"ಮೇಕ್" /"ಮೇಡ್" ಇನ್ ಇಂಡಿಯಾ!!!

An article to sum up the differences between Make In India Vs Made in India

Originally published in kn
Reactions 2
696
Raksha Ramesh
Raksha Ramesh 27 Aug, 2020 | 1 min read
MadeinIndia

"ಮೇಕ್ ಇನ್ ಇಂಡಿಯಾ" , ಆತ್ಮನಿರ್ಭರ ಭಾರತದತ್ತ ಸಾಗುತ್ತಿರುವ ನಾವು ಈಗ ಪ್ರತಿನಿತ್ಯ ಕೇಳುತ್ತಿರುವ ಪದಗುಚ್ಛ. 

ಈ ಅಭಿಯಾನವು, ಸೆಪ್ಟೆಂಬರ್ 2014ರಲ್ಲಿಮಮೋದಿಯವರ ಸರ್ಕಾರದಲ್ಲಿ ರೂಪುಗೊಂಡಿತು. 

1901ರಲ್ಲಿ, ದಾದಾ ಭಾಯ್ ನವ್ರೋಜಿಯವರು ಸ್ವದೇಶಿ ಚಳುವಳಿ ಆರಂಭಿಸಿ, ವಿದೇಶೀ ಮೂಲದ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ವಿರೋಧಿಸಿದರು. ಭಾರತದ ಅರ್ಥ ವ್ಯವಸ್ಥೆಯಲ್ಲಿ ಸ್ವಂತಿಕೆಯನ್ನು ರೂಪಿಸಿ, ಬ್ರಿಟಿಷ್ ನೀತಿಗಳನ್ನು ವಿರೋಧಿಸುವುದು ಇದರ ಮೂಲ ಉದ್ದೇಶ. ಇಲ್ಲಿ ಈ ಯೋಜನೆಯ ಮೂಲಬೀಜವಿತ್ತು. ಮೋದಿಯವರ ನೇತೃತ್ವದ ಭಾರತ ಸರ್ಕಾರ, "ಮೇಕ್ ಇನ್  ಇಂಡಿಯಾ" ಮಾದರಿಯ ಅಡಿಯಲ್ಲಿ, ಕೈಗಾರಿಕಾ ಉದ್ಯಮಿಗಳಿಗೆ, ಅವುಗಳ ನಿರ್ಮಾಣ ಘಟಕಗಳನ್ನು ಭಾರತದಲ್ಲಿಯೇ ಸ್ಥಾಪಿಸಿ (Foreign Direct Investment) , ಸ್ಥಳೀಯರಿಗೆ ಉದ್ಯೋಗ ನೀಡುತ್ತಾ ಔದ್ಯೋಗಿಕ ಕ್ರಾಂತಿ ಮಾಡುವತ್ತ ದಾಪುಗಾಲು ಇಡುತ್ತಿದೆ.

ಏನಿದು "ಮೇಡ್ ಇನ್ ಇಂಡಿಯಾ"....

ಯಾವುದೇ ಉತ್ಪನ್ನ ಕೊಂಡರು, ಅದನ್ನು ತಯಾರಿಸಿದ ದೇಶದ ಮಾಹಿತಿ, ಅದರೊಂದಿಗೆ ಲಭ್ಯವಿರುವುದು ಎಲ್ಲೆಡೆ ಕಾಣಬಹುದು. ಈಗ ಒಂದು ಟಿ. ವಿ. ಕೊಂಡಾಗ, "ಮೇಡ್ ಇನ್ ಇಂಡಿಯಾ" ಟ್ಯಾಗ್ ಇದ್ದರೆ, ಅದು ತಯಾರಾದ ಜಾಗದಿಂದ ಹಿಡಿದು, ಅದರ ಬಿಡಿ ಭಾಗಗಳ ಸಮೇತವಾಗಿ ಎಲ್ಲವೂ ಅಂದರೆ, ತಂತ್ರಜ್ಞಾನವೂ ಸೇರಿ ಅದು ಭಾರತದ್ದಾಗಿರಬೇಕು. 

ವ್ಯತ್ಯಾಸವೇನು.... 

ಈಗ, "ಮೇಕ್ ಇನ್ ಇಂಡಿಯಾ" ಹಾಗು "ಮೇಡ್ ಇನ್ ಇಂಡಿಯಾ" ಇವುಗಳ ನಡುವಿನ ವ್ಯತ್ಯಾಸಕ್ಕೆ ಬರುವುದಾದರೆ, ಅವುಗಳನ್ನು ಹೀಗೆ ಕ್ರೋಢೀಕರಿಸಬಹುದು...

* "ಮೇಡ್ ಇನ್ ಇಂಡಿಯಾ" ದೇಶೀಯತೆಯ ವಿಷಯಗಳನ್ನು ಒಳಗೊಂಡಿದೆ, ಅಂದರೆ ಇಲ್ಲಿನ ನೆಲ, ಜಲ, ಬಂಡವಾಳ, ಕಾರ್ಮಿಕ ಶಕ್ತಿ, ತಂತ್ರಜ್ಞಾನ ಬಳಸುವುದು. 

* "ಮೇಕ್ ಇನ್ ಇಂಡಿಯಾ" ವೈಶಿಷ್ಟ್ಯತೆಯೇನೆಂದರೆ, ವಿದೇಶೀ ಬಂಡವಾಳ ಹೂಡಿಕೆಗೆ ಆಮಂತ್ರಣವಿತ್ತು, ಇಲ್ಲಿನ ನೆಲ, ಜಲ, ಕಾರ್ಮಿಕರನ್ನು ಉತ್ಪಾದನೆಗೆ ತೊಡಗಿಸುವುದು. ಇದು ಭಾರತದಲ್ಲಿ ಔದ್ಯೋಗಿಕ ಕ್ರಾಂತಿಯ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನ ಗಳಿಸುವಂತೆ ಮಾಡುತ್ತದೆ. 

ಈ ಎರಡೂ ಯೋಜನೆಗಳೂ ಸಹ ಭಾರತದ ಆರ್ಥಿಕ ವ್ಯವಸ್ಥೆ ಸದೃಢ ಮಾಡುವಲ್ಲಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಾ ಬಂದಿವೆ.

2 likes

Published By

Raksha Ramesh

raksha

Comments

Appreciate the author by telling what you feel about the post 💓

Please Login or Create a free account to comment.