ನಮಸ್ಕಾರ ಸ್ನೇಹಿತರೆ. ಒಂದು ಪುಟ್ಟ ಕಥೆ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತೇನೆ. ಒಬ್ಬ ಪುಟ್ಟ ಹುಡುಗಿ ತನ್ನೆರಡು ಪುಟ್ಟ ಪುಟ್ಟ ಕೈಗಳಲ್ಲಿ ಎರಡು ಸೇಬು ಹಣ್ಣನ್ನು ಹಿಡಿದುಕೊಂಡು ಕುರ್ಚಿಯ ಮೇಲೆ ಕುಳಿತುಕೊಂಡಿದ್ದಳು. ಅವಳ ಅಮ್ಮ ಅಲ್ಲಿಗೆ ಬಂದು ಮೃದುವಾದ ಧ್ವನಿಯಲ್ಲಿ , ಪುಟ್ಟಿ ನಿನ್ನ ಹತ್ತಿರ ಎರಡು ಸೇಬು ಹಣ್ಣು ಇದೆ ಅಲ್ವ , ಒಂದನ್ನು ತನಗೆ ತಿನ್ನಲಿಕ್ಕೆ ಕೊಡುತೀಯ ಅಂತ ಕೇಳುತ್ತಾಳೆ. ಆ ಹುಡುಗಿ ಒಂದು ಕ್ಷಣ ತನ್ನ ತಾಯಿಯ ಮುಖ ನೋಡುತ್ತಾಳೆ. ನಂತರ ತಕ್ಷಣ ತನ್ನ ಕೈಯಲ್ಲಿದ್ದ ಹಣ್ಣನ್ನು ಕಚ್ಚಿ ಒಂದು ತುಂಡು ತಿನ್ನುತಾಳೆ. ಆಮೇಲೆ ಇನ್ನೊಂದು ಸೇಬು ಹಣ್ಣನು ಕೂಡ ಕಚ್ಚುತ್ತಾಳೆ. ಅದನ್ನು ನೋಡಿದ ಆ ಹುಡುಗಿಯ ತಾಯಿಯ ಮನಸಿಗೆ ತುಂಬಾ ಬೇಸರ ವಾಗುತ್ತೆ . ಹಾಗೆ ಕೋಪ ಕೂಡ ಬರುತ್ತೆ. ಆದರೂ ಅವಳು ತಕ್ಷಣ ಏನು ಹೇಳಲು ಹೋಗಲ್ಲ. ಒಂದು ಕ್ಷಣದ ನಂತರ ಆ ಹುಡುಗಿ ಒಂದು ಸೇಬನ್ನು ತನ್ನ ತಾಯಿಯ ಕೈಗೆ ಕೊಟ್ಟು ಅಮ್ಮ ಇದನ್ನು ತಿನ್ನು ತುಂಬಾ ಸಿಹಿಯಾಗಿದೆ ಅಂತ ಹೇಳ್ತಾಳೆ.ಆ ಪುಟ್ಟಿಯ ಅಮ್ಮನಿಗೆ ತಕ್ಷಣ ತನ್ನ ತಪ್ಪಿನ ಅರಿವಾಗಿಬಿಡುತ್ತೆ. ತನ್ನ ಮಗಳು ಎರಡು ಹಣ್ಣನ್ನು ಯಾಕೆ ಕಚ್ಚಿದಳು ಎನ್ನುವುದನ್ನು ಅರ್ಥಮಾಡಿಕೊಳ್ಳುವ ಮೊದಲೇ ನಾನು ಅವಳಿಗೆ ಹಣ್ಣನ್ನು ಕೊಡಲು ಮನಸಿಲ್ಲ ಅಂತ ನಾನೆ ನಿರ್ಣಯಿಸಿಬಿಟ್ಟೆ ಅಂತ ನೊಂದುಕೊಳ್ಳುತಾಳೆ. ಹೌದು ಗೆಳೆಯರೇ ಬದುಕಿನಲ್ಲಿ ಎಷ್ಟೋ ಬಾರಿ ನಾವು ನಮ್ಮ ಗ್ರಹಿಕೆಯ ಮಟ್ಟಕ್ಕೆ , ನಮ್ಮ ಮೂಗಿನ ನೇರಕ್ಕೆ ಯೋಚಿಸಿ ಇತರರ ಬಗ್ಗೆ ನಿರ್ಣಯಿಸಿ ಬಿಡುತೇವೆ. ಇನ್ನೊಂದು ದಿಕ್ಕಿನಲ್ಲಿ ಯೋಚನೆ ಮಾಡುವುದನ್ನೇ ಮರೆತು ಬಿಡುತೇವೆ.
"Don't judge a book by its cover" ಆಂಗ್ಲ ಭಾಷೆಯ ಈ ಪ್ರಸಿದ್ಧ ನಾಣ್ಣುಡಿ ನಾವೆಲ್ಲ ಕೇಳಿದ್ದಿವೆ . ಇದರ ಆರ್ಥ ಇಷ್ಟೇ ಯಾವುದನ್ನೇ ಆಗಲಿ , ಯಾರನ್ನೇ ಆಗಲಿ ಕೇವಲ ಬಾಹ್ಯ ನೋಟದಿಂದ ಅದರ ಅಥವಾ ಅವರ ಮೌಲ್ಯವನ್ನು ನಿರ್ದರಿಸಬಾರದು.
" ನಿನ್ನ ದ್ರಷ್ಟಿಕೋನದಿಂದ ಎಂದಿಗೂ ಬೇರೆಯವರ ವರ್ತನೆ ಬಗ್ಗೆ ನಿರ್ಣಯಿಸಬೇಡ. ಅವರ ಮನಸ್ಸಿನೊಳಗಿನ ಆಲೋಚನೆ , ಅವರ ಇತಿ ಮಿತಿಯ ಬಗ್ಗೆ ನಿನಗೆ ಏನು ಗೊತ್ತಿಲ್ಲ. ಅವರ ಪರಿಚಯ ನಿನಗಿರಬಹುದು ಆದರೆ ಅವರ ಮನಸಿನ ಪರಿಚಯ ಖಂಡಿತವಾಗಿಯೂ ನಿನಗಿಲ್ಲ"
ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಇಂತಹ ಎಷ್ಟೋ ಸಂದರ್ಭಗಳು ಎದುರಾಗುತ್ತವೆ. ಸ್ನೇಹಿತರ ಬಗ್ಗೆನೇ ಮಾತಾನೋಡದಾದ್ರೆ 4 ಜನ ಸ್ನೇಹಿತರು. ಒಟ್ಟಿಗೆ ಒಂದೇ ಕಾಲೇಜು ಒಂದೇ ತರಗತಿಯಲ್ಲಿ ಓದುತ್ತ ಇದ್ದಾರೆ. ಎಲ್ಲರ ಮನೆಯ ಆರ್ಥಿಕ ಪರಿಸ್ಥಿತಿ ವಿಭಿನ್ನ . ಆದರೆ ಸಾಮಾನ್ಯವಾಗಿ ಯಾರು ತಮ್ಮ ಮನೆಯವರ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಚಹಾ ಕುಡಿಯಲು ಹೋಗುವಾಗ ಒಬ್ಬ ದುಡ್ಡು ಕೊಡಲು ಯಾವಾಗಲು ಹಿಂದೆ ಮುಂದೆ ನೋಡುತ್ತಾನೆ. ತಕ್ಷಣ ಉಳಿದವರು ಈ ಮಲ್ಲ ಕುರೆ ಮಾರಾಯ ಅಂತ ತಮಾಷೆ ಮಾಡಲಾರಂಭಿಸುತ್ತಾರೆ. ನೀನು ದೊಡ್ಡ ಜಿಪುಣ ಮರೆಯ ಅಂತ ಹೇಳಿ ನಗುತಾರೆ. ಇದು ಸಾಮಾನ್ಯವಾಗಿ ಎಲ್ಲರ ಜೀವನದಲ್ಲೂ ನಡೆಯುವ ಸಂಗತಿ. ಆದರೆ ಒಂದು ಚಹಾ ತೆಗೆದುಕೊಡುವಷ್ಟು ಆರ್ಥಿಕ ಸ್ಥಿತಿಯಲ್ಲಿ ಅವನಿಲ್ಲ ಎಂದು ಯಾರು ಕೂಡ ಯೋಚಿಸಲ್ಲ. ಇಂತಹ ಸಂದರ್ಭಗಳು ಎಷ್ಟೋ ಬಾರಿ ನಮ್ಮೆಲ್ಲರ ಜೀವನದಲ್ಲಿ ಎದುರಾಗಿರುತ್ತೆ ಅಲ್ವ. ಕೆಲಸ ಮುಗಿಸಿ ಮನೆಗೆ ಬಂದಾಗ ಹೆಂಡತಿಯೋ , ಇಲ್ಲ ಅಮ್ಮನೋ ಮಲಗಿರುತ್ತಾರೆ. ಅಂದು ಬಿಸಿ ಬಿಸಿ ಕಾಫಿ ತಯಾರಿರೋದಿಲ್ಲ. ಒಮ್ಮೆಲೇ ಸಿಟ್ಟು ನೆತ್ತಿಗೇರಿಬಿಡುತ್ತೆ. ನಾನು ಬೆಳಿಗ್ಗೆಯಿಂದ ಕಷ್ಟ ಪಟ್ಟು ಕಚೇರಿ ಕೆಲಸ ಮುಗಿಸಿ ಮನೆಗೆ ಬಂದ್ರೆ ನೀನು ಆರಾಮಾಗಿ ಇನ್ನು ಮಲಗೆ ಇದ್ದೀಯ ಅಂತ ರೇಗಿ ಬಿಡುತೇವೆ. ಪಾಪ ಅಮ್ಮನಿಗೆ ಇಲ್ಲ ಪತ್ನಿಗೆ ಅವತ್ತು ತುಂಬಾ ತಲೆನೋವು . ಎದ್ದೇಳಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ. ಆದರೆ ನಮ್ಮ ತಲೆಗೆ ಅವರು ಆರಾಮವಾಗಿ ಮಲಗಿದ್ದರೆ ಅನಿಸಿಬಿಡುತ್ತೆ ವಿನಾ ಅರಾಮಿಲ್ಲವೋ ಏನೋ, ಆರೋಗ್ಯಸರಿ ಇಲ್ಲವೋ ಏನೋ ಎನ್ನುವ ದಿಕ್ಕಿನಲ್ಲಿ ನಮ್ಮ ಮನಸು ಓಡೋದೇ ಇಲ್ಲ. ಇದು ನಮ್ಮೆಲ್ಲರ ಕಥೆ. ನಾನು ಏನೋ ಹೀಗೆ ಇಲ್ಲಿ ಬರೆದ ತಕ್ಷಣ ನಾನು ಆ ದಿಕ್ಕಿನಲ್ಲಿ ಆಲೋಚನೆ ಮಾಡುತೇನೆ ಅಂತ ಆರ್ಥ ಅಲ್ಲ. ಎಲ್ಲರು ತಪ್ಪು ಮಾಡುತೇವೆ. ಅನೇಕ ಬಾರಿ ನಾನು ಯೋಚನೆ ಮಾಡದೇ ರೇಗಿದ್ದೇನೆ. ಆದರೆ ಆಮೇಲೆ ನಿಜ ತಿಳಿದು ಕೊರಗಿದ್ದೇನೆ ಕೂಡ. ಅದಕ್ಕೆ ಹೇಳೋದು ಜೀವನದಲ್ಲಿ ಪರಿಪೂರ್ಣ ಮನುಷ್ಯನಾಗೋದು ಅಷ್ಟೊಂದು ಸುಲಭ ಇಲ್ಲ. ಹಾಗಂತ ಪ್ರಯತ್ನ ಮಾಡದೇ ಕೂಡ ಇರಬಾರದು!
ಕೆಲವು ಸಮಯದ ಹಿಂದೆ ನಡೆದ ಘಟನೆ ನೆನಪಿಗೆ ಬರುತ್ತಿದೆ. ಪಾಪ ಒಬ್ಬ ಪೊಲೀಸಪ್ಪ ಹೃದಯಾಘಾತಕ್ಕೆ ಒಳಗಾಗಿ ತನ್ನ ಕಾರಿನೊಳಗೆ ಕುಳಿತು ಒಡ್ಡಾಡ್ಡುತ್ತಿದ್ದರೆ ಜನ ಅವನು ಕುಡಿದ್ದಿದ್ದಾನೆ ಅಂತ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಳ್ಳಲಾರಂಬಿಸಿದ್ರು . ಅಷ್ಟೊಂದು ಜನ ಅಲ್ಲಿ ನೆರೆದಿದ್ರು ಯಾರು ಕೂಡ ಮತ್ತೊಂದು ದಿಕ್ಕಿನಲ್ಲಿ ಯೋಚನೆ ಮಾಡಲೇ ಇಲ್ಲ. ಜನ ಸಲ್ಪ ವಿಭಿನ್ನವಾಗಿ ಜನ ಅವತ್ತು ಆಲೋಚನೆ ಮಾಡಿದಿದ್ದಿದ್ರೆ ಮಾಡಿದಿದ್ದ್ರೆ ಸಕಾಲದಲ್ಲಿ ಅವನಿಗೆ ವೈದ್ಯಕೀಯ ನೆರವನ್ನು ಒದಗಿಸಿ ಪ್ರಾಣ ಉಳಿಸಿಕೊಳ್ಳಬಹುದಿತ್ತು.
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಹಿರಿಯರ ಗಾದೆ ಮಾತು ಎಂದಿಂದಿಗೂ ನಿಜ.ನಮ್ಮೊಡನೆ ಇರುವ ಜನರ ಬಗ್ಗೆ ಮಾತನಾಡೋದಾದ್ರೆ ನಾವು ಒಂದನ್ನು ನೆನಪಿಟ್ಟುಕೊಳ್ಳಬೇಕು. ಎಲ್ಲ ಸಂದರ್ಭಗಳು ಒಂದೇ ವಿಧದಲ್ಲಿ ಇರೋದಿಲ್ಲ.ಎಲ್ಲರ ಮನಸಿನೊಳಗೆ ಸಾವಿರಾರು ಯೋಚನೆಗಳು , ಭಾವನೆಗಳು ಸಮ್ಮಿಳಿತವಾಗಿರುತ್ತವೆ. ಹಾಗಾಗಿ ಯಾರ ವರ್ತನೆಯ ಬಗ್ಗೆಯೂ ಒಮ್ಮೆಲೇ ಕೋಪಗೊಳ್ಳುವುದು, ದುಡುಕಿ ಬಿಡುವುದು , ಇಲ್ಲ ಅವರ ಬಗ್ಗೆ ನಮ್ಮದೇ ಅಭಿಪ್ರಾಯವನ್ನು ವ್ಯಕತಪಡಿಸುವುದು ತಪ್ಪಾಗಿ ಬಿಡುತ್ತೆ. ತಾಳ್ಮೆ ಇರಲಿ. ಕೇಳುವ ವ್ಯವದಾನ ನಮ್ಮಲಿರಲಿ. ಒಳ್ಳೆ ವ್ಯಕ್ತಿತ್ವನ್ನು ನಮ್ಮಲ್ಲಿ ರೂಪಿಸಿಕೊಳ್ಳಲು ನಾವು ಪ್ರಯತ್ನ ಪಡುವ ಗೆಳೆಯರೇ.
ಪ್ರಕಾಶ್ /ಮಲೆಬೆಟ್ಟು
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.