"ಇಗ್ ನೊಬೆಲ್" ಎಂದಿರುವ ಮಾತ್ರಕ್ಕೆ ಇದು ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯೊಟ್ಟಿಗೆ ಯಾವುದೇ ಸಂಬಂಧ ಹೊಂದಿಲ್ಲ. ನೊಬೆಲ್ ಪ್ರಶಸ್ತಿಗೆ ಒಂದು ರೀತಿಯ ವಿಡಂಬನ ಪ್ರಶಸ್ತಿಯಾಗಿ "ಇಗ್ ನೊಬೆಲ್" ನೀಡಲಾಗುತ್ತದೆ. ಸಾಮಾನ್ಯವಾಗಿ ಈ ಪ್ರಶಸ್ತಿಗಳನ್ನು ಪ್ರತಿವರ್ಷ ಹಾರ್ವರ್ಡ್ ವಿಶ್ವವಿದ್ಯಾಲಯದ ಸ್ಯಾಂಡರ್ಸ್ ಥಿಯೇಟರ್‌ನಲ್ಲಿ ಪ್ರದಾನ ಮಾಡಲಾಗುತ್ತದೆ.
ಪ್ರಶಸ್ತಿ ಪ್ರದಾನ ಸಮಾರಂಭ ವಿಲಕ್ಷಣವಾಗಿರುತ್ತದೆ. ನೊಬೆಲ್ ಪ್ರಶಸ್ತಿ ಪುರಸ್ಕೃತರು "ಇಗ್ ನೊಬೆಲ್" ಪ್ರಶಸ್ತಿಗಳನ್ನು ಪ್ರದಾನಿಸುತ್ತಾರೆ. ಪ್ರಶಸ್ತಿ ಪುರಸ್ಕೃತರಿಗೆ ಸರಿಯಾಗಿ 60 ಸೆಕೆಂಡ್‌ಗಳ ಕಾಲಾವಕಾಶವಿರುತ್ತದೆ. ಸಮಯದ ಬಗ್ಗೆ ನಿಗಾ ವಹಿಸಲು 8ರ ಹರೆಯದ ಬಾಲಕಿಯನ್ನು ನಿಯೋಜಿಸಲಾಗುತ್ತದೆ. 60 ಸೆಕೆಂಡ್‌ಗಳನ್ನು ಮೀರಿದರೆ ಆ ಬಾಲಕಿ ನೇರವಾಗಿ ವೇದಿಕೆಗೆ ಬಂದು 'ದಯವಿಟ್ಟು ನಿಮ್ಮ ಭಾಷಣ ನಿಲ್ಲಿಸಿ, ನನಗೆ ಬೇಸರ ಹುಟ್ಟಿಸಿದೆ' ಎಂದು ಹೇಳುತ್ತಾಳೆ. ಸಾವಿರಕ್ಕೂ ಅಧಿಕ ವೀಕ್ಷಕರು ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ. ವೇದಿಕೆಯ ಮೇಲೆ ಪೇಪರ್ ಬಾಣಗಳನ್ನು ತೂರಲು ಜನರಿಗೆ ಅವಕಾಶ ನೀಡಲಾಗುತ್ತದೆ. ಈ ಕಾರ್ಯಕ್ರಮವನ್ನು ಇಂಟರ್ನೆಟ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
ಹಾಸ್ಯದ ಧಾಟಿಯುಳ್ಳ ವರದಿಗಳು ಮತ್ತು ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ ಚರ್ಚೆಗಳನ್ನು ಪ್ರಕಟಿಸುವ 'ಇಂಪ್ರಾಬಬಲ್ ರೀಸರ್ಚ್' ನಿಯತಕಾಲಿಕೆ ಈ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತದೆ.
Comments
Appreciate the author by telling what you feel about the post 💓
ಉತ್ತಮ ಮಾಹಿತಿ ಇದೆ
Idu acchariya vichar. Esto prashastigalige duddu koduvadarinda tumba lobby nadeyuttade. Idakke hagilla.
Please Login or Create a free account to comment.