ಐಕ್ಯ

A unique divine Love tale expressed as poem

Originally published in kn
Reactions 1
619
Raksha Ramesh
Raksha Ramesh 09 Sep, 2020 | 1 min read

ಹೇಳಲಿಲ್ಲ ನನಗೆ ನೀನು, ಹೊರಟೆಯಲ್ಲವೇ

ಒಂದು ಸಾರಿ ಹೇಳಬೇಕು ಎನಿಸಲಿಲ್ಲವೇ!?

ನೀನು ಕೇಳಿದೆಲ್ಲವ ನಾ ಕಲಿಸಲಿಲ್ಲವೇ


ಹಸುವ ಹಾಲ ಕರೆಯ ಬರದ ನೀ ಅಳುತಿದ್ದೆಯಲ್ಲವೇ

ನಿನ್ನ ಪಾಲ ಹಾಲು ನಾನೇ ಕರೆಯಲಿಲ್ಲವೇ

ಗೋಪಿಯರ ಕಾಡಿ ನೀ ಓಡುತಿದ್ದೆಯಲ್ಲವೇ

ಎಲ್ಲ ಸೇರಿ ನಿನ್ನ ಹಿಡಿಯ ಬರಲು ನಾ ತಡೆಯಲಿಲ್ಲವೇ


ನಿದ್ದೆ ಬರದು ಎಂದು ನೀ ಕೊರಗುತಿದ್ದೆಯಲ್ಲವೇ

ಕಾರಿರುಳ ಎಣಿಸದೆ ನಾನೋಡಿ ಬರುತಿದ್ದೆನಲ್ಲವೇ

ನಮ್ಮೀ ಪ್ರೇಮ-ಗಂಗೆಯ ಸಾಕ್ಷಿ ಯಮುನೆಯಲ್ಲವೇ?

ಅವಳ ದಾಟಿ ನೀ ನನ್ನ ತೊರೆದೆ, ಮನಸು ಮರುಗಲಿಲ್ಲವೇ


ಆದರೂ ಒಮ್ಮೆ ಕೇಳಿಯೇ ಬಿಡುವೆ ಎಂದೂ ಎನಿಸಲಿಲ್ಲವೇ

ಮನದರಸಿಯೇ ಆಗಲಿತ್ತು ಪಟ್ಟದರಸಿಯಲ್ಲವೇ

ರಾಧೆ ಕಂಗಳ ಮಾತು ಕೃಷ್ಣಗೆ ಕೇಳಿತಲ್ಲವೇ

ಕಂಗಳಲೇ ಉತ್ತರಿಸಿದ ಅವ ಜಾಣನಲ್ಲವೇ


ಅಯ್ಯೋ! ಪೆದ್ದಿ ಇನ್ನೂ ನಿನಗೆ ತಿಳಿಯಲಿಲ್ಲವೇ

ಮದುವೆಯೊಂದು ನಡೆವುದೆಂದು ಇಬ್ಬರ ನಡುವೆಯಲ್ಲವೇ

ಒಂದೇ ನಾನು ನೀನು ಎಂದೂ ಬೇರೆಯಲ್ಲವೇ

ತನ್ನ ತಾನೇ ಯಾರು ಜಗದಿ ವರಿಸುವುದಿಲ್ಲವೇ!!!

1 likes

Published By

Raksha Ramesh

raksha

Comments

Appreciate the author by telling what you feel about the post 💓

Please Login or Create a free account to comment.