ಶ್ರೀ ರಾಮನೆಂದರೆ..!

ಶ್ರೀ ರಾಮ ನಾಮ ಸ್ಮರಣೆಗೆ ಅರ್ಪಿತ....

Originally published in kn
Reactions 3
805
ಕಿರಣ್ ಮಲ್ನಾಡ್
ಕಿರಣ್ ಮಲ್ನಾಡ್ 12 Aug, 2020 | 1 min read

 

ಮನಸಲಿ ನಿನ್ನದೇ ಧ್ಯಾನವೆ ತುಂಬಿದೆ

ನಿನ್ನಯ ನೆನಪೆ ನನ್ನಲಿ ಉಳಿದಿದೆ

ನಿನ್ನಯ ಮೇಲೆಯೇ ನನ್ನಯ ಮನಸಿದೆ

ಶ್ರೀ ರಾಮನೇ ನೀನು ಈ ಭುವಿಗೆ ಬಂದಿಹೇ

ಶ್ರೀ ರಾಮನೆಂದರೆ ಜನಕೆ ಭಕುತಿಯು

ಶ್ರೀ ರಾಮ ಸ್ಮರಣೆಯೇ ನಮಗೆ ಮುಕುತಿಯು

ಶ್ರೀ ಹನುಮನ ಪ್ರಾಣವು ನಿನ್ನಯ ನಾಮವು

ಮನದಲಿ ನೀನಿರೆ ನಮಗೆ ಸಮಾಧಾನವು

ಶ್ರೀ ರಾಮನೆಂದರೆ ಬರಿ ಹೆಸರಲ್ಲ

ಈ ನಾಮವ ನಂಬಿರೇ ಸೋಲಿಲ್ಲ

ನಿನ್ನಯ ನಂಬದ ಜನರಿಹರಯ್ಯ

ನೀ ಎಂದು ದರುಶನ ತೋರುವೆಯಯ್ಯ

ಪಿತೃ ವಾಕ್ಯ ಪರಿಪಾಲಕನು

ಮಾತೃ ಪ್ರೀತಿಯ ಮನಸುಳ್ಳವನು

ಸೀತಾಪತಿ ನೀ ಶ್ರೀ ರಾಮ ಚಂದ್ರನು

ಶ್ರೀ ಲಕ್ಷಮಣಾಗ್ರಜ ಶ್ರೀಪೂರ್ಣ ಚಂದ್ರನು

ಸುಗ್ರೀವನಿಗೆ ನೀ ರಾಜ್ಯಧಾತನು

ಶ್ರೀ ಶಬರಿಮಾತೆಗೆ ಮುಕ್ತಿಧಾತನು

ಅಹಲ್ಯಾಳಿಗೆ ನೀ ಮುಕ್ತಿಯ ನೀಡಿದೆ

ಶ್ರೀ ಪ್ರಾಣದೇವಗೆ ಮಾರ್ಗವ ತೋರಿದೆ

ಸೇತುವೆ ಕಟ್ಟಿ ಸೀತೆಯ ಸೇರಿದೆ

ರಾವಣಾಸುರನ ಅಂತ್ಯವ ಮಾಡಿದೆ

ಅಳಿಲಿನ ಸೇವೆಯ ಮರೆಯದ ನೀನು

ತೋರಿದೆ ನಿನ್ನಯ ಪ್ರೀತಿ ಪ್ರಸಾದವನು

ಸೇತುವೆ ಕಟ್ಟಲು ಹೊರಟೆ ನೀನು

ಮರಿ ಅಳಿಲು ಮಾಡಿತು ಸೇವೆಯನು

ಸೇತುವೆ ಕಟ್ಟಿ ಸೀತೆಯ ಸೇರಲು

ಕಾದಿಹಳು ಲೋಕಮಾತೆ ನಿನ್ನನು ನೋಡಲು

 

ನಿನ್ನ ನಾಮಧ್ಯಾನವೆ ನಮಗೆ ಶಕ್ತಿಯು

ನೀಡು ನಮಗೆ ಬೇಗ ಮುಕ್ತಿಯು

ಶ್ರೀ ಹನುಮನ ಮುಖ್ಯಪ್ರಾಣ ನೀನು

ಬಾ ಬಾ ನೀನು ಈ ಲೋಕವ ಸಲಹಲು

 

ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್

ಇಂತಿ ನಿಮ್ಮವ

ಕಿರಣ್ ಮಲ್ನಾಡ್ (ಕಿ‌.ಡಿ)

ಜೈ ಶ್ರೀ ರಾಮ್ ಜೈ ಹನುಮಂತ

3 likes

Published By

ಕಿರಣ್ ಮಲ್ನಾಡ್

ಕಿರಣ್_ಮಲ್ನಾಡ್

Comments

Appreciate the author by telling what you feel about the post 💓

Please Login or Create a free account to comment.