜನರ ಕೈಗಳಿಗೆ ಉದ್ಯೋಗ ಸಿಕ್ಕಿ ಅವರ ಜೀವನ, ಹಣಕಾಸು ಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. ಅದರೊಂದಿಗೆ ದೇಶದ ವಿದೇಶಿ ವಿನಿಮಯವು ಬಹಳಷ್ಟು ಉಳಿಯುತ್ತದೆ ಎಂಬ ಉದ್ದೇಶ ಅವರ ಕರೆಯ ಹಿಂದಿತ್ತು ಎಂದು ಊಹಿಸ ಬಹುದು. ಯಾಕೆಂದರೆ ನಾವು ಆ ಸಂದರ್ಭದಲ್ಲಿ ಸುಮಾರು ೪೫೯,೩೬೯ ಮಿಲಿಯನ್ ಡಾಲರ್ ಮೊತ್ತದ ವಸ್ತುಗಳನ್ನು ೨೨೨ರಷ್ಟು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವು. ಆದರೆ ಕೇವಲ ೩೧೭,೫೪೫ ಮಿಲಿಯನ್ ಡಾಲರನಷ್ಟು ಮೌಲ್ಯದ ವಸ್ತುಗಳನ್ನು ಮಾತ್ರ ಆಗ ರಪ್ತು ಮಾಡುತ್ತಿದ್ದೇವು. ಆಗ ಡಾಲರ್ ಎದುರು ರೂಪಾಯಿ ಮೌಲ್ಯ ಸರಾಸರಿ ರೂ. ೬೦/- (ಪ್ರತಿ ಡಾಲರಿಗೆ) ಆಸುಪಾಸಿನಲ್ಲಿ ಇತ್ತು.
ಭಾರತದಲ್ಲಿಯೇ ತಯಾರಿಸಿ ಅದರಿಂದ ಭಾರತಕ್ಕೆ ಮತ್ತು ಭಾರತಿಯರಿಗೆ ಉಪಕಾರಿಗಳಾಗಿ ಎನ್ನುವ ಆಶಯ ಪ್ರಧಾನಮಂತ್ರಿಗಳ ಈ ಕರೆಯ ಹಿಂದಿತ್ತು. ಮೇಕ್ ಇನ್ ಇಂಡಿಯಾ ಭಾರತ ಸರಕಾರದ ಬೃಹತ್ ರಾಷ್ಟ್ರೀಯ ಯೋಜನೆಯಾಗಿತ್ತು. ಇದರ ಮೂಲ ಉದ್ದೇಶ ಉದ್ಯಮಿಗಳು ಭಾರತದಲ್ಲಿಯೇ ಬಂಡವಾಳ ಹೂಡುವಂತೆ ಪ್ರೇರೆಪಿಸುವುದಾಗಿತ್ತು. ಸಂಶೋಧನೆ, ಕೌಶಲ್ಯ ವೃದ್ಧಿ, ದೇಶದ ಪ್ರಾಕೃತಿಕ ಸಂಪತ್ತನ್ನು ಸದುಪಯೋಗ ಪಡಿಸಿಕೊಳ್ಳು ಬೇಕೆನ್ನುವುದು ಈ ಘೋಷಣೆಯ ನೈಜ ಉದ್ದೇಶವಾಗಿತ್ತು ಎಲ್ಲಾದರೂ ಹೋಗಿ ಮಾರಿಕೊಳ್ಳಿ ಆದರೆ ಭಾರತದಲ್ಲಿಯೇ ತಯಾರಿಸಿ; ಇದರಿಂದ ದೇಶದ ಗೌರವ ಪ್ರತಿಷ್ಠೆ ಹೆಚ್ಚಿಸಿ ಎಂದು ಅವರು ದೇಶದ ಉದ್ಯಮಿಗಳಿಗೆ ಕರೆಕೊಟ್ಟರು. ಅಲ್ಲಿಯ ತನಕ ವಿದೇಶಿ ವಸ್ತುಗಳೇ ಶ್ರೇಷ್ಠ ಎಂದು ನಂಬಿಕೊಂಡಿದ್ದವರಿಗೆ ನಮ್ಮಲ್ಲಿಯೂ ಉತ್ತಮ ಗುಣಮಟ್ಟದ ವಸ್ತುಗಳನ್ನು ತಯಾರಿಸ ಬೇಕೆನ್ನುವ ಉತಾಹವನ್ನು ಪ್ರಧಾನಿಗಳ ಈ ಘೋಷಣೆ ಮೂಡುವಂತೆ ಮಾಡಿತು.
ದೇಶದ ಉದ್ಯಮಿಗಳಿಗೆ ಉತ್ಸಾಹ ನೀಡಿದರೆ ವಿದೇಶಿ ಉದ್ಯಮಿಗಳು ಭಾರತಕ್ಕೆ ಬಂದು ಇಲ್ಲಿನ ನೆಲ-ಜಲ, ಮಾನವ ಶಕ್ತಿಯನ್ನು ಉಪಯೋಗಿಸಿ ತಯಾರಿಸಿದ ವಸ್ತುಗಳೇ ಮೇಡ್ ಇನ್ ಇಂಡಿಯಾ. ಆ ವಸ್ತುಗಳನ್ನು ತಯಾರಿಸುವ ಕೌಶಲ್ಯ ನಮ್ಮವರಿಗೆ ಬಂದಂತಾಗಲಿಲ್ಲವೇ? ಈ ವಸ್ತುಗಳನ್ನು ಖರೀಸುವುದು ರಾಷ್ಟ್ರ ಭಕ್ತಿಯ ಪ್ರತೀಕವಲ್ಲವೇ? ಯಾಕೆಂದರೆ ಒಂದೆಡೆ ಚೀನ ತನ್ನ ದೇಶದಲ್ಲಿ ತಯಾರಿಸಿದ ಪದಾರ್ಥಗಳನ್ನು ನಮಗೆ ಮಾರಿ ದುಡ್ಡು ಮಾಡಿಕೊಂಡರೂ ಬಹುರಂಗವಾಗಿ ನಮ್ಮ ದೇಶದ ವಿರುದ್ಧ ಕತ್ತಿ ಮಸೆಯುತ್ತಿದೆ ಇನ್ನು ಪಾಕಿಸ್ತಾನವಂತು ಭಾರತದ ಪಾಲಿಗೆ ಸೆರಗಿನಲ್ಲ ಕಟ್ಟಿಕೊಂಡಿರುವ ಕೆಂಡದಂತಾಗಿದೆ. ಇಂತಹ ಸಂದರ್ಭದಲ್ಲಿ ಆಮದಾಗುವ ವಸ್ತುಗಳ ನಮ್ಮಲ್ಲಿಯೇ ತಯಾರಾಗುವುದರಿಂದ ವಿದೇಶಿ ವಿನಿಮಯ ಉಳಿಯುದಷ್ಟೇ ಅಲ್ಲ ಹೆಚ್ಚು ಹೆಚ್ಚು ಜನ ಬಂಡವಾಳ ಹೂಡತೊಡಗಿದಾಗ ವಸ್ತುಗಳ ಬೆಲೆಯೂ ಕಡಿಮೆಯಾಗುತ್ತಾ ಹೋಗುತ್ತದೆ. ನಿರುದ್ಯೋಗಿ ಕೈಗಳಿಗೆ ಕೆಲಸ ದೊರಕಿ ಅವರ ಜೀವನಮಟ್ಟವೂ ಸುಧಾರಿಸುತ್ತದೆ. ಉಳಿಯುವ ವಿದೇಶಿ ವಿನಿಮಯದಿಂದ ದೇಶದೊಳಗೆ ಹೆಚ್ಚೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಿದೆ.
ಈಗ ನೀವೆ ಹೇಳಿ; ಮೇಕ್ ಇನ್ ಇಂಡಿಯಾ ಮತ್ತು ಮೇಡ್ ಇನ್ ಇಂಡಿಯಾದ ನಡುವೆ ಶತ್ರುತ್ವ ಇದೆ ಅಥವಾ ಅವೆರಡು ವಿರುದ್ಧ ವಾಕ್ಯಗಳೆಂದು ಅನುಮೋದಿಸಲು ಸಾಧ್ಯವಿದೆಯೇ?
-
Comments
Appreciate the author by telling what you feel about the post 💓
Chennagi barediddiri
Please Login or Create a free account to comment.