ಸಂವೇದನಾ ರಹಿತ ರಾಜಕಾರಣ ಸತ್ಪ್ರಜೆ (ಸತ್ತ ಪ್ರಜೆ) ಮತ್ತು ಮಾನವತೆಗೆ RIP

About Corona Time

Originally published in kn
Reactions 0
463
PAKASH DSOUZA
PAKASH DSOUZA 20 Apr, 2021 | 1 min read

ಕಳೆದೊಂದು ವಾರದಿಂದ ಮನಸು ಸರಿಯಿಲ್ಲ. ಸಾವಿನ ಮನೆಯಲ್ಲಿ ಯಾರ ಮನಸು ನೆಮ್ಮದಿಯಾಗಿರುತ್ತೆ ಅಲ್ವೇ. ನಮ್ಮ ಮನೆ ಸಾವಿನ ಮನೆಯಾಗಿಬಿಟ್ಟಿದೆ. ನಿನ್ನ ಒಂದೇ ದಿನ ನಮ್ಮ ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 146. ಆದರೆ ನಾವಿನ್ನು ನಿದ್ರಿಸುತಿದ್ದಿವೆ. ಬಿಡು ನಮ್ಮ ಮನೆಯಲ್ಲಿ ಯಾರಿಗೂ ಏನು ಆಗಿಲ್ಲವಲ್ಲ, ಕರೋನಾ ಅಂದ್ರೆ ಏನು ಎಂದು ಪ್ರಶ್ನೆ ಕೇಳುವ ಉದ್ಧಟತನವನ್ನು ತೋರಿಸುತಿದ್ದಿವೆ. ಎಷ್ಟರಮಟ್ಟಿಗೆ ಅಂದ್ರೆ ಮಾಸ್ಕ್ ಧರಿಸಿ ಓಡಾಡುವವರನ್ನು ವಿಚಿತ್ರವಾಗಿ ನೋಡುವ ಚಿತ್ರ ವಿಚಿತ್ರ ಮನಸ್ಥಿತಿ ನಮ್ಮಲ್ಲಿ ಹೆಚ್ಚಿನವರದ್ದು. ರಾಜಕಾರಣಿಗಳಿಗೆ ಗೆಲುವೊಂದೇ ಮಂತ್ರ. ಪ್ರಜೆಗಳ ಪ್ರಾಣದ ಬಗ್ಗೆ ಕಿಂಚಿತ್ತೂ ಕಾಳಜಿ ಅವರ ಹೃದಯದಲ್ಲಿಲ್ಲ. ಇದ್ದಿದ್ದಿರೆ ಚುನಾವಣಾ ರ್ಯಾಲಿಗಳನ್ನುನಡೆಸಲು ಮನಸಾದ್ರು ಹೇಗೆ ಬರ್ತಾ ಇತ್ತು ಅವ್ರಿಗೆ ? ನಿಜವಾಗ್ಲೂ ಹೃದಯ ಇದ್ದೀಯ ಅವ್ರಿಗೆ. ಎಷ್ಟೊಂದು ಸಂವೇದನಾ ಹೀನರು ಅಂದ್ರೆ ಒಬ್ಬ ರಾಜಕಾರಣಿಗೆ  ಅದೇಗೆ ದೇವ್ರು ಒಳ್ಳೆ ಬುದ್ದಿ ಕೊಟ್ಟರೋ ಗೊತ್ತಿಲ್ಲ ತನ್ನೆಲ್ಲ ಚುನಾವಣಾ ರ್ಯಾಲಿಗಳನ್ನು ಜನರಿಗೆ ತೊಂದ್ರೆ ಆಗೋದು ಬೇಡ ಅಂತ ರದ್ದು ಮಾಡಿದ್ರು. ಅವರ ವಿರೋಧಿ ಏನು ಹೇಳಿದ್ರು ಗೊತ್ತಾ ? ಚುನಾವಣೆಯನ್ನು ಸೋಲುವ ಭೀತಿಯಲ್ಲಿ ಅವರು ಚುನಾವಣಾ ಸಭೆಗಳನ್ನು ರದ್ದು ಮಾಡಿದ್ರು ಅಂತ. ಇಷ್ಟೊಂದು ಕಠೋರ ಮನಸು , ಹೃದಯ ಹೀನತೆ ಬಹುಶ್ಯ ಕೇವಲ ರಾಜಕಾರಣಿಗಳಿಗೆ ಮಾತ್ರ ಸದ್ಯ . ಸರಿ ಅವರು ಸೋಲುವ ಭೀತಿಯಿಂದ ರದ್ದು ಮಾಡಿದ್ರೆ ಮಾಡ್ಲಿ. ಆದರೆ ಅದರಿಂದಾಗಿ ಎಷ್ಟೋ ಜನ ಆ ಸಭೆಯಲ್ಲಿ ಕರೋನಾ ವೈರಸ್ಸಿಗೆ ತುತ್ತಾಗುವುದು ತಪ್ಪಿತಲ್ವಾ ಅದು ಮುಖ್ಯ ಅಲ್ವೇ. ಒಬ್ಬ ನಾಯಕ ಯಾವಾಗ ತನ್ನ ಒಬ್ಬ ಪ್ರಜೆಯ ಪ್ರಾಣಕ್ಕೂ ಮಹತ್ವ ಕೊಡುತ್ತಾನೋ ಅವನೇ ನಿಜವಾದ ಜನನಾಯಕ ಎನಿಸಿಕೊಳ್ಳುತ್ತಾನೆ. ಒಂದು ಚಿಕ್ಕ ಘಟನೆ ಹೇಳುತೇನೆ. ಹಲವು ವರುಷಗಳ ಹಿಂದೆ ದುಬೈಯಲ್ಲಿ ಒಂದು ರಸ್ತೆ ಬದಿಯ ಪಾದಚಾರಿಯ ರಸ್ತೆಯಲ್ಲಿ ನಾವು ನಡೆದುಕೊಂಡು ಹೋಗುತ್ತಿದ್ವಿ. ತುಂಬಾ ವಾಹನ ದಟ್ಟಣೆಯ ಮಾರ್ಗ ಅದು. ಇದ್ದಕಿದ್ದಂತೆ ಪೊಲೀಸ್ ವಾಹನದ ಸೈರನ್ ಕೇಳಿಸಲಾರಂಭಿಸಿತು. ನೋಡು ನೋಡುತ್ತಿದ್ದಂತೆ 6 ಪೊಲೀಸ್ ವಾಹನಗಳು ಬಂದು ಆ ರಸ್ತೆಯ ದಿಕ್ಕಿನಲ್ಲಿ ತಮ್ಮ ವಾಹನವನ್ನು ಅಡ್ಡಲಾಗಿ ನಿಲ್ಲಿಸಿ ವಾಹನ ಸಂಚಾರವನ್ನು ನಿರ್ಬಂಧಿಸಿದರು. ಮೇಲಿನಿಂದ ಹೆಲಿಕ್ಯಾಪ್ಟರ್ ಶಬ್ದ ಕೇಳಿಬಂತು. ಅದೇ ಸಮಯಕ್ಕೆ ಒಂದು ಆಂಬುಲೆನ್ಸ್ ಕೂಡ ಧಾವಿಸಿ ಬಂತು. ನಮ್ಮ ಕಣ್ಣೆದುರೇ ಆ ಹೆಲಿಕಾಪ್ಟರ್ ರಸ್ತೆಯ ನಡುಭಾಗದಲ್ಲಿ ಬಂದು ಇಳಿಯಿತು. ಆಂಬುಲೆನ್ಸ್ ನಲ್ಲಿ ಮಲಗಿದ್ದ ಒಬ್ಬ ವ್ಯಕ್ತಿಯನ್ನು ಕ್ಷಣಮಾತ್ರದಲ್ಲಿ ಹೆಲಿಕಾಪ್ಟರಿಗೆ ವರ್ಗಾಯಿಸಿ ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಹೋದ್ರು. ಇಷ್ಟೆಲ್ಲ 5 ನಿಮಿಷಗಿಂತಲೂ ಕಡಿಮೆ ಅವಧಿಯಲ್ಲಿ ನಮ್ಮ ಕಣ್ಣೆದುರಿಗೆ ನಡೆಯಿತು. ಅಷ್ಟು ಸಮಯ ಬೇರೆಲ್ಲ ವಾಹನಗಳು ಕಾಯುತ ನಿಂತುಕೊಂಡಿದ್ವು. ಇದನೆಲ್ಲ ಮೊಬೈಲ್ ನಲ್ಲಿ ಸೆರೆ ಕೂಡ ಹಿಡಿದಿದ್ವಿ. ಆಮೇಲೆ ವಿಚಾರಿಸಿದಾಗ ತಿಳಿಯಿತು , ಒಬ್ಬ ಸಾಮಾನ್ಯ ಭಾರತೀಯ ಕಾರ್ಮಿಕನಿಗೆ ಹೃದಯಾಘಾತ ವಾಗಿತ್ತು. ಆಂಬುಲೆನ್ಸ್ ನಲ್ಲಿ ಅವನಿಗೆ ಪ್ರಥಮ ಚಿಕೆತ್ಸೆ ಮಾಡಿ ನಂತ್ರ ಪ್ರಾಣಾಪಾಯ ಇದ್ದುದರಿಂದ ಹೆಲಿಕಾಪ್ಟರ್ ನಲ್ಲಿ ಎತ್ತುಕೊಂಡು ಹೋದ್ರು. ಇದು ಸರ್ಕಾರಗಳ ತಮ್ಮ ಪ್ರಜೆಗೆ ಮಾಡಬೇಕಾಗಿರುವ ಕರ್ತವ್ಯ. ಆದರೆ ಹೇಳಲು ದುಖ್ಖವಾಗುತ್ತೆ, ನಮ್ಮಲ್ಲಿ ಪ್ರಜೆಗಳ ಪ್ರಾಣಕ್ಕೆ ಬೆಲೆ ಇದೆಯೇ! ಸ್ವಾತಂತ್ರ್ಯ ಬಂದಾಗಿನಿಂದ ರಾಜಕಾರಣಿಗಳ ಮೂರ್ಖ ನಿರ್ಧಾರಗಳಿಗೆ ಎಷ್ಟೊಂದು ಮುಗ್ಧ ಜನ ತಮ್ಮ ಪ್ರಾಣ ತೆತ್ತಿಲ್ಲ. ಜನರ ಪ್ರಾಣವನ್ನು ಬಲಿಗೊಟ್ಟು ಇವರು ಚುನಾವಣಾ ಗೆದ್ದು ವಿಕಟ ನಗೆ ನಗುತಾರೆ .  ಭಾರತ ಎಷ್ಟೋ ರಾಷ್ಟ್ರಗಳಿಗೆ ಕರೋನ ಲಸಿಕೆ ಕಳುಹಿಸಿ ಮಾನವತೆ ಮೆರೆಯಿತು ಅಂತ ಹೆಮ್ಮೆ ಪಡುತೇವೆ. ಆದರೆ ಇನ್ನೊಂದು ದಿಕ್ಕಿನಲ್ಲಿ ಯೋಚನೆ ಮಾಡೋದೇ ಇಲ್ಲ. ಭಾರತ ಲಸಿಕೆ ಮುಕ್ತವಾಗಿ ಹಂಚಿಲ್ಲ. ಆಯಾ ದೇಶಗಳು ತಮ್ಮ ದೇಶದ ಪ್ರಜೆಗಳ ಕ್ಷೇಮಕೋಸ್ಕರ ಎಲ್ಲೆಲ್ಲಿ ಲಸಿಕೆ ಸಿಗುತ್ತದೆಯೋ ಅಲ್ಲಿಂದ ಹಣ ತೆತ್ತು ಆಮದು ಮಾಡಿ ಕೊಂಡಿವೆ. ಯುಎಇ ಉದಾಹರಣೆ ಕೊಡೋದಾದ್ರೆ ಅದು ಭಾರತದಿಂದ ಕೂಡ ಲಸಿಕೆ ಹಣ ತೆತ್ತು ತರಿಸಿಕೊಂಡಿದೆ. ಆದರೆ ಇಲ್ಲಿ ಅದು ಭಾರತೀಯ ಪ್ರಜೆಗಳಿಗೂ ಕೂಡ ಲಸಿಕೆ ಉಚಿತವಾಗಿ ನೀಡುತ್ತಿದೆ. ಆದರೆ ನಮಗೆ ಇದನೆಲ್ಲ ಅರ್ಥ ಮಾಡಿಕೊಳ್ಳೋದೇ ಬೇಕಾಗಿಲ್ಲ. ನಾವು ವಿಶ್ವನಾಯಕರು ಅಂತ ಬಿಗುತೇವೆ. ಅದಕ್ಕೆ ಹೇಳೋದು ರೋಮ್ ಹೊತ್ತಿ ಉರಿಯುತ್ತಿರುವಾಗ ನಿರೋ ಪಿಟೀಲ್ ಬಾರಿಸುತ್ತಿದ್ದ ಅಂತ. ನಮ್ಮ ಕಥೆ ಹಾಗೆ ಹಾಗಿದೆ. ಜನ ಬೀದಿಯಲ್ಲಿ ಬಿದ್ದು ಸಾಯುತ್ತಿದ್ದಾರೆ ಆದರೆ ನಾವು ವಿಶ್ವ ನಾಯಕರಾಗಲು ಹೊರಟುಬಿಟ್ಟಿದೇವೆ. ಆದ್ರೆ ಅವರಿಗೆ ನಾವು ಏನು ಕೂಡ ಹೇಳಿ ಪ್ರಯೋಜನ ಇಲ್ಲ. ಯಾಕೆಂದ್ರೆ ನಾವೆಲ್ಲ ಭಾರತದ ಹೆಮ್ಮೆಯ (ಸತ್ತ ಪ್ರಜೆಗಳು) ಸತ್ಪ್ರಜೆಗಳು.ನಿದ್ರೆ ಯಿಂದ ಎದ್ದೇಳುವ ತನಕ ರಾಜಕಾರಣಿಗಳು ತಮ್ಮ ಕಳ್ಳಾಟವನ್ನು ನಿಲ್ಲಿಸಲ್ಲ. ಆದರೆ ನಾವು ಮೂರ್ಖ ಜನ ಭಕ್ತ ಗುಲಾಮ ಅಂತ ಸಾಮಾಜಿಕ ಮಾಧ್ಯಮಗಳಲ್ಲಿ ಕುಳಿತುಕೊಂಡು ಜೈಕಾರ ಹಾಕುತ್ತ , ಇಲ್ಲವೇ ತೆಗಳುತ್ತ ನಮ್ಮ ಕರ್ತವ್ಯವನ್ನು ಮರೆತು ಬಿಟ್ಟಿದ್ದಿವೆ. ಹಿಂದೆ ಬ್ರಿಟಿಷರು ಒಡೆದು ಅಳುತಿದ್ದರು . ಇಂದು ರಾಜಕಾರಣಿಗಳು ಅದೇ ಆಟ ಅಡಿ ತಮ್ಮ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇನ್ನು ಮಾಧ್ಯಮಗಳು ರಾಜಕಾರಣಿಗಳ ಗುಲಾಮರಾಗಿ ತಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಮರೆತು ಬಿಟ್ಟಿವೆ. ಇಲ್ಲಿ ಮಾನವತೆ ಅಂದ್ರೆ ಏನು ಅಂತ ನಮಗೆ ಮರೆತೇ ಹೋಗಿದೆ. ಕರೋನ ಬಂದಿದೆ ಅಂತ ತಮ್ಮ ವಯಸಾದ ಅಪ್ಪನನ್ನು ಒಬ್ಬಂಟಿಯಾಗಿ ಮನೆಯಲ್ಲಿ ಬಿಟ್ಟು ತೆರಳಿದ ಮೂರೂ ಪುತ್ರಿಯರ ಬಗ್ಗೆ ನಿನ್ನೆ ಓದಿದೆ. ಎಲ್ಲಿದೆ ಮಾನವತೆ. ಮಗ ಕೈ ಬಿಟ್ರು ಮಗಳು ಕೈ ಬಿಡಲ್ಲ ಅಂತ ಹೇಳ್ತಾರೆ. ಆದ್ರೆ ಅದು ಕೂಡ ಸುಳ್ಳೇ ಅಂತ ಆ ಪುತ್ರಿಯರು ಸಾಬೀತು ಪಡಿಸಿದ್ರು. ಧರ್ಮದ ಪ್ರಶ್ನೆಬಂದಾಗ ಯಾವುದೇ ಮಟ್ಟಕ್ಕೆ ಇಳಿಯಲು ನಾವು ಹಿಂದೆ ಮುಂದೆ ನೋಡಲ್ಲ. ಆದರೆ ರಸ್ತೆ ಶಾಲೆ , ಆಸ್ಪತ್ರೆ , ಮೂಲಭೂತ ಸೌಕರ್ಯ ಒದಗಿಸಿ ಕೊಡಿ ಅಂತ ಕೇಳಲು ಮುಂದೆ ಬರಲ್ಲ. ಅದು ಯಾವುದಾದರು ಒಬ್ಬ ರಾಜಕಾರಣಿ ಏನೋ ಭಿಕ್ಷೆ ಕೊಟ್ಟವಂತೆ ಸಲ್ಪ ಒಳ್ಳೆ ಕೆಲಸ ಮಾಡಿದ್ರೆ ಅದು ಅವನ ಕರ್ತವ್ಯ , ಅವನು ಅದನ್ನು ಮಾಡಲೇಬೇಕು ಎನ್ನುವುದನ್ನು ಮರೆತು ಅವನನ್ನು ರಾಜನಂತೆ ಮೆರೆಸಿ ಬಿಡುತೇವೆ. ನಿಜವಾದ ದೇವರನ್ನು ಪರರಲ್ಲಿ ಕಾಣಬೇಕು ಎನ್ನುವುದು ನಮಗೆ ಅರ್ಥವೇ ಆಗೋಲ್ಲ. ಹೀಗಾಗಿ ಮಾನವತೆ ಸತ್ತು ಹೋಗಿ ಬಿಟ್ಟಿದೆ. ಇಂದು ಮಾನವತೆಗೆ RIP ಅನ್ನದೆ ವಿಧಿ ಇಲ್ಲ. ನಮಲ್ಲಿ ಸಲ್ಪ ಆದ್ರೂ ಮಾನವತೆ ಉಳಿದಿದ್ದ್ರೆ ಈ ರಾಜಕಾರಣಿಗಳಿಗೆ ಜೈಕಾರ ಹಾಕೋದನ್ನು ಬಿಟ್ಟು ನಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಕಾರ್ಯಮುಖರಾಗಬೇಕು ನಾವೀಗ.

ಪ್ರಕಾಶ್ ಮಲೆಬೆಟ್ಟು


0 likes

Published By

PAKASH DSOUZA

pakashdsouza

Comments

Appreciate the author by telling what you feel about the post 💓

Please Login or Create a free account to comment.