ಜೀವನದ ಸತ್ಯ ಕಥೆ

ಜೀವನ ಕೊಡೋದು ಬೇರೆ ನಾವು ಬಯಸೋದು ಬೇರೆ

Originally published in kn
Reactions 0
564
Sana kousar
Sana kousar 05 May, 2022 | 1 min read

ಒಂದು ಪುಟ್ಟ ಮನೆಯಲ್ಲಿ ,ರಾಜ ರಾಣಿ ಮತ್ತೆ ರಾಣಿ ತಾಯಿ ವಾಸ ಮಾಡುತಿದ್ದರು.ರಾಜನಿಗೆ ಯಾವ ಕೆಲ್ಸನು ಮಾಡಕ್ಕೆ ಬರ್ತಾ ಇರ್ಲಿಲ್ಲ.ಊಟ ಮಾಡಿ ತಿರ್ಗೋದೆ ಅವನ್ ಕೆಲಸ.ಸುಮಾರು 3 ವರ್ಷದ ನಂತರ ಅವರ ಜೀವನದಲ್ಲಿ ಪುಟ್ಟ ರಾಜಕುಮಾರಿ ಬಂದಳು. ಹಂಗು ಹಿಂಗು ಆ ರಾಜ ಯಾವುದೋ ಒಂದು ಕೆಲಸ ಮಾಡ್ತಿದ್ದ. ಆ ರಾಜಕುಮಾರಿಗೆ 6 ತಿಂಗಳು ಆಗಿತ್ತು ಆಗ ರಾಣಿಗೆ ಜ್ವರ ಬಂತು. ಆ ರಾಜಕುಮಾರಿಗೆ ಹಾಲು ಕುಡಿಸೊದು ಬಿಡಿಸಿ ರಾಣಿಯಿಂದನೂ ದೂರ ಇಡಬೇಕಾಯಿತು. 3 ತಿಂಗಳ ನಂತರ ರಾಣಿಗೆ ಹುಷಾರಾಯಿತು. ಯಾವ ರೀತಯಿಂದಲೂ 3ವರ್ಷ ಕಳೆಯಿತು.ಒಂದು ಪುಟ್ಟ ರಾಜಕುಮಾರನೂ ಅವರ ಜೀವನದಲ್ಲಿ ಬಂದ. ಆದ್ರೂ ಅವರ ಜೀವನದಲ್ಲಿ ಏನೂ ಬದಲಾವಣೆ ಆಗಿಲ್ಲ. ಹೀಗೆ ಮತ್ತೆ 3 ವರ್ಷ ಕಳೆಯಿತು. ನಂತರ ಅವರ ಜೀವನದಲ್ಲಿ ಇನ್ನೋಬ್ಲು ರಾಜಕುಮಾರಿ ಬಂದಳು.ಆಗ ಅವರ ಜೀವನ ಬದಲಾಯಿತು. ನಿಜ ಅಂದ್ರೆ ಅವರ ಜೀವನಾನೇ ಆವಾಗ ಪ್ರಾರಂಭವಾಯಿತು. ರಾಜ ರಾಣಿ ಇಬ್ಬರಿಗೂ ಒಳ್ಳೆ ಕೆಲಸ ಸಿಕ್ಕಿತು. ಆಗ ಮೋದಲ್ನೆ ರಾಜಕುಮಾರಿ 1st std. ಆಮೇಲೆ ರಾಜ 2nd std. ಚಿಕ್ಕ ರಾಜಕುಮಾರೀನಾ ಎಲ್ರೂ ತುಂಬಾ ಮುದ್ದು ಮಾಡ್ತಾ ಇದ್ರು. ರಾಜನಿಗೆ ಕೆಲ್ಸ ಸಿಕ್ಕಿದ ನಂತರ ರಾಣಿಗೆ ಕೆಲ್ಸ ಬಿಟ್ಟು ಆತನ ಜೊತೆ ಪಟ್ಟಣಕ್ಕೆ ಹೋಗಬೇಕಾಯಿತು.ರಾಜ,ರಾಣಿ,ರಾಜಕುಮಾರ ಮತ್ತೆ ಆ ಚಿಕ್ಕ ರಾಜಕುಮಾರಿ ಜೊತೆಗೆ ಹೋದ್ರು. ಆ ದೊಡ್ಡ ರಾಜಕುಮಾರಿನಾ ಅವಳ ವಿದ್ಯಾಭ್ಯಾಸ ಹಾಳು ಮಾಡೋದು ಬೇಡ ಅಂತ ಅವಳಿಗೆ ಅವರ ಅಜ್ಜಿ ಹತ್ರ ಬಿಟ್ರು. ಆ ರಾಜಕುಮಾರಿಗೂ ಅವರ ಅಪ್ಪ ಅಮ್ಮನಕ್ಕಿಂತ ಅಜ್ಜಿ ಅಂದ್ರೆ ಪ್ರಾಣ. ಆಗ ಆಗ ಬೇರೆಯವರ ಮನೆಯಲ್ಲಿದ್ದ ಫೋನ್ ನಿಂದ ಮಾತಾಡ್ತಾ ಇದ್ರು. ದೊಡ್ಡ ರಾಜಕುಮಾರಿ ಬೇಸಿಗೆ ರಜೆಯಲ್ಲಿ ಪಟ್ಟಣಕ್ಕೆ ಹೋಗಿ ಎಲ್ಲರ್ ಜೊತೆ ಇರತಾಯಿದ್ದಳು ಅವರ ತಂದೆ ಅಲ್ಲಿದ್ರೂ ಅವರ ತಾಯಿನಾ ಸಂತೋಷದಿಂದ ಇಟ್ಟಿರಲಿಲ್ಲ. ಅದನ್ನು ನೋಡಿ ದೊಡ್ಡ ರಾಜಕುಮಾರಿ ಕೊರುಗ್ತಾ ಇದ್ದಳು. ಚಿಕ್ಕವಳು ಎಂತಾನೆ ಮಾಡಕ ಆಗುತ್ತೆ ಅವಳ ಅಜ್ಜಿ ಹತ್ರ ವಾಪಸ್ ಬಂದ್ಲು. ದೊಡ್ಡ ರಾಜಕುಮಾರಿಯ 8th ಮುಗೀತು.ಊರಲ್ಲಿ ಇರೋದು ಅಷ್ಟೇ ಆಗಿತ್ತು. ನಂತರ ಅವಳು ಪಟ್ಟಣಕ್ಕೆ ಬಂದಳು.ಸ್ಕೂಲ್ ಫೀಸು ಮಾಮ ತುಂಬಿದ್ದರು. ಅಜ್ಜಿ ಪಟ್ಟಣದಲ್ಲಿ ಮನೆ ಮಾಡಿ ಕೊಟ್ಟರು.ಇನ್ನೂ ಸುಖ್ವಾಗಿ ಜೊತೆಗೆ ಇರ್ತಿದ್ವಿ ಅನ್ನೋಷ್ಟರಲ್ಲಿ ಚಿಕ್ಕ ರಾಜಕುಮಾರಿಗೆ ಕಾಯಿಲೆ ಆಯಿತು. ಅವಳ್ ಆಗ ಸುಮಾರು 5 ವರ್ಷದವಳು.ರಾಜನಿಗೆ ಸ್ವಲ್ಪನೂ ಚಿಂತೆ ಇರ್ಲಿಲ್ಲ. ರಾಣಿ,ರಾಜಕುಮಾರ ಇಬ್ರೆ ಬೇರೆ ಬೇರೆ ರಾಜ್ಯ ಎಲ್ಲ ಕಡೆ ಆಸ್ಪತ್ರೆಗೆ ಹೋಗ್ತಾ ಇದ್ರು. ಎಲ್ಲ ರಾಜ್ಯದಲ್ಲೂ 3-3 ತಿಂಗಳು ಹೋಗ್ತಾ ಇತ್ತು.ಆಪರೇಷನ್ ಕೂಡ ಆಯಿತು ಆದ್ರೂ ಏನೂ ವ್ಯತ್ಯಾಸ ಕಂಡು ಬಂದಿಲ್ಲ. ಈ ಕಡೆ ದೊಡ್ಡ ರಾಜಕುಮಾರಿ ಶಾಲೆಗೆ ಹೋಗಿ ಸಾಯಂಕಾಲ ಮನೆಗೆ ಬಂದು ಹಾಗೆ ಮಲ್ಕೊಬೇಕಾಗಿತ್ತು . ಒನ್ ಓನ್ ಸಾರಿ ಅವಲ್ಗೆ ಎರಡ್ ಎರಡ್ ದಿನ ಊಟ ಸಿಗ್ತಾ ಇರ್ಲಿಲ್ಲ. ಅವಳಿಗೆ ಅಡಿಗೆನೆ ಬರ್ತಾ ಇರ್ಲಿಲ್ಲ. ಅವರ ಅಜ್ಜಿ ಆಗ ಆಗ ಊಟ ಮಾಡಿ ಊರಿಂದ ಕೊಡ್ತಾ ಇದ್ರು. 2ವರ್ಷ ಕಳೆಯಿತು ಅದರಲ್ಲಿ ಬರೀ 2 ತಿಂಗಳು ಮಾತ್ರ ಆ ರಾಣಿ ಮನೆಯಲ್ಲಿ ಇದ್ದಳು.10ನೇ ಮುಗೀತು with distinction. ಆಗ ರಾಣಿ ಮುಖದಲ್ಲಿ ನಗು ಬಂತು. ಚಿಕ್ಕ ರಾಜಕುಮಾರಿ ತುಂಬಾ ಮುದ್ದು ಅವಳು ಎಲ್ಲರ ಜೊತೆ ಚೆನ್ನಾಗಿ ಮಾತಾಡ್ತಾ ಇದ್ದಳು. ಮಾತಿನಲ್ಲೂ ತುಂಬಾ ಜಾಣೆ. ಆ ದೇವರು ಅವಳಿಗೆ ಆ ಕ್ಯಾನ್ಸರ್ ಅನ್ನೋ ದೊಡ್ಡ ಕಾಯಿಲೆ ಕೊಟ್ಬಿಟ್ಟ. ಆಸ್ಪತ್ರೆಗೆ ಹೋದಾಗ ಇರೋಕೆ ಜಾಗ ಇಲ್ಲ ಅಂತ ರೊಡ್ನಲ್ಲಿ ರಾತ್ರಿ ಕಳೆಯುಒಂತಾಯಿತು. ಅವಳಿಗೆ 8 ಮುಗಿದು 9 ವರ್ಷ ಪ್ರಾರಂಭ ಆಗೋಕೆ 9 ದಿನ ಬಾಕಿ ಇತ್ತು. doctors ಕೈ ಕೊಟ್ ಬಿಟ್ರು. ಮನೆಯಲ್ಲಿ ಎಲ್ಲ ಜನರು ನೋಡೋಕೆ ಅಂತ ಬರ್ತಾ ಇದ್ರು. ಆ ಚಿಕ್ಕ ರಾಜಕುಮಾರಿಯ ದೊಡ್ಡ ದೊಡ್ಡ ಮಾತುಗಳು ಕೇಳಿ ಎಲ್ಲರ ಕಣ್ಣು ಕಂಬನಿಯಿಂದ ತುಂಬ್ತಿತ್ತು.ಅವಳಿಗೆ 9 ವರ್ಷ ಆಗೊಕ್ ಮುಂಚೆನೇ ಆ ದೇವರು ಅವನ್ ಹತ್ರ ಕರ್ಕೊಂಬಿಟ್ಟ. ಅವಳಿಗೆ ನೋಡೋಕೆ ಜನ ಸಾಗರದಂತೆ ಇತ್ತು. ಇಲ್ಲಿಗೆ ಆ ರಾಣಿ ಜೀವಂತ ಇದ್ದೂ ಸತ್ತಂತೆ. ದೊಡ್ಡ ರಾಜಕುಮಾರಿ ತಂಗಿಯ ಪ್ರೀತಿ ಕಲ್ಕೊಂಡಬಿಟ್ಲು. ಅವಳ ಜೊತೆ ಕೆಳೆಬೇಕಾಗಿರೋ 50 ವರ್ಷ ಕಳೆದಹೋಯಿತು. ಅವಳಿಗೆ ಹೇಳೋ ಸಣ್ಣ ಸಣ್ಣ ಮಾತುಗಳು ಎಲ್ಲಾನೂ ಕಳೆದು ಹೋದವು.😭😭😭😭 ಇಷ್ಟಕ್ಕೆ ಜೀವನದ ಕಷ್ಟಗಳು ಸೀಮಿತವಾಗಿಲ್ಲ.ಇನ್ನೂ ಮುಂದೆ ಇದಕ್ಕಿಂತ ದೊಡ್ಡ ಸಮಸ್ಯೆ ಅವರಿಗೋಸ್ಕರ ಕಾದಿತ್ತು..


ಮುಂದಿನ ಪುಟ...............











0 likes

Published By

Sana kousar

sanakousar

Comments

Appreciate the author by telling what you feel about the post 💓

Please Login or Create a free account to comment.