ನನಗೆ ಎನು ಬೇಕು ? ಎನು ಬೇಡ? ಎಂಬ ಭಾವ ಒಳಸುಳಿ ಯುವ ಮೊದಲೇ ಅಲ್ಲಿಂದ ಮರೆಯಾಗುವವನ ನೆನೆದರೆಷ್ಟು? ಬಿಟ್ಟರೆಷ್ಟು? ಎಂದು ಕೋಪಗೊಂಡು ಕಂಗಳಿಂದ ಜಾರುವ ಹನಿಗಳಿಗೆ ನಿಯಂತ್ರಣ ತರದೇ ಮೌನವಾಗಿದ್ದೆ. ಸುಕುಮಾರ ಹೆಸರಿಗೆ ತಕ್ಕಂತೆ ಸುಕೋಮಲ ಮನಸಿನವನು.ಎಂಥವಳ ಮನದಲ್ಲೂ ನೆಮ್ಮದಿಯ ತಂಗಾಳಿ ತರುವ ಹೊಂಗನಸಿನ ರೂಪ ಅವನದು.ನಾನು ಅವನಷ್ಟು ಚೆಂದವಿರದಿದ್ದರು,ನನಗೆ ನಾನೆ ಚಂದ ಅನ್ನಿಸಿವುದು ಸಹಜ ತಾನೆ?
ಇಬ್ಬರೂ ದಿನವೂ ಬೇಟಿಯಾಗುವ ಜಾಗವೆಂದರೆ ಅದು ಕೇವಲ ಲೈಬ್ರರಿ ಮಾತ್ರ.ಅವನದು ಇಂಗ್ಲೀಷ್, ನನ್ನದು ಕನ್ನಡ ಅಲ್ಲಿಯು ಹೊಂದಾಣಿಕೆಯಿಲ್ಲದ ಸಂವೇದನೆ.ಆದರೂ ಎನೋ ಇಬ್ಬರ ನಡುವೆ ಆಯಸ್ಕಾಂತದಂತೆ ಕಾರ್ಯ
ನಿರ್ವಹಿಸುತ್ತಿತ್ತು.ಗಿರಿ...ಬಾಯಿಲ್ಲಿ.ನೋಡು ನಿನಗಿಷ್ಟವಾದ ಕವಿತೆ ಅಂದು ಕರೆದಾಗ ನನಗೆ ಆಕಾಶ ಯಾವಾಗ ಕೆಳಗೆ ಬಂತು ಅಂತ ಅರ್ಥವಾಗದೇ,ಕರೆದ ಧ್ವನಿ ಹೃದಯ ನಾಟಿ ಮಿಡಿತ ಹೆಚ್ಚಿಸಿತ್ತು.ಹಾಂ ಬಂದೆ ಯಾವುದು ಅದು ಎನ್ನುವಾಗಲೇ ಬರಸೆಳೆದು ಗಲ್ಲಕೆ ಮುತ್ತನಿಟ್ಟು.ಒಂದೇ ಬಾರಿ..ನಿನ್ನ ನೋಡಿ...ಮಂದನಗಿ ಹಂಗ ಬೀರಿ....ಅನ್ನುತ್ತಾ ಬಿಗಿಯಾಗಿ ಅಪ್ಪಿದ್ದು ನನಗೆ ಕನಸೋ,ಭ್ರಮೆಯೋ ಎಂದು ಅರಿವ ಹೊತ್ತಿಗೆ ಅವನ ತೋಳತೆಕ್ಕೆಯಲಿ ಕರಗಿದ್ದೆ.ನಂಬಲು ಅಸಾಧ್ಯ.ಕಾರಣ ಎಂದೂ ಅನುಮಾನದ ಸುಳಿವೂ ಕೊಡದೇ ಏಕಾಏಕಿ ಎಕಾಂತದಲ್ಲಿ ಮೌನವಾಗಿದ್ದು ಸಡನ್ ಆಗಿ ಪೋಲಿ ರೂಪಕ್ಕೆ ಬಂದರೆ ನಾಹೇಗೆ ಗ್ರಹಿಸಲಿ?
ಸಾವರಿಸಿಕೊಂಡು,ಎನ್ರಿ ನೀವು, ಹೀಗೆ ಮಾಡೋದಾ ಅಂತ ಕೇಳಲು ಮನಸ್ದು ಬರಲಿಲ್ಲ.ಸದ್ಯ ಯಾರು ಇರಲಿಲ್ಲ.ಎದೆಯು ಹಿಗ್ಗಿದಂತಾಗಿತ್ತು.ಬಡಿತದ ಶಬ್ದ ಕಿವಿಗಪ್ಪಳಿಸಿ ನಗುತ್ತಿತ್ತು.ಆದರೆ ಅವ ಮಾತ್ರ ಎನು ಆಗೆಯಿಲ್ಲ ಎಂಬಂತೆ ಇದ್ದ.ಆದರೆ ಜೇನಹೀರಿದ ಸುಖವ ಮೆಲ್ಲುತ್ತಿದ್ದ.ಕುಡಿಮೀಸೆಯಂಚಿಂದ ಕಿರು ನಗೆ ಮಾತ್ರ ನನ್ನ ಛೇಡಿಸುತ್ತಿತ್ತು.ನಾಳೆ ಸಿಗತಿಯಾ? ಎಂದು ನನ್ನ ಕರಗಳ ಹಿಡಿದು ಕೇಳಿದ.ನಾಳೆನಾ? ಯ್ಯಾಕೆ? ಎನಿಲ್ಲ...ನನಗೂ ಪ್ರಥಮ ಅನುಭವ.ಪ್ರೀತಿ,ಪ್ರೇಮದ ಬಗ್ಗೆ ಅರಿವಿಲ್ಲ ಅದಕ್ಕೆ ಅಂದ. ನಾನು ಅಂದ್ರೆ ನಾನು ಅನುಭವಸ್ಥಳಾ? ಎನು ನಿನ್ನ ಮಾತಿನ ಅರ್ಥ? ಸುಕುಮಾರ. ಅಯ್ಯೋ ಪೆದ್ದಿ ನಾನು ಆ ಅರ್ಥದಲ್ಲಿ ಹೇಳಿಲ್ಲ.ನಿನ್ನ ಇಂಚಿಂಚು ಬಲ್ಲೆ ನಾನು? ನಿನ್ನ ಆಸು ಪಾಸು ನನ್ನ ಹೊರತು ಬೆರಾರು ಬರದಂತೆ ಕಾವಲಿದ್ದವನು ಕಣೇ ಗಿರಿ. ಅನ್ನುತ್ತ ಕಿವಿಯಲಿ ಬಿಸಿಯಿಸಿರಿಂದ ಉಸುರಿದ.ಪ್ಲೀಸ್ ಬಾರೆ ತುಂಬಾ ಮಾತಾಡಬೇಕು....ಸರಿಯೆಂದು ತಲೆಯಲ್ಲಾಡಿಸಿದೆ.
ಇವನ ಕಂಡರೆ ಎಲ್ಲರೂ ಇಷ್ಟ ಪಡುವವರೆ. ಹುಡುಗಿಯ ರಂತೂ ಮುಗಿಬೀಳುವುದು ನನಗೆ ಇಷ್ಟವಿರಲಿಲ್ಲ. ಆದರೆ ನನ್ನ ಇಷ್ಟ ಪಡುವ ಸುದ್ದಿ ಗೊತ್ತಾದರೆ ನಾ ಸತ್ತೆ ಅಂದುಕೊಳ್ಳುತ್ತ ಸುಮ್ಮನಾದೆ.ಯಾಕೆಂದರೆ ಅವನೆಲ್ಲಿಯು ನನ್ನ ಬಗ್ಗೆ ಹೇಳಿರಲಿಲ್ಲ.ಅವನ ಕಣ್ಣೋಟ ಮಾತ್ರ ನನ್ನ ಸುತ್ತನೇ ಇರುತ್ತಿತ್ತು.ಕಾರಣ ನಾನು ಅಷ್ಟೊಂದು ಸುಂದರವಾಗಿಲ್ಲ ದಿರುವುದು ಅವನಿಗೆ ಉಪಯಪಗವಾಗಿತ್ತು.ನನ್ನ ಇಷ್ಟ ಪಡುವವರಾರು ಇಲ್ಲ.ಅದರಲ್ಲಿ ಇವ ನನ್ನ ಬಯಸುವುದು ಯಾರು ನಂಬುವಂತ ಸತ್ಯವಾಗಿರಲಿಲ್ಲ.ನಾನು ಹೇಳಿದರೂ ನಂಬುವವರಾರು ಇಲ್ಲ. ಸುಮ್ಮನಾಗಿದ್ದೆ.
ಮನೆಗೆ ಬಂದರೂ ನೆಮ್ಮದಿಯಿಲ್ಲ.ಕಣ್ಣು ಮುಚ್ಚಿದರೆ ಸಾಕು ಅವನ ಪ್ರತಿಬಿಂಬ ಕಣ್ಮುಂದೆ.ಎತ್ತರ ನಿಲುವಿನ ಅಪ್ಪುಗೆಯಲಿ ನಾನು ಕಾಣಿಸಲೇ ಇಲ್ಲ.ಅವನ ಸ್ಪರ್ಶ ಮರೆಯಲಾರದಂತ ಹುದು.ಬೆಳಗು ತಡವಾಗಿದ್ದಕ್ಕೆ ರವಿಯ ಬೈದದ್ದೆ ಬಂತು.ಅವ ಬರುವ ಮೊದಲೇ ಹೋಗಿ ಕುಳಿತಿದ್ದೆ.ಕಾದು ಕಾದು ಸುಸ್ತಾಗಿ ಇನ್ನೆನು ಬರುವಿದಿಲ್ಲವೆಂದು ತಿಳಿದು ಸಿಟ್ಟಿನಿಂದ ಹೊರಟೆ. ನನ್ನಂತವಳಿಗೆ ಇದೆಲ್ಲ ಅಲ್ಲ ಅದೇನೋ ತಮಾಷೆಗೆ ಹಾಗೆ ಮಾಡಿರಬಹುದಾ? ಅದನ್ನು ನಾನು ಖರೇ ಅಂತ ಭಾವಿಸಿದ್ದೆನಾ? ಛೇ...ಎಂತ ತಪ್ಪು ಕೆಲಸವಾಯಿತು.ನಂಬಿ ಬಂದು ಬಿಟ್ಟೆನಲ್ಲ.ನನ್ನ ಬುದ್ದಿಗಿಷ್ಟು..ಎಂದುಕೊಳ್ಳುತ್ತಲೇ ಎದ್ದೆ
ಹಲೋ...ಗಿರಿ...ಎಂದು ಕರೆದಂತಾಗಿ ತಿರುಗಿದರೆ ಅದೇ ಸುಖು.ನನಗೆ ಕೋಪ..ಮಾತಾಡಬೇಡ ನೀನು.ಬೈ ಬರತೀನಿ. ಒಟ್ಟಿನಲ್ಲಿ ನಾನೊಂದು ಬಕ್ರಾ ಸಿಕ್ಕೆಅಂತ ಹೀಗೆ ಮಾಡಿದೆ ಅಲ್ಲಾ..ಅನ್ನುವಾಗಲೇ ಕಣ್ಣೀರು ನನಗೆ ಗೊತ್ತಿಲ್ಲದೇ ಜಾರಿತ್ತು. ಸಾರಿ..ನನಗೆ ಮರೆತು ಹೋಗಿತ್ತು. ನೆನಪಾಗಿದ್ದೆ ಓಡಿ ಬಂದಿರುವೆ.ಕೋಪ ಬೇಡ.ಬಾ ಎಂದು ಕೈ ಹಿಡಿದು ಕಲ್ಲು ಹಾಸಿನ ಮೇಲೆ ಕುಳ್ಳಿಸಿದ.ನಿನಗೂ ಕೋಪ ಬರುತ್ತೆ ಅನ್ನು. ಎಲ್ಲಿ ನೋಡೋಣ ನಿನ್ನ ಹೃದಯ ಬಡಿತ ನನಗಿಂತ ಜೋರಾಗಿ ಬಡಿದಂತಿದೆ ಎನ್ನುತ್ತಾ,ಹತ್ತಿರ ಎಳೆದು ಕೊಂಡು ಎದೆಗೆ ಕಿವಿಯಾಣಿಸಿದಂತೆಲ್ಲ ಕೈಕಾಲು ಸ್ವಾದ ಕಳೆದು ಕೊಂಡಂತಾಗಿ ಅವನ ಬಾಹುವಿನಲ್ಲಿ ಒರಗಿದೆ.ಅಲ್ಲೊ ನಿನಗೆ ತುಂಬಾ ಫ್ಯಾನುಗಳಿದ್ದಾರೆ.ನನ್ನ ಇಷ್ಟ ಪಡುವುದು ಸರಿಯಾ?
ನೋಡು ದುಂಬಿ ಹೂವಿನಿಂದ ಜೇನಹೀರುತ್ತದೆ ಹೊರತು ಕಸದಿಂದಲ್ಲ. ಸರಿ ಬೇಟಿಯಾದೆವಲ್ಲ.ಬರಲಾ ಅಂದೆ.ಇನ್ನು ನಾನು ಮಾತೆ ಆಡಿಲ್ಲ ಆಗಲೇ ಹೊರಟಿಯೆಂದರೆ ಎನರ್ಥ? ನಾನು ಬೇಡವಾ? ಎಂದು ಕೇಳುವ ಅವನ ಮುದ್ದು ಮುಖ ನೆನೆದರೆ ದಿನ ಹೀಗೆ ಕಳೆದು ಹೋಗಬಾರದಾ? ಅನ್ನಿಸದಿರಲಿಲ್ಲ ಮನದಲಿ ಒಂದು ಪ್ರಶ್ನೆ ಕಾಡುತ್ತಿತ್ತು.ನಿಜವಾಗಲೂ ನನ್ನ ಪ್ರೀತಿಸುವನೇ? ಹೇಳುತ್ತಿಲ್ಲ..ಹೇಗೆ ಕೇಳಲಿ? ಎಲ್ಲರೂ ಅವನ ಸಂಗ ಬಯಸಿದರೆ,ಇವನ ಬದ್ರಕೋಟಯಲ್ಲಿ ನಾನು. ವಿಚಿತ್ರ ವಾದರೂ ನಿಜ.ನೋಡು ಗಿರಿ ನನ್ನ ಹೊರತು ಇನ್ಯಾರನ್ನು ನೀನು ಕಣ್ಣೆತ್ತಿಯು ನೋಡಬಾರದು.ನೀನು ನನ್ನ ಸೊತ್ತು.ನಿನ್ನ ಪ್ರೀತಿಸುವ ಹಕ್ಕು ನನ್ನೊಬ್ಬನದೇ ತಿಳಿತಾ?.. ಎನ್ನುವಾಗೆಲ್ಲ ಅಬ್ಬಾ.....ಅಧ್ಬುತ ಪ್ರೀತಿ.ಹೂಂ ಕಣೋ ಎಂದು ಎದೆಗೊರಗಿ ಮೌನವಾದೆ...ಪ್ರೀತಿಯೇ ನೀನು ಕೈ ಬೀಡಬೇಡ ನಿನ್ನ ನಂಬಿರುವೆ...ಎಂದಿದ್ದು ಅವನಿಗೆ ಕೇಳಿಸಿತೋ ಇಲ್ಲೊ ಗೊತ್ತಿಲ್ಲ. ಮರೆಯಾಗಿ ಹೋದವನು ಮತ್ತೆ ಬರಲೂ ಇಲ್ಲ.ಚಿತ್ತ ದಲ್ಲಿ ನಿಲ್ಲಲೂ ಇಲ್ಲ.ಹೀಗೇ ಆಗುವುದೆಂದು ಉಹಿಸಿರಲಿಲ್ಲ. ಅವನರಿಯುವುದು ಗೋಸುಂಬೆಯ ಅರಿತಂತೆ.ಕೊನೆಗೂ ಅವನು ಅರ್ಥವಾಗಲಿಲ್ಲ.ನನ್ನ ಮರೆತನೆನೋ ಎಂಬುದು ಗೊತ್ತಿಲ್ಲ.....
ಶಿವಲೀಲಾ ಹುಣಸಗಿ ಯಲ್ಲಾಪುರ
9448589566
Comments
Appreciate the author by telling what you feel about the post 💓
ಮನದಲ್ಲಿ ಅನಿಸುವ ಭಾವನೆಗಳು ಓದುಗರ ತಲುಪುತ್ತದೆ ಎನ್ನುವುದೇ ಖುಷಿ....
Please Login or Create a free account to comment.