ಚಿತ್ರೋದ್ಯಮವನ್ನು ಅನುಸರಿಸುವ ಮುನ್ನ ಎಚ್ಚರಿಕೆ ಇರಲಿ.

ಚಿತ್ರೋದ್ಯಮ ಆಕರ್ಷಮಯ ಹೌದಾದರೂ ಅನುಸರಿಸುವ ಮುನ್ನ ಎಚ್ಚರಿಕೆ ಅಗತ್ಯ.

Originally published in kn
Reactions 0
685
Deepak Shenoy
Deepak Shenoy 01 Oct, 2020 | 1 min read
Indian Film Industry Film

೧೯೧೩ರಲ್ಲಿ ಉದಯಿಸಿದ ಭಾರತೀಯ ಚಿತ್ರರಂಗ ಶತಕವನ್ನು ಭಾರಿಸಿ ಏಳು ವರ್ಷಗಳೇ ಸಂಧಿವೆ. ಸತ್ಯ ಹರಿಶ್ಚಂದ್ರ ಮೂಕಿ, ಕಪ್ಪು-ಬಿಳುಪು ಚಲನಚಿತ್ರದ ಮೂಲಕ ಉದಯಿಸಿದ ಭಾರತೀಯ ಚಿತ್ರೋದ್ಯಮ ಬೃಹದಾಕಾರದಲ್ಲಿ ಬೆಳೆದು ನಿಂತಿದೆ. ಇಂದು ಪ್ರತಿ ವರ್ಷ ಒಂದು ಸಾವಿರಕ್ಕಿಂತ ಅಧಿಕ ಚಲನಚಿತ್ರಗಳು ಭಾರತದಲ್ಲಿ ತಯಾರಾಗುತ್ತಿವೆ. ಅವುಗಳಲ್ಲಿ ಹಿಂದಿ ಮತ್ತು ತಮಿಳು ಚಿತ್ರಗಳು ಅಧಿಕ ಸಂಖ್ಯೆಯಲ್ಲಿದ್ದರೂ ಪ್ರತಿ ವರ್ಷ ಕನ್ನಡದಲ್ಲಿಯೂ ಇನ್ನೂರಕ್ಕಿಂತ ಅಧಿಕ ಚಿತ್ರಗಳು ತೆರೆ ಕಾಣುತ್ತಿವೆ. ಎರಡು - ಮೂರು ದಶಕಗಳ ಹಿಂದೆ ಚಲನಚಿತ್ರಗಳಿಗೆ ಐದಾರೂ ಲಕ್ಷ ರೂಪಾಯಗಳನ್ನು ವೆಚ್ಚಮಾಡಲು ನಿರ್ಮಾಪಕರು ಹಿಂದೆ ಮುಂದೆ ನೋಡುತ್ತಿದ್ದರು. ಆದರೆ ಈಗ ಕನ್ನಡದಂತಹ ಪ್ರಾದೇಶಿಕ ಬಾಷೆಯ ಚಿತ್ರಕ್ಕೂ ಇಪ್ಪತ್ತರಿಂದ ನಲವತ್ತು ಕೋಟಿ ರೂಪಾಯಿಗಳನ್ನು ಸುರಿಯುತ್ತಾರೆ. ಅಂದಾಗ ಚಿತ್ರೋದ್ಯಮ ಎಷ್ಟೊಂದು ಬೃಹತ್ ಉದ್ಯಮವಾಗಿ ಬೆಳೆದಿದೆ ಎಂಬುವುದನ್ನು ಯಾರು ಬೇಕಾದರೂ ಉಹಿಸಬಹುದು.

ಈಗ ನಿರ್ಮಾಪಕರು ಕೇವಲ ಚಿತ್ರಮಂದಿರಗಳ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ಉಪಗ್ರಹ (ಟಿ.ವಿ) ಹಕ್ಕು, ಡಿಜಿಟಲ್ ಹಕ್ಕುಗಳನ್ನು ಮಾರಿ ಸುರಿದ ದುಡ್ಡಿನ ನಾಲ್ಕಾರು ಪಟ್ಟು ಆದಾಯ ಗಳಿಸಿಕೊಳ್ಳುವವರೂ ಇದ್ದಾರೆ. ಚಿತ್ರಮಂದಿರಗಳ ಸಮಖ್ಯೆ ಕಡಿಮೆಯಾಗಿದ್ದರೂ ಮಲ್ಟಿ ಫ್ಲೆಕ್ಸ್‌ಗಳ ಸಮಕ್ಯೆ ಹೆಚ್ಚಾಗಿದೆ. ಸಣ್ಣ-ಪುಟ್ಟ ಕಲಾವಿದರೂ ಸಹ ಕೈತುಂಬ ಗಳಿಸುತ್ತಿದ್ದಾರೆ. ಒಟ್ಟಾರೆ ಭಾರತೀಯ ಚಲನಚಿತ್ರ ರಂಗ ಝಣ-ಝಣ ಎಂದು ಹಣ ಕುಣಿಯುತ್ತಿರುವ ವ್ಯಾಪಾರವಾಗಿದೆ.ಲಕ್ಷಗಟ್ಟಲೆ ಕುಟುಂಬಗಳಿಗೆ ಅನ್ನ ನೀಡುತ್ತಿದೆ. ಚಿತ್ರಗಳಲ್ಲಿ ನಟಿಸುವ ತಾರೆಯರು ಸೆಲಬ್ರಟಿಗಳಾಗಿ ಕಾಣುತ್ತಾರೆ. ಆದರೂ ಜನಸಾಮಾನ್ಯರು ಅವರನ್ನು ಅನುಸರಿಸುವಷ್ಟು ಆದರ್ಶಮಯ ಜೀವನವನ್ನು ಇಂದಿನ ಚಿತ್ರ ತಾರೆಯರು ಬಾಳುತ್ತಿದ್ದಾರೆಯೇ ಎಂದು ಕೇಳಿಕೊಂಡರೆ ನಿಜಕ್ಕೂ ನಿರಾಶೆಯಾಗುತ್ತದೆ. ಅತಿಶಯವಾದ ಹಣದಿಂದ ಭೋಗ ಜೀವನವನ್ನು ನಡೆಸುತ್ತಿದ್ದರೂ ಜನಸಾಮಾನ್ರಯ ಸಂಕಷ್ಟಕ್ಕೆ ಸ್ಪಂದಿಸುವವರು ಚಿತ್ರರಂಗದಲ್ಲಿ ಎಷ್ಟು ಜನರಿದ್ದಾರೆ? ರಾಮಾಯಣದ ಶ್ರೀ ರಾಮನಂತವರು, ಇತಿಹಾಸದ ಗಾಂಧೀಜಿ, ವಿನೋಭಾ ಭಾವೆ ಅಂತಹ ಆದರ್ಶಮಯ ಪಾತ್ರಗಳನ್ನು ತೆರೆಯ ಮೇಲೆ ಅಭಿನಯಿಸಿದ್ದರೂ ಅವರಂತೆ ಬದುಕಿದವರು ಎಷ್ಟು ಜನ? ತಳುಕು-ಬಳುಕಿಗೆ ಮಾರು ಹೋಗಿ ಚಿತ್ರರಂಗ ಪ್ರವೇಶಿಸಬೇಕೆಂದಿದ್ದ ಹಲವಾರು ಜನ ದ್ವೀಪಕ್ಕೆ ಮುತ್ತಿದ ಕೀಟದಂತೆ ನಾಶವಾಗಿ ಹೋಗಿದ್ದನ್ನು ಕಂಡಿದ್ದೇವೆ. ಈ ವರ್ಷವಂತೂ ಮಾದಕ ದ್ರವ್ಯ ವ್ಯಸನದ ಕಾರಣ ಚಿತ್ರರಂಗ ತನ್ನ ಘನತೆಯನ್ನು ಮಣ್ಣು ಪಾಲು ಮಾಡಿಕೊಂಡಿದೆ. ಇಂತಹ ಸಂದರ್ಭದಲ್ಲಿ ಭಾರತೀಯ ಚಲನಚಿತ್ರೋದ್ಯಮವನ್ನು ಅನುಸರಿಸಲು ಸಾಧ್ಯವೇ? 

0 likes

Published By

Deepak Shenoy

deepakshenoy

Comments

Appreciate the author by telling what you feel about the post 💓

Please Login or Create a free account to comment.