ಸೀತೆಯ ರಾಮ..!!!ಸೀತೆಯ ಸ್ವಗತನುಡಿ

ಸೀತೆಯ ಅಗ್ನಿ ಪ್ರವೇಶಕ್ಕೆ ಮುನ್ನ ಆಕೆಯ ಸ್ವಗತ ನುಡಿ ಹೀಗಿರಬಹುದು ಎಂಬ ಒಂದು ಚಿಕ್ಕ ಕಲ್ಪನೆ...

Originally published in kn
Reactions 2
1107
ಕಿರಣ್ ಮಲ್ನಾಡ್
ಕಿರಣ್ ಮಲ್ನಾಡ್ 13 Aug, 2020 | 1 min read

ಸೀತೆಯ ರಾಮ..!!!

 

ಮರ್ಯಾದಾ ಪುರುಷೋತ್ತಮನಾದ ಶ್ರೀರಾಮನ ಕಥೆಯಾದ ರಾಮಾಯಣದಲ್ಲಿ ಸೀತೆಯು ರಾಮನಷ್ಟೇ ಪ್ರಮುಖಳು. ಶ್ರೀರಾಮನು ರಾವಣನನ್ನು ವಧಿಸಿ ಲಂಕೆಯನ್ನು ಗೆದ್ದು, ಸೀತೆಯನ್ನು ಬಿಡುಗಡೆಗೊಳಿಸಿ ತನ್ನ ಮಾತೃಭೂಮಿಗೆ ಹಿಂದಿರುಗುವ ಸಂದರ್ಭದಲ್ಲಿ ,ಲೋಕ ನಿಂದನೆಯಿಂದ ಸೀತೆಯನ್ನು ಪಾರು ಮಾಡುವ ನಿಟ್ಟಿನಲ್ಲಿ ಸೀತೆಗೆ ಅಗ್ನಿಪ್ರವೇಶದ ಪರೀಕ್ಷೆಯನ್ನು ಒಡ್ಡುತ್ತಾನೆ. ಸೀತೆಯು ಅಗ್ನಿಯಷ್ಟೇ ಪವಿತ್ರಳು ಎಂಬುದು ರಾಮನಿಗೆ ತಿಳಿದಿದ್ದರೂ ಸಹ, ಆಕೆಯ ಪಾವಿತ್ರತೆಯನ್ನು ಲೋಕಕ್ಕೆ ತಿಳಿಸುವುದು ರಾಮನ ಇಚ್ಛೆಯಾಗಿತ್ತು ಸಹ. ಸೀತೆಯು ಅಗ್ನಿ ಪರೀಕ್ಷೆಯಲ್ಲಿ ಗೆದ್ದು ರಾಮನನ್ನು ಸೇರಿದ್ದು ಎಲ್ಲರಿಗೂ ತಿಳಿದಿರುವ ಸಂಗತಿಯೇ.

ಆದರೆ ರಾಮನ ಬರುವಿಕೆಗಾಗಿಯೇ ಅಶೋಕವನದಲ್ಲಿ ಕಾದಿದೆ ಸೀತೆಗೆ ರಾಮನು ಆಕೆಯ ಪಾವಿತ್ರ್ಯತೆಯನ್ನು ಜಗಕ್ಕೆ ತಿಳಿಸುವ ನಿಟ್ಟಿನಲ್ಲಿ ಅಗ್ನಿ ಪ್ರವೇಶಕ್ಕೆ ಆಜ್ಞೆ ನೀಡಿದಾಗ ಸೀತೆಯ ಮನಸ್ಥಿತಿ ಹೀಗಿರಬಹುದು ಎಂಬ ಒಂದು ಚಿಕ್ಕ ಕಲ್ಪನೆ. 

ಏನಾದರೂ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ... ಇದು ಕೇವಲ ಸೀತಾಮಾತೆಯ ಸ್ವಗತವಾಗಿ ನಿರೂಪಣೆ ಮಾಡಿರುವೆ.

 

 

ಸೀತೆ ಅಗ್ನಿಪರೀಕ್ಷೆಗೆ ಸಿದ್ಧವಾಗುತ್ತಿದ್ದಾಳೆ. ವಾನರವೀರರು ಜಾಂಬುವಂತ ನಳ, ಅಂಗಧ ಮುಂತಾದ ವಾನರವೀರರು ಶ್ರೀರಾಮನನ್ನು ಸುತ್ತುವರೆದಿದ್ದಾರೆ. ಕಪಿಶ್ರೇಷ್ಠ ಹನುಮನು ಹಾಗೂ ರಾವಣ ಸಹೋದರ ವಿಭೀಷಣನು ಶ್ರೀ ರಾಮನ ಆಜ್ಞೆಯನ್ನು ಪಾಲಿಸುವ ಸೇವಕರಂತೆ ನಿಂತಿದ್ದಾರೆ.

 

ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನಿಗೆ ತಾನು ಅಗ್ನಿಯಷ್ಟೇ ಪರಮ ಪವಿತ್ರಳು ಎಂಬುದು ತಿಳಿದಿದ್ದರೂ ಸಹ ,ಲೋಕದ ನಿಂದನೆಯಿಂದ ತನ್ನನ್ನು ಕಾಪಾಡಲು ಶ್ರೀರಾಮನು ನೀಡಿರುವ ಅಗ್ನಿಪರೀಕ್ಷೆಗೆ ಸಿದ್ದಳಾದಳು.

 

ತಾನು ಅಗ್ನಿಯನು ಪ್ರವೇಶಿಸುವ ಮುನ್ನ ತನ್ನ ತಾಯಿಯಾದ ಭೂಮಿತಾಯಿಯನ್ನು ಹಾಗೂ ಅಗ್ನಿ ದೇವರನ್ನು ನೆನೆಯುತ್ತ ತನ್ನ ಗತಕಾಲದ ನೆನಪುಗಳಿಗೆ ಜಾರಿದಳು.

ನಾನು ಭೂಮಿಯಲ್ಲಿ ಉಳುವ ಸಂದರ್ಭದಲ್ಲಿ ಜನಕ ಮಹಾರಾಜರಿಗೆ ಭೂಮಿಯಲ್ಲಿ ಸಿಕ್ಕಿದ್ದು ಹಾಗೂ ರಾಜಕುಮಾರಿಯಾಗಿ ಬೆಳೆದಿದ್ದು ಆಕೆಗೆ ನೆನಪಾಯಿತು.

ಒಮ್ಮೆ ವನದಲ್ಲಿ ವಿಹರಿಸುವಾಗ ಆ ವನದಲ್ಲಿ ಶ್ರೀರಾಮನನ್ನು ಮೊದಲ ಬಾರಿಗೆ ನೋಡಿದ ನೆನಪಾಯಿತು.

 

ಮುಂದೆ ತನ್ನ ಸ್ವಯಂವರದಲ್ಲಿ ರಾಜಮಹಾರಾಜರು ಅತಿರಥ-ಮಹಾರಥರು ಲಂಕೇಶ್ವರ ರಾವಣನು ಸಹ ಎತ್ತಲಾಗದ ಶಿವಧನಸ್ಸನ್ನು ಲೀಲಾಜಾಲವಾಗಿ ಮುರಿದು ತನ್ನನ್ನು ವರಿಸಿದ ರಾಮನು ಆಕೆಯ ಕಣ್ಣ ಮುಂದೆ ಬಂದನು.

ತನ್ನ ಜೊತೆಗೆ ತನ್ನ ಸಹೋದರಿಯರಾದ ಶರ್ಮಿಳೆ ಮಾಂಡವಿ ಹಾಗೂ ಶ್ರುತಕೀರ್ತಿಯರು ಸಹ ದಶರಥ ಮಹಾರಾಜರ ಸೊಸೆಯರಾಗಿ ತನ್ನೊಂದಿಗೆ ಮಿಥಿಲೆಯಿಂದ 

ಅಯೋಧ್ಯೆಗೆ ಬಂದಾಗ ಬಹಳ ಸಂತಸಗೊಂಡಿದ್ದಳು.

 

ಮುಂದೆ ಶ್ರೀ ರಾಮನ ಪಟ್ಟಾಭಿಷೇಕದ ಸಂದರ್ಭದಲ್ಲಿ ಮಂಥರೆಯ ಕುತಂತ್ರದಿಂದಾಗಿ ಕೈಕೆಯಿಯು ತನ್ನ ವರದಾನ ಗಳನ್ನು ಸ್ವಾರ್ಥಕ್ಕಾಗಿ ಬಳಸಿದ್ದರಿಂದ ಶ್ರೀರಾಮನು ಹದಿನಾಲ್ಕು ವರ್ಷ ವನವಾಸಕ್ಕೆ ಹೋಗಬೇಕಾಯಿತು. ಆಗ ಶ್ರೀರಾಮನೇ ತನ್ನ ಸರ್ವಸ್ವವೂ ಆಗಿದ್ದರಿಂದ ತನ್ನ ಎಲ್ಲಾ ಭೋಗಭಾಗ್ಯಗಳನ್ನು ತೊರೆದು ತನ್ನ ಸಹೋದರಿಯನ್ನು ಅಗಲಿ, ನಾರು ಮಡಿ ಬಟ್ಟೆಯನ್ನುಟ್ಟು ಶ್ರೀರಾಮನೊಂದಿಗೆ ಲಕ್ಷ್ಮಣ ಸಮೇತ ಕಾಡಿಗೆ ಹೊರಟಿದ್ದಳು ಸೀತೆ.

 

 

ಒಮ್ಮೆ ಚಿತ್ರಕೂಟ ಪರ್ವತದಲ್ಲಿ ನಿದ್ರಿಸುತ್ತಿರುವಾಗ ಒಂದು ಕಾಗೆಯು ತನ್ನ ಮೇಲೆ ದಾಳಿ ಮಾಡಿದಾಗ ಒಂದು ಎಸಳು ಹುಲ್ಲನ್ನೇ ಬ್ರಹ್ಮಾಸ್ತ್ರನಾಗಿಸಿ ಕಾಗೆಯ ಮೇಲೆ ಪ್ರಯೋಗಿಸಿದ ಶ್ರೀರಾಮನನ್ನು ನನ್ನ ಮನಸ್ಸಿನಲ್ಲಿ ನೆನೆದು, ರಾಮನಿಗೆ ತನ್ನ ಮೇಲಿರುವ ಪ್ರೀತಿಯನ್ನು ಕಂಡು ಸಂತಸಗೊಂಡಿದ್ದಳು ಸೀತೆ.

 

ಮುಂದೆ ಚಿನ್ನದ ಜಿಂಕೆಯನ್ನು ತರಲು ರಾಮನನ್ನು ಕಳುಹಿಸಿ

ಮಾರೀಚನ ಕುತಂತ್ರಕ್ಕೆ ಬಲಿಯಾಗಿ ,ಲಕ್ಷ್ಮಣನನ್ನು ರಾಮನ ಸಹಾಯಕ್ಕೆ ಕಳುಹಿಸಿ, ಲಕ್ಷ್ಮಣನ ಎಚ್ಚರಿಕೆಯನ್ನು ಮೀರಿ ಆತನು ಎಳೆದಿದ್ದ ಲಕ್ಷ್ಮಣ ರೇಖೆಯನ್ನು ದಾಟಿ,ರಾವಣನ 

ಕೈಸೆರೆಯಾಗಿದ್ದಕ್ಕೆ ತನ್ನನ್ನು ತಾನೇ ಹಳಿದುಕೊಂಡಳು.

 

ರಾವಣನ ಸೆರೆಯಾಗಿ ಅಶೋಕವನದಲ್ಲಿ ದುಃಖಿಸುತ್ತಿರುವ ಸಂದರ್ಭದಲ್ಲಿ ರಾಮದೂತ ಹನುಮನ ಆಗಮನ ಹಾಗೂ ಆತನ ಬಾಯಿಂದ ಶ್ರೀರಾಮನ ಗುಣಗಾನವನ್ನು ಕೇಳಿ ಆತನು ಶ್ರೀರಾಮನ ಸೇವಕನೆಂದು ತಿಳಿದು ಆಕೆಯ ಪಾಲಿಗೆ ಸಂಜೀವಿನಿ ಸಿಕ್ಕಷ್ಟು ಸಂತಸಗೊಂಡಿದ್ದಳು.

ತನ್ನ ಗುರುತಿಗಾಗಿ ಚೂಡಾಮಣಿಯನ್ನು ಹನುಮನ ಕೈಗಿತ್ತು ಶ್ರೀರಾಮನ ದರ್ಶನಕ್ಕೆ ಶಬರಿಯಂತೆ ಕಾದದ್ದು ಆಕೆಯನ್ನು ಕಾಡಿತು.

 

ಶ್ರೀರಾಮಚಂದ್ರನು ವಾಲಿಯನ್ನು ಹತ್ಯೆ ಮಾಡಿ, ಸುಗ್ರೀವನ ಸ್ನೇಹವನ್ನು ಸಂಪಾದಿಸಿ, ಹನುಮ ,ಜಾಂಬವಂತ, ಅಂಗಧ ಮುಂತಾದ ವಾನರ ವೀರರ ಸೈನ್ಯದೊಂದಿಗೆ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ ರಾವಣ ಲಕುಂಭಕರ್ಣರನ್ನು ವಧಿಸಿ ತನ್ನನ್ನು ಅವರಿಂದ ಬಂಧಮುಕ್ತಗೊಳಿಸಿದ ರಾಮನನ್ನು ಮತ್ತೊಮ್ಮೆ ಮನದಲ್ಲೇ ನೆನೆದಳು ಸೀತೆ.

 

ಬಹುದಿನಗಳಿಂದ ಶ್ರೀರಾಮನ ಭೇಟಿಗಾಗಿ ,ಆತನ ಆಲಿಂಗನೆಗಾಗಿ ಕಾದಿದ್ದ ತನಗೆ ರಾಮನ ಅಗ್ನಿಪ್ರವೇಶದ ನಿರ್ಧಾರವು ಬರ ಸಿಡಿಲು ಬಡಿದಂತಾಗಿ ತನ್ನ ದುಃಖವನ್ನು ಹೆಚ್ಚಿಸಿದ್ದು ಕಣ್ಣು ತೇವವಾಗುವಂತೆ ಮಾಡಿತು.

 

ತಾನು ಅಗ್ನಿಯಷ್ಟೇ ಪವಿತ್ರಳು,ಪರಮ ಪತಿವ್ರತೆ ಎಂಬುದು ಶ್ರೀ ರಾಮನಿಗೂ ತಿಳಿದಿದ್ದರೂ ಸಹ, ತನಗೆ ಮುಂದೊದಗಲಿರುವ ಲೋಕ ನಿಂದನೆಯನ್ನು ಕಳೆಯುವ ನಿಟ್ಟಿನಲ್ಲಿ ಶ್ರೀ ರಾಮನ ಮಾತಿಗೆ ಗೌರವವನಿತ್ತು , ತನ್ನ ತಾಯಿಯಾದ ಭೂಮಿತಾಯಿಯನ್ನು, ಅಗ್ನಿ ದೇವರನ್ನು, ತನ್ನ ಪತಿದೇವರಾದ ಶ್ರೀ ರಾಮನನ್ನು ನೆನೆಯುತ್ತ ಸೀತೆ ಅಗ್ನಿಪರೀಕ್ಷೆಗೆ ಸಿದ್ದಳಾದಳು.

 

ನಿಮ್ಮ ಅಭಿಪ್ರಾಯ ತಿಳಿಸಿ ಗೆಳೆಯರೇ

ಇಂತಿ ನಿಮ್ಮವ

ಕಿರಣ್ ಮಲ್ನಾಡ್ (ಕಿ.ಡಿ)

ಜೈ ಶ್ರೀ ರಾಮ್ ಜೈ ಹನುಮಾನ್

2 likes

Published By

ಕಿರಣ್ ಮಲ್ನಾಡ್

ಕಿರಣ್_ಮಲ್ನಾಡ್

Comments

Appreciate the author by telling what you feel about the post 💓

Please Login or Create a free account to comment.