ನಮ್ಮೊಳಗಿನ ಸಾಧುಗಳು

ನಮ್ಮ ನಾವು ಅರಿಯುವುದು ಮುಖ್ಯ.

Originally published in kn
Reactions 0
608
shivaleelahunasgi@gmail.com
shivaleelahunasgi@gmail.com 01 Oct, 2020 | 1 min read



ನಮ್ಮೊಳಗಿನ ಸಾಧುಗಳು.....

ಒಬ್ಬ ಸಾಧು ಭಿಕ್ಷಾಟನೆ ಮಾಡುತ್ತಾ ಒಂದು ಹಳ್ಳಿಯ ಬಡ ರೈತನ ಮನೆ ಮುಂದೆ ನಿಂತು ಭಿಕ್ಷೆ ಹಾಕಲು ವಿನಂತಿಸಿದ. ಮನೆಯೊಳಗಿಂದ ಬಂದ ಗೃಹಿಣಿ ತೇಜಸ್ವಿಯಾದ ಸಾಧು ಗಳನ್ನು ಕಂಡಿದ್ದೆ ಸಾಕ್ಷಾತ್ ಭಗವಂತನೇ ತಮ್ಮ ಮನಿ ತನಕ ಬಂದಂತೆ ಹಿಗ್ಗಿ.ಪತಿಯನ್ನು ಕರೆದಳು.ಎಷ್ಟೋ ವರುಷಗಳ ತಪಸ್ಸಿನ ಫಲವೋ, ನಮ್ಮ ಸೌಭಾಗ್ಯವೋ ಎನ್ನುತ್ತ ತಲಿ ಮ್ಯಾಲೆ ಸೆರಗ ಹೊದ್ದು ಆ ಮಹಾತ್ಮನ ಪಾದಕ್ಕೆ ದಂಪತಿ ಗಳಿಬ್ಬರು ನಮಿಸಿದರು. ಬನ್ನಿ ಸ್ವಾಮ್ಯಾರಾ..ಎನ್ನುತ್ತ ಮನಿ ಯ ಪಡಸ್ಯಾಲಿ ಮ್ಯಾಲೆ ಚಾಪಿ ಹಾಸಿದರು.ಸಾಧು ಅವರ ಇಚ್ಚೆಯಂತೆ ನಸುನಗುತ್ತ ಕುಳಿತರು.ದಂಪತಿಗಳು ಸೇವಾ ಮಾಡಲು ಶೃದ್ದಾ ಭಕ್ತಿಯಿಂದ ಮುಂದಾದರು,ಇವೆಲ್ಲದರ ದಾಕ್ಷಿಣ್ಯತೆಗೆ ಒಳಗಾಗದ ಆತ್ಮ ಸಾಧುವುದು.

ತಕ್ಷಣ ಸಾಧು ಪುರುಷರು ಆ ದಂಪತಿಗಳಿಗೆ ನಮಸ್ಕರಿಸಿ ಮಹಾನುಭಾವರೇ ನಿಮ್ಮ ನಿರ್ಮಲ ಪ್ರೀತಿಗೆ ಶರಣು.

ನನಗೆ ಊಟೋಪಚಾರವೇನು ಬೇಡ.ನಿಮ್ಮಆಧರಾಥಿತ್ಯ ಕ್ಕೆ ಬೆಲೆ ಕಟ್ಟಲಾರೆ.ನಿಮ್ಮ ಕೈಯಿಂದ ಒಂದು ಹಿಡಿ ಅಕ್ಕಿ ಕೊಡಿ ಸಾಕು ಅಂದರು.ದಂಪತಿಗಳಿಗೆ ಮನದಲ್ಲಿ ದುಃಖ. ನಮ್ಮ ನೈಜ ಪರಿಸ್ಥಿತಿ ಅರ್ಥವಾಯಿತೇನೋ.ಮಳೆಯನ್ನೇ ನಂಬಿರುವ ನಾವು ಬೆಳೆಯ ಕಾಣದೇ ತಣ್ಣೀರಿನ ಬಟ್ಟೆಯ ಹೊಟ್ಟೆ ಮೇಲೆ ಹೊದ್ದರೂ,ಆತ್ಮಬಲ ಕುಗ್ಗಿಲ್ಲ. ಮನೆಯ ಯಾವ ಡಬ್ಬಿಯಲ್ಲೂ ದವಸ ಧಾನ್ಯಗಳಿಲ್ಲ.ಕೈಗಡದಿಂದ ತಂದ ಅಕ್ಕಿ ಮೂಟೆ ಮಾತ್ರ ಸದ್ದಿಲ್ಲದೆ ಕರಗುತ್ತಿದೆ.ಗಂಜಿಗೆ ಉಪ್ಪಿನಕಾಯಿಯ ಜೋಡು.ಹೀಗಿರುವಾಗ ಪಾಪ ಸಾಧು ಗಳಿಗೆ ಏನು ಮಾಡಲಾಗುತ್ತಿಲ್ಲವಲ್ಲ ಕೊಳ್ಳುತ್ತಿರುವಾಗಲೇ ಸಾಧುರವರು ಅಮ್ಮಾ... ನಾನಿನ್ನು ಹೊರಡಲೇ..ಎಂದಾಗ ದೌಡಾಯಿಸಿ ಒಳಗೊಡಿ ಹಿಡಿಯಕ್ಕಿಯನ್ನು ಅವರ ಜೋಳಿ ಗೆಗೆ ಹಾಕಿ ಅಂತರಂಗದಲ್ಲಿ ಕ್ಷಮಿಸೆಂದು ಕೈ ಮುಗಿದರು. ಸಾಧು ಭಿಕ್ಷೆ ಸ್ವೀಕರಿಸಿ,ಮನದುಂಬಿ ಹಾರೈಸಿದ ನಿಮ್ಮ ಮನೆಯಲ್ಲಿ ಧನ ಕನಕಗಳ ವೃದ್ದಿಯಾಗಲಿ ಎಂದು ಹರಸಿ ಮುನ್ನಡೆದರು.

ಹೀಗೆ ಮುಂದೆ ಸಾಗಿದ ಸಾಧು...ಸ್ಥಿತಿವಂತ ಕುಟುಂಬದ ಮನೆ ಮುಂದೆ ನಿಂತು ಭಿಕ್ಷೆ ಬೇಡಿದಾಗ ಆ ಮನೆಯ ಯಜ ಮಾನ ಊಟಮಾಡುತ್ತಿದ್ದ ಸಂದರ್ಭ.ಭಿಕ್ಷೆ ಬೇಡಲು ಬಂ ದವರಾರೆಂದು ನೋಡಲು ಬಂದ ಯಜಮಾನಿ ಸಾಧುವ ನ್ನು ನೋಡಿ.ದುರುಗುಟ್ಟುತ್ತಲೇ ಮನೆಯಲ್ಲಿ ಯ್ಯಾರು ಇಲ್ಲ ಮುಂದೆ ಹೋಗಿ,ಹೊತ್ತಿಲ್ಲದ ಹೊತ್ತಲ್ಲಿ ಬೇಡಾಕ ಬರತಾರ, ಕೊಡತಾರಂತ ಗೊತ್ತಾದರ ಸಾಕು,ಮನಿಮುಂದ ಸಾಲಗ ಟ್ಟಿ ನಿಲ್ಲತಾವು.ಎಂದು ಗೋಣಗುತ್ತಾ ಮುಂಬಾಗಿಲು ಜಡಿ ದಳು.ಮನೆ ತುಂಬ ಧಾನ್ಯಗಳಿದ್ದರೂ ಒಂದು'ಹಿಡಿ' ಕೊಡು ವಷ್ಟು ಉದಾರತೆ ಅವರದಾಗಿರಲಿಲ್ಲ.ಸಾಧು ನಸು ನಕ್ಕು ದೈವ ಇಚ್ಛೆ ಇದ್ದಂತಾಗಲಿ.ಮುಚ್ಚಿದ ಬಾಗಿಲು,ತುಂಬಿತುಳು ಕುವ ಧಾನ್ಯಗಳು.ಎಲ್ಲರಿದ್ದರೂ' ಯ್ಯಾರು ಇಲ್ಲವೆಂದು' ನುಡಿಸಿದ ನಾಲಿಗೆಯ ಮರ್ಮ ಬಲ್ಲವರಾರು? ಅವರಂತ ರಾಳದಿಂದ ಬಂದ ಮಾತುಗಳಿಗೆ,ಮನದಿಂಗಿತಗಳಿಗೆ ಮರುಮಾತಾಡದೇ ಮುಂದೆ ಸಾಗಿದ. 

ಸಮಯ ಯಾರಿಗಾಗಿ ನಿಂತಿದೆ ಹೇಳಿ? ಕಾಲಚಕ್ರ ತಿರುಗಿ ದಂತೆ.ಯಾವ ಬಡ ರೈತ ಕುಟುಂಬ ಸಂಕಷ್ಟದಲ್ಲೂ ತನ್ನ ಸೇವಾ ಧರ್ಮ,ಕರ್ಮ ಬಿಡಲಿಲ್ಲವೋ ಆ ವರ್ಷದಲ್ಲಿ ಅವರು ಹಿಂದೆಂದೂ ಕಾಣದ ಧವಸ ಧಾನ್ಯ ಹೊಲದಿಂದ ಮನೆಯಂಗಳದ ಕಣಜ ತುಂಬಿದ್ದವು.ರೈತನ ಪತ್ನಿಗೆ ಆ ಸಾಧು ಮಹಾಪುರುಷನನ್ನು ಮನದಲ್ಲಿ ನೆನೆದಷ್ಟು ಕಡಿಮೆ ಯೆನಿಸಿತು.ನಮ್ಮ ಮನೆಗೆ ಆಗಮಿಸಿ,ವಿಶ್ರಮಿಸಿ ಬರಿ ಒಂ ದು ಮುಷ್ಠಿ ಅಕ್ಕಿ ಪಡೆದವರು.ಜೀವನದುದ್ದಕ್ಕೂ ಅನುಭವಿ ಸಿದ ಕಷ್ಟಕ್ಕೆ ಸಂಜೀವಿನಿಯತೆಯೇ ಹರಸಿದ ಮಹಾನುಭಾ ವರ ಪಾದ ಸ್ಪರ್ಶ ಸಿಕ್ಕಿದ್ದು ನಮ್ಮ ಪುಣ್ಯವೆನಿಸಿತ್ತವರಿಗೆ. ಬೇಡಿ ಬಂದವರಿಗೆ ಇಲ್ಲವೆನ್ನದೇ,ಇದ್ದುದರಲ್ಲೆ ಹಂಚಿ ತಿನ್ನು ವುದು.ಹಸಿದೊಡಲಿಗೆ ತುತ್ತು ನೀಡುವ ಬಲ ತುಂಬಿದವ ರನ್ನು ಹೆಜ್ಜೆ ಹೆಜ್ಜೆಗೂ ನೆನೆಯುತ್ತ ಕಾಯಾ,ವಾಚಾ,ಮನಸಾ ಬೆಳೆಸಿಕೊಂಡು ಕಾಯಕವನ್ನು ಆತ್ಮಕ್ಕೆ ಸಮರ್ಪಿಸಿದರು.

ಅತ್ತ..ಬಾಗಿಲು ಮುಚ್ಚಿದ ಕುಟುಂಬ ಯ್ಯಾರಿಗೂ ಹೇಳಲಾ ಗದ ಸ್ಥಿತಿಯನ್ನು ಒಳಗೊಳಗೆ ಅನುಭವಿಸುತ್ತ,ಮನೆಯಲ್ಲಿ ಎಲ್ಲರೂ ಒಂದಿಲ್ಲೊಂದು ಕಾರಣದಿಂದ ಬೇರೆಯಾಗಿ ಆ ಮನೆ ಬೀಕೋ ಎನ್ನುವಂತಾಗಿತ್ತು.ಆಸ್ತಿಗಳು‌ ಹಂಚಿಕೆಯಾ ಗಿ,ಮನೆಯಜಮಾನ ಬರಿದಾದ ಮನೆಯ ಮುಂಬಾಗಿಲ ಮುಚ್ಚಿ ಬೀದಿಗೆ ನಿಂತಾಗಿತ್ತು.ಆ ಮನೆಯ ಋಣವು ತೀರಿ ದಂತೆಲ್ಲಾ,ಅಲ್ಲಿ ಬಂದು ಹೋಗುವವರಿಗೆ ಆ ಮನೆಯಲ್ಲಿ ಯ್ಯಾರು ವಾಸಮಾಡುವುದಿಲ್ಲ ಎಂಬ ಸತ್ಯ ಬೇಡವೆಂದ ರೂ ಗೋಚರಿಸುತ್ತಿತ್ತು.ಹಿಂದೆ ಕಟ್ಟಿದ ಮಹಲು ಭಗ್ನಗೊಂ ಡು ನಿಂತ ಕ್ಷಣವು,ಅವರು ಪಡೆದು ಕೊಂಡು ಬಂದ ಕರ್ಮ ದ ಫಲ ಅವರ ಮುಂದಿತ್ತು.ಆಡುವ ನಾಲಿಗೆ,ನುಡಿಸುವ ಮನ ಐಕ್ಯಗೊಳ್ಳದೇ ಅದು ಚಂಚಲತೆಯೆಂಬ ಸಾಗರಕೆ ಮಾರು ಹೋದಂತೆ.ದಡ ಸೇರಬಹುದೆಂಬ ಊಹೇ ನಿಷ್ಪ್ರಯೋಜಕ. ಒಂದು ಕ್ಷಣ ಯೋಚಿಸುವ ಬುದ್ದಿ ಕೈ ಕೊಟ್ಟ ಮೇಲೆ ಮುಂದೇನು? ಚಿಂತಿಸಿ ಪ್ರಯೋಜನವಿಲ್ಲ.

ಬದುಕು ನಶ್ವರವೆಂಬ ಸತ್ಯ ಎಲ್ಲರಿಗೂ ಗೊತ್ತಿದ್ದರೂ,ನಾನು ನನದೆಂಬ ವ್ಯಾಮೋಹದಿಂದ ಹೊರಬರುವ ಗೋಜಿಗೆ ಯಾರು ಹೋದಂತಿಲ್ಲ.ಅವೆಲ್ಲ ಮುಖವಾಡದ ಹಿಂದಿರುವ ನಗ್ನಸತ್ಯಗಳು.ಯಾರಿಗೂ ಬೇಡ.ಭಗವಂತನ ಆರಾಧನೆ, ದಿನ ನಿತ್ಯ ಸಾಗಿದರು ಕಾಯಕದಲ್ಲಿ ಭಗವಂತನ ಹುಡುಕು ವ ಕಾರ್ಯ ಮಾತ್ರ ಮಂದಗತಿಯಲ್ಲಿ ಸಾಗಿರುವುದು ಸತ್ಯ. ಆತ್ಮ ಸಾಕ್ಷಾತ್ಕಾರದ ಗಡಿಯ ದಾಟದೆ ಒದ್ದಾಡುವ ಆತ್ಮಗ ಳ ಕಂಡು ಕಾಣದಂತೆ ಮರೆಯಾದ ಸೂರ್ಯನ ಹಿಡಿದಿಟ್ಟ ವರುಂಟೇ? ಬೆಳಿಗ್ಗೆ ಅರಳಿ ಸಂಜೆ ಬಾಡುವ ಹೂವಿನ ಜೀವನೋತ್ಸಹದ ಮುಂದೆ ನಮ್ಮ ಬದುಕು ಸುಮ್ಮನೆ ವ್ಯರ್ಥವಾಗುವುದು ಎಷ್ಟು ಸರಿ?

ಇಲ್ಲಿ ಮನೆಗೆ ಬಂದವ ಸಾಧು ನೆಪ ಮಾತ್ರ.ನಮ್ಮೊಳಗಿರು ವ ದ್ವಂದ್ವಾರ್ಥಗಳು,ಕೀಳಿರಿಮೆಗಳು,ನಾನು ನೀನೆಂಬ ವ್ಯೂಹದಲಿ,ಹಗ್ಗ ಜಗ್ಗಾಟದಲಿ,ನೈಜತೆಯ,ಮಾನವೀಯತೆ ಯ ಮರೆತವರಿಗೆ,ಅಹಂ ನ ಪರಮಾವಧಿಯ ದಾಟಿದವರಿ ಗೆ ಭಗವಂತ ಯಾರಿಗೆ ? ಯಾವಾಗ? ಎಲ್ಲಿ? ಯಾವ ಕ್ಷಣ ದಲಿ? ಪರೀಕ್ಷೆ ಬರೆಯಬೇಕೆಂಬುದು ಸಂಕಲ್ಪ ಅವನಿಚ್ಛೆ. ಹೀಗಿರುವಾಗ,ನಮ್ಮ ಸತ್ ಕರ್ಮಗಳು, ಸನ್ ಮಾರ್ಗಗ ಳು ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಗಳು. ಮನದ ಆಚಾರ,ವಿಚಾ ರಗಳು, ನಡತೆಗಳು.ನಮ್ಮೊಳಗಡಗಿರುವ ಅರಿಷಡ್ವರ್ಗಗ ಳು ಮನೆಯ ಸಂಸ್ಕೃತಿಗಳ ಮೇಲೆ ಪ್ರಭಾವ ಬೀರುತ್ತದೆ. ಅಂಥ ಮನೆಯಂಗಳದಲ್ಲಿ ಬೆಳೆದ ಕಸವು ಭಗವಂತನಿಗೆ ಸಮರ್ಪಿತ.ಕಾರಣ ಸತ್ಯಾಂಶಗಳು.

ಸನ್ಮಾರ್ಗ,ಮೌಲ್ಯಗಳು,ಹೃದಯ ವೈಶಾಲ್ಯತೆಗೆ ಪ್ರತಿಬಿಂಬ. ದಾನಿಗಳೆಂದರೆ ಎಂಥವರು? ದಾನ ಮಾಡುವುದು ಅಷ್ಟು ಸುಲಭವಾ? ಅದಕ್ಕೆ ಸಜ್ಜುಗೊಳ್ಳದೇ ಆಡಂಬರದ ದಾನ ದೈವ ಸ್ವೀಕರಿಸುವುದೇ? ಇಂಥ ಸಂದರ್ಭದಲ್ಲಿ ನಮ್ಮ ಸ್ಮೃ ತಿ ಪಟಲದಲ್ಲಿ ಅಚ್ಚಳಿಯದೆ ಇತಿಹಾಸದ ಪುಟಗಳಲಿ ಸುವರ್ಣಕ್ಷರದಲಿ ನೆಲೆ ನಿಂತ ದಾನಿಗಳು ಹಾದು ಹೋಗದೆ ಇರರು.ದಾನ ಶೂರ ಕರ್ಣ,ರಾಜ ಹರಿಶ್ಚಂದ್ರ,ಬಲಿ ಚಕ್ರವ ರ್ತಿ,ಹೀಗೆ ಅನೇಕ ದಾನಿಗಳು ದಾನದ ಮಹತ್ವಕ್ಕೆ ಉತ್ತರ ವಾಗಿ ನಿಂತಿರುವರು.

ಕಾಯಕದಲ್ಲಿ ಕೈಲಾಸ ಕಾಣೆಂದ ಜಗಜ್ಯೋತಿ ಬಸವೇಶ್ವರ ರು ಸಾಕ್ಷಿಯಾಗುವರು.ದಾನ ಮಾಡುವವನ ಮನಸ್ಸು  ‌‌‌ಮೋಹದಿಂದ ಮೊಕ್ಷ ಪಡೆದಿರಬೇಕು.ಆಸೆ ಆಮಿಷಗಳಿಗೆ ಬಲಿಯಾಗದೇ ದೇಹ ದಂಡಿಸುತ ಕಾಯಕದಲಿ ಸುಖವ ಕಾಣುವ ಯೋಗಿಯಾಗಿರಬೇಕು.ಸತ್ಸ‌ಂಗದಲ್ಲಿ ಬದುಕನ್ನು ಹೆಣೆಯುವತ್ತ ನಿರ್ಮಲ ಚಿತ್ತವಿರಬೇಕು.ಕಾಯದಲ್ಲಿ ಸೂರ್ಯನೋರ್ವನೇ ಜಗದ ಶಕ್ತಿಯಾದಂತೆ.ಜಗದೊಳಿ ದ್ದು ಇಲ್ಲದಂತೆ.ಬಲಗೈ ದಾನ ಎಡಗೈಗೆ ಗೊತ್ತಾಗದಂತೆ.

ಎಲ್ಲ ಗೊತ್ತಿದ್ದರೂ ನಿಭಾಯಿಸಲಾಗದೇ ಒದ್ದಾಡುವ ಚಂಚ ಲ ಸ್ವಭಾವದವರನ್ನು.ಎಲ್ಲಿಯೂ ಸಲ್ಲದ ಅಲೆಮಾರಿಗಳ ನ್ನು.ಹೇಳುವುದೆಲ್ಲ ನಿರರ್ಥಕವೆಂದು ಟೀಕಿಸುವವರನ್ನು, ಕೊಟ್ಟು ಹಂಗಿಸುವವರನ್ನು,ಸಾಕಿ ಸಲಹುವ ಮನೆಯೆಂಬ ದೇಹವ ಪರಿವರ್ತಿಸುವ ಹೆಬ್ಬಾಗಿಲಿಗೆ ಕೀಲಿ ಜಡಿದು. ಮರೆಯುವ ಕುಬ್ಜ ಮನಕೆ ದಾರಿ ತೋರುವವರಾರು? ಬಡತನ,ಸಿರಿತನದ ನಡುವೆ ಕಂದಕವ ನಿರ್ಮಿಸಿ ಆಹುತಿ ಯ ನೀಡುತ ಅವನತಿಯ ಬರಮಾಡಿಕೊಳ್ಳುವ ಕುರುಡು ಜೀವವ ಎಚ್ಚರಿಸಲು ಹೃದಯ ದೀವಿಗೆಯ ಹಿಡಿದು ಬಂದ ನಮ್ಮೊಳಗಿನ ಸಾಧು ಸಾಮಾನ್ಯನಲ್ಲ.ಅಕ್ಷಿಗಂಟಿದ ಪೊರೆ ಯ ಸರಿಸಿ,ಮನದ ಮುಂಬಾಗಿಲಿಗೆ ಬರುವ ಸಾಧುಗಳೆಂ ಬ ಅದೃಷ್ಟಗಳ ಒಲಿಸಿಕೊಳ್ಳುವ ದೃಢವಾದ ಸಂಕಲ್ಪ ನಮ್ಮ ದಾದರೆ ಒಳಿತಲ್ಲವೇ......

ಶಿವಲೀಲಾ ಹುಣಸಗಿ ಯಲ್ಲಾಪುರ

ಉತ್ತರ ಕನ್ನಡ ಕರ್ನಾಟಕ

9448589566

shivaleelahunasgi@gmail.com

0 likes

Published By

shivaleelahunasgi@gmail.com

shivaleelahunasgigmailcom

Comments

Appreciate the author by telling what you feel about the post 💓

  • Deepak Shenoy · 4 years ago last edited 4 years ago

    ಅರ್ಥಪೂರ್ಣವಾಗಿದೆ

Please Login or Create a free account to comment.