ಹಾರುತಿಹುದು ಏರುತಿಹುದು
ತಿರಂಗ ವರ್ಣದ ಧ್ವಜವು
ಹೊಸ ಭರವಸೆಯ ಮೂಡಿಸಿ
ಎತ್ತರದಿಂದೆತ್ತರಕ್ಕೆ ಆಗಸದೆತ್ತರಕ್ಕೆ
ಕೇಸರಿ ಹೊದ್ದು ತ್ಯಾಗಮಯಿಗಳಾದರು
ಸ್ವತಂತಾರಕ್ಕಾಗಿ ಕೆಚ್ಚೆದೆಯಿಂದ ಕಾದಾಡಿ
ಜೀವನವನ್ನೇ ದೇಶಕ್ಕಾಗಿ ಸಮರ್ಪಿಸಿದರು
ಮರುಜನ್ಮ ಪಡೆದು ಗಡಿಯ ಕಾಯುತಿಹರು
ಬಿಳಿಯ ಪಟ್ಟಿ ಬಳಿದು ಉಪವಾಸ ಕೂತರು
ಕರುಣೆ-ಮಮತೆ-ಶಾಂತಿ-ನೀತಿಗಳಿಗೆ ಹೆಸರಾದರು
ಎಲ್ಲೆಡೆ ಹಸಿರನು ಚೆಲ್ಲಿ ಜೀವಾಮೃತರಾದರು
ನೀಲಿ ಚಕ್ರವ ತಿರುಗಿಸಿ ಉಸಿರಾದರು
ಕೈಮುಗಿ ನೀ.. ಭಾರತಾಂಬೆ ಹೊದ್ದಿರುವ
ಸೀರೆ ನೆರಿಗೆಯ ಗೆರೆಗಳು ಕಂಡಲ್ಲಿ
ಕೆಡಿಸದೆ ಅವುಗಳ ಸೊಬಗನು ಮನುಜ
ನೀ ದೇಶಕ್ಕೆ ಮಾದರಿಯಾಗಿರು..

Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.