ಶಾಲಾರಂಭ

ಶಾಲಾರಂಭದ ಕೌತುಕ

Originally published in kn
Reactions 2
494
ARAVIND SHANBHAG, Baleri
ARAVIND SHANBHAG, Baleri 19 Aug, 2020 | 0 mins read

ದೇಶದಾದ್ಯಂತ ಶಾಲೆ ಕಾಲೇಜು ಪುನರಾರಂಭದ್ದೇ ಚರ್ಚೆ. ಎಲ್ಲರೂ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಪಾಲಕರಿಗೆ ಮನೆಯಲ್ಲಿ ಇರುವ ಮಕ್ಕಳನ್ನು ಸಂಭಾಳಿಸಿಕೊಂಡು ಹೋಗುವ ಚಿಂತೆಯಾದರೆ, ಮಕ್ಕಳಿಗೆ ಆನ್ ಲೈನ್ ತರಗತಿಗಳನ್ನು ತಪ್ಪಿಸಿಕೊಳ್ಳುವ ತವಕ. ಈ ನಡುವೆ ಸುಪ್ರೀಂ ಕೋರ್ಟ್ ಗೆ ಗೃಹ ಇಲಾಖೆ ಅಫಿಡವಿಟ್ ಸಲ್ಲಿಸಿದೆಯಂತೆ.

ದೇಶದಾದ್ಯಂತ ಕೊರೊನಾ ವೈರಸ್ ಮಹಾಮಾರಿ ಆರ್ಭಟ ಜೋರಾಗಿದೆ. ಕೊರೊನಾ ಲಾಕ್ ಡೌನ್ ಮುನ್ನವೇ ಬಂದ್ ಆಗಿದ್ದ ಶಾಲೆ, ಕಾಲೇಜುಗಳು ಇನ್ನೂ ಪುನರಾರಂಭಗೊಂಡಿಲ್ಲ. ಇದೀಗ ಮೂರನೇ ಹಂತದ ಅನ್ ಲಾಕ್ ಪ್ರಕ್ರಿಯೆಯ ವೇಳೆಯಲ್ಲಿ ಶಾಲಾ, ಕಾಲೇಜುಗಳನ್ನು ತೆರೆಯಲು ಅವಕಾಶ ಕಲ್ಪಿಸುವುದಾಗಿ ಕೇಂದ್ರ ಗೃಹ ಇಲಾಖೆ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ.

ಪದವಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೇ ಪಾಸ್ ಮಾಡುವ ನಿರ್ಧಾರ ಮಾಡಿದ್ದ ಯು.ಜಿ.ಸಿ. ಸೆಪ್ಟೆಂಬರ್ 30ರ ಒಳಗಾಗಿ ಅಂತಿಮ ವರ್ಷದ ಪದವಿ ತರಗತಿಗಳಿಗೆ ಪರೀಕ್ಷೆ ಮುಗಿಸುವಂತೆ ಸೂಚನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೂಡ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯಲು ಮನಸ್ಸು ಮಾಡಿದ್ದು, ಮೂರು ಹಂತಗಳಲ್ಲಿ ದೇಶದಾದ್ಯಂತ ಶಾಲೆ, ಕಾಲೇಜುಗಳು ಪುನರಾರಂಭಗೊಳ್ಳುವ ಸೂಚನೆಯಿದೆ.

ಆರಂಭಿಕ ಹಂತದಲ್ಲಿ ಅಂದ್ರೆ ಸಪ್ಟೆಂಬರ್ ನಲ್ಲಿ 10, 11 ಮತ್ತು 12ನೇ ತರಗತಿಗಳು ಆರಂಭವಾಗುವ ಸಾಧ್ಯತೆಯಿದೆ. ಇನ್ನು ಸಪ್ಟೆಂಬರ್ 15 ರಿಂದ ಪ್ರೌಢಶಾಲಾ ತರಗತಿ ಹಾಗೂ ನವೆಂಬರ್ 14ರ ಬಳಿಕ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಪ್ಲ್ಯಾನ್ ರೂಪಿಸಿದೆ. ಆದರೆ ಯಾವುದೇ ಕಾರಣಕ್ಕೂ ಶೂನ್ಯ ಶೈಕ್ಷಣಿಕ ವರ್ಷವನ್ನಾಗಿ ಘೋಷಣೆ ಮಾಡುವುದಿಲ್ಲವೆಂದು ಕೇಂದ್ರ ಸರಕಾರ ಹೇಳಿದೆ.

ಇದರ ಅರ್ಥ, ಕೊರೋನಾ ಇದ್ದರೂ ಮಕ್ಕಳು ಧೈರ್ಯದಿಂದ ಶಾಲೆಯತ್ತ ಹೆಜ್ಜೆ ಹಾಕಬೇಕಿದೆ. ಶಾಲೆಯ ಶುಭಾರಂಭವಾಗಿ ವಿದ್ಯೆಯ ಪ್ರಕಾಶದಿಂದ ಕರೋನಾ ಅಂಧಕಾರ ದೂರವಾಗಲಿ.

2 likes

Published By

ARAVIND SHANBHAG, Baleri

aravindshanbhag

Comments

Appreciate the author by telling what you feel about the post 💓

Please Login or Create a free account to comment.