ನನ್ನ ಕವಿತೆ

My poem

Originally published in kn
Reactions 1
507
Madhu Kodanad
Madhu Kodanad 13 Sep, 2020 | 1 min read

ನನ್ನೆದೆಯ ಭಾವಗಳೇ ನಾ ಬರೆವ ಕವಿತೆ

ತನ್ನದಲ್ಲದ ಕಥೆಗೆ ಅನುಭವದ ಕೊರತೆ


ಕವಿತೆ ಎಂದರೆ ಪದವ ಕಟ್ಟುವುದೇ ಅಲ್ಲ

ಕವಿತೆ ಎಂದರೆ ಜನರ ಮುಟ್ಟುವುದೇ ಅಲ್ಲ

ಕವಿತೆ ಎಂದರೆ ಜಗವ ತಿದ್ದುವುದೇ ಅಲ್ಲ

ವರ್ತಮಾನಕೆ ಪದದ ಮದ್ದರೆವುದಲ್ಲ


ಕವಿತೆ ಎಂದರೆ ನನ್ನ ಭಾವಗಳ ಜಾತ್ರೆ

ಕವಿತೆ ಎಂದರೆ ನನ್ನ ಜೀವನದ ಯಾತ್ರೆ

ತಂತಾನೆ ಹೊರ ಚಿಮ್ಮೋ ನೀರ ಸೆಲೆಯಂತೆ

ಮನದ ಭಾವಗಳೆಲ್ಲ ಕಡಲ ಅಲೆಯಂತೆ


ಹೊಸತನದ ಕಥೆಗಳನು ನಾ ಹೆಣೆಯಲಾರೆ

ಹಳೆಯ ವ್ಯಥೆಗಳನೆಲ್ಲಾ ನಾ ಜರಿಯಲಾರೆ

ಜಗವ ಬೆಳಗಲು ನಾನು ಹಗಲ ರವಿಯಲ್ಲ

ಜನರ ಎದೆಯನು ತಣಿವ ಮುಗಿಲ ಮಳೆಯಲ್ಲ


ನನ್ನೆದೆಯ ಭಾವಗಳೇ ಈ ನನ್ನ ಹಾಡು

ಅನುಭವದ ಒರೆಯಲಿದೆ ಕವನಗಳ ಜಾಡು

ಹೃದಯದಾ ಭಾವಗಳು ಹೊಮ್ಮುವುದೇ ಕವಿತೆ

ಎದೆಯ ಕಲಕದ ಹಾಡು ಅದಕೆಲ್ಲಿ ಘನತೆ ?

- ಮಧು ಕೋಡನಾಡು.

1 likes

Published By

Madhu Kodanad

madhukodanad

Comments

Appreciate the author by telling what you feel about the post 💓

Please Login or Create a free account to comment.