ನಮ್ಮ ದೇಶ ನಮ್ಮ ಹೆಮ್ಮೆ

Competition on poetry writing on the occasion of 74th Independence Day..

Originally published in kn
Reactions 2
2534
Madhu Kodanad
Madhu Kodanad 14 Aug, 2020 | 1 min read

ಹೇ ತಾಯಿ ಭಾರತಿ, ನಾವು ನಿನ್ನ ಸಂತತಿ, ಧಮನಿ ಧಮನಿಯಲ್ಲೂ ಬೆರೆತು ಕಲೆತಿದೆ ನಿನ್ನ ಸಂಸ್ಕೃತಿ |

ವಿವಿಧತೆಯಲಿ ಏಕತೆ, ಜೊತೆಗೆ ಇಹುದು ಸಭ್ಯತೆ, ಎಲ್ಲವನ್ನೂ ಬೆಸೆಯುತಿಹುದು ನಮ್ಮ ಭಾರತೀಯತೆ ||


ಹಲವು ಜಾತಿ ಮತ ಪಂಥದ ಆಳವಾದ ಬೇರಿದು ;

ಎಲ್ಲರನ್ನೂ ಜೊತೆಗೆ ಬೆಸೆದು ತಲೆ ಕಾಯುವ ಸೂರಿದು |

ವಿವಿಧ ಭಾಷೆ ಸಂಪ್ರದಾಯ ಮೇಳೈಸಿದ ತವರಿದು ;

ನಾಡು ನುಡಿಗೆ ಜೀವ ತೆತ್ತ ಬಿಸಿ ರಕ್ತದ ಬೆವರಿದು ||


ಹಿಮಗಿರಿಯ ತಪ್ಪಲಲ್ಲಿ ಕಾಶ್ಮೀರದ ಮುಕುಟ ;

ಕನ್ಯಾಕುಮಾರಿಯಲ್ಲಿ ಮನ ಸೆಳೆಯುವ ನೋಟ |

ಕಬ್ಬಿಗರಿಗೆ ಹಬ್ಬದೂಟ ಈ ದೇಶದ ಸೊಬಗು ;

ತಬ್ಬಿ ಸೆಳೆವುದು ಮನವ ಪ್ರಕೃತಿಯ ಬೆಡಗು ||


ಸಸ್ಯ ಕಾಶಿ ವನ್ಯ ರಾಶಿ ಧರೆಗಿಳಿದಿದೆ ಸ್ವರ್ಗ ;

ಮಾನವೀಯ ಮೌಲ್ಯ ನಮ್ಮ ಜೀವನ ಮಾರ್ಗ |

ಜಗ ಪೂಜಿಪ ಸಂತರು, ಹೃದಯದ ಶ್ರೀಮಂತರು ;

ನಮ್ಮ ದೇಶ ನಮ್ಮ ಹೆಮ್ಮೆ ನಾವು ಭಾರತೀಯರು ||

                    - ಮಧು ಕೋಡನಾಡು.

2 likes

Published By

Madhu Kodanad

madhukodanad

Comments

Appreciate the author by telling what you feel about the post 💓

  • Deepak Shenoy · 4 years ago last edited 4 years ago

    ಈ ಪದ್ಯದಲ್ಲಿ ಭಾರತ ಮಾತೆಯನ್ನು ಸುಂದರವಾಗಿ ವರ್ಣಿಸಿದ್ದೀರಿ.

Please Login or Create a free account to comment.