ನಾನು ಹುಟ್ಟಿದಾಗ ನಾನು ಅತ್ತೆ
ನನ್ನ ಸುತ್ತ ಇದ್ದವರೆಲ್ಲ ನಕ್ಕರು
ನಾನು ಎಡಬಲ ತಿರುಗಿ, ಬೋರಲು ಬಿದ್ದಾಗ
ದಾವಾಂತದಲ್ಲಿ ಎತ್ತಿಕೊಂಡರÀು
ಎಲ್ಲಿ ಹೊಟ್ಟೆ ಅದುಮಿ, ಹಾಲು ಕಕ್ಕಿ ಬಿಡುವೆನೋ ಎಂದು
ನಾನು ಒಂದು ಹೆಜ್ಜೆ ಎತ್ತಿಟ್ಟೆ
ಅವರೆಲ್ಲ ಮುತ್ತಿಟ್ಟು, ಕುಣಿದು ಕುಪ್ಪಳಿಸಿದರು
ನಾನು ಅವರಂತೆ ಕುಪ್ಪಳಿಸಲು ಹೋಗಿ
ಬಿದ್ದು ಬಿಟ್ಟೆ, ಪೆಟ್ಟಾದ ಜಾಗ ಸವರಿದರು
ನಾನು ಬೆಳೆಯುತ್ತಾ ಹೋದೆ
ನನ್ನ ಮಾತು, ನಡೆ, ಬುದ್ಧಿಗೆ
ಅವರೆಲ್ಲ ಬೆರಗಾದರು, ಹುಬ್ಬೇರಿಸಿ
ಹೊಟ್ಟೆ ಹುಣ್ಣಾಗುವಂತೆ ನಕ್ಕರು
ಅಂದಿನಿಂದ ಜಾವಾಬ್ದಾರಿ ಹೊರುವವರೆಗೂ
ನಾನು ನಕ್ಕೆ ನಕ್ಕೆ ನಕ್ಕೆ
ಹಿರಿಯರು ಒಳಗೊಳಗೆ ನಕ್ಕರು
ಆದರೂ, ‘ಏನದು ಹಾಳು ನಗು ?’
ಎಂದು ಹುಸಿಮುನಿಸಲ್ಲಿ ಗದರಿದರು
ನಂತರ ಶುರವಾಯಿತು ಅಳುವ ಸರದಿ
ಏಕೆ ಈಗಾಯಿತು ? ಎಂಬ ಪುಂಖಾನುಪುಂS ಪ್ರಶ್ನೆಗಳಿಗೆ
ಕೆಲವರು ಮಜಾ ತೆಗೆದು ಕೊಂಡರು
ಇನ್ನು ಕೆಲವರು ಮನುಷ್ಯ ಸಹಜವೆಂದರು
ನನಗೆ ಅವರ ಪ್ರತಿಕ್ರಿಯೆ ಉಢಾಪೆ ಎನಿಸಿತು
ನಗುವಾಗಿನ ನೆಂಟರು, ಆಳುವಾಗಿನ ಭಂಟರು ಎಂದೆನಿಸಿತು
......2
-2-
ಮಾನವನಾಗಿ ಹುಟ್ಟಿದ ಮೇಲೆ
ಜೀವನದಲ್ಲಿ ನೀನು ಏನೇನು ಕಂಡೆ ?
ಏನೇನು ನೋಡಿದೆ ? ಏನೇನು ಸುಃಖಿಸಿದೆ ?
ಏನೇನು ಗಳಿಸಿದೆ ? ಏತಕ್ಕಾಗಿ ದುಃಖಿಸಿದೆ ?
ಅದರಲ್ಲಿ ಹುಡುಕು , ನಿನ್ನ ಅಳು ನಗು
ಆಗ ನಿನಗೆ ಎಲ್ಲವೂ ಆರ್ಥವಾದೀತು
ಅಳುವನ್ನು ಅಳಿಸಿ, ನಗು ನಗುತ ಬಾಳು ಎಂದು
ಸಂತರು ಹೇಳಿದ ಮಾತು ನೆನ
Comments
Appreciate the author by telling what you feel about the post 💓
ಕವನ ಸಂಕಲನ ಸುಂದರವಾಗಿದೆ
Please Login or Create a free account to comment.