ನಂಬಲೇ ನಿನ್ನ ಮಾಧ್ಯಮ

ಯಾವ ಅತಿಶಯವಿಲ್ಲದ ಸ್ಪಷ್ಟ ನೇರ ಸುದ್ದಿ ಪ್ರಸಾರವೇ ಒಳಿತಲ್ಲವೇ ಭ್ರಷ್ಟ ಮಾಧ್ಯಮದಿ ಕೊಳೆಯುತ್ತಿದೆ ಪ್ರಜಾಸತ್ತೆ ಮಾಧ್ಯಮ ನಂಬಲೇ ನಿನ್ನ?

Originally published in kn
Reactions 2
509
Chandramati G Vernekar
Chandramati G Vernekar 19 Sep, 2020 | 0 mins read

ನಂಬಲೇ ನಿನ್ನ ಮಾಧ್ಯಮ

ಬಣ್ಣ ಬದಲಿಸುವ ಗೋಸುಂಬೆ ನರ್ತನ

ಯಾವ ಪರದೇಸಿ ತಾಳಕ್ಕೆ ಕುಣಿತ

ಪ್ರಜೆಗಳ ದಿಕ್ಕು ತಪ್ಪಿಸುವ ತುಡಿತ


ಕಪ್ಪು ಬಿಳಿಯಾಗಿ‌ಸಿ ಬಿಳಿ ಕಪ್ಪಾಗಿಸಿ

ಅಸಹಿಷ್ಣು ಪುಢಾರಿ ಬಂಡವಾಳಿಗರ ಭೇರಿ

ಪಕ್ಷಕ್ಕೊಂದು ವಾಹಿನಿ ವಿಪಕ್ಷಕ್ಕೊಂದು ಪತ್ರಿಕೆ

ಚಾನೆಲ್ ಗಳ ಪ್ರವಾಹವಿದ್ದರೂ ವಸ್ತು ಸ್ಥಿತಿಗೆ ಬರ


ಭ್ರಷ್ಟ ಮಾಧ್ಯಮದಿ ಕೊಳೆಯುತ್ತಿದೆ ಪ್ರಜಾಸತ್ತೆ

ಯಾರ್ಯಾರ ಸೊತ್ತೋ ಮತ ಬ್ಯಾಂಕು ಬೇಟೆ

ಸುಟ್ಟ ನೈತಿಕತೆ ರಾಜಕಾರಣ ಕುಲಪಕ್ಷಪಾತ

ಚಿತ್ರ ನಟನೆಗೂ ಬೇಕೇ ಕೆಟ್ಟ ಕುಲಪಕ್ಷಪಾತ


ದಾರಿತಪ್ಪಿಸುವ ವೇಗ ಅಂತರ್ಜಾಲ

ಹಿಗ್ಗಿಸಿ ಕುಗ್ಗಿಸಿ ವೈಫಲ್ಯ ಸಾಫಲ್ಯ

ಧನದಾಹ ಆಮಿಷದಿ ಭೂಗತರ ಸಂಪರ್ಕ

ಮಾದಕ ಮಾಫಿಯಾ ತಿಳಿಗೊಳಿಸುವ ತರ್ಕ


ಭಾರತ ಮಾಧ್ಯಮ ದಾಟಿ ಸಭ್ಯತೆಯ ಮೇರೆ

ಹಳಿ ತಪ್ಪಿಸುವ ಕೂಗಾಟ ಅಭದ್ಧ ಪ್ರಲಾಪ

ಬಿಕರಿ ಮಾಧ್ಯಮಗಳು ಕಣ್ಣೊರೆಸುವ ಸಂದರ್ಶನ

ಘೋಟಾಲಾದಾರರೇ ಬೇಕೇ ಪಡೆದವರು ಜಾಮೀನ?


ಮಾಧ್ಯಮದಲ್ಲೂ ನೆರಳು ಮಾರ್ಕ್ಸಿಸ್ಟ್ ಭೂತ

ಮಕ್ಕಳ ಪಠ್ಯದಲೂ ಸೆಟೆ ಇತಿಹಾಸ ಪಾಠ

ದೇಶ ಸಂಸ್ಕೃತಿಯ ತುಳಿದು ದಾಳಿಕೋರರ ವೈಭವ

ಪಾತಕಿಯ ಬಗೆಗೆ ಘಂಟಾ ಘೋಷಕ್ಕೇಕೆ ಹಿಂಜರಿತ?


ಎಲ್ಲೋ ನೆಲಮಟ್ಟದ ಮುದ್ರಣ ಸರಳಸತ್ಯದ ತಿರುಳು

ನಿಜ ಬಾಯ್ದೆರೆದಾಗಲೆಲ್ಲ ಆತ್ಮ ಹತ್ಯೆಯ ಉರುಳು

ಸತ್ಯವೇಕೆ ತಿಳಿಯಾಗಿ ಮಡಿಸಿದೆ ತೋರುಬೆರಳು?


ಅಲ್ಲೊಂದು ಇಲ್ಲೊಂದು ಪತ್ರಿಕಾ ಧರ್ಮ ಧುನಿ

ಆಳುಗರ ತಿವಿದೆಚ್ಚರಿಸುವ ಪ್ರಾಮಾಣಿಕ ಧ್ವನಿ

ಅತಿಶಯವಲ್ಲದ ಸ್ಪಷ್ಟ ನೇರ ಸುದ್ದಿ ವಾಚನ

ಸತ್ಯಾಂಶದ ವರದಿಯಲ್ಲವೇ ವಿಚಾರಪೂರ್ಣ!!

* ಚಂದ್ರಮತಿ ಜಿ ವೆರ್ಣೇಕರ್



2 likes

Published By

Chandramati G Vernekar

chandramatigvernekar

Comments

Appreciate the author by telling what you feel about the post 💓

  • ARAVIND SHANBHAG, Baleri · 4 years ago last edited 4 years ago

    Uttama vicharavannu kavanada moolaka barediddiri. Abhinandane

  • Madhu Kodanad · 4 years ago last edited 4 years ago

    ಉತ್ತಮವಾಗಿದೆ

Please Login or Create a free account to comment.