ಕನ್ಹಯ್ಯಾ ಬಾರೋ

ಕೃಷ್ಣನ ಕುರಿತು ಒಂದು ಕವಿತೆ

Originally published in kn
Reactions 0
600
ಕಿರಣ ಸುಮರಂಗ
ಕಿರಣ ಸುಮರಂಗ 01 Jan, 1970 | 1 min read

ಕನ್ಹಯ್ಯ

ಕೊಳಲನೂದುತ ಬಾರೋ ಕನ್ಹಯ್ಯ

ಸ್ವರದ ಜಾಡು ತೋರಿಸು ನನ್ನಯ್ಯ//

 

ನಾದದ ಸವಿಯನು ನನಗೂ ನೀಡಯ್ಯ

ಗೋಪಿಕೆಯರ ಹಾಗೇ ನಾನೂ ದಾಸನಯ್ಯ//

 

ಗೋಪಿಕೆಯರ ಹೃದಯ ಕದಿಯಬೇಕಯ್ಯ

ನಾರಿಯರಿಂಗೆ ನಿನ್ನಂತೆ ಅಭಯವನ್ನೀಯಬೇಕಯ್ಯ//

 

ಮೂಕ ಜೀವಿಗಳ ಭಾಷೆ ಕಲಿಸಯ್ಯ

ನಾನು ಒಮ್ಮೆ ಗೋಪಾಲಕನಾಗಬೇಕಯ್ಯ//

 

ರಾಜಕೀಯದ ಕುಟಿಲ ನೀತಿಗಳರಿಯಬೇಕಯ್ಯ

ನಿನ್ನ ಹೊರತು ನನಗೆ ಕಲಿಸುವವರಾರಯ್ಯ//

 

ಬಾರಯ್ಯ ಒಮ್ಮೆ ದುಷ್ಟಕೂಟವ ಮರ್ದಿಸಯ್ಯ

ಶಿಷ್ಟರನ್ನು ಪೊರೆಯಲು ಓಡೋಡಿ ಬಾರಯ್ಯ//

                   ಸುಮರಂಗ(knsp)

0 likes

Published By

ಕಿರಣ ಸುಮರಂಗ

sumarang

Comments

Appreciate the author by telling what you feel about the post 💓

Please Login or Create a free account to comment.