ಅದೊಂದು ಪುರಾತನ ರಾಜ್ಯ. ಧರ್ಮಾತ್ಮನೆನ್ನುವವನು ರಾಜನಾಗಿದ್ದನು.
ಅವನಿಗೊಬ್ಬಳು ಕುವರಿ ಜನಿಸಿದಳು. ಅವಳು ಕಾಲ ಕಳೆದಂತೆ ಸುಂದರಿಯಾಗಿ ಎಲ್ಲರಿಗೂ ಮೋಹಕವಾಗಿ ಕಾಣುತ್ತಿದ್ದಳು.
ಬಹಳ ವರ್ಷಗಳ ಬಳಿಕ ಅವಳಿ ಗಂಡು ಮಕ್ಕಳ ಜನನವಾಯಿತು. ಆದರೆ ಅವರು ಮೂರ್ಖರಾಗಿದ್ದರು.
ರಾಜನಿಗೆ ಚಿಂತೆಯಾಯಿತು.
ಮಂತ್ರಿಯನ್ನು ಕರೆಸಿ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಪಂಡಿತನಿಗೆ ಅರ್ಧದಷ್ಟು ರಾಜ್ಯ ಭಕ್ಷೀಸು ನೀಡುವದಾಗಿ ಡಂಗುರ ಸಾರಲು ಸೂಚಿಸಿದನು. ಮಕ್ಕಳು ಮೂರ್ಖರಾಗಿಯೇ ಉಳಿದರೆ ಪಂಡಿತನಿಗೆ ಶಿಕ್ಷೆ ವಿಧಿಸಲಾಗುವದೆಂದನು.
ಶಿಕ್ಷೆಗೆ ಹೆದರಿ ಯಾರೂ ಬೋಧನೆಗೆ ಮುಂದಾಗಲಿಲ್ಲ.
ಪುನಃ ಇನ್ನೊಂದು ಡಂಗುರ ಸಾರಲಾಯಿತು. "ರಾಜನ ಮೂರ್ಖ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಬುದ್ಧಿವಂತರನ್ನಾಗಿ ಮಾಡುವ ಪಂಡಿತನಿಗೆ ಅರ್ಧದಷ್ಟು ರಾಜ್ಯ ಮತ್ತು ರಾಜಕುಮಾರಿಯ ಜೊತೆಗೆ ವಿವಾಹ ನೆರವೇರಿಸಲಾಗುವದು".
ಇದನ್ನು ಕೇಳಿದ ಬಡ ಸಂಸ್ಕೃತ ಪಂಡಿತನೊಬ್ಬ ಆರು ತಿಂಗಳಲ್ಲಿ ಮೂರ್ಖ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಬುದ್ಧಿವಂತರನ್ನಾಗಿ ಮಾಡಿದ.
ರಾಜನು ಆಶ್ಚರ್ಯದಿಂದ ಹರ್ಷಿತನಾಗಿ ಕೊಟ್ಟ ಮಾತಿನಂತೆ ಪಂಡಿತನಿಗೆ ಅರ್ಧದಷ್ಟು ರಾಜ್ಯ ಮತ್ತು ರಾಜಕುಮಾರಿಯ ಜೊತೆಗೆ ವಿವಾಹ ನೆರವೇರಿಸಿದನು.
ಬಡ ಸಂಸ್ಕೃತ ಪಂಡಿತನು ಮಹಾರಾಜರ ಅಳಿಯನಾಗಿ ಸುಖವಾಗಿ ಕಾಲಕಳೆದ.
Comments
Appreciate the author by telling what you feel about the post 💓
ಚಿಕ್ಕ ಮತ್ತು ಚೊಕ್ಕ ಕಥೆ ಬಹಳ ಚೆನ್ನಾಗಿದೆ
Makkala ranjanege. Istadaru vele kottu odidare nanna shrama sarthaka
Please Login or Create a free account to comment.