ನಿಂತೆಯಾ ಒಡೆಯ??!!
ನಿಂತೆಯಾ ಒಡೆಯ!!!?
ಸುತ್ತಲೂ ದಟ್ಟ ಅರಣ್ಯ..,
ನಿಂತಿತೇಕೆ ನಮ್ಮ ಪಯಣ??
ಯಾವ ಮನೆಗಳು ಕಾಣಿಸುತ್ತಿಲ್ಲ...
ಯಾವ ಸುರಕ್ಷಿತ ತಾಣವೂ ಇಲ್ಲಿಲ್ಲ...
ಆದರೂ ಒಡೆಯನೇಕೆ ನಿಂತ!!!
ಹಗಲಲ್ಲಿ ಈ ಹಾದಿ ರಮ್ಯ ಮನೋಹರ..,
ಇರುಳಲ್ಲಿ ಇದು ರುದ್ರ ಭಯಂಕರ...
ಸವೆಸುವ ದಾರಿ ಇನ್ನು ಬೇಕಾದಷ್ಟಿದೆ..,
ತಲುಪುವ ಗಮ್ಯ ಇನ್ನು ದೂರವಿದೆ...
ಮುಸ್ಸಂಜೆಯಲಿ ಸೊಗಸಾಗಿದ್ದ ಈ ಪಯಣ..,
ಈ ಸರಿ ರಾತ್ರಿಯಲಿ ಭಯ ಹುಟ್ಟಿಸುತಿದೆ..
ಯಾಕೆ ನನ್ನೊಡೆಯ.., ಹಾದಿ ತಪ್ಪಿತೆ.???
ಹೆದರಬೇಡ ನಾ ಬಲ್ಲೆ ನಿನ್ನ ಹಾದಿಯ..
ನಾನಿರುವೆ ನಿನ್ನೊಟ್ಟಿಗೆ..
ಎಷ್ಟು ದೂರವೋ ನಮ್ಮ ಪಯಣ..,
ಇನ್ನೆಷ್ಟು ದೂರವೋ ನಮ್ಮ ಪಯಣ!!
ನಾನಿರುವೆ ಈ ಪಯಣದ ಕೊನೆವರೆಗೆ ನಿನ್ನೊಟ್ಟಿಗೆ.,
ಗಾಢಾಂಧಕಾರದ ಹಾದಿಯೂ., ಹೂವಿನ ಹಾಸಿಗೆ.,
ನೀನಿದ್ದರೆ ನನ್ನೊಟ್ಟಿಗೆ..,
ನೀನಿದ್ದರೆ ನನ್ನೊಟ್ಟಿಗೆ...
Paperwiff
by ramyas