ಗಜ಼ಲ್
ಹಸಿದು ಸಾಯಲಾಗದ್ದಕ್ಕೆ ಹಣೆಬರಹಗಳನ್ನು ಹುಡುಕುತ್ತಿದ್ದೇವೆ
ವರ್ತಮಾನ ಸಿಗಲಾರದ್ದಕ್ಕೆ ಇತಿಹಾಸವನ್ನು ಹುಡುಕುತ್ತಿದ್ದೇವೆ..
ಅವರಂತೂ ಅದೃಷ್ಟವಂತರು ಪ್ರೀತಿಯೇ ಸಿಕ್ಕಿಬಿಟ್ಟಿತ್ತು
ನಾವಿನ್ನೂ ಎದುರಿಗಿದ್ದೂ ಸಿಗಲಾರದವರನ್ನು ಹುಡುಕುತ್ತಿದ್ದೇವೆ..
ಕಾಲದ ಎಲ್ಲ ಪತ್ರಗಳು ಮುರಿದ ಟೊಂಗೆಗೆ ಬಡಿದು ಅಂಗಳದಲ್ಲೇ ಬೀಳುತ್ತವೆ
ನಾವೆಲ್ಲ ಬಣ್ಣದ ಚಿಟ್ಟೆಗಳ ವಿಳಾಸವನ್ನು ಹುಡುಕುತ್ತಿದ್ದೇವೆ..
ಅವಳ ಉಸಿರಿನಾಘಾತಕ್ಕೆ ಗಟ್ಟಿಮರಗಳೇ ಉರುಳುತ್ತಿವೆ ಇಲ್ಲಿ
ನಾವಿಲ್ಲಿ ಉತ್ತಮ ಫಸಲು ಕೊಡುವ ಬೀಜಗಳನ್ನು ಹುಡುಕುತ್ತಿದ್ದೇವೆ..
ಇದ್ದ ಮನೆಗಳನ್ನು ಕೆಡುವುತ್ತಿದ್ದಾರೆ ಚೇತನ ಅವಶೇಷಗಳನ್ನು ಹುಡುಕಲು
ನಾವಿನ್ನೂ ಒಡೆಯದ ಕನ್ನಡಿಗಳನ್ನು ಹುಡುಕುತ್ತಿದ್ದೇವೆ..
✍ಚೇತನ್ ನಾಗರಾಳ...
Paperwiff
by chetannagaral