ರಾಶಿಯಾಯಿತು ವೆಬಿನಾರ್ ಪ್ರಮಾಣಪತ್ರ

ಮಕ್ಕಳಿಗೆ ನೈತಿಕತೆಯ ಪಾಠ ಮಾಡುವ ಶಿಕ್ಷಕ ತನಗೆ ಆಗುವ ಅನ್ಯಾಯವನ್ನು ಸಹಿಸಿಕೊಳ್ಳುವದೆಂದರೆ, ಅದಕಿಂತ ಬೇರೆ ಆತ್ಮಾಹುತಿ ಇದೆಯೇ?

Originally published in kn
Reactions 0
824
ARAVIND SHANBHAG, Baleri
ARAVIND SHANBHAG, Baleri 16 Sep, 2020 | 1 min read
Struggle Own Experience True Incident Justice Teacher's Role



ಮಾರ್ಚ 18, ನಮಗೆ ಕೊನೆಯ ಕೆಲಸದ ದಿನವಾಗಿತ್ತು. ಹಾಗೆಯೇ ಮೂರು ದಿನಗಳು ಕಳೆಯುವಷ್ಟರಲ್ಲಿ ನನ್ನನ್ನು ಶಾಲಾ ವಾಟ್ಸಾಪ್ ಗ್ರೂಪ್‍ನಿಂದ ತೆಗೆದಿದ್ದರು. ಯಾಕಂತ ಕೇಳಿದರೆ ನೀವು ಬೇರೆ ಕೆಲಸ ನೋಡಿಕೊಳ್ಳಿ ಎನ್ನುವ ಜವಾಬು. ನಾನು ಕೆಲಸ ಮಾಡುತ್ತಿದ್ದುದು ಖಾಸಗಿ ಶಾಲೆಯಲ್ಲಿ. ಸಂಸ್ಕೃತ ನನ್ನ ಬೋಧನೆಯ ವಿಷಯ. ಅಷ್ಟಕ್ಕೂ ನಾನೇನು ರಾಜೀನಾಮೆ ಕೊಟ್ಟಿರಲಿಲ್ಲ. ಅವರೂ ನನ್ನನ್ನು ಸೇವೆಯಿಂದ ವಜಾಗೊಳಿಸಿಲ್ಲ.

ನೋಡೋಣ ಏನಾಗುತ್ತದೆಂದು ಕಾದರೆ ಶಾಕ್ ಆಗುವ ಸರದಿ ನನ್ನದಾಗಿತ್ತು. ನನ್ನ ಇತರ ಸಹೋದ್ಯೋಗಿಗಳಿಗೆ ಅರ್ಧ ಸಂಬಳ ಬಂದಿದ್ದರೆ, ನನಗೆ ನಯಾಪೈಸೆ ಪ್ರಾಪ್ತಿಯಿಲ್ಲ. ಈ ಕುರಿತು ಪ್ರಾಂಶುಪಾಲರನ್ನು ವಿಚಾರಿಸಿದಾಗ ಆಡಳಿತ ಮಂಡಳಿಗೆ ಕೇಳುವಂತೆ ಹೇಳಿದರು. ಕೊನೆಗೆ ವಿಷಯ ಗೊತ್ತಾದದ್ದು, ಶಾಲಾರಂಭವಾಗುವವರೆಗೆ ನಿಮಗೆ ಸಂಬಳ ಇಲ್ಲ.

ಕೊನೆಗೆ ಮಾಡುವದೇನು? ನ್ಯಾಯಕ್ಕಾಗಿ ಆಗ್ರಹಿಸಿ ಶಿಕ್ಷಣ ಇಲಾಖೆ, ಸಿ.ಬಿ.ಎಸ್.ಇ. ಬೋರ್ಡ, ಕಾರ್ಮಿಕ ಇಲಾಖೆಗಳಿಗೆ ಶಾಲಾ ಆಡಳಿತ ಮಂಡಳಿಯ ವಿರುದ್ದ ತಕರಾರು ಅರ್ಜಿ ಸಲ್ಲಿಸಿ ಚಾತಕಪಕ್ಷಿಯಂತೆ ಕಾಯುತ್ತಿದ್ದೇನೆ.

ಒಂದೆಡೆ ಕೆಲಸವಿಲ್ಲ, ಇನ್ನೊಂದು ಕಡೆ ಸಂಬಳವಿಲ್ಲ. ಹೀಗಾಗಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದೇನೆ.

ಮೂವತ್ತರಷ್ಟು ರಾಷ್ಟ್ರೀಯ ವೆಬಿನಾರ್‍ಗಳಲ್ಲಿ ಪಾಲ್ಗೊಂಡೆ. ಆನ್‍ಲೈನ್ ಕವಿಗೋಷ್ಟಿಗಳಲ್ಲಿ ಭಾಗವಹಿಸಿದೆ. ವೆಬ್‍ತಾಣದ ಲೇಖನ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಬಹುಮಾನವಾಗಿ ಬಂದ ಮೂರುಸಾವಿರ ರೂಪಾಯಿಗಳೇ ನನ್ನ ಈ ಐದು ತಿಂಗಳ ದುಡಿಮೆ. ಪೇಪರ್‍ವಿಫ್ ನ ಕೊಂಕಣಿ ರಾಯಭಾರಿಯಾಗಿ ಲೇಖನ ಬರೆದು ಸ್ವಲ್ಪ ಗೌರವಧನ ಪಡೆದೆ. ಪ್ರಜಾವಾಣಿ, ಕರ್ಮವೀರ ಪತ್ರಿಕೆಗಳ ಕಥಾಸ್ಪರ್ಧೆಗಳಿಗೆ ಕಥೆಗಳನ್ನು ಬರೆದೆ. ಸುಜ್ಞಾನವಾಣಿ ಎನ್ನುವ ಕನ್ನಡ ಪುಸ್ತಕ ಬರೆದೆ. ಮುದ್ರಣಕ್ಕೆ ಸಿದ್ಧಗೊಂಡಿದೆ.

"ಕನಕಲೋಚನ"ವೆನ್ನುವ ಸಂಸ್ಕೃತ ಕಥಾಪುಸ್ತಕವನ್ನು ಕೊಂಕಣಿಗೆ ಭಾಷಾಂತರಿಸಿದೆ. ಐದು ತಿಂಗಳ ಅಜ್ಞಾತವಾಸದಲ್ಲಿ ಅಂತರ್ಜಾಲ ಲೋಕವನ್ನು ಸುತ್ತಿದ್ದೇನೆ. ಈಗ ನನ್ನ ಹತ್ತಿರ ಐವತ್ತರಷ್ಟು ವೆಬಿನಾರ್ ಪ್ರಮಾಣಪತ್ರಗಳ ಸಂಗ್ರಹವಾಗಿದೆ.

ಈ ಐದು ತಿಂಗಳಲ್ಲಿ ಉತ್ತಮ ಜ್ಞಾನಾರ್ಜನೆ ಆಗಿದೆ. ಇನ್ನು ಶಾಲಾಡಳಿತಕ್ಕೆ ಪಾಠ ಮಾಡುವ ಸಮಯ ಸಮೀಪಿಸಿದೆ.

ಮಕ್ಕಳಿಗೆ ನೈತಿಕತೆಯ ಪಾಠ ಮಾಡುವ ಶಿಕ್ಷಕ ತನಗೆ ಆಗುವ ಅನ್ಯಾಯವನ್ನು ಸಹಿಸಿಕೊಳ್ಳುವದೆಂದರೆ, ಅದಕಿಂತ ಬೇರೆ ಆತ್ಮಾಹುತಿ ಇದೆಯೇ?


0 likes

Published By

ARAVIND SHANBHAG, Baleri

aravindshanbhag

Comments

Appreciate the author by telling what you feel about the post 💓

  • Sudhakar Bhat · 4 years ago last edited 4 years ago

    ಶಿಕ್ಷಕರಿಗೆ ಹೀಗಾಗಬಾರದಿತ್ತು

  • ARAVIND SHANBHAG, Baleri · 4 years ago last edited 4 years ago

    Nija

Please Login or Create a free account to comment.