ಮಾಸ್ಟರ್ *ಪೀಸ್

ಇಂದಿನ ಶಿಕ್ಷಣ ಪದ್ಧತಿಯ ಒಂದು ಮುನ್ನೋಟ

Originally published in kn
Reactions 0
539
Bhavani K
Bhavani K 02 Dec, 2020 | 1 min read

         *

ರಾಮನಗರ...

" ದೇವ್ರೇ ತುಂಬಾ ಕಷ್ಟ ಪಟ್ಟು ಓದಿ ಎಕ್ಸಾಂ ಬರೆದೆ..ಒಳ್ಳೆ ಅಂಕ ಬರುತ್ತೆ ಅಂತ ನಂಬಿಕೆ ಇದೆ..ಆ ನಂಬಿಕೆನಾ ಸುಳ್ಳು ಮಾಡ್ಬೇಡಾ..ಪ್ಲೀಸ್..!!! " ಕೈಮುಗಿದು ತನ್ನ ಬೇಡಿಕೆಯನ್ನು ಇಟ್ಟಳು ಸಿಂಧು.

" ಅಬ್ಬಾ..!! ಬೆಳಿಗ್ಗೆಯಿಂದ ಇದು ಹತ್ತನೇ 0ಬಾರಿ ಕಣೆ ನೀನು ದೇವರ ಮುಂದೆ ನಿಂತಿರೋದು..ಸಾಕು ಮಾಡು.." ಒಳಗಿನಿಂದ ಆಕೆಯ ತಾಯಿ ಸೀತಮ್ಮ ಅಡುಗೆ ಮಾಡುತ್ತಲೇ ಕೂಗಿದರು.

ಆಗ ಸಿಂಧುವಿನ ತಂದೆ ರಾಮಸ್ವಾಮಿ ಪೇಪರ್ ಓದುತ್ತಾ " ಯಾಕೆ ಹಾಗಂತೀಯಾ..ಮಗಳ

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಇವತ್ತು..ಟೆಂಷನ್ ಇರದೇ ಇರುತ್ತಾ..ಆಕೆಯ ನಂಬಿಕೆ..ಬೇಡಿಕೊಳ್ಳಲಿ ಬಿಡು..."

ಹಾಗೆ ಮಗಳ ಕಡೆ ತಿರುಗಿ " ಅಮ್ಮ ಸಿಂಧು..ಆಗಲೇ ಗಂಟೆ ಒಂಬತ್ತು ಆಯ್ತು..ರಿಸಲ್ಟ್ ನೋಡಲ್ವಾ..."

" ಇಲ್ಲ ಅಪ್ಪ..ಶಾಲೆಲೇ ನೋಡ್ತೀನಿ..ನನ್ನ ಫ್ರೆಂಡ್ಸ್ ಕೂಡ ಬರ್ತಿದ್ದಾರೆ..ಹೋಗಿ ನೋಡ್ಕೊಂಡು..ನಮ್ಮ ಟೀಚೆರ್ಸ್ನೆಲ್ಲ ಮಾತಾಡಿಸಿ ಬರ್ತೀನಿ.."

ಆಗ ಆಕೆಯ ತಾಯಿ " ಇಲ್ಲೇ ಫೋನಲ್ಲಿ ನೋಡಬಹುದು ತಾನೇ..ನಿನ್ನ ಶಾಲೆ ಇರೋದು ಪಕ್ಕದ ಊರಲ್ಲಿ..ಸುಮ್ಮನೆ ಬಸ್ ಹತ್ತಿ ಎಲ್ಲಾ ಯಾಕೆ ಹೋಗ್ತೀಯಾ..ಮಾರ್ಕ್ಸ್ಕಾರ್ಡ್ ತೊಗೊಳ್ಳೋವಾಗ ಹೋದರೆ ಆಯ್ತು.."

" ಅಮ್ಮ..ನಮ್ಮ ಟೀಚೆರ್ಸ್ಗೆ ಬಂದು ನಮ್ಮ ಫಲಿತಾಂಶ ಹೇಳ್ತೀವಿ ಅಂತ ಹೇಳಿದ್ದೀನಿ ನಾನು..ಇವಾಗ ಹೋಗಲಿಲ್ಲ ಅಂದ್ರೆ ಅವರು ಬೇಸರ ಮಾಡ್ಕೊತ್ತಾರೆ..ಬೇಗ ಹೋಗಿ ಬರ್ತೀನಿ..."

ಎಂದು ಹೇಳುತ್ತಾ ಮತ್ತೆ ಒಮ್ಮೆ ದೇವರನ್ನು ನೆನೆದು ಅಲ್ಲಿಂದ ಹೊರಟಳು.

ಬಸ್ಟ್ಯಾಪ್ನಲ್ಲಿ ಸಿಂಧುಳ ಸ್ನೇಹಿತೆಯರು ಆಕೆಗಾಗಿಯೇ ಕಾಯುತ್ತಿದ್ದರು...

ಎಲ್ಲರೂ ಮಾತನಾಡುತ್ತಲೇ ಶಾಲೆಗೆ ಸೇರಿದರು.

ಫಲಿತಾಂಶದಲ್ಲಿ ಸಿಂಧು ಶಾಲೆಗೆ ಮೊದಲ ರ್ಯಾಂಕ್ ಪಡೆದಿದ್ದಳು.

ಆಕೆಯ ಸ್ನೇಹಿತೆ " ಕಂಗ್ರಾಟ್ಸ್ ಸಿಂಧು..ಶಾಲೆಗೆ ಫರ್ಸ್ಟ್ ಬಂದಿದ್ಯಾ..ಒಳ್ಳೆ ಮಾರ್ಕ್ಸ್ ಕಣೆ.."

" ಥ್ಯಾಂಕ್ಸ್ ಸುಮಾ..ನನಿಗೂ ತುಂಬಾ ಖುಷಿಯಾಗ್ತಿದೆ..."

ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಎಲ್ಲ ಶಿಕ್ಷಕರು ಆಕೆಗೆ ಶುಭ ಕೋರಿದರು.

*********************************

" ಏನ್ರಿ.. ಸಿಂಧು ರಿಸಲ್ಟ್ ನೋಡಿ ಬರ್ತೀನಿ ಅಂತ ಹೋಗಿ ಮೂರು ಗಂಟೆ ಆಯ್ತು..ಇನ್ನು ಬಂದಿಲ್ಲ ಸ್ವಲ್ಪ ಹೋಗಿ ನೋಡಬಾರದಾ.." ಮಗಳ ಬರುವಿಕೆಗೆ ಕಾಯುತ್ತ ಕುಳಿತ್ತಿದ್ದರು ಅವರ ತಾಯಿ ಸೀತಮ್ಮ..

" ಯಾಕೆ ಅಷ್ಟೊಂದು ಗಾಭರಿಯಾಗ್ತೀಯಾ..ಮತ್ತೆ ಶಾಲಾ ದಿನಗಳು ಬೇಕು ಅಂದ್ರು ಸಿಗುತ್ತಾ..ಮಗಳು ಕೊನೆ ದಿನ ಅಂತ ಹೆಚ್ಚು ಹೊತ್ತು ಸಮಯ ಕಳೆಯೋಕೆ ಇಷ್ಟ ಪಡ್ತಿದ್ದಾಳೆ ಅನ್ಸುತ್ತೆ...ಬರ್ತಾಳೆ ಬಿಡು.."

" ಏನ್ರಿ ಹೀಗಂತೀರ ವಯಸ್ಸಿಗೆ ಬಂದ ಹೆಣ್ಣು ಮಗಳು ಹೊರಹೋಗಿ ಇಷ್ಟೋತ್ತಾದ್ರೂ ಬರ್ಲಿಲ್ಲ ಅಂದ್ರೆ ಗಾಭರಿಯಾಗದೆ ಇರುತ್ತಾ ಹೇಳಿ..ನೀವು ಮೊದಲು ನೋಡಿ.." ಎಂದು ಅವಸರಿಸಿದಳು.

ಹೆಂಡತಿಯ ಮಾತಿಗೆ ಇಲ್ಲವೆನ್ನಲಾಗದೆ ರಾಮಸ್ವಾಮಿ ಬಸ್ಟ್ಯಾಪಿನ ಕಡೆ ನಡೆದರು.

ಸಂಜೆಯವರೆಗು ಕಾದರೂ ಮಗಳ ಸುಳಿವಿರಲಿಲ್ಲ..

ರಾಮಸ್ವಾಮಿ ಗಾಭರಿಯಾಗಿ ಆಕೆಯ ಸ್ನೇಹಿತೆಯ ಮನೆಯ ಕಡೆ ಬಂದರು.

" ಅಮ್ಮ ಸುಮಾ..ನೀನು ಯಾವಾಗ ಬಂದೆ..ನಮ್ಮ ಸಿಂಧು ಇನ್ನು ಮನೆಗೆ ಬಂದಿಲ್ಲ..ನೀವೆಲ್ಲ ಒಟ್ಟಿಗೆ ತಾನೇ ಹೋಗಿದ್ದು.."

ಸುಮಾ ಆಶ್ಚರ್ಯದಿಂದ " ಅಂಕಲ್ ಸಿಂಧು ಇನ್ನು ಬಂದಿಲ್ವಾ..ನಾನು ಅಲ್ಲಿಂದ ಹೊರಡೋ ಮುಂಚೆನೇ ಆಕೆ ಹೊರಟಿದ್ಲು ಕೇಳಿದ್ದಕ್ಕೆ..ಆಂಟಿ ಸಾಮಗ್ರಿ ಹೇಳಿದ್ದಾರೆ..ತೊಗೊಂಡು ಹೋಗ್ತೀನಿ ಅಂದ್ಲು.."

ರಾಮಸ್ವಾಮಿಗೆ ಭಯವಾದರೂ ತೋರ್ಪಡಿಸದೆ " ಹೌದಾಮ್ಮ..ಹಾಗಾದ್ರೆ ಇಷ್ಟೋತ್ತಲ್ಲಿ ಬಂದಿರುತ್ತಾಳೆ ಅನ್ಸುತ್ತೆ..ನಾನು ಹೊರಡ್ತೀನಿ.." ಎಂದು ಮನೆಯತ್ತ ಬಂದರು.

ಸೀತಮ್ಮ ಬಾಗಿಲಲ್ಲೇ ಕಾಯುತ್ತಿದ್ದರು.

" ರೀ ಏನ್ರಿ..ಒಬ್ಬರೇ ಬರ್ತಿದ್ದೀರಾ..ಸಿಂಧು ಎಲ್ಲಿ.." ನಡುಗುತ್ತಲೇ ಕೇಳಿದಳು.

ರಾಮಸ್ವಾಮಿ ಕೂಡ ಆತಂಕದಿಂದ " ಸೀತಾ ಮಗಳಿಗೆ ಏನಾದ್ರು ತರೋಕ್ಕೆ ಹೇಳಿದ್ಯಾ..ಅಂದ್ರೆ ಸಾಮಗ್ರಿಗಳನ್ನ.."

" ಹಾ ಪೂಜೆಯ ವಸ್ತು ಅಷ್ಟೇ..ಅದು ಇಲ್ಲೇ ಬರೋವಾಗ ತರೋಕೆ ಹೇಳಿದ್ದೆ...ಹೇಳ್ರಿ ಸಿಂಧು ಎಲ್ಲಿ..."

" ನಾನು ಈಗೇಲೇ ಬರ್ತೀನಿ..ನೀನು ಮನೆಯಲ್ಲೇ ಇರು.." ಎಂದು ಹೇಳಿ ರಾಮಸ್ವಾಮಿ ಇಡೀ ಊರು ಹಾಗೂ ಶಾಲೆಯಿರುವ ಊರನ್ನು ಎಷ್ಟು ಹುಡುಕಿದರೂ ಮಗಳ ಸುಳಿವಿರಲಿಲ್ಲ..

ಹುಡುಕಿ..ಬಳಲಿ ಮನೆಗೆ ಬಂದರು.

ಅಷ್ಟರಲ್ಲಿ ಆಗಲೇ ಕಾಡ್ಗಿಚ್ಚಿನಂತೆ ಸೀತಮ್ಮನ ಮಗಳು ಕಾಣೆಯಾಗಿರುವ ಸುದ್ದಿ ಆ ಬೀದಿಗೆ ಹಬ್ಬಿತ್ತು.

ಹಲವರ ಬಾಯಿಂದ ಹಲವಾರು ಊಹಾಪೋಹಗಳು ಹುಟ್ಟಿಕೊಂಡಿತ್ತು.

ರಾಮಸ್ವಾಮಿಗೆ ಎನು ಮಾಡಬೇಕೆಂದು ತೋಚಲಿಲ್ಲ..

ಸೀತಮ್ಮ ಜನರ ಮಾತಿಗೆ ಕಂಗೆಟ್ಟು ಕೂತಿದ್ದರು.

ಹೊರಗಡೆ..

" ಅರೆ ಆ ಹುಡ್ಗಿಗೆ ಇನ್ನು ಹದಿನಾರು ಅಷ್ಟೇ ಅಲ್ವಾ..ಆಗ್ಲೇ ಎಲ್ಲಿಗೆ ಹೋದಳು ಅಂತ..ಈ ಕಾಲದಲ್ಲಿ ಕೈಗೆ ಬಂದ ಮಗಳನ್ನ ನಂಬಲೇ ಬಾರದು..ನೋಡಿ ನಂಬುದ್ರೆ ಹೀಗೆ ತಲೆ ಮೇಲೆ ಕೈ ಹೊತ್ತು ಕೂರಬೇಕು ಅಷ್ಟೇ.."

"ಹುಡ್ಗಿ ಸುಮಾರಾಗಿ ಚಂದ ಇದ್ದಳು..ನೋಡಿ ತಂದೆ ತಾಯಿಗೆ ಹೇಳದೆ ಎಲ್ಲಿಗೆ ಹೋದಳೋ ಏನೋ..ಸ್ವಲ್ಪನೂ ಜಾವಾಬ್ದಾರಿ ಇಲ್ಲ..ಅದೇನು ಮಕ್ಕಳನ್ನು ಸಾಕಿದ್ದಾರೋ.." ಎಂದು ಮತ್ತಿಬ್ಬರು ಮಾತಾಡುತ್ತಿದ್ದರು.

ರಾಮಸ್ವಾಮಿ ಎದ್ದು ಪೊಲೀಸ್ ಕಂಪ್ಲೇಂಟ್ ಕೊಟ್ಟು ಬರಲು ಹೋದರು.ಅವರೊಂದಿಗೆ ಒಂದಿಬ್ಬರು ಜೊತೆಯಾದರು.

ಸ್ಟೇಷನಿನಲ್ಲಿ..

" ಸರ್ ನನ್ನ ಮಗಳು ಸಿಂಧು ಅಂತ..ಬೆಳಿಗ್ಗೆ ಫಲಿತಾಂಶ ನೋಡೋಕ್ಕೆ ಅಂತ ಹೋಗಿ..ಈಷ್ಟೋತ್ತಾದ್ರೂ ಮನೆಗೆ ಬಂದಿಲ್ಲ ಸರ್..ಒಬ್ಬಳೇ ಮಗಳು ದಯವಿಟ್ಟು ಹುಡುಕಿಕೊಡಿ ಸರ್.." ಎಂದು ರಾಮಸ್ವಾಮಿ ಇನ್ಸ್ಪೆಕ್ಟರ್ ಮುಂದೆ ಕೂತು ಗೋಳಾಡಿದನು.

ಇನ್ಸ್ಪೆಕ್ಟರ್ " ಅಲ್ಲ ರೀ ಎಲ್ಲ ಕಡೆ ನೋಡುದ್ರ..ಗೆಳತಿ ಮನೆ ಅಂತ ಏನಾದ್ರು ಹೋಗಿರಬಹುದು..ನೆಂಟರ ಮನೆಯಲ್ಲಿ ಕೂಡ ವಿಚಾರಿಸಿದ್ರಾ.."

" ಹೌದು ಸರ್..ಎಲ್ಲ ಕಡೆ ನೋಡಿದೆ..ಅವಳ ಸ್ನೇಹಿತೆಯರು ಎಲ್ಲರೂ ವ್ಯಾಪಸ್ಸು ಬಂದ್ದಿದ್ದಾರೆ..ಅವಳೇ ಇಲ್ಲ..ಕೇಳಿದ್ದಕ್ಕೆ ಮೊದಲೇ ಬಿಟ್ಟಳು ಅಲ್ಲಿಂದ ಅಂತ ಹೇಳುದ್ರು ಸರ್..ದಯವಿಟ್ಟು ಹುಡುಕಿಕೊಡಿ ಸರ್.."

ಸುಂಧುವಿನ ಹೆಸರಿನಲ್ಲಿ ಕಂಪ್ಲೇಂಟ್ ದಾಖಲಾಯಿತು.

ಮಗಳ ಚಿಂತೆಯಲ್ಲೇ ದಂಪತಿಗಳು ರಾತ್ರಿ ಕಳೆದರು.

ಮಗಳು ಬರುವಳು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಮುಂಜಾನೆಯೇ ಆಘಾತ ಕಾದಿತ್ತು...!!

ನಿನ್ನೆ ನಗುತ್ತ ಹೋಗಿದ್ದ ಮಗಳು ಇಂದು ಊರಿನ ಆಳ ಬಾವಿಯಲ್ಲಿ ಹೆಣವಾಗಿ ತೇಲುತ್ತಿದ್ದಳು. !!

ಹೃದಯ ಕಿತ್ತು ಬರುವಂತೆ ಕೂಗಿಕೊಂಡರು ಸಿಂಧುಳ ಹೆತ್ತವರು.

ಪೊಲೀಸರಿಗೆ ಆಕೆಯ ಸಾವು ನಿಗೂಢ ವೆನಿಸಿದರೂ..ಪೋಸ್ಟ್ ಮಾರ್ಟಮ್ ರಿಪೋರ್ಟ್

ಬರುವವರೆಗೂ ಕಾಯಬೇಕಿತ್ತು..

ಬಾವಿಯ ಸುತ್ತುಲೂ ಪರಿಶೀಲಿಸಿದಾಗ ಬಿಳಿ ಕಾಗದ ಸಿಕ್ಕಿತಷ್ಟೇ..

ಅದರಲಿದ್ದದ್ದು " ಅಪ್ಪ ಅಮ್ಮ ನನ್ನನ್ನು ಕ್ಷಮಿಸಿ..ನನ್ನ ಸಾವಿಗೆ ನಾನೇ ಕಾರಣ.."

ಪೋಸ್ಟ್ ಮಾರ್ಟಮ್ ರಿಪೋರ್ಟ್ನಲ್ಲೂ ಸಹ ದೈಹಿಕವಾಗಿ ಯಾವ ಹಿಂಸೆ ಕೂಡ ಆಗಿಲ್ಲ ವೆಂದು ಬಂದಿತು. ಹೆತ್ತವರು ಕೂಡ ಹೆಚ್ಚು ಓದಿಲ್ಲದವರಾದ್ದರಿಂದ ಮಗಳಿನ ಆತ್ಮಹತ್ಯೆ ಕಾರಣ ವೇನೆಂದು ಹೆಚ್ಚು ನೋಡದೆ..ಊರು ಬಿಟ್ಟರು.

ಪೊಲೀಸರು ಕೂಡ ಮಾನಸಿಕ ಒತ್ತಡದಿಂದ ಆತ್ಮಹತ್ಯೆಯಾಗಿದೆ ಎಂದು ಬರೆದು ಕೇಸ್ ಮುಗಿಸಿದರು.

ಆದರೆ ಊರ ಬಾಯಿಗೆ ಮಾತ್ರ ಸಿಂಧು ಕಾಣದ ಪ್ರೀತಿಗೆ ಬಲಿಯಾದಳು ಅಥವಾ ಅತ್ಯಾಚಾರ ವಾಗಿ ಮುಚ್ಚಿಟ್ಟಿದ್ದಾರೆ ಎಂದು ತಮ್ಮ ತಮ್ಮಲ್ಲೆ ಕಥೆ ಕಟ್ಟಿ ಬೆಳೆಸಿದರು.

ಒಂದು ವರ್ಷದ ನಂತರ...

" ವೇಲ್ಕಮ್ ಸರ್..ಐ ಯಾಮ್ ಶ್ರೀಧರ್..

ನೀವು ನಿನ್ನೆನೆ ಬರ್ತೀರಾ ಅಂತ ಹೇಳುದ್ರು..ನಾವು ರೈಲ್ವೆ ಸ್ಟೇಷನ್ ಅಲ್ಲಿ ಕಾದ್ವಿ..ಬಟ್ ನೀವು ಬರ್ಲಿಲ್ಲ.."

" ಸಾರಿ ಫಾರ್ ದಟ್ ಮಿಸ್ಟರ್ ಶ್ರೀಧರ್..ರೈಲ್ ಅಲ್ಲೇ ಬರಬೇಕು ಅಂತ ಅಂಕೊಂಡ್ವಿ..ಕೊನೆ ಕ್ಷಣದಲ್ಲಿ ಟ್ರೈನ್ ಮಿಸ್ ಆಯ್ತು..ಸೋ ಪ್ರೈವೇಟ್ ವೇಹಿಕಲ್ ಅಲ್ಲಿ ಬಂದ್ವಿ." ಲಗೇಜ್ ಇಳಿಸುತ್ತಲೇ ಹೇಳಿದನು ಹೊಸದಾಗಿ ಬಂದಿರುವ ಆ ಸ್ಥಳದ ಬ್ಯಾಂಕ್ ಮ್ಯಾನೇಜರ್ ಅಭಿನಂದನ್ ಕುಂದ್ರಾ..

ಹಾಗೆ ಮುಂದುವರೆದು " ಶೀ ಇಸ್ ಮೈ ವೈಫ್ ಆರತಿ ಕುಂದ್ರಾ...ಅಂಡ್ ಮೈ ಸಿಸ್ಟರ್ ನೀತಾ.." ಎಂದು ಪರಿಚಯಿಸಿದನು.

" ಸರ್ ಕೆಲಸಕ್ಕೆ ನಾಳೆ ಇಂದ ಬರ್ತೀರಾ.."

" ನೋ..ನನ್ನ ವೈಫ್ ಹಾಗೂ ಸಿಸ್ಟರ್ ಎಲ್ಲ ನೋಡ್ಕೋತ್ತಾರೆ.. ಕೆಲಸದವ್ರು ಕೂಡ ನಮ್ಮ ಜೊತೆನೆ ಬಂದ್ದಿದ್ದಾರೆ..ಎಲ್ಲ ಸೆಟ್ ಆಗುತ್ತೆ....ನಾನು ಈಗಲೇ ಬರ್ತೀನಿ..ಗೀವ್ ಮೀ ಅ ಕಪಲ್ ಆ ಮಿನಿಟ್...ಮತ್ತೆ ತಡ ಮಾಡಿ ನನ್ನಿಂದ ಯಾರಿಗೂ ತೊಂದ್ರೆ ಆಗೋದು ನನಿಗೆ ಇಷ್ಟ ಇಲ್ಲ..."

ಅಭಿಯ ತಂಗಿ ನೀತಾ ಸುಮ್ಮನೆ ಕೂತಿದ್ದಳು.

ಅಭಿ ಅವಳಲ್ಲಿ " ಏನಾಯ್ತು ನೀತಾ..ಯಾಕೋ ಮುಖ ಊದಿಸಿಕೊಂಡು ಕೂತಿದ್ಯ..ಇನ್ನು ನನ್ನ ಮೇಲೆ ಕೋಪ ಹೋಗಿಲ್ವಾ.." ತಲೆ ಸವರುತ್ತ ಕೇಳಿದನು.

ಆಗ ಆಕೆಯ ಹೆಂಡತಿ ಆರತಿ " ಹೇಗೆ ಹೋಗುತ್ತೆ ಹೇಳಿ ಸಾಹೇಬ್ರೆ..ಪಾಪ ನೀತಾ ರಿಸಲ್ಟ್ ಫೋನಲ್ಲಿ ನೋಡಿದ್ದು ಅಷ್ಟೇ..ಅಷ್ಟು ಬೇಗ ಸ್ಕೂಲ್ ಗೆ ಹೇಳದೆ ಇಲ್ಲಿಗೆ ಕರ್ಕೊಂಡು ಬಿಟ್ರಿ...ಫ್ರೆಂಡ್ಸ್ ಯಾರಿಗೂ ಹೇಳದೆ ಬಂದ್ದಿದ್ದಕ್ಕೆ ಬೇಸರ ಮಾಡಿಕೊಂಡಿದ್ದಾಳೆ..ನೀವೇ ಸಮಾಧಾನ ಮಾಡಿ..ನನಿಗೆ ಹೇಳಿ ಹೇಳಿ ಸಾಕಾಯ್ತು.." ಎಂದು ಹೇಳಿ ಅಲ್ಲಿಂದ ಎದ್ದು ಹೋದಳು.

" ಪುಟ್ಟ..ಟ್ರಾನ್ಫಾರ್ಮ್ ಆರ್ಡರ್ ಬಂದು ಇಪ್ಪತ್ನಾಲ್ಕು ಗಂಟೆಗೆಲ್ಲ ನಾನು ಡ್ಯುಟಿಗೆ ಜಾಯಿನ್ ಆಗ್ಬೇಕು ಅನ್ನೋದು ರೂಲ್ಸ್ ಗೊತ್ತಾ..ಅದಕ್ಕೆ ಅವಸರ ಮಾಡಿದ್ದು..ಇಲ್ಲಿ ಒಳ್ಳೆ ಒಳ್ಳೆ ಪಿಯು ಕಾಲೇಜಸ್ ಇದೆ..ವಾಪಸ್ಸು ಬಂದ್ಮೇಲೆ ಕೂತು ಡಿಸೈಡ್ ಮಾಡುವ ನಿನ್ನ ಮುಂದಿನ ಓದಿಗೆ ಆಯ್ತಾ.."

ನೀತಾ ಮೂತಿ ತಿರುವುತ್ತಾ " ಹೋಗಿ ಅಣ್ಣ..ಫ್ರೆಂಡ್ಸ್ನ ಮೀಟ್ ಮಾಡಿ ಬರ್ಬೇಕು ಅಂತ ಎಷ್ಟು ಆಸೆ ಇಟ್ಕೊಂಡಿದ್ದೆ ಎಲ್ಲ ಹೊಯ್ತು..ನನ್ನ ಫ್ರೆಂಡ್ ಗೀತಾ ಕೂಡ ಸೇಮ್ ಮಾರ್ಕ್ಸ್..ಇಬ್ಬರು ಒಂದೇ ಫರ್ಸ್ಟ್ ರ್ಯಾಂಕ್ ಗೊತ್ತಾ.."

" ನನಿಗೆ ಗೊತ್ತಿಲ್ಲದ ವಿಷಯ ಏನಲ್ಲ ಬಿಡು ಇದು..ಆಮೇಲೆ ನಿನ್ನ ಅತ್ತಿಗೆ ಹತ್ರ ಫೋನ್ ತೊಗೊಂಡು ನಿನ್ನ ಫ್ರೆಂಡ್ ಹತ್ತಿರ ಮಾತಾಡು ಎಲ್ಲ ಸರಿ ಹೋಗುತ್ತೆ..ನಾನೇ ಹೋಗಿ ನಿನ್ನ ಡ್ಯಾಕುಮೆಂಟ್ಸ್ ಎಲ್ಲ ತರಿಸ್ತೀನಿ.." ಎಂದು ಹೇಳಿ ಕೆಲಸಕ್ಕೆ ಹೋದನು.

************************************

" ಅತ್ತಿಗೆ..ಅತ್ತಿಗೆ..ಸ್ವಲ್ಪ ನಿಮ್ಮ ಫೋನ್ ಕೊಡ್ತೀರಾ ನನ್ನ ಫ್ರೆಂಡ್ ಗೀತಾಗೆ ಫೋನ್ ಮಾಡ್ಬೇಕು.." ಬಟ್ಟೆ ಮಡಚುತ್ತಿದ್ದ ಆರತಿಯ ಬಳಿ ಬಂದು ಕೂತಳು ನೀತಾ..

" ಓಹ್ ಏನು ಮಿಸ್ ಇಂಟಲಿಜೆನ್ಟ್ ಈಗ ಫ್ರೆಂಡ್ ಹತ್ತಿರ ಮಾತಾಡಬೇಕಾ..ಅಲ್ಲಿ ಚಾರ್ಜ್ ಹಾಕಿದೆ ಆನ್ ಮಾಡಿ ತೊಗೋ..ಹಾಗೆ ನನ್ನ ಕಡೆಯಿಂದ ವಿಶ್ ಮಾಡು ಆಯ್ತ..."

" ಓಕೆ ಅತ್ತಿಗೆ..."

ಫೋನ್ ಆನ್ ಮಾಡುತ್ತಲೇ ಹಲವಾರು ಮೆಸೇಜುಗಳು ಬಂದವು.

" ನೋಡಿ ಅತ್ತಿಗೆ..ನನ್ನ ಎಲ್ಲ ಫ್ರೆಂಡ್ಸ್ ಕಾಲ್ ಮಾಡಿದ್ದಾರೆ...ಮಾತಾಡಿ ಬರ್ತೀನಿ " ಎಂದು ಗೆಳತಿ ಗೀತಾ ನಂಬರಿಗೆ ಕರೆ ಮಾಡಿದಳು.

ಆ ಕಡೆಯಿಂದ ಉತ್ತರ ಬರದೆ ಬೆರೆಯವಳಿಗೆ ಕರೆ ಮಾಡಿದಳು.

" ಹಲೋ ವೇದಾ...ಏನೇ ಕಂಗ್ರಾಟ್ಸ್ ಹೇಳೋಕೆ ಇಷ್ಟೊಂದು ಕಾಲ್ ಮಾಡ್ಬೇಕಾ.."

" ನೀತಾ..ಅದು..ಅದು.."

" ಹೇಳೇ ಏನು ಅದು ಅದು..ಅಂತ.."

" ನೀತಾ..ಅದು ಗೀತಾ ಸೂಸೈಡ್ ಮಾಡ್ಕೊಂಡಿದ್ದಾಳೆ ಕಣೆ.."

" ಏನು ಏನೇ ಹೇಳ್ತಿದ್ಯಾ..ನೋ ಸುಳ್ಳು ಹೇಳ್ಬೇಡ.."

" ನಿಜ ನೀತಾ..ಮೊನ್ನೆ ರಿಸಲ್ಟ್ ನೋಡೋಕೆ ಹೋಗಿದ್ದಾಗ ಜೊತೆಗೆ ಬಂದ್ಲು..ಆಮೇಲೆ ಎಲ್ಲಿ ಹೋದಳೋ ಗೊತ್ತಿಲ್ಲ..ಸಂಜೆ ರೈಲ್ವೆ ಟ್ರಾಕ್ ಹತ್ತಿರ ...." ಎಂದು ಹೇಳುತ್ತಲೇ ಆ ಕಡೆಯಿಂದ ದ್ವನಿ ಗದ್ಗದಿತವಾಯಿತು.

ನೀತಾ ಕೂಡ ಫೋನಿಟ್ಟು ಕಣ್ಣೀರಿಡುತ್ತ ಕೂತಳು.

ವಿಷಯ ತಿಳಿದ ಆರತಿ ಕೂಡ ನೀತಾಳನ್ನು ಸಮಾಧಾನಿಸಿದಳು.

ಮತ್ತೊಮ್ಮೆ ಫೋನ್ ರಿಂಗಾದಾಗ ನೀತಾ ಸ್ವೀಕರಿಸಿ

" ಹಲೋ ಸರ್..ಥ್ಯಾಂಕ್ಸ್ ಸರ್..ಇವಾಗ ವಿಷಯ ತಿಳೀತು..ಹಾ ಸರ್..ನಾನು ಆ ಊರಲ್ಲಿ ಇಲ್ಲ..ಅಣ್ಣನಿಗೆ ಟ್ರಾನ್ಫರ್ ಆಯ್ತು..ಅದಿಕ್ಕೆ ಇಲ್ಲಿಗೆ ಬಂದ್ವಿ..ಇಲ್ಲೇ ಇನ್ಮುಂದೆ ನನ್ನ ಓದು..ಅಲ್ಲಿಗೆ ಬರೋಲ್ಲ..ಪ್ಲೇಸ್ ಹೆಸರು ರಾಮನಗರ.. ಓಕೆ ಸರ್..ಬಾಯ್ "

ಆರತಿ ಕೇಳುವ ಮುನ್ನವೇ " ನಮ್ಮ ಟೂಶನ್ ಸೈನ್ಸ್ ಟೀಚರ್ ಅತ್ತಿಗೆ ಇವರು..ನನಿಗೆ ವಿಶ್ ಮಾಡೋಕೆ ನನ್ನ ಫ್ರೆಂಡ್ ಹತ್ರ ನಂಬರ್ ತೊಗೊಂಡು ಕಾಲ್ ಮಾಡಿದ್ದಾರೆ...ಗೀತಾ ವಿಷಯ ತಿಳಿದು ಅವ್ರು ತುಂಬಾ ಬೇಜಾರ್ ಮಾಡ್ಕೊಂಡ್ರು..ನನಿಗೂ ಗೀತಾಗೂ ಅಚ್ಚುಮೆಚ್ಚಿನ ಟೀಚರ್ ಅವ್ರು.."

" ಓಹ್ ಹೌದಾ..ಅವರ ಹೆಸರು..??"

" ಧನಂಜಯ ಸರ್ ಅಂತ.."

ಮನೆಗೆ ಬಂದ ನಂತರ ಗೀತಾಳ ವಿಷಯ ತಿಳಿದ ಅಭಿನಂದನ್ ಕೂಡ ಬೇಸರಿಸಿಕೊಂಡನು.

ಹಾಗೂ ಮುದ್ದಿನ ತಂಗಿಯನ್ನು ಸಂತೈಸಿದನು.

ರಾತ್ರಿ ಕೋಣೆಯಲ್ಲಿ ಆರತಿ ಬಂದಾಗ ಅಭಿ ಏನೋ ಫೈಲನ್ನು ಹಿಡಿದು ಕೂತಿದ್ದನು..

" ಏನ್ರಿ ಸಾಹೇಬ್ರೆ..ಇಲ್ಲಿ ಯಾವ ಪತ್ತೆದಾರಿಕೆ ಮಾಡೋಕೆ ಬಂದಿರೋದು.."

ಅಭಿ ಫೈಲ್ ಮಡಚಿ " ಆಗಲೇ ಗೊತ್ತಾಯ್ತಾ ಮೇಡಂಗೆ.."

" ಇನ್ನೇನು ನಿಮ್ಮನ್ನ ಮದುವೆ ಅದಾಗಿಂದ ಬರಿ ಸುತ್ತೋದೆ ಆಯ್ತು ನನಿಗೆ..ಈಗ ಹೇಳಿ ಏನು ಕೇಸ್ ಅದು ಅಂತ.."

" ನೀತಾ ಮಲಗಿದಳಾ.."

" ಹ್ಮ್ ಊಟ ಕೂಡ ಸರಿಯಾಗಿ ಮಾಡ್ಲಿಲ್ಲ..ತುಂಬಾ ಅಳ್ತಿದ್ಲು..ನಾನೇ ಸಮಾಧಾನ ಮಾಡಿ ಮಲಗಿಸಿ ಬಂದೆ..ಅದು ಸರಿ ನೀತಾಗೆ ನೀವು ಯಾಕೆ ಸಿ ಐ ಡಿ ಆಫೀಸರ್ ಅನ್ನೋ ವಿಷಯ ಮುಚ್ಚಿಟ್ಟಿದ್ದೀರ.."

" ಅವಳು ಇನ್ನು ಚಿಕ್ಕವಳು ಆರತಿ..ನನ್ನ ವೃತ್ತಿ ಅವಳ ಜೀವನಕ್ಕೆ ಯಾವುದೇ ತೊಂದ್ರೆ ಆಗ್ಬಾರ್ದು ಅಂತ ಇಷ್ಟು ವರ್ಷ ಅವಳನ್ನ ಹಾಸ್ಟೇಲ್ ನಲ್ಲಿ ಓದೋಕೆ ಬಿಟ್ಟಿದ್ದು..ತಂದೆ ತಾಯಿ ಇಲ್ಲದ ನಮಗೆ ನೀನು ಸಿಕ್ಕುದೆ ಸಂತೋಷ...ನೀತನಾ ನಿನ್ನ ಮಗಳ ಹಾಗೆ ನೋಡ್ಕೋತೀದ್ಯಾ..ಇದಕ್ಕಿಂತ ಇನ್ನೇನು ಬೇಕು ಹೇಳು."

" ಮಾತು ಮರೆಸಬೇಡಿ..ಕೇಸಿನ ಬಗ್ಗೆ ಹೇಳಿ.."

ಅಭಿ ನಗುತ್ತ ಫೈಲಿನಿಂದ ಒಂದು ಫೋಟೋ ತೆಗೆದು " ನೋಡಿ ಈ ಹುಡುಗಿ ಹೆಸರು ಸಿಂಧು ಅಂತ..ಲಾಸ್ಟ್ ಇಯರ್ ಸೂಸೈಡ್ ಇಂದ ಡೆತ್ ಆಗಿದೆ...ಪೊಲೀಸ್ ಅವ್ರು ಯಾಕೋ ಗೊತ್ತಿಲ್ಲ ಡೆತ್ ಬೈ ಸೆಲ್ಫ್ ಅಂತ ಸ್ಟೇಟ್ಮೆಂಟ್ ಮಾಡಿ ಕೇಸ್ ಕ್ಲೋಸ್ ಮಾಡಿದ್ರು..

ಆದ್ರೆ ಇವಾಗ ನನ್ನ ಆಫೀಸಿಗೆ ಅವರ ತಂದೆ ತಾಯಿ ಬಂದು ಮಗಳು ಕೆಟ್ಟ ಸಹವಾಸಕ್ಕೆ ಬಲಿಯಾದಳು ಅಂತ ಊರೆಲ್ಲ ಮಾತಾಡ್ತಿದೆ..ನನ್ನ ಮಗಳು ಅಂತವಳಲ್ಲ..ದಯವಿಟ್ಟು ನಮಗೆ ನ್ಯಾಯ ಕೊಡಿಸಿ ಅಂತ ಕೇಳುದ್ರು..ಅದಿಕ್ಕೆ ನಾನೇ ಈ ಕೇಸ್ ತೊಗೊಂಡೆ..."

" ಅಂದ್ರೆ ನಿಮ್ಮ ಪ್ರಕಾರ ಇದು ಕೊಲೆನಾ..."

" ನೂರಕ್ಕೆ ನೂರರಷ್ಟು ಸತ್ಯ..ಇದು ಮರ್ಡರ್..."

" ಅದ್ಹೇಗೆ ಹೇಳ್ತೀರಾ..."

" ಸಿಂಪಲ್ ಆರತಿ..ಹುಡುಗಿ ಸತ್ತಿರೋ ದಿನ ಆಕೆಯ ರಿಸಲ್ಟ್ ಬಂದು ಸ್ಕೂಲ್ ಟಾಪರ್ ಆಗಿದ್ಲು..ಅವಳ ಫ್ರೆಂಡ್ಸ್ ಹೇಳೋ ಪ್ರಕಾರ ತುಂಬಾ ಖುಷಿಯಾಗಿದ್ದಳಂತೆ..ಆತ್ಮಹತ್ಯೆ ಮಾಡ್ಕೊಳ್ಳೊಕೆ ಯಾವ ಕಾರಣಾನೂ ಇಲ್ಲ.." ಎಂದು ಹೇಳುವಾಗ ಫೋನ್ ರಿಂಗಾಯಿತು.

" ಹಲೋ ಅಭಿನಂದನ್ ಕುಂದ್ರಾ ಹಿಯರ್..."

" ನಮಸ್ತೆ ಸರ್..ನಾನು ನಿಮ್ಮ ತಂಗಿಯ ಸ್ನೇಹಿತೆ ಗೀತಾಳ ತಂದೆ ವಿಶ್ವನಾಥ್ ಮಾತಾಡ್ತಿರೋದು.." ನೋವಿನಲ್ಲೇ ನುಡಿದರು.

" ಹಾ ಸರ್..ಸಾರಿ ನಿಮ್ಮ ಮಗಳ ಸಾವಿನ ವಿಷಯ ತಿಳೀತು..ಕಾರಣ ಏನು ಅಂತ...."

" ಸರ್ ಎಲ್ಲರೂ ಆತ್ಮಹತ್ಯೆ ಅಂತ ಹೇಳ್ತಿದ್ದಾರೆ ಸರ್..ಆದ್ರೆ ಅದು ಸುಳ್ಳು ಸರ್..ಮಗಳು ಅಷ್ಟು ಚಂದ ಪರೀಕ್ಷೆ ಬರೆದು ಯಾವ ನೋವಿಗೆ ಸೂಸೈಡ್ ಮಾಡ್ಕೊತ್ತಾಳೆ..ನೀವೇ ಹೇಳಿ ಸರ್..ಪೊಲೀಸರಿಂದ ನಮಿಗೆ ನಮ್ಮ ಮಗಳ ಸಾವಿನ ಸತ್ಯ ತಿಳಿತ್ತಿಲ್ಲ..ನೀವೇ ನನಿಗೆ ನ್ಯಾಯ ಕೊಡಿಸಬೇಕು ಸರ್.."

" ಸರ್..ನಾನು ಹೇಗೆ ಕೊಡೋಕ್ಕೆ ಆಗುತ್ತೆ..ನಾನೊಬ್ಬ ಸಾಮಾನ್ಯ ಮನುಷ್ಯ..."

" ಸರ್ ನನಿಗೆ ನಿಮ್ಮ ಬಗ್ಗೆ ಗೊತ್ತಾಗಿದ್ದಕ್ಕೆ ಕಾಲ್ ಮಾಡ್ತಿರೋದು..ನನ್ನ ಮಗಳ ಸಾವನ್ನ ಆತ್ಮಹತ್ಯೆ ಅಂತ ಹೇಳಿ..ಜನ ಒಂದೊಂದು ಮಾತಾಡ್ತಿದ್ದಾರೆ ಸರ್..ಪ್ಲೀಸ್ ಏನಾದ್ರು ಮಾಡಿ..." ಹೇಳುತ್ತಲೇ ಅತ್ತುಬಿಟ್ಟರು.

" ಸರ್ ಪ್ಲೀಸ್ ಕಾಮ್ ದೌನ್..ನನಿಗೆ ನಿಮ್ಮ ನೋವು ಅರ್ಥ ಆಗುತ್ತೆ..ಆದ್ರೆ ಐಯಾಮ್ ನಾಟ್ ಅವಲೆಬಲ್ ರೈಟ್ ನೌ..ಮುಖ್ಯವಾದ ಕೇಸ್ ವಿಚಾರಕ್ಕೆ ಈ ಊರಿಗೆ ಬಂದಿರೋದು...ಒಂದು ಕೆಲಸ ಮುಗಿಯದೆ ಮತ್ತೊಂದು ಕೆಲಸಕ್ಕೆ ಹೋಗೊಕ್ಕೆ ಆಗೋಲ್ಲ..ಆದಷ್ಟು ಬೇಗ ಬರ್ತೀನಿ..."

ವಿಶ್ವ ನಾಥ್ ಏನು ಹೇಳದೆ ಕರೆ ತುಂಡರಿಸಿದನು.

ಆರತಿ " ಯಾರು ಗೀತಾಳ ತಂದೆನಾ.."

" ಹೌದು..." ಎಂದು ಎಲ್ಲ ವಿಚಾರವನ್ನು ತಿಳಿಸಿದನು.

ಬೆಳಿಗ್ಗೆ....

ಸಿಂಧು ಓದುತ್ತಿದ್ದ ಶಾಲೆಗೆ ಅಭಿನಂದನ್ ಕೇಸಿನ ವಿಚಾರಣೆಗಾಗಿ ಬಂದ್ದಿದ್ದನು.

ಪ್ರಾಂಶುಪಾಲರಲ್ಲಿ ಐ ಡಿ ತೋರಿಸಿ ಮಾತಿಗಿಳಿದರು.

ಆತ ಗಾಭರಿಯಿಂದ " ಸರ್..ಸರ್..ಸಿ ಐ ಡಿ ಅವರಿಗೆ ಶಾಲೆಯಲ್ಲಿ ಏನು ಸಿಗುತ್ತೆ..ನೀವು ಬಂದಿರುವ ಕಾರಣ ತಿಳಿಬಹುದಾ..."

" ಕಾಮ್ ದೌನ್..ಸ್ವಲ್ಪ ಪ್ರಶ್ನೆಗಳಿತ್ತು ಅದಕ್ಕೆ...

(ಸಿಂಧುಳ ಫೋಟೋ ತೋರಿಸುತ್ತಾ) ಈ ಹುಡುಗಿ ನೆನೆಪಿದ್ದಾಳ..??"

ಪ್ರಾಂಶುಪಾಲ ಫೋಟೊವನ್ನು ದಿಟ್ಟಿಸಿ " ಇದೇನು ಸರ್..ಹೀಗೆ ಕೇಳ್ತಿದ್ದೀರಾ..ಎಷ್ಟು ಒಳ್ಳೆಯ ಹುಡುಗಿ..ನಮ್ಮ ಸ್ಕೂಲ್ ಟಾಪರ್..ಹೇಗೆ ಮರಿಯೋಕ್ಕೆ ಆಗುತ್ತೆ ಹೇಳಿ..ಏನಾಯಿತೋ ಗೊತ್ತಿಲ್ಲ ಸರ್..ಸೂಸೈಡ್ ಮಾಡ್ಕೊಂಡಿತು ಅಂತ ತಿಳೀತು...ಹೋಗಿ ನೋಡಿಕೊಂಡು ಬಂದ್ವಿ.." ಬೇಸರದಿಂದ ಹೇಳಿದನು.

" ಹುಡುಗಿ ಹೇಗೆ ..ಅಂದ್ರೆ ಈ ಕಾಲದಲ್ಲಿ ಪ್ರೀತಿ ಅಂತೆಲ್ಲ ಇರುತ್ತಲ್ಲ.."

" ನನಿಗೆ ತಿಳಿದ ಮಟ್ಟಿಗೆ ಆ ತರ ಹುಡ್ಗಿ ಅಲ್ಲ ಸರ್..ತಾನಾಯಿತು..ತನ್ನ ಓದಾಯಿತು ಅಷ್ಟೇ..."

ಎಲ್ಲ ಶಿಕ್ಷಕರನ್ನು ವಿಚಾರಿಸಿ ಸಿಂಧುಳ ಮನೆಯ ಬಳಿ ಕೂಡ ಹೋಗಿ ವಿಚಾರಿಸಿದನು.

ಬೇಕಾಗುವ ಸುಳಿವು ಸಿಗದೆ ಕೋಪಗೊಂಡು ಹಿಂದುರಿಗಿದನು.

ಮತ್ತೊಮ್ಮೆ ಏನೋ ಯೋಚಿಸಿದವನಂತೆ ಅಲ್ಲಿಯ ಬಸ್ಟ್ಯಾಪಿಗೆ ಹೋಗಿ ಸಿಸಿಟಿವಿ ಸಿಗುವುದಾ ಎಂದು ಹುಡುಕಿದನು.ಎಲ್ಲಿಯೂ ಏನು ಸಿಗದೆ ಬೇಗನೆ ಮನೆಗೆ ಹಿಂದುರುಗಿದನು.

ಆರತಿ ಕೈಗೆ ಕಾಫಿ ಇತ್ತು " ಯಾಕೆ ಇಷ್ಟೊಂದು ಅಸಹನೆ ಸಾಹೆಬ್ರಿಗೇ..."

ಎಲ್ಲ ವಿವರಣೆ ನೀಡಿ ಕಾಫಿ ಹೀರಿದನು.

ಆಗ ಆರತಿ "ಎನು ಕಥೆನೋ ಏನೋ..ಓದೋ ಮಕ್ಕಳೇ ಹೀಗೆ ಮಾಡ್ಬಿಟ್ರೆ..ಬೇರೆ ಮಕ್ಕಳ ಕಥೆ ಏನು ಅಂತ..ಅದು ರಿಸಲ್ಟ್ ದಿನಾನೆ..ನಿಮ್ಮ ಕೇಸ್ ಹುಡುಗಿ ಹಾಗೆ ನೀತಾ ಫ್ರೆಂಡ್ ಗೀತಾದೂ ಅಷ್ಟೇ..." ಎಂದು ಎದ್ದು ಹೋದಳು.

ತಟ್ಟನೆ ಅಭಿನಂದನ್ ಎದ್ದುನಿಂತನು.ಎಲ್ಲೋ ಏನು ಸರಿಯಿಲ್ಲ ವೆಂದು ಕೂಡಲೇ ಗೀತಾಳ ತಂದೆಗೆ ಫೋನಾಯಿಸಿದನು.

" ಹಲೋ ಹೇಳಿ ಸರ್.."

" ಸರ್ ನಿಮ್ಮ ಮಗಳ ಪೋಸ್ಟ್ ಮಾರ್ಟಮ್ ರಿಪೋರ್ಟ್ ಬಂತಾ..."

" ಹಾ ಸರ್ ಬಂದಿದೇ.."

" ಹಾಗಾದ್ರೆ ಈಗಲೇ ನನಿಗೆ ಅದನ್ನ ಮೇಲ್ ಮಾಡೋಕ್ಕೆ ಆಗುತ್ತಾ.."

"ಖಂಡಿತ ಸರ್ ಈಗಲೇ ಮಾಡುವೆ.." ಎಂದು ರಿಪೋರ್ಟ್ ಕಳಿಸಿದನು.

ಅಭಿನಂದನ್ ಕೂಲಂಕುಷವಾಗಿ ನೋಡಿದಾಗ ಸಿಕ್ಕ ಒಂದೇ ಒಂದು ಕಾಮನ್ ಫ್ಯಾಕ್ಟರ್.." ಇಬ್ಬರ ದೇಹದಲ್ಲೂ ಒಂದೇ ತರಹದ ಡ್ರಗ್ಸ್ ಇಂಜೆಕ್ಟ್ ಆಗಿತ್ತು.."

ಈಗ ಆತನಿಗೆ ಇಬ್ಬರ ಕೊಲೆಗಾರ ಕೂಡ ಒಬ್ಬನೇ ಎನ್ನುವ ಸಂದೇಹ ಬಂದಿತು.

ಹೆಚ್ಚಿನ ವಿಷಯ ಸಂಗ್ರಹಿಸಬೇಕಾದರೆ ಆತ ಹಿಂದಿನ ಊರಿಗೆ ಹೋಗಲೇ ಬೇಕಿತ್ತು.

ಹೆಚ್ಚು ಸಮಯ ವ್ಯಯಿಸಲು ಇಚ್ಛಿಸದೆ ಆರತಿಯನ್ನು ಕರೆದು ಹೊರಡುವುದಾಗಿ ತಿಳಿಸಿದನು.

ನೀತಾಳಲ್ಲಿ ಆಕೆಯ ಸ್ಕೂಲ್ ಡ್ಯಾಕುಮೆಂಟ್ಸ್ ತರಲು ಹೋಗುತ್ತಿರುವುದಾಗಿ ಹೇಳಿ ಹೊರಟನು.

****************************************

ಗೀತಾಳ ಸಾವಿನಲ್ಲೂ ತಿಳಿದ ವಿಷಯ ತನ್ನ ಮನೆಯವರಿಂದ ಹಾಗೂ ಸ್ನೇಹಿತರಿಂದ ಯಾವ ತೊಂದರೆ ಕೂಡ ಇಲ್ಲವೆಂದು...

ಇಬ್ಬರ ಪೋಸ್ಟ್ ಮಾರ್ಟಮ್ ರಿಪೋರ್ಟ್ ಹಿಡಿದು

ಕೆಮಿಕಲ್ ದೀಪಾರ್ಟ್ಮೆಂಟ್ಗೆ ಹೋದನು .

" ಹಲೋ ಸರ್...ಹೌ ಕ್ಯಾನ್ ಐ ಹೆಲ್ಪ್ ಯು.."

" ಹಲೋ ಸರ್..ಐ ಯಾಮ್ ಅಭಿನಂದನ್ ಕುಂದ್ರಾ..ಫ್ರಮ್ ಸಿ ಐ ಡಿ..ಈ ಎರಡೂ ರಿಪೋರ್ಟ್ ನಲ್ಲಿರುವ ಡ್ರಗ್ಸ್ ಬಗ್ಗೆ ಹೇಳ್ತೀರಾ..."

ಡಿಪಾರ್ಟ್ಮೆಂಟ್ ಸೈನಟಿಸ್ಟ್ಸ್ ನೋಡಿ " ಸರ್ ಇವು ಹಾಲುಸಿನೇಟಿಂಗ್ ಡ್ರಗ್ಸ್...ಎರಡರಲ್ಲೂ ಇರುವ ಕಂಟೆಂಟ್ ಸೇಮ್ ಇದೆ..ಆದ್ರೆ ಇದರಿಂದ ಡೆತ್ ಎಲ್ಲ ಆಗೋಲ್ಲ..ಅಂದ್ರೆ ಪರ್ಸನ್ ಹಾಫ್ ಕಾನ್ಶಿಯಸ್ ಅಲ್ಲಿ ಇರ್ತಾರೆ...ಐ ಮೀನ್ ಅವರಿಗೆ ಎಚ್ಚರ ಇರುತ್ತೆ ಆದ್ರೆ ಅವ್ರು ಏನು ಮಾಡ್ತಿರ್ತಾರೆ ಅಂತ ಗೊತ್ತಾಗೋಲ್ಲ..ಸಮ್ ವಾಟ್ ಲೈಕ್ ಹಿಪ್ನಾಟಿಕ್ ಡ್ರಗ್ಸ್ ಅಷ್ಟೇ.."

" ಸೋ ಇದನ್ನ ತೊಗೊಂಡ ಮೇಲೆ ಬರೆಯೋ ಶಕ್ತಿ ಎಲ್ಲ ಇರುತ್ತಾ..."

" ಇಲ್ಲ ಸರ್..ಮನುಷ್ಯ ತುಂಬಾ ವೀಕ್ ಆಗಿರ್ತಾನೆ..ಆಲ್ಮೊಸ್ಟ್ ಜೋರಾಗಿ ತಳ್ಳಿದರೆ ಬೀಳುವಷ್ಟು..."

" ಓಕೆ ಸರ್...ಥಾಂಕ್ಯೂ ಫಾರ್ ದಿ ಇನ್ಫಾರ್ಮ್ಮೆಷನ್..." ಎಂದು ಅಲ್ಲಿಂದ ಹ್ಯಾಂಡ್ ರೈಟಿಂಗ್ ಸ್ಕಿಲ್ ಬಳಿ ತನ್ನ ಸಹದ್ಯೋಗಿಯನ್ನು ಸಿಂಧುಳ ನೋಟ್ ಬುಕ್ ಹಾಗೂ ಡೆತ್ ನೋಟ್ ಚೆಕ್ ಮಾಡಲು ಕಳುಹಿಸಿದನು..

ಗೀತಾಳ ತಂದೆಯ ಮನೆಯಲ್ಲಿ ಇನ್ನಿಬ್ಬರ ಜೊತೆ ಕೂತು ಯೋಚಿಸಿದನು.

" ಒಂದು ಹದಿ ಹರೆಯದ ವಯಸ್ಸಿನ ಹುಡುಗಿಯ ಸಾವಾದಾಗ ಬರುವ ಮೊದಲ ಯೋಚನೆ ಪ್ರೀತಿ ಪ್ರೇಮ...ಅದು ಈ ಇಬ್ಬರು ಹುಡುಗಿಯರಲ್ಲೂ ಇಲ್ಲ..ನೆಕ್ಸ್ಟ್ ಸ್ನೇಹಿತರ ಜೊತೆ ಜಗಳ...ಅದು ಇಲ್ಲ..

ಬಡತನ ಇರಬಹುದು ಆದ್ರೆ ಈ ಸಂದರ್ಭ ಅಲ್ಲ...ತಂದೆ ತಾಯಿ ಬಯ್ಯೊದು..ಇಲ್ಲ..ಸೋ ಗಯ್ಸ್ ಇಟ್ಸ್ ಆ ಕಂಫಾರ್ಮ್ ಮರ್ಡರ್.."

" ಸರ್ ಮರ್ಡರ್ ಅನ್ನೋದು ಓಕೆ..ಬಟ್ ಇಬ್ಬರ ಕೊಲೆಗಾರ ಕೂಡ ಒಬ್ಬನೇ ಅನ್ನೋ ವಿಷಯಕ್ಕೆ ವಿ ನೀಡಿ ಪ್ರೂಫ್..."

" ಸಿಂಪಲ್ ಆಫೀಸರ್...ಪಾಯಿಂಟ್ ಆಗಿ ಹೇಳ್ತೀನಿ ..

ನಂಬರ್ 1 : ಕೊಲೆಯಾದ ದಿನಗಳು..ಅಂದ್ರೆ ದಿ ರಿಸಲ್ಟ್ ಡೇ..ಇಬ್ಬರು ಕೊಲೆಯಾಗಿರೋದು ಅವರ ಹತ್ತನೇ ತರಗತಿಯ ರಿಸಲ್ಟ್ ದಿನ..

ನಂಬರ್ 2 : ಪೋಸ್ಟ್ ಮಾರ್ಟಮ್ ಪ್ರಕಾರ ಅವರಿಬ್ಬರ ದೇಹಗಳಲ್ಲಿ ಪತ್ತೆಯಾದ ಒಂದೇ ರೀತಿಯ ಡ್ರಗ್ಸ್ ಇಂದ..

ನಂಬರ್ 3 : ಇಬ್ಬರೂ ಕೂಡ ಟಾಪರ್ಸ್..!

ಕೊಲೆಯಾಗಿರುವ ಜಾಗ ಮತ್ತು ಸಮಯ ಬೇರೆ ಇರಬಹುದು ಆದ್ರೆ ಉದ್ದೇಶ ಒಂದೇ ಆಗಿದೆ.."

ಸಿಂಧು ಪೇರೆಂಟ್ಸ್ ನ ಒಳಗೆ ಬರೋಕೆ ಹೇಳಿ ..

ಇಬ್ಬರು ಒಳಬಂದು ನಮಿಸಿದರು.

" ಹೇಳಿ ಸರ್..ಮಗಳು ಸತ್ತು ಒಂದು ವರ್ಷ ಬೇಕಾಗಿತ್ತಾ ಅದು ಕೊಲೆ ಅಲ್ಲ ಆತ್ಮಹತ್ಯೆ ಅಂತ ನಿಮಗೆ ಅನ್ನಿಸೋಕೆ..."

" ಸರ್ ಅದು ನಮಿಗೆ ಅವಾಗ ಏನು ಮಾಡಬೇಕು ಅಂತ ತಿಳಿಲಿಲ್ಲ..ಜೊತೆಗೆ ನಮ್ಮ ಮಗಳ ಟೀಚರ್ ಕೂಡ ಹೆಚ್ಚು ಕೆದಕಲು ಹೋಗಿ ಯಾಕೆ ಸುಮ್ನೆ ನಿಮಗೆ ತೊಂದ್ರೆ ಅಂತ ಹೇಳುದ್ರು ಅದಿಕ್ಕೆ ಬಿಟ್ವಿ..."

" ಯಾರದು...??"

" ನಮ್ಮ ಮಗಳ ಟೂಶನ್ ಟೀಚರ್...ದಾಮೋದರ್ ಅಂತ..."

ಅಭಿನಂದನ್ ಗೀತಾಳ ಪರೆಂಟ್ಸ್ ನತ್ತ ತಿರುಗಿ " ನಿಮ್ಮ ಮಗಳ ಟೂಶನ್ ಟೀಚರ್ ಹೆಸರು..??"

" ಧನಂಜಯ್ ಅಂತ..."

ಆಗ ಒಬ್ಬ " ಸರ್ ಇವಾಗ ಅವನ ಮಾತು ಯಾಕೆ..ಇಸ್ ಹೀ ಅ ಕಲ್ಪ್ರಿಟ್..?? "

" ಅವನು ಅಪರಾಧಿಯ ಇಲ್ವಾ ಅಂತ ಗೊತ್ತಿಲ್ಲ..ಆದ್ರೆ ಸದ್ಯಕ್ಕೆ ನನ್ನ ಪ್ರಕಾರ ಅಪಾಧಿತ ಆಗ್ತಾನೆ..ಬಿಕಾಸ್ ( ಫೋಟೋ ತೋರಿಸುತ್ತಾ ) ಸಿಂಧು ಪೇರೆಂಟ್ಸ್ಗೆ ಅವ ದಾಮೋದರ..ಗೀತಾ ಪೇರೆಂಟ್ಸ್ಗೆ ಧನಂಜಯ್..ಈ ಹೆಸರು ಬದಲಾವಣೆ ಇಂದಾನೆ ಅವ ಮೊದಲ ಶಂಕಿತ ಆಗ್ತಾನೆ..ಅಂಡ್ ಅವನ ರೂಮ್ ನ ನಾನು ತಡಕಾಡಿದಾಗ ಸಿಕ್ಕಿದ್ದು ದಿ ಸೇಮ್ ಡ್ರಗ್ಸ್ ...ಇಬ್ಬರ ಬಾಡಿಯಲ್ಲಿ ಸಿಕ್ಕಿದ್ದು..!! ಅವನಿಗೆ ಅದರ ಉಪಯೋಗ ಚೆನ್ನಾಗಿ ಗೊತ್ತಿದೆ ಯಾಕಂದ್ರೆ ಹೀ ಈಸ್ ಆ ಕೆಮಿಸ್ಟ್..ಅಂಡ್ ಸೈನ್ಸ್ ಟೀಚರ್..ಜೊತೆಗೆ ಇನ್ನು ಎರಡು ಇನ್ಫೋ ಈಗ ಸಿಗುತ್ತೆ..."

ಆಗ ಇಬ್ಬರು ವ್ಯಕ್ತಿಗಳು ಬಂದು ನಿಂತರು.

ಅದರಲ್ಲಿ ಒಬ್ಬ " ಸರ್ ನಿಮ್ಮ ಗೆಸ್ ಕರೆಕ್ಟ್..ಎರಡು ಹ್ಯಾಂಡ್ ರೈಟಿಂಗ್ ಬೇರೆ ಬೇರೆ.."

ಇನ್ನೊಬ್ಬ " ಸರ್ ಅವನ ನಿಜವಾದ ಹೆಸರು ವಿಶ್ವನಾಥ್ ಅಂತ..ರಾಮನಗರದವನೇ ಇನ್ನೊಂದು ಮಾಹಿತಿ ಏನಂದ್ರೆ ಅವನ ಮಗಳು ಕೂಡ ರಿಸಲ್ಟ್ ದಿನ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ..ಆದ್ರೆ ಟಾಪರ್ ಅಲ್ಲ..ಅವ್ರೇಜ್ ಅಷ್ಟೇ..ಎಕ್ಸಾಂ ಕೂಡ ಫೇಲ್ ಆಗಿದ್ದಾಳೆ..."

" ಸರ್ ಅಂದ್ರೆ ಈಗ ಈ ಸಾವಿನ ಕೇಸ್ ಕೂಡ ಕಂಡು ಹಿಡಿಯಬೇಕಾ.."

" ಇಲ್ಲ ಆ ವ್ಯಕ್ತಿಯನ್ನ ವಿಚಾರಿಸಿದರೆ ಸಾಕು..."

ಎಂದು ಅಭಿನಂದನ್ ಅವನ ಟೀಮ್ ನೊಂದಿಗೆ ಆ ಟುಟೋರಿಯಲ್ಸ್ಗೆ ಹೋದನು.

" ಎಕ್ಸ್ಕ್ಯೂಸ್ಮಿ..ಇಲ್ಲಿ ಧನಂಜಯ್ ಟೀಚರ್ ಎಲ್ಲಿ ಹೋದ್ರು ಅಂತ ಗೊತ್ತಾ.."

" ಸರ್ ಅವ್ರು ನಮ್ಮಹತ್ತಿರ ಬರಿ ಒಂದು ವರ್ಷದ ಕಾಂಟ್ರಾಕ್ಟ್ಗೆ ಒಪ್ಪಿಕೊಂಡಿದ್ದು...ಅದು ಮುಗೀತು ಅಂತ ಬೆಳಿಗ್ಗೆಯೇ ಹೋದ್ರು..."

ಅಭಿನಂದನ್ ಏನು ಹೇಳದೆ ಹೊರಬಂದನು.

ಆಗ ಒಬ್ಬ " ಸರ್ ಫೋನ್ ನಂಬರ್ ಕೇಳಬಹುದು.."

" ಮೈನ್ಡ್ ವರ್ಕ್ ಮಾಡಿ..ಇಷ್ಟೆಲ್ಲ ಸುಳಿವು ಬಿಡದವನು..ಅದನ್ನ ಬಿಟ್ಟು ಕೊಡೋದಿಲ್ಲ..."

ಗೋಡೆಗೆ ಕೈ ಗುದ್ದಿ ಅಲ್ಲೇ ನಿಂತನು.

ಟುಟೋರಿಯಲ್ಸ್ ಕಡೆ ತಿರುಗಿ ನೋಡಿದಾಗ ಈ ವರ್ಷದ ಉತ್ತಮ ಅಂಕ ಗಳಿಸಿದ್ದ ವಿದ್ಯಾರ್ಥಿಗಳ ಹೆಸರು ಹಾಗೂ ಭಾವ ಚಿತ್ರವನ್ನು ಹಾಕಿದ್ದರು.

ಅದರಲ್ಲಿ ಗೀತಾಳ ಜೊತೆ ಅದೇ ಅಂಕ ಪಡೆದಿದ್ದ ನೀತಾಳ ಹೆಸರು ಕೂಡ ಇತ್ತು..

ಏನೋ ಯೋಚಿಸಿದವನಿಗೆ ಒಮ್ಮೆಲೇ ಉಸಿರುಗಟ್ಟುವಂತಾಯಿತು.

ತನ್ನ ಸಹದ್ಯೋಗಿ ನಿತಿನ್ ನಲ್ಲಿ

" ಓಹ್ ಗಾಡ್ ನಿತಿನ್...ಟೂ ಲೇಟ್..ನೀತಾ ಪುಟ್ಟ...ನನ್ನ ನೀತಾ ಪುಟ್ಟ ಇಸ್ ಇನ್ ಡೇಂಜರ್..."

ಎಂದು ಗಾಡಿಯ ಬಳಿ ಓಡಿದನು.

ಅವರು ಗಾಡಿಯಲ್ಲಿ ಕೂತು " ಸರ್ ಏನಾಯ್ತು..ನಿಮ್ಮ ತಂಗಿ ಅಲ್ವಾ ನೀತಾ..ವಾಟ್ ಹ್ಯಾಪ್ಎನ್ಡ್...??"

ಅಭಿನಂದನ್ ಗಾಭರಿಯಲ್ಲಿ ಪೊಲೀಸರಿಗೆ " ಇನ್ಸ್ಪೆಕ್ಟರ್..ಮೈ ಸಿಸ್ಟರ್ ಈಸ್ ಇನ್ ಟ್ರಬಲ್..ಆ ಈಡಿಯಟ್ ಖಂಡಿತ ಅಲ್ಲಿಗೆ ಹೋಗಿದ್ದಾನೆ...ಹಿಸ್ ನೆಕ್ಸ್ಟ್ ಟಾರ್ಗೆಟ್ ಈಸ್ ಮೈ ಸಿಸ್ಟರ್...ಬೇಗ ಆ ಎರಿಯಾ ಪೊಲೀಸ್ಗೆ ಇನ್ಫಾರ್ಮ್ ಮಾಡಿ..ಕ್ವಿಕ್ !!"

ಎಂದು ಅವಸರಿಸಿದನು.

ಹೆಂಡತಿಗೆ ಫೋನಾಯಿಸಿ " ಹಲೋ ಆರತಿ..ನೀತಾ ಎಲ್ಲಿ..ಅವಳಿಗೆ ಫೋನ್ ಕೊಡು ಮಾತಾಡಬೇಕು ನಾನು...."

" ಇಲ್ಲ ಅಭಿ..ಅವರ ಟೀಚರ್ ಬಂದಿದ್ರು ವಿಶ್ ಮಾಡೋಕೆ...ಹೊರಟಾಗ ಬಸ್ಟಾಪ್ ವರೆಗೂ ಹೋಗಿ ಬರ್ತೀನಿ ಅಂತ ಅವಳು ಕೂಡ ಹೋದಳು.."

ಅಭಿನಂದನ್ ಕೋಪದಿಂದ " ಡ್ಯಾಮಿಡ್....!! ತಲೆ ಸರಿ ಇದ್ಯಾ..ಅವಳನ್ನ ಒಬ್ಬಳೇ ಯಾಕೆ ಕಳಿಸ್ದೆ..ಗೋ ಫಾಸ್ಟ್ ಅಂಡ್ ಸರ್ಚ್ ಹರ್..."

ಹಾಗೆ ಕಿರುಚಿದನು.

" ಅಭಿ ಯಾಕೆ ಏನಾಯ್ತು..."

" ಶಟಪ್..ಹೀ ಈಸ್ ಆ ಬ್ಲಡಿ ಕ್ರಿಮಿನಲ್..ಸ್ವಲ್ಪವೂ ಜವಾಬ್ದಾರಿ ಇಲ್ವಾ..ಬೇಗ ಹೋಗು..."

ಆರತಿ ಕೂಡ ಅವರ ಹೋದ ದಾರಿಯಲ್ಲೇ ಓಡಿದಳು..

ಆಗ ನಿತಿನ್ " ಸರ್ ಡೋಂಟ್ ವರಿ ಸರ್.."

" ಇಲ್ಲ ನಿತಿನ್ ಐ ಯಾಮ್ ಫೈನ್..ನನ್ನ ವೃತ್ತಿನೇ ನನಿಗೆ ಅದನ್ನ ಕಲಿಸಿದೆ..ಹೊಪಿಂಗ್ ಫಾರ್ ಗ್ರೇಸ್ ..."

********************************************

" ಸರ್ ಎಲ್ಲಿಗೆ ಬಂದ್ವಿ ನಾವು..ನಿಮ್ಮನೇನಾ ಇದು"

" ಹಾ ನೀತಾ ಕೂತಿರು ಈಗಲೇ ಬರ್ತೀನಿ..." ಎಂದು ವಿಶ್ವನಾಥ್ / ಧನಂಜಯ್ / ದಾಮೋದರ್ ಒಳ ಹೋದನು.

ನೀತಾ ಸುತ್ತಲೂ ಕಣ್ಣಾಡಿಸಿದಳು.

ಆತ ಕೈಯಲ್ಲಿ ಫೋಟೋ ಹಿಡಿದು ಹೊರಬಂದು " ನೀತಾ ನೋಡು ಇವಳು ನನ್ನ ಮಗಳು ನೇತ್ರ ಅಂತ..."

" ಓಹ್ ನೈಸ್ ತುಂಬಾ ಚಂದ ಇದ್ದಾರೆ..ಈಗ ಎಲ್ಲಿದ್ದಾರೆ..?? "

" ಇನ್ನೆಲ್ಲಿ ಅವಳು ಸತ್ತು ಆಗಲೇ ಮೂರು ವರ್ಷ ಆಯ್ತು.."

" ಅಯ್ಯೋ ಏನಾಯ್ತು ಸರ್.."

" ಏನು ಅಂದ್ರೆ ಎಲ್ಲ ನಿಮ್ಮಿಂದ.."

ನೀತಾ ಆಶ್ಚರ್ಯದಿಂದ " ಸರ್..ನಾನು ?? ನಾನು ಇವರನ್ನ ಇದೆ ಮೊದಲು ನೋಡ್ತಿರೋದು..ಸರ್ ಏನು ಹೇಳ್ತಿದ್ದೀರಾ.."

" ಏನು ಹೇಳ್ಬೇಕಾ ಹೇಳ್ತೀನಿ..ಕೇಳು..ಇವಳು ನನ್ನ ಒಬ್ಬಳೇ ಮಗಳು..ಹುಟ್ಟಿದಾಗಲೇ ತಾಯಿನಾ ಕಳ್ಕೊಂಡಳು..ಆದ್ರು ನಾನು ನನ್ನ ಪ್ರೀತಿಯ ಮಗಳಿಗಾಗಿ ಬೇರೆ ಮದುವೆ ಕೂಡ ಆಗದೆ ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೊಂಡೆ...ಆದ್ರೆ..ಆದ್ರೆ..."

ಎಂದು ಆಕೆಯ ಹತ್ತಿರ ಬಂದನು.

ನೀತಾ ಗಾಭರಿಯಿಂದ ಬೆವತು ಹೋದಳು.

ಆತ ಮುಂದುವರೆಯುತ್ತಾ " ಆದ್ರೆ ನನ್ನ ಮಗಳಿಗೆ ಪೋಲಿಯೋ ಡಿಫಿಶಿಯಂಸಿ ಇತ್ತು ಅನ್ನೋ ಒಂದೇ ಕಾರಣಕ್ಕೆ ನಿಮ್ಮಂತ ಸೋ ಕಾಲ್ಡ್ ಟಾಪರ್ಸ್ ಎಷ್ಟು ಆಡ್ಕೊಂಡ್ರಿ ಗೊತ್ತಾ..ದಿನ..ಪ್ರತಿದಿನ ನನ್ನ ಜೀವ ಮನೆಗೆ ಅತ್ತು ಕೊಂಡು ಬರ್ತಿದ್ಲು..ಅಲ್ಲ ನೀವೇ ಹೇಳಿ..ಓದಿಲ್ಲ ಅಂದ್ರೆ ಅವ್ರು ಮನುಷ್ಯರೇ ಅಲ್ವಾ..

ನೀವೆಲ್ಲ ಟಾಪರ್ಸ್ ಆಗಿದಾಕ್ಷಣ ನಿಮಗೆ ಏನು ಚಿನ್ನದ ಕಿರೀಟ ಇಟ್ಟಿರುತ್ತಾರಾ..ನಾನು ಓದಿದವನೆ..ಆದ್ರೆ ನನ್ನ ಮಗಳು ಓದೋದು ಕಡಿಮೆ ಅಂತ ನಾನೇ ಯಾವತ್ತು ಬೇಸರಿಸಿಕೊಂಡಿಲ್ಲ..ಅವಳು ಶಾಲೆಗೆ ಹೋಗ್ಬೇಕು ಅಂತ ತುಂಬಾ ಆಸೆ ಇಟ್ಕೊಂಡಿದ್ಲು ಅನ್ನೋ ಒಂದೇ ಒಂದು ಕಾರಣಕ್ಕೆ ನಾನು ಕಳಿಸಿದ್ದು..ಒಂದಲ್ಲ ಮೂರು ಶಾಲೆ ಬದಲಾಯಿಸಿದೆ..ಈ ನೋವು ಅವಳಿಗೆ ಆಗ್ಬಾರ್ದು ..ಕೊನೆಗೂ ರಿಸಲ್ಟ್ ದಿನ ನಿಮ್ಮ ಟಾಪರ್ಸ್ ಗಳ ಚುಚ್ಚು ಮಾತಿನಿಂದ ನನ್ನ ಮಗಳು ಆತ್ಮಹತ್ಯೆ ಮಾಡ್ಕೊಂಡ್ಳು..ಅವತ್ತೇ ಅವತ್ತೇ ನಿರ್ಧರಿಸಿದೆ ಏನು ಓದಲ್ಲ ಅನ್ನೋ ಮಕ್ಕಳನ್ನ ಹಿಯಾಳಿಸೋ ನಿಮ್ಮಂತ ಟಾಪರ್ಸ್ ಅನ್ನೋ ಹುಳಗಳು ಭೂಮಿಲಿ ಇರೋಕ್ಕೆ ಲಾಯಕ್ಕಿಲ್ಲ..ಅದಿಕ್ಕೆ ಅದಿಕ್ಕೆ.." ಎಂದು ಪಕ್ಕದಲ್ಲಿದ್ದ ಇಂಜೆಕ್ಷನ್ ಕೈಗೆ ತೆಗೆದುಕೊಂಡನು.

ನೀತಾ ಭಯದಿಂದ ಅಳುತ್ತಾ " ಸರ್ ಏನ್ಮಾಡ್ತಿದ್ದೀರಾ...ಸರ್ ನಾನೇನು ಮಾಡಿಲ್ಲ ಸರ್..ನನ್ನ ಬಿಟ್ಬಿಡಿ ಪ್ಲೀಸ್..." ಎಂದು ಹಿಂದೆ ಸರಿದಳು.

ಆತನು ಮುಂದೆ ಬರುತ್ತಾ " ಏನು ಮಾಡಿಲ್ವಾ ನೀನು..ನಾನೇ ನೋಡಿದ್ದೀನಿ..ನೀನು ಮತ್ತೆ ಆ ಗೀತಾ ಇಬ್ಬರು ಕೂಡ ಓದದೇ ಇರೋರನ್ನ ಗೇಲಿ ಮಾಡಿರೋದು..ನೀವು ಅಂತ ಅಷ್ಟೇ ಅಲ್ಲ..ತುಂಬಾ ಜನ ಸತ್ತಿದ್ದಾರೆ ನನ್ನಿಂದ..ಈಗ ನಿನ್ನ ಸರದಿ..ನೀನು ಆದ್ಮೇಲೆ ಬೇರೆ ಊರು..ಆದ್ರೆ ಯಾರಿಗೂ ಗೊತ್ತಾಗೋಲ್ಲ..ಯಾಕೆ ಹೇಳು ಈ ಡ್ರಗ್ಸ್ ಇಂದ ನೀನು ಅರ್ಧ ಮೂರ್ಛೆ ತಪ್ತೀಯ..ಆಮೇಲೆ ನಾನು ಹೇಳಿದ ಹಾಗೆ ಕೇಳ್ತೀಯಾ..ಅವಾಗ ನಾನು ನಿನಿಗೆ ಎಲ್ಲಿ ಹೋಗಿ ಸಾಯಿ ಅಂತ ಹೇಳುದ್ರು ನೀನು ಅದೇ ಮಾಡ್ತೀಯ.."

ನೀತಾ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆತ ಗಟ್ಟಿಯಾಗಿ ಹಿಡಿದನು.

ನೀತಾ ಕಿರುಚಾಡಿದರು ಯಾರಿಗೂ ಕೇಳಿಸಲಿಲ್ಲ..

ಕೊನೆಗೆ ಆಕೆಗೆ ಡ್ರಗ್ ಇಂಜೆಕ್ಟ್ ಮಾಡಿಯೇ ಬಿಟ್ಟನು.

ಆತ ತನ್ನಿಷ್ಟದಂತೆ ಆಕೆಗೆ ಬುರ್ಖಾ ತೋಡಿಸಿ ಹೊರ ಕರೆದು ತಂದನು.ಸಿಂಧುಳನ್ನು ಸಾಯಿಸಿದ್ದ ಅದೇ ಬಾವಿಯ ಕಡೆ ಕರೆತಂದನು.

ಅಭಿನಂದನ್ ಊಹಿಸಿದಂತೆ ಅವನು ಅಲ್ಲಿಗೆ ಬಂದಾಗ ಪೊಲೀಸರು ಆತನನ್ನು ಬಂಧಿಸಿ..

ನೀತಾಳನ್ನು ಆಸ್ಪತ್ರೆಗೆ ಕರೆದೊಯ್ದರು.

ಆರತಿಯನ್ನು ಅವಳ ಜೊತೆಯಿರಿಸಿ..

ಅಭಿನಂದನ್ ಸ್ಟೇಷನಿಗೆ ಬಂದು ಅವನಲ್ಲಿ ಎಲ್ಲ ಮಾಹಿತಿ ಪಡೆದನು.

ಅವನ ಮುಂದೆ ಕೂತು " ನೋಡಿ ಮಿಸ್ಟರ್..ನೀವು ಈ ಮಕ್ಕಳನ್ನ ಕೊಲ್ಲೊಕೆ ತೊಗೊಂಡಿರೋ ಕಾರಣ ನಿಜವಾಗ್ಲೂ ಕಾರಣ ಅಂತ ಯಾರಾದ್ರೂ ಹೇಳ್ತಾರಾ..ಯಾರೋ ಒಬ್ಬರು ಆಡಿಕೊಂಡ್ರು ಅಂತ..ಎಲ್ಲ ಮಕ್ಕಳಿಗೆ ಅದೇ ಶಿಕ್ಷೆ ಕೊಡೋದು ಯಾವ ನ್ಯಾಯ..ನಿಮ್ಮ ಮಗಳ ಸಾವು...ನನಿಗೆ ಅರ್ಥ ಆಗುತ್ತೆ..ಆಗ ನೀವು ತಂದೆಯಾಗಿ ಅವಳಿಗೆ ಧೈರ್ಯ ತುಂಬೋ ಮಾತಾಡಬೇಕಿತ್ತು..ಆದ್ರೆ ನೀವು ಮತ್ತೇ ಶಾಲೆಗೆ ಕಳಿಸಿ ಅವಳ ಮಾನಸಿಕ ಖಿನ್ನತೆನ ಹೆಚ್ಚು ಮಾಡಿದ್ದೀರ.."

ಆತ " ಸಾಕು ಮುಚ್ಚಿರಿ ಬಾಯನ್ನ...ನನ್ನ ಮಗಳಿಗೆ ನಾನು ಧೈರ್ಯ ತುಂಬಬೇಕಾ..ಆಡಿ ಕೊಳ್ಳೋರು ಹಾಗೆ ಮಾತಾಡಲಿ ಅಂತ ಬಿಟ್ಟು..

ನನ್ನ ಮಗಳ ಸಾವು ನನ್ನ ಕಣ್ಮುಂದೆ ನೋಡಿ ನನಿಗೆ ಹೇಗಾಗಿರುತ್ತೆ...ಇದು ಬರೀ ನನ್ನ ಮಗಳ ಪಾಡಲ್ಲ..ಅವಕಾಶ ಸಿಗದ ಎಷ್ಟೋ ಮಕ್ಕಳು..ವರ್ಷಕ್ಕೆ ಐವತ್ತರಿಂದ ಎಪ್ಪತ್ತು ಮಕ್ಕಳು ಸೂಸೈಡ್ ಮಾಡ್ಕೊತ್ತಿದ್ದಾರೆ..ಅದಕ್ಕೆ ನಿಮ್ಮ ಹತ್ರ ನ್ಯಾಯ ಇದ್ಯಾ..ನನಿಗೆ ನನ್ನ ಮಗಳ ಸಾವಿನ ನ್ಯಾಯ ಬೇಕು..ಅದಕ್ಕೆ ಇದೆ ಸರಿ.." ಎಂದು ಹುಚ್ಚನಂತೆ ಕೂಗಾಡಿದನು.

ಅಭಿನಂದನ್ ಆತನಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಮಗಳ ಸಾವಿಗೆ ದುರ್ಬಲನಾಗಿದ್ದಾನೆ ಎಂಬುದು ತಿಳಿದುಬಂದ ವಿಷಯ..ಅಪರಾಧಿಯನ್ನು ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋದರು.ಕೋರ್ಟಿನಲ್ಲಿ ಎಲ್ಲ ಸಾಕ್ಷಿಗಳನ್ನು ಇಟ್ಟಾಗ ಅಪರಾಧಿಗೆ ಸೂಕ್ತ ಚಿಕಿತ್ಸೆಯ ನಂತರ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು.

ಕೇಸನ ಜಾಡನ್ನು ಕಂಡು ಹಿಡಿದ ಅಭಿನಂದನ್ ಕುಂದ್ರಾರನ್ನು ಇಬ್ಬರು ಮಕ್ಕಳ ಪೋಷಕರು ಕೂಡ ಅಭಿನಂದಿಸಿದರು...

ಮುಕ್ತಾಯ....


0 likes

Published By

Bhavani K

bhavanik

Comments

Appreciate the author by telling what you feel about the post 💓

Please Login or Create a free account to comment.