ಕಲಾಂ
ಕಲಾಂ
ಕುಲದಲ್ಲಿ ಕುರಾನವಾದರೆ
ಮನದಲ್ಲಿ ಶ್ರೀಮದ್ಬಾಗವತೆ
ಹಿಂದು ಮುಸಲ್ಮಾನ
ಭಾಯ್ ಭಾಯ್
ಭಾವೈಕತೆ ಸಂಕೇತಿಗ
ಕಲಾಂ ಇಗೊ ನಿಮಗೊಂದು ನನ್ನ ಸಲಾಂ
ಬಯಸಲಿಲ್ಲ ಕುರ್ಚಿ
ಕೋರಲಿಲ್ಲ ಕೋಟಿ ಕೋಟಿ
ಬಯಸಿದ್ದು ವಿದ್ಯೆ
ದಕ್ಕಿದ್ದು ರಾಷ್ಟ್ರ ಪದವಿ ಮಾನ್ಯತೆ
ಸ್ವಚ್ಛ ಚರಿತ್ರ ಬ್ರಹ್ಮಚಾರಿ ಅಬ್ದುಲ್
ಕಲಾಂ ಇಗೊ ನಿಮಗೊಂದು ನನ್ನ ಸಲಾಂ
ಬಡತನ ಕಾಡಲಿಲ್ಲ
ಬಾಹ್ಯಕಾಶಕ್ಕೆ ಹಾರಲು
ಏರಿದೆ ಏರಿದೆ ಆಕಾಶಕ್ಕೇತರ
ಕಾಡಲಿಲ್ಲ ನಿಮ್ಮ ಮತ ಮದ ಮತ್ಸರ
ಯಾರಿಗೂ ಇಲ್ಲ ನಿಮ್ಮ ಬಗ್ಗೆ ತತ್ಸರ
ಉತ್ಸಾಹಿ ಯುವಕ
ಯುವ ಜನರ ಉಪಾಸಿ
ಕಲಾಂ ಇಗೊ ನಿಮಗೊಂದು ನನ್ನ ಸಲಾಂ
ನಿಮ್ಮ ನಿಶ್‍ಕಳಂಕ ಚಹರೆ
ಭಯೋತ್ಪದಕರಿಗೆ ಭೀತಿ
ಅದಕ್ಕೆ ನಿಮ್ ಮುಟ್ಟಲಿಲ್ಲ ನೆತ್ತರು
ಸ್ವಚ್ಚಂದ ಬಾನಂಗಳದ ಹಕ್ಕಿ
ನಿಮ್ಮಗಿಲ್ಲ ಯಾವ ಪಹರೆ
ರಾಜಕೀಯ ರಣರಂಗದಲ್ಲಿ
ಅರಾಜಕೀಯ ಸೊಂಕಲಿಲ್ಲ
ಭಾರತದ ಮೊದಲ ಪ್ರಜೆ
ನಿವಾಗಿ ರಾರಾಜಿಸಿದ ಅಬ್ದುಲ್
ಕಲಾಂ ಇಗೊ ನಿಮಗೊಂದು ನನ್ನ ಸಲಾಂ
ಗುಲಗಂಜಿ ತೂಕ
ಗುಣ ಸಂಪನ್ನ
ಭಾರತದ ತೆಕ್ಕೆಗೆ
ಗುರುವಾದೆ ಚಿನ್ನರ ಚಿನ್ನಣ್ಣ
ಗುರುತರ ಆಕರ್ಷಣೆಯ
ಜ್ಞಾನಿ ವಿಜ್ಞಾನಿ ಅಬ್ದುಲ್
ಕಲಾಂ ಇಗೊ ನಿಮಗೊಂದು ನನ್ನ ಸಲಾಂ
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.