ಅದು ಆ ಊರಿನ ಒಂದು ದೊಡ್ಡ ಹೋಟೆಲ್!ವಯಸ್ಸಾದ ವ್ಯಕ್ತಿಯೊಬ್ಬರು ಅದರ ಎದುರಿಗಿದ್ದ ಕಲ್ಲಿನ ಬೆಂಚ್ ಮೇಲೆ ಬಂದು ಕುಳಿತರು.ಅವರನ್ನು ನೋಡಿದರೆ ಅವರೊಬ್ಬ ಹಳ್ಳಿಯವರೆಂದು ಅವರ ವೇಷಭೂಷಣಗಳಿಂದ ತಿಳಿಯುತ್ತಿತ್ತು.ಅವರ ವೇಷ ಭೂಷಣ ನೋಡಿ ಕೆಲಸದವರು ಅವರನ್ನು ಓಡಿಸಲು ಪ್ರಯತ್ನಿಸಿದಾಗ, ಅದನ್ನು ನೋಡಿದ ಹೋಟೆಲ್ ಯಜಮಾನರು ಏನೋ. ನೆನಪು ಮಾಡಿಕೊಂಡು, ಅವರನ್ನು ಒಳಗೆ ಕರೆತರಲು ಹೇಳಿದರು.ನಂತರ ಅವರಿಗೆ ಬಿಸಿ ಬಿಸಿಯಾದ ಊಟವನ್ನು ನೀಡಲು ಹೇಳಿದರು.ಆದರೆ ಆ ವ್ಯಕ್ತಿ ತನ್ನ ಬಳಿ ಹಣವಿಲ್ಲ ಎಂದು, ನನಗೆ ಬೇಡವೆಂದು ಹೇಳಿದರು.ಆದರೇ ಹೋಟೆಲ್ ಮಾಲೀಕರೇ ಒತ್ತಾಯ ಮಾಡಿದಾಗ,ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡರು.ಅವರಿಗೆ ಏನು ಬೇಕೋ ಅವೆಲ್ಲವನ್ನು ನೀಡಿ ಎಂದು ಹೇಳಿ, ಊಟವಾದ ನಂತರ ತನ್ನ ಕ್ಯಾಬಿನ್ ಒಳಗೆ ಬರುವಂತೆ ಹೇಳಿ ತನ್ನ ಕ್ಯಾಬಿನ್ ಒಳಗೆ ಹೋದರು.ಅವರು ಕ್ಯಾಬಿನ್ಗೆ ಬಂದಾಗ "ನನ್ನ ಗುರುತು ಸಿಕ್ತಾ ಯಜಮಾನರೇ"ಎಂದು ಕೇಳಿದರು.ಆ ಮಾತನ್ನು ಕೇಳಿ ಆ ವಯಸ್ಸಾದ ವ್ಯಕ್ತಿಗೆ ಬಹಳ ಆಶ್ಚರ್ಯವಾಯಿತು!
ಅವನು ಯಾರು?
ಎಂಬ ವಿಷಯ ಅವರಿಗೆ ತಿಳಿದಿರಲಿಲ್ಲ! ಯಾರಪ್ಪ ನೀನು? ಎಂದು ಕೇಳಿದರು.
ಆ ಮಾತು ಕೇಳಿ ಯಜಮಾನರ ಕಣ್ಣಿಂದ ಸಣ್ಣಗೆ ನೀರು ಜಿನುಗಿತು....
ಕೆಲವು ವರ್ಷಗಳ ಹಿಂದೆ ಈ ವಯಸ್ಸಾದ ವ್ಯಕ್ತಿ ಹೈವೆಯ ಬಳಿ ಒಂದು ಚಿಕ್ಕ ಹೋಟೆಲನ್ನು ನಡೆಸುತ್ತಿದ್ದರು.ಇದೆ ಸಮಯದಲ್ಲಿ ತನ್ನ ಚಿಕ್ಕ ಊರಿನಿಂದ ಮನೆ ಬಿಟ್ಟು ಓಡಿ ಬಂದಿದ್ದ ಈ ಚಿಕ್ಕ ಹುಡುಗ ಹಸಿವಿನಿಂದ ತಲೆತಿರುಗಿ,ಇವರ ಭ್ಯ ಮುಂದೆಯೇ ಬಿದ್ದು ಮೂರ್ಛೆ ಹೋದ.ಇವನ ಮುಖಕ್ಕೆ ನೀರು ಚಿಮುಕಿಸಿ,ಎದ್ದ ತಕ್ಷಣ ಅರ್ಧ ಕಪ್ ಟೀ ಹಾಗೂ ಒಂದು ಬನ್ ನೀಡಿದರು.ನಂತರ ಅವನ ಪೂರ್ವಾಪರ ವಿಚಾರಿಸಿ,ಅವನು ಒಳ್ಳೆಯ ಹುಡುಗ ನೆನೆಸಿ ತಮ್ಮ ಹೋಟೆಲ್ನಲ್ಲಿಯೇ ಕೆಲಸ ನೀಡಿದರು.
ಹೀಗೆ ಒಂದು ದಿನ ಏನೋ ಸಾಮಾನುಗಳನ್ನು ಹಾಗೂ ಬಾಕಿ ಬರಬೇಕಿರುವ ಹಣವನ್ನು ತರಲು ಹೊರಗಡೆ ಕಳುಹಿಸಿದರು.ಅವನು ಹೊರಗೆ ಹೋದ ನಂತರ ಅಕಸ್ಮಾತ್ ಆಗಿ ಬೆಂಕಿ ತಗುಲಿ, ಇಡೀ ಹೋಟೆಲ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು.
ಅವನು ಮುರಳಿ ಬಂದಾಗ ಯಜಮಾನರು ಇರಲಿಲ್ಲ.ಕೆಲಸದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಹಾನಿ ಆಗಿರಲಿಲ್ಲ.ಯಜಮಾನರಿಗೆ ಸಂಬಂಧಿಕರಾರು ಇರಲಿಲ್ಲ.ಹೀಗಾಗಿ ಆ ಘಟನಾ ಸ್ಥಳಕ್ಕೆ ಯಾರು ಬರಲಿಲ್ಲ.ಈಗ ಇವನ ಬಳಿ ಇದ್ದದ್ದು ಯಜಮಾನರಿಗೆ ಬರಬೇಕಿದ್ದ ಹಣ ಹಾಗೂ ಕೈಯಲ್ಲಿದ್ದ ಸಾಮಾಗ್ರಿಗಳು ಮಾತ್ರ.ಆ ವಸ್ತುಗಳನ್ನು ಅಂಗಡಿಗೇ ಹಿಂದಿರುಗಿಸಿ, ಹಣವನ್ನು ಪಡೆದುಕೊಂಡು, ಅಲ್ಲಿಯೇ ಪಕ್ಕದಲ್ಲಿದ್ದ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿದ.ಇವನ ಕೆಲಸವನ್ನು ಮೊದಲೇ ನೋಡಿದ್ದ ಯಜಮಾನರು ಇವನಿಗೆ ಕೆಲಸ ನೀಡಿದರು.
ಇಲ್ಲಿ ಕೆಲಸಕ್ಕೆ ಸೇರಿದ ಬಳಿಕ ಅಲ್ಲಿ ಕೆಲಸವನ್ನು ಬಹು ಬೇಗ ಕಲಿತ.ನಂತರ ಯಾರದೋ ಸಲಹೆಯ ಮೇರೆಗೆ ಚಿಕ್ಕದೊಂದು ಕ್ಯಾಂಟೀನ್ ತೆರೆಯಲು ಯೋಚಿಸಿದ.ಮೊದಲು ಒಂದು ಚಿಕ್ಕ ಗಾಡಿಯನ್ನು ಬಾಡಿಗೆಗೆ ಪಡೆದು ವ್ಯಾಪಾರ ಆರಂಭಿಸಿದ.ನಂತರ ಇಲ್ಲಿ ವ್ಯಾಪಾರ ಚೆನ್ನಾಗಿ ಕುದುರಿದ ನಂತರ,ಸೊಲ್ಪ ಹಣವನ್ನು ಜೋಡಿಸಿ, ತನ್ನ ಹಳೆಯ ಹೋಟೆಲ್ ಖಾಲಿ ಜಾಗವನ್ನು ಅದರ ಮಾಲೀಕರಿಂದ ಕೊಂಡನು.ಇಲ್ಲೂ ಸಹ ಒಳ್ಳೆಯ ವ್ಯಾಪಾರ ಕುದುರಿದ್ದರಿಂದ,ಆ ಜಾಗದಲ್ಲಿ ಒಂದು ದೊಡ್ಡ ಹೋಟಲನ್ನು ಕಟ್ಟಿಸಿದ್ದ. ಈ ವಿಷಯವನ್ನು ತಿಳಿದ ನಂತರ ಆ ವಯಸ್ಸಾದ ವ್ಯಕ್ತಿಗೆ ಆನಂದ ಬಾಷ್ಪವಾಯಿತು.ಆನಂದದಿಂದ ಯಜಮಾನರನ್ನು ತಬ್ಬಿಕೊಂಡರು.ಕೆಲವು ವರ್ಷಗಳ ಹಿಂದೆ ತಾನು ನೀಡಿದ್ದ ಅರ್ಧ ಕಪ್ ಟೀ ಹಾಗೂ ಒಂದು ಬನ್ನನ್ನು ಇಷ್ಟು ವರ್ಷಗಳ ಕಾಲ ನೆನಪಿಟ್ಟುಕೊಂಡಿದ್ದಕ್ಕೆ ಧನ್ಯವಾದ ತಿಳಿಸಿ, ಹೊರಡಲು ಮುಂದಾದರು.ಆಗ ಮಾಲೀಕರೇ ಅವರನ್ನು ತಡೆದು ನಿಮ್ಮ ಅನ್ನದ ರುಣ ತೀರಿಸುವ ಸಮಯ ನನಗೆ ಈಗ ಬಂದಿದೆ ಎಂದು, ಅವರನ್ನು ತಡೆದು "ನೀವು ನನ್ನ ತಂದೆಯಿದ್ದಂತೆ ,ನೀವು ಇನ್ನೂ ಮುಂದೆ ನನ್ನ ಮನೆಯಲ್ಲಿಯೇ ಇರಬೇಕೆಂದು" ಹೇಳಿ ಕಾರಿನಲ್ಲಿ ಕೂರಿಸಿಕೊಂಡು ಮನೆ ಕಡೆ ಹೊರಟರು.
ಇಂತಿ ನಿಮ್ಮವ
ಕಿರಣ್ ಮಲ್ನಾಡ್ (ಕಿ.ಡಿ)
Comments
Appreciate the author by telling what you feel about the post 💓
ತುಂಬಾ ಭಾವನಾತ್ಮಕವಾದ ಸುಂದರ ಬರಹ 👌👌
ಚಹಾದ ರುಣ..! Tumbha changiedde saar...
ಬಹಳ ಚೆನ್ನಾಗಿದೆ.. ಮನಸ್ಸಿಗೆ ಮುಟ್ಟುವಂತೆ ಚಿತ್ರಿಸಿದ್ದಿರಾ
ಚಹಾದ ಬರಹ ಚೆನ್ನಾಗಿದೆ.
Please Login or Create a free account to comment.