ಸಂಧ್ಯಾವೃಷ್ಟಿ

Poetry about evening in Kannada

Originally published in kn
Reactions 0
619
ARAVIND SHANBHAG, Baleri
ARAVIND SHANBHAG, Baleri 17 Sep, 2020 | 0 mins read


ಸಂಧ್ಯಾರವಿಯ ನಿರ್ಗಮನ

ರೋಹಿಣಿಚಂದ್ರನ ಆಗಮನ

ನಕ್ಷತ್ರಗಳ ಸಂಚಲನ

ನೆನಪುಗಳ ಅನುರಣನ


ಶಶಿಯ ಮರೆಯಲ್ಲಿ

ಮೇಘದ ಒಡಲಿಂದ

ಇನಿಯನ ಸಂದೇಶವ

ಅರಿವ ತವಕದಿಂದ


ನಭದತ್ತ ಮೊಗವೆತ್ತಿ

ಕೌತುಕದಿ ಕಣ್ಣರಳಿಸೆ

ಬೀಸಿತದೋ ತಂಗಾಳಿ

ದೂರವಾಯಿತು ಮೇಘ


ನಿಶೆಯ ಅಂಧಕಾರದಿ

ವಿದ್ಯುಲ್ಲತೆಯ ಸಾಂಗತ್ಯದಿ

ವಿರಹದ ಬೇಗೆ ನೀಗಿ

ತಂಪೆರೆಯಿತು ವರ್ಷವೃಷ್ಟಿ

0 likes

Published By

ARAVIND SHANBHAG, Baleri

aravindshanbhag

Comments

Appreciate the author by telling what you feel about the post 💓

Please Login or Create a free account to comment.