ನನಗೆ ಇನ್ನೂ ನೆನಪಿದೆ,ಆ ಮಳೆ ಹೇಗೆ ನನ್ನಳೊಗೆ ಅಡಗಿದ್ದ ವಿವಿಧ ಭಾವನೆಗಳನ್ನು ಪದಗಳ ರೂಪದಲ್ಲಿ ಹೊರಗೆ ತರಿಸಿ ನನ್ನಡೆಗೆ ನಕ್ಕಿದ್ದು...
ಎಷ್ಟೋ ಸಲ ಅದರ ಜೊತೆಗೆ ನಾನು ಅದರಕ್ಕಿಂತ ಜೋರಾಗಿ ಪೈಪೋಟಿ ಕೊಡುವಂತೆ ಅತ್ತಿದ್ದು ಇದೆ. ನನ್ನ ಮುಖ ಬಾಡಿದ ಹೂವಿನಂತೆ ಆದಾಗಲೆಲ್ಲ;ಎಲ್ಲ ಹನಿಗಳು ಕೆನ್ನೆಯ ಚುಂಬಿಸಿ,ಕೆನ್ನೆ ರಂಗೇರುವಂತೆ ಮಾಡಿ ಬತ್ತಿ ಹೊಗುತ್ತಿದ್ದ ಕನಸುಗಳಿಗೆ ಜೀವ ತುಂಬುತ್ತಿದ್ದವು.
ಮಳೆಗೊಸ್ಕರ ಪ್ರತಿ ಬಾರಿ ಕಾಯುತ್ತಿದ್ದೆ,ನನ್ನೆಲ್ಲ ತುಮುಲಗಳನ್ನು ಹೇಳಿಕೊಂಡು ಪರಿಹಾರಕ್ಕೆ ಅದರ ಮೊರೆ ಹೋಗುತ್ತಿದ್ದೆ.ಅದು ನನ್ನ ಮುಂದೆ ನೀರಿಕ್ಷೆಗಳ ಪಟ್ಟಿಯ ಇಡಲಿಲ್ಲ.ನನ್ನ ಮಾತುಗಳ ಕೇಳುವ ಒಳ್ಳೆ ಕೇಳುಗಾತಿಯಾಗಿ ತನ್ನ ನಿಸ್ವಾರ್ಥದ ಗುಣವ ನನಗೆ ಪರಿಚಯ ಮಾಡಿಸಿತ್ತು.
ಮಳೆ ಒಂದು ಅನಂತವಾದ ಅನುಭವ,ವಿವರಣೆಗೆ ನಿಲುಕಲಾಗದ ಭಾವ.
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.