ಕರೋನಾ ಭಯದ ರಾತ್ರಿ !

Sleepless night

Originally published in kn
Reactions 1
362
PAKASH DSOUZA
PAKASH DSOUZA 28 Apr, 2021 | 1 min read

ಕರೋನಾ ಭಯದ ರಾತ್ರಿ !


ಎರಡು ದಿನಗಳ ಹಿಂದೆ ಚಿಕ್ಕ ಮಗಳಿಗೆ ಸಣ್ಣಗೆ ಶೀತ ಜ್ವರ ಕಾಣಿಸಿಕೊಂಡಿತು. ಮಾಮೂಲಿ ವೈರಲ್ ಜ್ವರ ಅಂತ ಅಷ್ಟೊಂದು ತಲೆ ಕೆಡಿಸಿಕೊಳ್ಳಿಕೆ ಹೋಗಲಿಲ್ಲ . ಅಷ್ಟಕ್ಕೂ ಅವಳು ಅವತ್ತು ಸ್ವಿಮ್ಮಿಂಗ್ ಕ್ಲಾಸ್ಸಿಗೆ ಹೋಗಿದ್ದಳು ಮತ್ತೆ ಐಸ್ ಕ್ರೀಮ್ ಕೂಡ ತಿಂದಿದ್ದಳು. ಯಾವಾಗಲೂ ಸಲ್ಪ ಔಷದಿ ಮನೆಯಲ್ಲಿ ಶೇಖರಿಸಿ ಇಡುತ್ತೆವೆ. 5 ಎಂಲ್

 ಎಡಲ್ ಪ್ರತಿ 6 ಗಂಟೆಗೆ ಒಮ್ಮೆ ಎರಡು ದಿನಗಳ ಕಾಲ ಕೊಟ್ವಿ . ಶಾಲೆಗೂ ಕಳುಹಿಸಲಿಲ್ಲ . ಎರಡು ದಿನಗಳಲ್ಲಿ ಚೇತರಿಸಿಕೊಂಡಳು . ಆದರೆ ನಿನ್ನೆ ಮದ್ಯಾಹ್ನದ ಹೊತ್ತಿಗೆ ದೊಡ್ಡ ಮಗಳು ಗಂಟಲು ನೋವಾಗುತ್ತೆ ಅಂತ ಹೇಳತೊಡಗಿದಳು . ಸಂಜೆ ಹೊತ್ತಿಗೆ ಶೀತದ ಜೊತೆ ಜ್ವರ ಕೂಡ ಕಾಣಿಸಿಕೊಂಡಿತು . ಅವಳಿಗೂ ಎಡಲ್ 10 ಎಂಲ್ ಕೊಟ್ವಿ . ಸಮಯ ರಾತ್ರಿ 9 ಆಗಿತ್ತು . ಅಷ್ಟರಲ್ಲಿ ಬಂದ ಕರೆ ನಮ್ಮನ್ನು ನಡುಗಿಸಿ ಬಿಟ್ಟಿತು .

ಕಳೆದವರವಷ್ಟೇ ಮನೆಗೆ ಭೇಟಿ ನೀಡಿದ ಪರಿಚಯಸ್ಥರ ಕರೆ ಅದು . ಅವರ ಸಹೋದ್ಯೋಗಿಗೆ ಕೋವಿಡ್ 19 ಪಾಸಿಟಿವ್ ಆಗಿ ಬಿಟ್ಟಿದೆ ಮತ್ತು ಅವರಲ್ಲೂ ಲಕ್ಷಣಗಳು ಕಾಣಿಸಿಕೊಂಡಿದೆ . ಮಕ್ಕಳು ಹೇಗಿದ್ದಾರೆ ತೊಂದರೆ ಇಲ್ಲ ಅಲ್ವ ಎನ್ನುವ ಕಾಳಜಿಯ ಕರೆ ಆಗಿತ್ತು ಅದು .ಮೊದಲೇ ದೊಡ್ಡ ಮಗಳು ಅರೋಗ್ಯ ವಿಷಯದಲ್ಲಿ ತುಂಬಾ ಸೂಕ್ಷ್ಮ . ಹಾಗಾಗಿ ಕಳೆದ ಒಂದು ವರುಷದಿಂದ ಶಾಲೆಗೂ ಕೂಡ ಕಳುಹಿಸದೆ ಆನ್ಲೈನ್ ತರಗತಿಯ ಮೂಲಕ ಕಲಿಯುತ್ತಿದ್ದಾಳೆ . ಈಗ ಹೊಸ ತಲೆ ನೋವು ಸುರು ಆಯಿತು . ರಾತ್ರಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು .

ಮೂಗು ಸಂಪೂರ್ಣ ಬ್ಲಾಕ್ ಆಗಿ ಉಸಿರಾಡಲು ಆಗುತಿರಲಿಲ್ಲ . ಬಾಯಿಂದ ಉಸಿರಾಡುತಿದ್ದಳು . ಶೀತ ನಿರಂತರವಾಗಿ ಇಡೀ ರಾತ್ರಿ ಕಾಡಿತು ಅವಳನ್ನು . ಹಾಗೆ ಜ್ವರ ಕೂಡ . ನಮಗೆ ಒಂದೇ ಒಂದು ಕ್ಷಣ ನಿದ್ರೆ ಬರಲಿಲ್ಲ . ರಾತ್ರಿ ಕುಡಿಯುವ ನೀರಿನಲ್ಲಿ ದೊಡ್ಡಪತ್ರೆ ಗಿಡದ ಎಲೆ ಮತ್ತು ತುಳುಸಿ ಎಲೆ ಹಾಕಿ ಎರಡು ಮೂರೂ ಬರಿ ಸ್ಟೀಮ್ ಕೊಟ್ವಿ . ನೆಬ್ಯುಲೈಜರ್ ಯಂತ್ರದ ಮೂಲಕ ಕೂಡ ಸ್ಟೀಮ್ ಕೊಟ್ವಿ . ಕಾಳು ಮೆಣಸಿನ ಪುಡಿ ಜೇನು ತುಪ್ಪದಲ್ಲಿ ಬೆರೆಸಿ ತಿನ್ನಿಸಿದಳು ಪತ್ನಿ . ಆದ್ರೂ ಯಾವುದೇ ಸಮಾಧಾನ ಇಲ್ಲ . ಇಡೀ ರಾತ್ರಿ ಒದ್ದಾಡಿಬಿಟ್ಟಳು . ಎಷ್ಟೇ ಪಾಸಿಟಿವ್ ಆಗಿ ಯೋಚಿಸಬೇಕು ಅಂದ್ರು ಇಲ್ಲಿ ಪ್ರಶ್ನೆ ಪುಟ್ಟ ಮಗಳ ಆರೋಗ್ಯದ್ದು . ಹೇಗೆ ಮನ ಸಮಾಧಾನ ಗೊಳ್ಳುತ್ತೆ ಅಲ್ವ . ನಾವು ಕೂಡ ಒಂದು ಕ್ಷಣ ಮಲಗಲಿಲ್ಲ . ಬೆಳಿಗ್ಗೆ ಅವಳನ್ನು ಕರೆದುಕೊಂಡು ಸೀದಾ ಆಸ್ಪತ್ರೆಯ ಎಮರ್ಜೆನ್ಸಿ ಡಿಪಾರ್ಟ್ಮೆಂಟ್ ಗೆ ಕರೆದುಕೊಂಡು ಹೋದೆ . ವೈದ್ಯರು ಪರೀಕ್ಷಿಸಿ ಸಾದಾರಣ ವೈರಲ್ ಜ್ವರ ಇರಬಹುದು . ಯೋಚನೆ ಮಾಡಬೇಡಿ . ಹಾಗೆ ಕೋವಿಡ್ ಪರೀಕ್ಷೆ ಕೂಡ ಮಾಡುವ ಅಂತ ಹೇಳಿ ಔಷದಿ ಬರೆದು ಕೊಟ್ಟರು . ಕರೋನ ಪಾಸಿಟಿವ್ ಬಂದ್ರು ಯೋಚನೆ ಬೇಡ . ಇದೆ ಔಷದಿ ತೆಗೆದು ಕೊಳ್ಳಲಿ . ತೀರಾ ಉಸಿರಾಟದ ತೊಂದ್ರೆ ಬಂದ್ರೆ ಮಾತ್ರ ಮತ್ತೆ ಕರೆದು ಕೊಂಡು ಬನ್ನಿ ಅಂತ ಹೇಳಿದ್ರು . ಸಲ್ಪ ಮನಸಿಗೆ ಸಮಾಧಾನ ಆಯಿತು . ಮನೆಗೆ ಬಂದು ಔಷದಿ ಕೊಟ್ಟು ಮಲಗಲು ಹೇಳಿದ್ವಿ . ಸಂಜೆ ಹೊತ್ತಿಗೆ ಮೊಬೈಲ್ ಗೆ ಸಂದೇಶ ಬಂತು . ಕೋವಿಡ್ 19 ನೆಗೆಟಿವ್ ಅಂತ . ಅಬ್ಬಾ ಒಮ್ಮೆಲೇ ಸಮಾಧಾನದ ನಿಟ್ಟುಸಿರು ಬಿಟ್ವಿ . ಪಾಪ ಮಗ ಇಡೀ ರಾತ್ರಿ ಒದ್ದಾಡಿ ಬಿಟ್ಟಿದ್ಲು . ಅದರ ಜೊತೆ ನಮ್ಮ ಭಯ ಕೂಡ ಸೇರಿ ನಮ್ಮ ನೆಮ್ಮದಿ ಹಾಳಾಗಿತ್ತು .


ಕೋವಿಡ್ ಸ್ವ್ಯಾಬ್ ಪರೀಕ್ಷೆಗಾಗಿ ಆ ಕಡ್ಡಿಯನ್ನು ಮೂಗಿನ ಒಳಗೆ ತೂರಿಸಿದಾಗ ಎಷ್ಟೊಂದು ನೋವು ಅನುಭವಿಸಿದಳು ಪಾಪ . ಆದರೂ ನಾವು ಪುಣ್ಯ ಮಾಡಿದ್ದೀವೆ . ಕೊರೋನಾ ದಿಂದ ಭಗವಂತ ಇದುವರೆಗೂ ನಮ್ಮನ್ನು ಕಾಪಾಡಿದ್ದಾನೆ . ಅಷ್ಟಕ್ಕೂ ಸೂಕ್ತ ಚಿಕೆತ್ಸೆ ಸೂಕ್ತ ಸಮಯದಲ್ಲಿ ದೊರಕುವ ಸ್ಥಳದಲ್ಲಿ ಇರುವ ಭಾಗ್ಯ ದೊರೆತಿದೆ . ಆದರೆ ನಮ್ಮ ತಾಯಿ ನಾಡಿನಲ್ಲಿ ಜನರು ಅನುಭವಿಸುತ್ತಿರುವ ವೇದನೆ ಯೋಚನೆ ಮಾಡಿದ್ರೇನೇ ಭಯವಾಗುತ್ತೆ . ರೋಗ ಬಂದು ಸತ್ತರೆ ಪರವಾಗಿಲ್ಲ ಹೇಳ ಬಹುದು . ಆದರೆ ಸೂಕ್ತ ಚಿಕಿತ್ಸೆ , ಸೂಕ್ತ ಸೌಲಭ್ಯ ದೊರಕದೆ ಸಾವನ್ನಪ್ಪುವುದು ಯಾವ ನ್ಯಾಯ ! ಸತ್ತವರು ದೇವರಿಗೆ ಪ್ರಿಯರಾದ್ರು ಬಿಡಿ ಆದರೆ ಬದುಕಿಳಿದವ್ರು ಅನುಭವಿಸಿದ , ಅನುಭವಿಸುತ್ತಿರುವ ಆ ಮಾನಸಿಕ ವೇದನೆ ಸಂಕಟ ! ಅಮೆರಿಕದಂತಹ ದೈತ್ಯ ದೇಶವನ್ನೇ ಬಿಡದೆ ಕಾಡಿದ ಕೊರೊನದ ವಿರುದ್ಧ ಹೋರಾಡಲು ನಾವು ಸಮರೋಪಾದಿಯಲ್ಲಿ ಸಿದ್ಧರಾಗಬೇಕಿತ್ತು . ಆದರೆ ರಕ್ತ ಪಿಪಾಸು , ಅದಿಕಾರದಾಹಿ ರಾಜಕಾರಣಿಗಳು ತಮ್ಮ ಜವಾಬ್ದಾರಿ ಮರೆತು ಜನರ ಪ್ರಾಣದೊಂದಿಗೆ ಚೆಲ್ಲಾಟವಾಡಿಬಿಟ್ಟರು . ಇಲ್ಲಿ ವಿದಿಗೆ ದೂರಿ ಪ್ರಯೋಜನ ಇಲ್ಲ . ಆ ವಿಧಿಯನ್ನು ಬದಲಾಯಿಸಿದ 

ಆಡಳಿತ ವ್ಯವಸ್ಥೆ ಮತ್ತು ವಿರೋಧ ಪಕ್ಷ ಮತ್ತು ಅಧಿಕಾರಿಗಳು ಈ ಅನ್ಯಾಯದ ಸಾವುಗಳಿಗೆ ನೇರ ಹೊಣೆ !


ಪ್ರಕಾಶ್ ಮಲೆಬೆಟ್ಟು

1 likes

Published By

PAKASH DSOUZA

pakashdsouza

Comments

Appreciate the author by telling what you feel about the post 💓

Please Login or Create a free account to comment.