ಪ್ರೇಮ ವಿವಾಹದ ಬಗ್ಗೆ ಒಂದು ಧನಾತ್ಮಕ ಚಿಂತನೆ !

"ಮದುವೆ" ಮಾನವನ ಜೀವನದ ಒಂದು ಅಮೃತಗಳಿಗೆ. ಎರಡು ಆತ್ಮಗಳು ಒಂದಾಗಿ ಬೆಸೆದು ಒಂದೇ ಆತ್ಮವಾಗಿ ಹೊಸ ಜೀವನ ಆರಂಭಿಸಲು ಅನುಮತಿಸುವ ಒಂದು ಪವಿತ್ರ ಕಾರ್ಯ. " ಮದುವೆ " ಒಂದು ಪವಿತ್ರ ಅನುಬಂಧ.ಎರಡು ವ್ಯಕ್ತಿಗಳು , ಎರಡು ಕುಟುಂಬಗಳು ಪರಸ್ಪರ ಬದ್ಧರಾಗಿರುತ್ತೆವೆ ಎಂದು ಪ್ರಮಾಣೀಕರಿಸುವ ಒಡಂಬಡಿಕೆಯೇ ಈ ಮದುವೆ. ಸುಖ ಮತ್ತು ದುಃಖದಲ್ಲಿ , ಬದುಕಿನ ಯಾವುದೇ ಘಟ್ಟದಲ್ಲಿ ಪರಸ್ಪರ ಕೈ ಬಿಡದೆ ಒಂದಾಗಿ ಕಡೆ ತನಕ ಬಾಳುತ್ತೆವೆ ಎಂದು ನವ ವದು ವರರು ಮದುವೆಯ ದಿನ ಅಗ್ನಿಸಾಕ್ಷಿಯಾಗಿ, ದೇವರ ಸಾಕ್ಸಿಯಾಗಿ, ಗುರು ಹಿರಿಯರ ಆಶೀರ್ವಾದದೊಂದಿಗೆ ಪರಸ್ಪರ ಭಾಷೆ ಕೊಟ್ಟು ನವ ಬಾಳಿಗೆ ಕಾಲಿಡುತ್ತಾರೆ .

Originally published in kn
Reactions 0
513
PAKASH DSOUZA
PAKASH DSOUZA 11 Jan, 2021 | 0 mins read

"ಮದುವೆ" ಮಾನವನ ಜೀವನದ ಒಂದು ಅಮೃತಗಳಿಗೆ. ಎರಡು ಆತ್ಮಗಳು ಒಂದಾಗಿ ಬೆಸೆದು ಒಂದೇ ಆತ್ಮವಾಗಿ ಹೊಸ ಜೀವನ ಆರಂಭಿಸಲು ಅನುಮತಿಸುವ ಒಂದು ಪವಿತ್ರ ಕಾರ್ಯ. " ಮದುವೆ " ಒಂದು ಪವಿತ್ರ ಅನುಬಂಧ.ಎರಡು ವ್ಯಕ್ತಿಗಳು , ಎರಡು ಕುಟುಂಬಗಳು ಪರಸ್ಪರ ಬದ್ಧರಾಗಿರುತ್ತೆವೆ ಎಂದು ಪ್ರಮಾಣೀಕರಿಸುವ ಒಡಂಬಡಿಕೆಯೇ ಈ ಮದುವೆ. ಸುಖ ಮತ್ತು ದುಃಖದಲ್ಲಿ , ಬದುಕಿನ ಯಾವುದೇ ಘಟ್ಟದಲ್ಲಿ ಪರಸ್ಪರ ಕೈ ಬಿಡದೆ ಒಂದಾಗಿ ಕಡೆ ತನಕ ಬಾಳುತ್ತೆವೆ ಎಂದು ನವ ವದು ವರರು ಮದುವೆಯ ದಿನ ಅಗ್ನಿಸಾಕ್ಷಿಯಾಗಿ, ದೇವರ ಸಾಕ್ಸಿಯಾಗಿ, ಗುರು ಹಿರಿಯರ ಆಶೀರ್ವಾದದೊಂದಿಗೆ ಪರಸ್ಪರ ಭಾಷೆ ಕೊಟ್ಟು ನವ ಬಾಳಿಗೆ ಕಾಲಿಡುತ್ತಾರೆ .

" ಮದುವೆ" ಆಯಿತು ಅಂದ ತಕ್ಷಣ ಕೆಲವರು ಒಂದು ಪ್ರಶ್ನೆ ಮುಂದಿಡುತ್ತಾರೆ ! ಕುಟುಂಬದವರು ಸೇರಿ ಮಾಡಿದ ವ್ಯವಸ್ಥಿತ ಮದುವೆಯೋ ಅಥವಾ ಪ್ರೇಮ ವಿವಾಹವೋ ? ಇದಕ್ಕೆ ಉತ್ತರ ಹೇಳಿದೊಡನೆ ಪ್ರಶ್ನೆಗಳ ಸರದಿ ಮುಂದುವರೆಯುತ್ತದೆ. ಕೆಲವು ಮಡಿವಂತರು ಪ್ರೇಮ ವಿವಾಹ ಎಂದೊಡನೆ ಮೂಗು ಮುರಿಯೋದು ಕೂಡ ಇದೆ. ಪ್ರೇಮ ವಿವಾಹ ಹೆಚ್ಚುದಿನ ಬಾಳುವುದಿಲ್ಲ , ಮುಂದೆ ಅನೇಕ ಸಮಸ್ಯೆಗಳು ಬರ್ತವೆ ಎಂದು ಜನ ಮಾತನಾಡಿಕೊಳ್ಳುವುದು ಅನೇಕ ಬರಿ ನಾವು ಕೇಳಿರಬಹುದು. ಆದರೆ ವಾಸ್ತವತೆ ಏನು ? ಪ್ರೇಮ ವಿವಾಹ ನಿಜವಾಗ್ಲೂ ಸಮಸ್ಯೆಗಳನ್ನು ಉಂಟುಮಾಡುತ್ತದೆಯಾ ಎಂದು ಪ್ರಶ್ನಿಸಿದಾಗ ಏಕೋ ಹೃದಯ ಆ ಮಾತನ್ನು ಒಪ್ಪಲು ತಯಾರಿಲ್ಲ .

"ಮದುವೆ ಒಂದು ದೈವಿಕ ಬಂಧ. ಇಂತಿರುವಾಗ ಅದು ಪ್ರೇಮದ ಅಡಿಪಾಯದ ಮೇಲೆ ಕಟ್ಟಿದಾಗ ಇನ್ನೆಷ್ಟು ಗಟ್ಟಿಯಾಗಿ, ರೋಚಕವಾಗಿ ಇರಬಹುದು ಒಮ್ಮೆ ಯೋಚನೆಮಾಡಿ ನೋಡಿ. ಪ್ರೀತಿ ಯಾವಾಗಲು ಬೇಷರತ್ತಾಗಿರುತ್ತದೆ. ಅದೇ ಪ್ರೀತಿಯನ್ನು ನೀವು ಮದುವೆಯ ಬಂದದಲ್ಲಿ ಬಂದಿಸಿದಾಗ ಅದು ಮತ್ತಷ್ಟು ಗಟ್ಟಿಯಾಗುತ್ತದೆಯೇ ವಿನಃ ಬಿರುಕು ಬಿಡಲು ಸಾಧ್ಯವಿಲ್ಲ, ಆದರೆ ಅದು ಬೇಷರತ್ತಾದ ಪ್ರೀತಿ ಆಗಿದ್ದಾಗ ಮಾತ್ರ .

"ಹದಿಹರೆಯದ ಹುದಯದ ಪಿಸು ಮಾತು/ಕನಸು"

ಒಮ್ಮೆ ನಿಮ್ಮ ಹದಿಹರೆಯದ ಜೀವನದ ಬಗ್ಗೆ ಯೋಚನೆ ಮಾಡಿ ನೋಡಿ. ಹದಿ ಹರೆಯ ಕುದಿ ಹೃದಯ. ಒಮ್ಮೆಯಾದರೂ ಇಂಥ ಹುಡುಗಿ ನನ್ನ ಮನದಿನ್ನೇ ಯಾಗಿ ಬರಬೇಕು ಬಾಳಲಿ ಮುಂದೆ ಅಂತ ಹುಡುಗರು ಕನಸು ಕಂಡೆ ಕಂಡಿರುತ್ತಾರೆ . ಅಷ್ಟೇ ಅಲ್ಲ ಅನುಕೂಲಕರವಾದ ಪರಿಸ್ಥಿತಿ ಇದ್ದಲ್ಲಿ ಖಂಡಿತ ತಮ್ಮ ಮದುವೆಯಾಗುವ ತನಕ ಕೂಡ ಆ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಾರೆ .

ಇವಾಗ ಹೇಳಿ ಹುಡುಗರು ಅವಕಾಶ ದೊರೆತರೆ ಪ್ರೇಮ ವಿವಾಹ ಬೇಡ ಎನ್ನುತಾರೆಯೇ ? ಹಾಗೆ ಹುಡುಗಿಯರು ಕೂಡ ತಮ್ಮ ಕನಸಿನ ರಾಜನ ಬಗ್ಗೆ ಕನಸು ಖಂಡಿತವಾಗಲೂ ಕಂಡಿರುತ್ತಾರೆ . ಆದರೆ ಸಮಾಜದ ಕಟ್ಟು ಪಾಡುಗಳಿಂದಾಗಿ ತಮ್ಮ ಕನಸನ್ನು ಮರೆತು ಬಿಡುತ್ತಾರೆ . ಹುಡುಗರು ತಮ್ಮ ಮೆಚ್ಚಿನ ಬಂಗಾರದ ಬೊಂಬೆಯನ್ನು ಹಾಗೆ ಹುಡುಗಿಯರು ತಮ್ಮ ಕನಸಿನ ರಾಜಕುಮಾರನ್ನು ಸಂಗಾತಿಯನ್ನಾಗಿ ಪಡೆಯಲು ಸಾಧ್ಯವಿರುವುದು ಪ್ರೇಮ ವಿವಾಹದಲ್ಲಿ ಜಾಸ್ತಿ ಎನ್ನುವುದು ಅಲ್ಲಗೆಳೆಯಲಾಗದ ಸತ್ಯ . ಅಷ್ಟಕ್ಕೂ ನಿಮ್ಮ ಜೀವನ ಶಾಶ್ವತ ಏನು ಅಲ್ಲ . ಅಂತಿರುವಾಗ ನಿಮ್ಮ ಕನಸಿನ ಹುಡುಗ /ಹುಡುಗಿಯನ್ನು ಬಾಳಸಂಗಾತಿಯನ್ನಾಗಿ ಪಡೆಯಲು ಸದ್ಯ ಮಾಡುವ ಪ್ರೇಮ ವಿವಾಹ ಕೆಟ್ಟದಾಗಲೂ ಹೇಗೆ ಸದ್ಯ ಅಲ್ವೇ.!

"ಭವಿಷ್ಯದ ಬಗ್ಗೆ ಭರವಸೆ"

ಪ್ರೇಮ ವಿವಾಹದಲ್ಲಿ ನಿಮಗೆ ಚೆನ್ನಾಗಿ ಗೊತ್ತು, ನಿಮ್ಮ ಹುಡುಗನ /ಹುಡುಗಿಯ ಕನಸುಗಳೇನು! ಅವರ ಇಷ್ಟ, ಕೋಪ ತಾಪ ,ನಗು ಅಳು , ಮನೆತನ , ಎಲ್ಲದರ ಅರಿವು ನಮಗೆ ಇರುತ್ತದೆ. ವ್ಯವಸ್ಥಿತ ಮದುವೆ ಮೂಡುವಾಗ ಹುಡುಗಿಯ ತಂದೆ ತಾಯಿಗಳು ಮಿನ ಮೇಷ ಎಣಿಸಿ , ಏನೆಲ್ಲ ಲೆಕ್ಕಾಚಾರ ಮಾಡಿ ಒಳ್ಳೆ ಕಡೆ ಮದುವೆ ಮಾಡಿ ಕೊಡುತಿದ್ದಿವೆ ವೆಂಬ ನಂಬಿಕೆಯಿಂದ ತಮ್ಮ ಬೋಂಬೆ ಯನ್ನು ಅಪರಿಚಿತನಿಗೆ ಒಪ್ಪಿಸಿಬಿಡುತ್ತಾರೆ. ಆದರೆ ಒಂದು ದೊಡ್ಡ ತಪ್ಪು ಮಾಡುತ್ತಾರೆ ತಮ್ಮ ಬೊಂಬೆಯ ಕನಸು ಏನು ಎಂದು ವಿಚಾರಿಸುವುದಿಲ್ಲ. ಅಪ್ಪ ಅಮ್ಮನ ಮಾತಿಗೆ ಯಾವತ್ತೂ ಎದುರು ಹೇಳದ ಹುಡುಗಿ ಕಣ್ಣು ಮುಚ್ಚಿ ಮದುವೆ ಯಾಗಿ ಬಿಡುತ್ತಾಳೆ . ಅಲ್ಲಿಗೆ ಎಷ್ಟೋ ಬಾರಿ ಅವಳ ಕನಸು ನುಚ್ಚು ನೂರಾಗಿಬಿಡುತ್ತದೆ. ಮದುವೆ ಮಾಡಿಕೊಟ್ಟ ಮೇಲೆ ಪಶ್ಚಾತಾಪ ಪಡುತ್ತಿರುವ ಎಷ್ಟೋ ತಂದೆ ತಾಯಿ ಗಳನ್ನೂ ನಾವು ಸಮಾಜದಲ್ಲಿ ನೋಡುತ್ತೆವೆ. ವ್ಯವಸ್ಥಿತ ಮದುವೆ ಒಳ್ಳೇದಲ್ಲ ಎನ್ನುವುದು ನನ್ನ ಅಭಿಪ್ರಾಯ ಖಂಡಿತ ಅಲ್ಲ ಆದರೆ ಪ್ರೇಮ ವಿವಾಹದಲ್ಲಿ ನಮ್ಮ ವಯಕ್ತಿಕ ಕನಸುಗಳಿಗೆ ಹೆಚ್ಚಿನ ಬೆಲೆ ಇದೆ ಎಂದು ನನ್ನ ವಾದ.

"ಗೌರವ/ಸಮಾನತೆ"

ಪ್ರೇಮ ವಿವಾಹದಲ್ಲಿ ಪರಸ್ಪರ ಗೌರವ ಹಾಗು ಸಮಾನತೆಯ ಭಾವ ಹೆಚ್ಚು ಎಂದು ನನ್ನ ನಂಬಿಕೆ. ಎಷ್ಟೋ ಹುಡುಗಿಯರು ಮದುವೆಯಾದ ಮೇಲೆ ಅಡುಗೆ ಕೋಣೆ ಸೇರಿಬಿಡುವ ಸಾಧ್ಯತೆ ಹೆಚ್ಚು. ಆದರೆ ಪ್ರೇಮ ವಿವಾಹ ಆದ ದಂಪತಿಗಳು ಮದುವೆಗಿಂತ ಮುಂಚೆನೇ ತಮ್ಮ ಭವಿಷ್ಯದ ಬಗ್ಗೆ ಚರ್ಚೆ ಮಾಡಿರುತ್ತಾರೆ. ಪರಸ್ಪರ ಎಲ್ಲ ವಿಚಾರ ವಿನಿಮಯ ಮಾಡಿ. ಅರಿತು ನಂತ್ರ ಮದುವೆಯ ನಿರ್ಧಾರಕ್ಕೆ ಬರುತ್ತಾರೆ. ವ್ಯವಸ್ಥಿತ ಮದುವೆಯಲ್ಲಿ ಜಾಸ್ತಿ ಪುರುಷನ ಕೈ ಮೇಲಾಗಿರುತ್ತದೆ . ಪತ್ನಿ ಅವನ ಪ್ರತಿ ಮಾತಿಗೂ ಮೌನ ಸಮ್ಮತಿ ಕೊಡಬೇಕಾಗುವ ಸಂಭವನೀಯತೆಯೇ ಹೆಚ್ಚು . ಪ್ರತಿ ಕಾರ್ಯಕ್ಕೂ ಪತಿಯ/ಅವರ ಮನೆಯವರ ಅಪ್ಪಣೆ ಕೇಳಬೇಕಾಗುತ್ತದೆ. ಹೀಗೆ ಪುರುಷ ಪ್ರಧಾನವಾದ ಸಮಾಜದಲ್ಲಿ, ಅಸಮಾನತೆಯನ್ನು ಸರಿದೂಗಿಸಲು ಪ್ರೇಮ ವಿವಾಹದಿಂದ ಸದ್ಯ ಎಂದು ನನ್ನ ನಂಬಿಕೆ.

" ಬೇಡಿಕೆಗಳಿಲ್ಲದ ಅನುಬಂಧ"

ಪ್ರೇಮ ವಿವಾಹ ಒಂದು ಬೇಡಿಕೆಗಳಿಲ್ಲದ ಅನುಬಂಧ . ವರದಕ್ಷಿಣೆಯ ಪಿಡುಗಿಗೆ ಒಂದು ಸಮರ್ಥ ಉತ್ತರವೇ ಪ್ರೇಮ ವಿವಾಹ. ಇಲ್ಲಿ ನಮ್ಮ ಅಹಂಗೆ ಜಾಗವಿಲ್ಲ . ಅದ್ದೂರಿ ಮದುವೆಯಾಗಬೇಕು, ಸಮಾಜದಲ್ಲಿ ಎದ್ದು ಕಾಣಿಸುವಂತಿರಬೇಕು ಮದುವೆಯ ಕಾರ್ಯ ಹೀಗೆ ಯಾವ ಕಟ್ಟುಪಾಡು ಇಲ್ಲ. ಏಕೆಂದರೆ ಪರಸ್ಪರ ಅರಿವು ಪರಿಚಯ ಇರುವುದರಿಂದ ಇವೆಲ್ಲಗಿಂತ ತಮ್ಮ ಪ್ರೇಮವೇ ಶ್ರೇಷ್ಠ ವೆಂಬ ಭಾವನೆ ಇಬ್ಬರಲ್ಲೂ ಇರುತ್ತೆ. ಅದ್ದೂರಿ ಮದುವೆಗಳಿಗಿ ಕಡಿವಾಣ ಹಾಕಬಹುದು.

ಹಾಗಂತ ವ್ಯವಸ್ಥಿತ ಮದುವೆ ಕೆಟ್ಟದು ಅಂತ ಅಲ್ಲ. ಆದರೆ ಕ್ಷಣಿಕ ಲೋಕದಲ್ಲಿ ಮನಮೆಚ್ಚಿದವರನ್ನು, ಹಿರಿಯರ ಆಶೀರ್ವಾದದೊಂದಿಗೆ , ದೇವರ ಸನ್ನಿದಾನದಲ್ಲಿ ಪರಸ್ಪರ ಮದುವೆಯ ಬಂಧನದಲ್ಲಿ ಬೆಸೆದುಕೊಳ್ಳುವ ಅವಕಾಶ ದೊರೆತವರೇ ಆಶೀರ್ವದಿತರು ಎಂದು ನನ್ನ ಭಾವನೆ.

ಪ್ರಕಾಶ್/ ಮಲೆಬೆಟ್ಟು

0 likes

Published By

PAKASH DSOUZA

pakashdsouza

Comments

Appreciate the author by telling what you feel about the post 💓

Please Login or Create a free account to comment.