ಮೊದಲೆಲ್ಲ ಮಕ್ಕಳು ಮೊಬೈಲ್ ಕೇಳಿದಾಗ ಪೋಷಕರು ಮೊದಲು ಚೇನ್ನಾಗಿ ಓದಿ ಕೆಲಸಕ್ಕೆ ಸೇರಿ ಆಮೇಲೆ ಮೊಬೈಲ್ ತೆಗೆದುಕೊಳ್ಳುವಿಯಂತೆ ಅಂತ ಬೈದು ತೆಪ್ಪಗಾಗಿಸುತಿದ್ರು ! ಆದರೆ ಈಗ ಮೊಬೈಲ್ ಅನಿವಾರ್ಯ. ಕರೋನಾದಿಂದ ಇಡೀ ಪ್ರಪಂಚವೇ ಸಂಕಟ ಅನುಭವಿಸುತಿದ್ರು ಕೆಲವರಿಗೆ ಅದು ಅದೃಷ್ಟವನ್ನು ಹೊತ್ತು ತಂದಿರುವುದು ಸುಳ್ಳಲ್ಲ. ಅದರಲ್ಲಿ ಈ ಮೊಬೈಲ್ , ಲ್ಯಾಪ್ ಟಾಪ್ , ಟ್ಯಾಬ್ ಕಂಪನಿಗಳು ಕೂಡ ಒಂದು . ವಿದ್ಯಾಭ್ಯಾಸ ಮುಂದುವರೆಸಲು ಇವುಗಳ ಸೌಲಭ್ಯ ಮಕ್ಕಳಿಗೆ ಬೇಕೇ ಬೇಕು ಅನ್ನುವ ಪರಿಸ್ಥಿತಿ! ಆದರೆ ಅವರ ಬಳಕೆಯ ಮೇಲೆ ನಮ್ಮ ಹೋತೋಟಿ ಇಲ್ಲದಿದ್ದರೆ ಪರಿಸ್ಥಿತಿ ಭಯಾನಕವಾಗಬಹುದು. ಆಧುನಿಕ ಸೌಲಭ್ಯ ಮಕ್ಕಳಿಗೆ ಬೇಕು ನಿಜ ಆದರೆ ಅದನ್ನು ಅವರು ಹೇಗೆ ಬಳಸಬೇಕು ಅನ್ನುವುದನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು, ನಮ್ಮ ಕೈಯಲ್ಲೇ ಇಟ್ಟುಕೊಳ್ಳುವುದು ಮಕ್ಕಳ ಭವಿಷ್ಯದ ದ್ರಷ್ಟಿಯಿಂದ ಸೂಕ್ತ.
ಒಬ್ಬಳು ಗ್ರಾಮೀಣ ಪರಿಸರದಲ್ಲಿ ಪಿ ಯು ಸಿ ಓದುತ್ತಿರುವ ಹುಡುಗಿ. ಅವಳ ಅಪ್ಪ ಅಮ್ಮಗೆ ಮೊಬೈಲ್ ನಲ್ಲಿ ಕರೆ ಮಾಡಲು ಮತ್ತು ಕರೆ ಸ್ವೀಕರಿಸಲು ಮಾತ್ರ ಗೊತ್ತು. ಅಷ್ಟು ಬಿಟ್ಟರೆ ಮೊಬೈಲ್ ನಲ್ಲಿ ಹಲವಾರು ಆಪ್ಸ್ ಗಳಿರುತ್ತವೆ ಎನ್ನುವ ಅರಿವು ಅವರಿಗೆ ಇಲ್ಲ. ಆನ್ಲೈನ್ ಶಿಕ್ಷಣ! ಮಗಳಿಗೆ ಮೊಬೈಲ್ ತೆಗೆದುಕೊಟ್ಟಿದ್ದಾರೆ. ಅನಿವಾರ್ಯ ತಾನೇ. ಆದರೆ ಏಕೋ ಏನೋ ಮಗಳು ಇಡೀ ದಿನ ಮೊಬೈಲ್ ನಲ್ಲಿ ಮುಳುಗಿರುತ್ತಾಳೆ. ಅಪ್ಪ ಅಮ್ಮಗೆ ತುಂಬಾ ಖುಷಿ. ಮಗಳು ಮೊಬೈಲ್ ಕೈಯಲ್ಲಿ ಹಿಡಿದು ಓದುತ್ತಿದ್ದಾಳೆ ಎನ್ನುವ ನಂಬಿಕೆ. ಆದರೆ ಅವರಿಗೆ ಅರಿವಿಲ್ಲ ಮೊಬೈಲ್ ಬಳಕೆ ಮಗಳಿಗೆ ಚಟವಾಗಿ ಬಿಟ್ಟಿದೆ ಅಂತ. ಇನ್ಸ್ಟಾಗ್ರಾಮ್ ಖಾತೆ ಬೇರೆ ಅವಳ ಹೆಸರಿನಲ್ಲಿ ! ಪಿ ಯು ಸಿ ಓದುವ ಹುಡುಗಿಗೆ ಇನ್ಸ್ಟಾಗ್ರಾಮ್ ಖಾತೆಯಾ ಅಗತ್ಯ ಇದೆಯೇ ? ಅವಳ ಖಾತೆಯನ್ನು ಹಿಂಬಾಲಿಸುತ್ತಿರುವವರ ಸಂಖ್ಯೆ 4೦೦ ಗಿಂತಲೂ ಹೆಚ್ಚು. ಆ ನಾಲ್ಕು ನೂರು ಹಿಂಬಾಲಕರಲ್ಲಿ ಎಷ್ಟು ಜನರ ಪರಿಚಯ ಆ ಹುಡುಗಿಗೆ ಇರಬಹುದು ? ಬೆರಳೆಣಿಕೆಯಷ್ಟು ಅಲ್ವೇ. ಪಿ ಯು ಸಿ ಓದುವ ಹುಡುಗಿಗೆ ಸಾಮಾಜಿಕ ಜಾಲತಾಣಗಳ ಖಾತೆಯ ಅಗತ್ಯ ಏನಿದೆ. ಎಷ್ಟೋ ಜನ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ದುರ್ಬಳಿಕೆ ಮಾಡಿಕೊಂಡ , ಮೋಸ ಮಾಡಿದ, ಅಸಂಖ್ಯ ಸತ್ಯ ಕಥೆಗಳು ನಮ್ಮ ಸಮಾಜದಲ್ಲಿ ನಡೆಯುತ್ತಿರೋದು ನಮಗೆ ಗೊತ್ತಿದೆ.
ಮೊಬೈಲ್ ಬಳಕೆ ಅನಿವಾರ್ಯ ನಿಜ ಆದರೆ ಮಕ್ಕಳಿಗೆ ಸರ್ವ ಸ್ವಂತಂತ್ರ್ಯ ಕೊಟ್ಟು ಬಿಡೋದು ನಿಜಕ್ಕೂ ಮಕ್ಕಳ ಭವಿಷ್ಯದ ದ್ರಷ್ಟಿಯಲ್ಲಿ ಒಳ್ಳೆಯದಲ್ಲ. ಈ ಸಾಮಾಜಿಕ ಜಾಲತಾಣಗಳನ್ನು ಬಳಸುವ ಮಕ್ಕಳು ಕಲಿಕೆಗೆ ಎಷ್ಟು ಸಮಯ ಕೊಡಬಹುದು? ಅವರು ಎಷ್ಟು ಅಂಕಗಳನ್ನು ಪಡೆಯಬಹುದು! ಅವರ ಮನಸಿನ ಮೇಲಾಗುವ ಒತ್ತಡಗಳ ಅರಿವಿದೆಯೇ ನಮಗೆ! ನಮ್ಮ ಮಕ್ಕಳ ಭವಿಷ್ಯವನ್ನು ನಾವೇ ನಮಗರಿವಿಲ್ಲದೇ ಹಾಳು ಮಾಡುತಿದ್ದಿವೆ ಅಲ್ಲೇ. ಸಾಮಜಿಕ ಜಾಲತಾಣಗಳ ಅಗತ್ಯ ಖಂಡಿತವಾಗಿಯೂ ಮಕ್ಕಳಿಗೆ ಇಲ್ಲ. ಅವರು ಚೆನ್ನಾಗಿ ಓದಿ ತಮ್ಮ ಕಾಲ ಮೇಲೆ ನಿಂತ ಮೇಲೆ ಯಾವ ಜಾಲತಾಣದಲ್ಲಾದ್ರು ಭಾಗಿಯಾಗಲಿ ಅಲ್ವೇ. ಶಾಲಾ ಕಲಿಕೆಗೆ ಬೇಕಾಗುವ ಆಪ್ಸ್ ಬಿಟ್ಟರೆ ಬೇರೆ ಅಪ್ಪ್ಲಿಕೇಷನ್ಗಳು ಅವರ ಮೊಬೈಲ್ ನಲ್ಲಿ ಇರೋದು ಎಷ್ಟು ಸೂಕ್ತ !
ಮಕ್ಕಳ ಮೊಬೈಲ್ ಬಳಕೆಯನ್ನು ನಾವು ಹೇಗೆ ನಿಯಂತ್ರಿಸಬಹುದು ?
ಖಂಡಿತವಾಗಿಯೂ ನಿಯಂತ್ರಣ ಸಾಧ್ಯವಿದೆ. ನಮಗೆ ತುಸು ಮೊಬೈಲಿನ ಬಗ್ಗೆ ಅರಿವಿದ್ರೆ ಆಯಿತು. ಇಲ್ಲವೇ ನಮ್ಮ ಕುಟುಂಬದಲ್ಲೇ ನಂಬಿಕೆಯ ವ್ಯಕ್ತಿಗೆ , ಇಲ್ಲವೇ ಶಿಕ್ಷಕರಿಗೆ ಸಲ್ಪ ಗಮನ ಕೊಡಲು ಹೇಳಬೇಕು. ಇಂದಿನ ಆಧುನಿಕ ಮೊಬೈಲ್ ಗಳಲ್ಲಿ ನಾವು ಎಷ್ಟು ಹೊತ್ತು ಮೊಬೈಲ್ ನೋಡಿದ್ದೇವೆ ಎನ್ನುವುದು ಗೊತ್ತಾಗುತ್ತದೆ. ಅದನ್ನು ಆಗಾಗ ಗಮನಿಸುತ್ತಿರಬೇಕು. ನಾವು ಬಳಕೆಯ ಸಮಯದ ಮಿತಿಯನ್ನು ನಿರ್ಧರಿಸಬೇಕು. ಆ ಸಮಯ ಮೀರಿದರೆ ಮಕ್ಕಳನ್ನು ಪ್ರಶ್ನಿಸಬೇಕು. ರಾತ್ರಿ ಮಲಗುವ ಮೊದಲು ಮೊಬೈಲ್ ಅವರ ಕೈಯಿಂದ ಪಡೆದುಕೊಳ್ಳಬೇಕು. ನಂತರ ಬೆಳಿಗ್ಗೆ ಶಾಲಾ ಉಪಯೋಗಕ್ಕಾಗಿ ಕೊಟ್ಟರೆ ಸಾಕು. ಇನ್ನು ಅಗತ್ಯವಿಲ್ಲದ ಮೊಬೈಲ್ ಅಪ್ಲಿಕೇಶನ್‌ಗಳನ್ನು ಉಪಯೋಗಿಸಲು ಬಿಡಬಾರದು. ಉದಾಹರಣೆಗೆ ಫೇಸ್ ಬುಕ್ , ಇನ್ಸ್ಟಾಗ್ರಾಮ್ ಇತ್ಯಾದಿ. ಇವುಗಳ ಅಗತ್ಯ ವಿದ್ಯಾರ್ಥಿಗಳಿಗೆ ಖಂಡಿತವಾಗಿಯೂ ಇಲ್ಲ. ಇನ್ನು ನಮಗೆ ತಿಳಿಯದ ಅಪರಚಿತ ನಂಬರ್ ಗಳನ್ನೂ ಮೊಬೈಲನ್ನಲ್ಲಿ ಸಂಗ್ರಹಣೆ ಮಾಡಲು ಕೂಡ ಅವಕಾಶ ಕೊಡಬಾರದು.
ಇಷ್ಟು ಕಠಿಣ ನಿಯಮ ಬೇಕೇ ಅನಿಸಬಹುದು ನಮಗೆ ! ಆದರೆ ಇದು ತುಂಬಾ ಅನಿವಾರ್ಯ. ಶಾಲಾ ಶಿಸ್ತಿನ ಜೀವನದಿಂದ ಮೊದಲೇ ವಂಚಿತರಾಗಿರುವ ಮಕ್ಕಳಿಗೆ ಇನ್ನು ಮೊಬೈಲನ್ನು ಕೂಡ ದುರ್ಬಳಿಕೆ ಮಾಡುವ ಅವಕಾಶ ಒದಗಿಸಿದರೆ ನಮ್ಮ ಕೈಯಾರೆ ಅವರ ಭವಿಷ್ಯವನ್ನು ನಾವು ಚಿವುಟಿ ಹಾಕಿದಂತೆ.
ಪ್ರಕಾಶ್ ಮಲೆಬೆಟ್ಟು
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.